ದತ್ತೋಬನ ಮರಣ ತಪ್ಪಿತು
🌺 ದತ್ತೋಬನ ಮರಣ ತಪ್ಪಿತು 🌺
ಒಂದು ವರ್ಷ ರಾಮನವಮಿಯ ಕಾರ್ಯಕ್ರಮ ಪೂರ್ಣಗೊಂಡ ನಂತರ ಭಕ್ತರು ಸಿದ್ಧರ ಆಶೀರ್ವಾದ ಪಡೆದು ತಮ್ಮ ತಮ್ಮ ಊರುಗಳಿಗೆ ಹೋಗಹತ್ತಿದರು. ಅದರಂತೆ ಗದುಗಿನ ಮುಲ್ಕಿ ಡಾಕ್ಟರ ದತ್ತೋಬರಾವ ಅವರು ಮತ್ತು ಮಂಡಳಿಯವರು ಬಹಳ ಭಕ್ತಿವಂತರು. ಅವರು ಸಿದ್ಧರ ಆಶೀರ್ವಾದ ಪಡೆಯಲು ಅವರ ಬಳಿಗೆ ಹೋದಾಗ ಶ್ರೀಗಳು ಹೇಳಿದರು 'ದತ್ತೋಬರಾವ, ನೀವು ಈಗ ಹೋಗಬೇಡಿರಿ. ನಾಲ್ಕು ದಿವಸಗಳ ನಂತರ ಹೋಗಿರಿ' ಎಂದರು. ಆಗ ಡಾಕ್ಟರರು ಗುರುಗಳ ಆಜ್ಞೆ ಮನ್ನಿಸಿ ಮಠದಲ್ಲಿ ಉಳಿದರು. ಮರುದಿನ ಆ ವೈದ್ಯರಿಗೆ ಭಯಂಕರ ಕೋಮು ಜ್ವರ ಬಂದು ತಳಮಳಗೊಳ್ಳುತ್ತಿರುವಾಗ ಅವರ ಪತ್ನಿ ಮತ್ತು ಇತರರು ಗಾಬರಿಯಾಗಿ ಸಿದ್ದರ ಕಡೆಗೆ ಹೋಗಿ ಅವರ ಪತ್ನಿ ವರದಾಬಾಯಿ ಹೇಳಿದಳು `ಗುರುಗಳೆ, ನನ್ನ ಗಂಡನಿಗೆ ವಿಪರೀತ ಜ್ವರ ಬಂದು ಮಸ್ತಕಕ್ಕೆ ಏರಿರುವುದರಿಂದ ಪ್ರಜ್ಞಾಹೀನರಾಗಿದ್ದಾರೆ. ನಿಮ್ಮ ಹೊರತು ನಮಗಾರೂ ಗತಿಯಿಲ್ಲ. ನಮ್ಮನ್ನು ಕಾಪಾಡಿರಿ' ಎಂದು ಅಳುತ್ತ ಹೇಳಿದಳು. ಆಗ ಗುರುಗಳು ಅವಳ ದೀನವಾಣಿಯನ್ನು ಕೇಳಿ ಹೇಳಿದರು 'ವರದಾಬಾಯಿ, ಗುರುಕೃಪೆಯಿಂದ ಅವರಿಗೆ ಏನೂ ಆಗುವುದಿಲ್ಲ. ನಾಮಸ್ಮರಣೆ ಮಾಡುತ್ತ ತೀರ್ಥ ಪ್ರಸಾದ ಹಾಕಿರಿ ಶ್ರೀ ಗುರುವು ಅವನನ್ನು ರಕ್ಷಣೆ ಮಾಡುತ್ತಾನೆ' ಎಂದು ಆಶ್ವಾಸನೆ ಕೊಟ್ಟರು.
