ಸಣ್ಣ ಸಿದ್ಧಪ್ಪನನ್ನು ಸಿದ್ಧ ಬದುಕಿಸಿದ
🌺 ಸಣ್ಣ ಸಿದ್ಧಪ್ಪನನ್ನು ಸಿದ್ಧ ಬದುಕಿಸಿದ🌺
ಕುಂಬಾರ ಬಾಳವ್ವ ಎಂಬವಳು ಹಳೇಹುಬ್ಬಳ್ಳಿ, ಕೃಷ್ಣಾಪುರದಲ್ಲಿ ವಾಸಿಸುತ್ತಿದ್ದಳು. ಅವಳು ಸಿದ್ದರ ಅನನ್ಯ ಭಕ್ತಳಾಗಿದ್ದು ಮಠದ ಯಾವುದೇ ಕೆಲಸವನ್ನು ಮನಮುಟ್ಟಿ ಮಾಡುತ್ತಿದ್ದಳು. ಸಿದ್ದರ ಕರುಣೆಯಿಂದ ಅವಳಿಗೆ ಎರಡು ಗಂಡು ಮಕ್ಕಳಾದವು. ಒಬ್ಬನಿಗೆ ಸಣ್ಣ ಸಿದ್ಧ ಇನ್ನೊಬ್ಬನಿಗೆ ದೊಡ್ಡ ಸಿದ್ದ ಎಂದು ಹೆಸರಿಟ್ಟಿದ್ದಳು. ಒಂದು ದಿನ ಇಬ್ಬರೂ ಅಣ್ಣ ತಮ್ಮಂದಿರು ಅಲ್ಲಿ ಕೇರಿ ಹಬ್ಬಕ್ಕಾಗಿ ತನ್ನ ತಾಯಿಯಿಂದ ಬುತ್ತಿ ಕಟ್ಟಿಸಿಕೊಂಡು ಸಿದ್ಧರ ಮಠಕ್ಕೆ ಹೋಗಿ ಸಿದ್ಧರ ದರ್ಶನ ಪಡೆದುಕೊಂಡು ಕುಡಿಯುವ ನೀರಿನ ಕೆರೆಯ ದಂಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಆಗ ನೀರಿಗಾಗಿ ಸಣ್ಣ ಸಿದ್ಧನು ಮಣ್ಣಿನ ಮಗಿ ತೆಗೆದುಕೊಂಡು ಕೆರೆಯ ದಂಡೆಯ ಮೇಲೆ ಬಂದು ನೀರು ತುಂಬಿಕೊಳ್ಳುವಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದನು. ಅದನ್ನು ನೋಡಿದ ಒಬ್ಬ ಹೆಣ್ಣು ಮಗಳು ಹುಡುಗ ಮುಳುಗುತ್ತಿದೆ. ಯಾರಾದರೂ ಬಂದು ಉಳಿಸಿರಿ' ಎಂದು ಕೂಗಿದಳು. ಅಷ್ಟರಲ್ಲಿ ಹುಡುಗ ಒಂದೆರಡು ಸಲ ಮುಳುಗಿಯೆದ್ದು ಪುನಃ ಮುಳುಗಿ ಮತ್ತೆ ಮೆಲೇಳಲೇ ಇಲ್ಲ. ಜನರ ಗುಂಪು ನೆರೆಯಿತು. ಈ ಗದ್ದಲ ಕೇಳಿದ ದೊಡ್ಡಸಿದ್ಧನು ಬಂದು ಅಳಲಾರಂಭಿಸಿದನು. ಆಗ ಯಾರೋ ಹೋಗಿ ಸಿದ್ದಾರೂಢರಿಗೆ ತಿಳಿಸಿದಾಗ ಅವರೂ ಧಾವಿಸಿ ಬಂದರು. ನಂತರ ಓರ್ವ ಸಾಧುಪುರುಷ ಕೆರೆಯಲ್ಲಿ ಜಿಗಿದು ಹುಡುಗನನ್ನು ಹುಡುಕಾಡಿ ಸಿಕ್ಕ ಮೇಲೆ ಅವನನ್ನು ಮೇಲೆ ತಂದು ಮಲಗಿಸಿದನು.
ಅತ್ತ ಬಾಳವ್ವನಿಗೆ ಸುದ್ದಿ ಮುಟ್ಟಿ ಅಳುತ್ತ ಓಡಿ ಬಂದು ಮರಣ ಹೊಂದಿದ ತನ್ನ ಮಗುವನ್ನು ತನ್ನ ತೊಡೆ ಮೇಲೆ ತೆಗೆದುಕೊಂಡು `ಅಪಾ, ನೀನೇ ಕೊಟ್ಟ ಮಗುವನ್ನು ನೀನೇ ತೆಗೆದುಕೊಳ್ಳುವುದು ಸರಿಯೆ?' ಎಂದು ಅಳಲಾರಂಭಿಸಿದಳು. ಆಗ ಸಿದ್ಧನು 'ತಾಯಿ, ನೀನು ಚಿಂತಿಸಬೇಡ. ಯಾವಾಗಲೂ ಸದ್ಗುರುವಿನ ಸೇವೆಯನ್ನು ಮನಮುಟ್ಟಿ ಮಾಡಿದ ನಿನ್ನ ಪುಣ್ಯ ವ್ಯರ್ಥ ಹೋಗುವುದಿಲ್ಲ, ಸದ್ಗುರುವು ನಿನ್ನ ಕೈ ಬಿಡುವುದಿಲ್ಲ. ಸ್ವಲ್ಪ ತಡೆ. ನಿನ್ನ ಮಗನು ಬದುಕುತ್ತಾನೆ' ಎಂದು ಹುಡುಗನನ್ನು ಅಂಗಾತ ಮಲಗಿಸಿ ಮಗುವಿನ ಹೊಟ್ಟೆಯ ಮೇಲೆ ಪಾದವನ್ನಿರಿಸಿ ತಲೆಯ ಮೇಲೆ ಕೈಯಿಟ್ಟು ಸ್ವಲ್ಪ ಹೊತ್ತು ತೂಷ್ಟಿಂ ಸ್ಥಿತಿಯಲ್ಲಿದ್ದರು. ಅಷ್ಟರಲ್ಲಿ ಅವನ ಪ್ರಾಣ ಸಂಚಾರವಾಗಿ ಮಗುವು ಕೈಕಾಲುಗಳನ್ನು ಅಲ್ಲಾಡಿಸಿ ಕಣ್ಣು ತೆರೆದು ನೋಡಿದನು. ಆಮೇಲೆ ಅವನನ್ನು ಮಠಕ್ಕೆ ತಂದರು. ಆಗ ಆರೂಢರು ಅವನಿಗೆ ಭಸ್ಮ ಲೇಪಿಸಿ ಆಶೀರ್ವದಿಸಿದಾಗ ಮಗುವಿನಲ್ಲಿ ಶಕ್ತಿ ಸಂಚಾರವಾಗಿ ನೆಟ್ಟಗಾದನು. ಬಾಳವ್ವ ಸಂತೋಷದಿಂದ ಸಿದ್ದರನ್ನು ಕೊಂಡಾಡಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದಳು. ಆಗ ಎಲ್ಲರೂ ಸಿದ್ಧರ ಜಯಜಯಕಾರ ಮಾಡಿದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
