ಬಾಲಕ ಗುರುನಾಥ ಸತ್ತ ಗೋವನ್ನು ಬದುಕಿಸಿದ
ಬಲು ತುಂಟನಾದ ಬಾಲಕ ಗುರುನಾಥ, ತನ್ನಮನೆಯಲ್ಲಿ ತನ್ನ ಗೆಳೆಯರೊಂದಿಗೆ ತನಗೆ ಪಗಡೆಯಾಟ ಗೊತ್ತಿಲ್ಲದಿದ್ದರೂ ಮಕ್ಕಳಾಡುವಂತೆ ಪಗಡೆಯಾಟವನ್ನು ಆಡುತ್ತಿದ್ದರು. ಆಗ ಮನೆಯ ಆಕಳು ಆ ಪಗಡೆಯಾಟದಲ್ಲಿ ಹಾಯ್ದು ಮನೆಯ ಹೊರಗಡೆ ಹೋಯಿತು. ಆಗ ಆಟದ ಪಗಡೆಗಳೆಲ್ಲ ಚಲ್ಲಾಪಿಲ್ಲಿಯಾಗಿ ಅಸ್ತವ್ಯಸ್ತಗೊಂಡಿತು. ಆಗ ಶ್ರೀ ಗುರುನಾಥನು ಆ ಆಕಳ ಮೇಲೆ ಸಿಟ್ಟಾಗಿ ಅದರ ಹತ್ತಿರ ಹೋಗಿ ಆಟ ಆಡಿಸಿದೆಯಾ ಅಂತಾ ಅದನ್ನು ಕೋಲಿನಿಂದ ಜೋರಾಗಿ ಹೊಡೆದನು. ಅಷ್ಟೇ ಪೆಟ್ಟಿನಿಂದ ಆ ಆಕಳು ಒದ್ದಾಡಿ ಸತ್ತು ಬಿದ್ದಿತು. ಈ ಘಟನೆಯನ್ನು ಅಜ್ಜಿ ಲಕ್ಷ್ಮಮ್ಮನವರು ಶ್ರೀ ಸಿದ್ಧಾರೂಢರೆಡೆಗೆ ಹೋಗಿ ತಿಳಿಸಲಾಗಿ, ಶ್ರೀ ಸಿದ್ಧಾರೂಢರು ಲಕ್ಷ್ಮಮ್ಮ, ಗುರಪ್ಪ ಆಕಳನ್ನು ಕೊಂದಿಲ್ಲ. ಸುಮ್ಮನೇ ಆಟವಾಡಿದ್ದಾನೆ ಬಿಡು, ಮನೆಗೆ ಹೋಗಿ ನೋಡು ಎಂದು ಸಮಾಧಾನಪಡಿಸಿ ಮನೆಗೆ ಕಳಿಸಿದರು. ಆಗ ಲಕ್ಷ್ಮಮ್ಮ ಮನೆಗೆ ಹೋಗಿ ನೋಡುತ್ತಿರಲಾಗಿ ಗುರಪ್ಪನು ಆ ಸತ್ತುಬಿದ್ದ ಆಕಳನ್ನು ಕುರಿತು ಯಾಕೆ ಹೀಗೆ ಸತ್ತ ಪ್ರಾಣಿಯಂತೆ ಮಲಗಿರುವೆ ಏಳು ಎಂದು ಅದೇ ಕೋಲಿನಿಂದ ಹೊಡೆದನು. ಆಗ ಅದು ಎದ್ದು ಯಥಾ ಪ್ರಕಾರ ಮೈಝಾಡಿಸಿ ಮೇಯಲು ಹೊರಗೆ ಹೋಯಿತು. ಇದನ್ನು ಕಂಡು ಲಕ್ಷ್ಮಮ್ಮ ಮತ್ತು ಕೆಲವರು ಗುರುನಾಥನ ಲೀಲೆಯಿಂದ ಬೆರಗಾಗಿ, ಈ ಗುರುನಾಥಾ ಮುಂದೆ ಮಹಾನ್ ಪುರುಷನಾಗುತ್ತಾನೆ ಎಂದು ಕೊಂಡಾಡಿದರು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
