ಗುರಪ್ಪ ಹುಲಿರೂಪದಿಂದ ಮುಂಬೈ ಭಕ್ತರ ರಕ್ಷಣೆ
ಶ್ರೀ ಸಿದ್ಧಾರೂಢರ ಶಿಷ್ಯ ಶ್ರೀ ಗುರುನಾಥಾರೂಢರು ಮಹಾ ಸಮಾಧಿ ತೆಗೆದುಕೊಂಡ ಸುದ್ದಿ ಮುಂಬೈ ಭಕ್ತರಿಗೆ ತಲುಪಿತು. ಆಗ ಮುಂಬೈಯ ರಾಜಾರಾಮ ಚೌಧರಿ ಸಹಿತ ಮನೆಯವರಾದ ಲಕ್ಷ್ಮೀ ಬಾಯಿ, ತಾರಾಬಾಯಿ, ಛಬೂಬಾಯಿ ಮುಂತಾದವರು ಬಸ್ಸಿನಿಂದ ಹುಬ್ಬಳ್ಳಿಗೆ ಶ್ರೀ ಗುರುನಾಥರ ಅಂತಿಮ ದರ್ಶನಕ್ಕಾಗಿ ಹೊರಟರು, ದಾರಿಯಲ್ಲಿ ಖಂಡಾಳ ಘಾಟದಲ್ಲಿ ಬಸ್ಸು ಕೆಟ್ಟು ನಿಂತಿತು. ಆಗ ಬಸ್ ಚಾಲಕನು ಬೇರೆ ವಾಹನ ತೆಗೆದುಕೊಂಡು ಬರಲು ಮುಂಬೈಗೆ ಹೊರಟನು.
ಇತ್ತ ಬಸ್ಸಿನಲ್ಲಿದ್ದವರು ರಾತ್ರಿ ಬಸ್ಸಿನಲ್ಲಿಯೇ ಉಳಿಯಬೇಕಾಯಿತು. ಆ ಸಮಯದಲ್ಲಿ
ಕಾಡಿನಲ್ಲಿರುವ ಒಂದು ದೊಡ್ಡ ಹುಲಿ ಬಂದು ಬಸ್ಸಿನ ಮುಂದೆ ಕುಳಿತುಕೊಂಡಿತು. ಅದನ್ನು ಕಂಡು ಬಸ್ಸಿನಲ್ಲಿದ್ದವರು ಬಹಳ ಗಾಬರಿಗೊಂಡರಾದರೂ ಹುಲಿಯು ಯಾರಿಗೂ ಉಪದ್ರವ ಕೊಡಲಿಲ್ಲ. ಘಾಟದಲ್ಲಿ ಹಿಂಸ್ರಪಶುಗಳ ಧ್ವನಿ ಕೇಳಿಬರುತ್ತಿತ್ತು, ಆದರೂ ಘಾಟದಲ್ಲಿ ಹಿಂಸಪಶುಗಳು ಭಕ್ತರಿಗೆ ತೊಂದರೆ ಕೊಡಬಾರದೆಂದು ತಿಳಿದು, ಆ ಹುಲಿಯ ಅದೊಂದು ಅಂಗರಕ್ಷಕನಂತೆ ಕಾರ್ಯ ನಿರ್ವಹಿಸಿತು. ಆಗ ಎಲ್ಲರೂ ಶ್ರೀ ಗುರುನಾಥನು ಹುಲಿಯ ರೂಪದಿಂದ ಬಂದು (ಶ್ರೀಗಳು ಪೂರ್ವಜನ್ಮದಲ್ಲಿ ಹುಲಿಯಾಗಿದ್ದರು) ನಮಗೆ ದರ್ಶನ ಕೊಟ್ಟು, ಕಾಪಾಡುತ್ತಿದ್ದಾನೆ ಎಂದು ತಿಳಿದುಕೊಂಡದ್ದರಿಂದ ಯಾರಿಗೂ ಚಿಂತೆಯಾಗಲಿಲ್ಲ,
ಅಷ್ಟರಲ್ಲಿ ಚಾಲಕನು ಮತ್ತೊಂದು ವಾಹನ ತೆಗೆದುಕೊಂಡು ಬಂದಾಗ ಎಲ್ಲರೂ ಆ ಗಾಡಿಯಲ್ಲಿ ಹತ್ತಿದರು. ಆಗ ಮತ್ತೊಂದು ಸಮಸ್ಯೆ ಉದ್ಭವವಾಯಿತು. ಅದೇನೆಂದರೆ ಚಾಲಕನು ಗಾಡಿಯನ್ನು ನಡೆಸಲು ಎಷ್ಟು ಪ್ರಯತ್ನಿಸಿದರೂ ಅದೂ ಕೂಡ ಪ್ರಾರಂಭವಾಗಲೇ ಇಲ್ಲ. ಅವನು ಮುಸ್ಲಿಮನಾಗಿದ್ದು ಎಲ್ಲ ಪ್ರಯತ್ನ ಮಾಡಿ ನಿರಾಶನಾಗಿ ಕುಳಿತಾಗ, ಅವನ ಹಿಂದೆ ಯಾರೋ ಒಬ್ಬ ಅಜ್ಞಾತ ವ್ಯಕ್ತಿ ಬಂದು ನಿಂತು, ಅವನ ಬೆನ್ನ ಮೇಲೆ ಚಪ್ಪರಿಸಿ, ಈಗ ನೀನು ವಿಚಾರಮಾಡದೆ ಬಸ್ಸನ್ನು ಪ್ರಾರಂಭಿಸು ಎಂದು ಆಜ್ಞ ಮಾಡಿದನು. ಆದರೆ ಆ ವ್ಯಕ್ತಿ ಕಾಣಿಸುತ್ತಿರಲಿಲ್ಲ,
ಚಾಲಕನು ಪುನಃ ಪ್ರಾರಂಭಿಸಲು ಯತ್ನಿಸಿದಾಗ ಅದು ಪ್ರಾರಂಭವಾಯಿತು. ಆಗ ಬಸ್ಸಿನ ಮುಂದಿದ್ದ ಹುಲಿಯು ಈ ಮೊದಲೇ ಅಡವಿಯಲ್ಲಿ ಹೋಗಿ ಮಾಯವಾಯಿತು. ಚಾಲಕನು ಭಕ್ತರಿಗೆ ಹೇಳುತ್ತ ಭಕ್ತರೇ ನೀವು ನಂಬಿರುವ ಗುರುಕೃಪೆಯಿಂದ ಗಾಡಿ ಪ್ರಾರಂಭವಾಯಿತು ಎಂದು ಹೇಳಿದ. ಮುಂದೆ ಎಲ್ಲರೂ ಹುಬ್ಬಳ್ಳಿಗೆ ಬಂದು ಶ್ರೀಗುರುನಾಥರ ಅಂತಿಮದರ್ಶನದಲ್ಲಿ ಪಾಲ್ಗೊಂಡರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