ಮರುದಿನ ದತ್ತೋಬರಾಯನ ಮೂಗಿನಿಂದ ವಿಪರೀತ
ರಕ್ತಸ್ರಾವವಾಗುತ್ತಿರುವಾಗ ಗಾಬರಿಯಾಗಿ ಸಿದ್ದರನ್ನು ಕರೆಸಿದರು. ಆಗ ಶ್ರೀಗಳು ಬಂದು ತಮ್ಮ ಚರಣಗಳನ್ನು ರೋಗಿಯ ಅಂಗಕ್ಕೆ ಸ್ಪರ್ಶಿಸಿ ಅವನ ಹತ್ತಿರ ಕುಳಿತು ಹೇಳಿದರು ಈ ಅಪಮೃತ್ಯು, ರಕ್ತರೂಪದಿಂದ ಹೊರಗೆ ಹೋಗಿದೆ. ಇನ್ನು ಯಾವ ಭಯವಿಲ್ಲ' ಎಂದು ಆಶೀರ್ವದಿಸಿ ಸ್ವಸ್ಥಾನಕ್ಕೆ ಹೋದರು. ಆಗ ಅಲ್ಲಿದ್ದವರು ತಮ್ಮೊಳಗೆ 'ಶ್ರೀ ಗುರುವಿನ ಮಠದಲ್ಲಿರುವುದರಿಂದ ಮೃತ್ಯು ಬರಲಿಲ್ಲ ಎಂದು ಮಾತಾಡುತ್ತಿದ್ದರು.
ಮರುದಿನ ವೈದ್ಯರಿಗೆ ಎಚ್ಚರಿಕೆ ಬಂದು ಜ್ವರ ಕಡಿಮೆಯಾಯಿತು. ಅಲ್ಲದೆ ಅವರ ಶರೀರದಲ್ಲಿ ಶಕ್ತಿ ಬಂದು ಮೊದಲಿನಂತಾಗಿ ಹೇಳಿದರು ನಾನು ರೋಗದಿಂದ ಬಳಲಿದ್ದೆನೋ ಅಥವಾ ಇಲ್ಲವೋ ನನಗೇ ತಿಳಿಯಲಿಲ್ಲ' ಎಂದಾಗ ಇತರರು ಭಯಂಕರ ರೋಗವಿದ್ದು, ನೀವು ಹೀಗೆ ಹೇಳುವುದು ಆಶ್ಚರ್ಯವೆನಿಸುತ್ತದೆ' ಎಂದರು. ಆಮೇಲೆ ದತ್ತೋಬರು ಸಚ್ಚಿದಾನಂದರಿಗೆ (ತಮ್ಮಣ್ಣ ಶಾಸ್ತ್ರಿ) ಭೆಟ್ಟಿಯಾಗಿ ಸಾಷ್ಟಾಂಗ ನಮಿಸಿ `ನಿಮ್ಮ ಕೃಪೆಯಿಂದ ಬದುಕಿದೆನು' ಎಂದಾಗ ಅವರು ಹೇಳಿದರು `ವೈದ್ಯರೇ, ಸಿದ್ದ ಗುರುಗಳ ಚರಣಗಳಲ್ಲಿ ಸದ್ಭಾವವಿಟ್ಟು ಅದರಂತೆ ನಡೆದುದರಿಂದ ನಿಮ್ಮ ಮೃತ್ಯು ತಪ್ಪಿತು' ಎಂದಾಗ ಗುರುಪುತ್ರ ದತ್ತೋಬರಾವರು ಸಂತೋಷಗೊಂಡರು. ಆಮೇಲೆ ಮರುದಿವಸ ಸಿದ್ಧ ಗುರುವಿನ ಆಜ್ಞೆ ತೆಗೆದುಕೊಂಡು ತಮ್ಮ ಸ್ವಸ್ಥಾನಕ್ಕೆ ನಡೆದರು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಕಬೀರದಾಸರ ಅಚಲ ಗುರುಭಕ್ತಿ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
👉ಸಿದ್ಧಾರೂಢ ಭಾಗವತ ಎಲ್ಲಾ ಲೀಲಾಕಥೆ ಸಂಗ್ರಹ 📲
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಕಬೀರದಾಸರ ಅಚಲ ಗುರುಭಕ್ತಿ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
👉ಸಿದ್ಧಾರೂಢ ಭಾಗವತ ಎಲ್ಲಾ ಲೀಲಾಕಥೆ ಸಂಗ್ರಹ 📲
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
👉WHATSAPP SHARE ಗಾಗಿ 📲
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
