ಬಡ ನೇಕಾರನ ರೋಗ ನಿವಾರಣೆ

🌺 ಬಡ ನೇಕಾರನ ರೋಗ ನಿವಾರಣೆ 🌺



ದಿವಟಿ ಓಣಿಯಲ್ಲಿ ಬೆಟಗೇರಿ ಚನ್ನಬಸಪ್ಪನೆಂಬವನು ಬಹಳ ಬಡವನಾಗಿದ್ದು ನೇಕಾರಿಕೆಯ ಮೇಲೆಯೇ ಅವನ ಸಂಸಾರ ಸಾಗಿತ್ತು. ಅಂಥದರಲ್ಲಿ ಅವನಿಗೆ ಕಾಲು ಶೂಲಿ ಪ್ರಾರಂಭವಾಯಿತು. ಬರಬರುತ್ತ ಅದು ಹೆಚ್ಚಾಗಿ ನಡೆಯಲು ಬಾರದೆ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದನು. ಒಂದು ತುತ್ತು ಅನ್ನಕ್ಕೆ ಗತಿಯಿಲ್ಲದಂತಾಯ್ತು. ಅದೇ ಓಣಿಯ ಗಂಗಪ್ಪನೆಂಬವನು ಸಿದ್ಧಾರೂಢರ ಭಕ್ತನಾಗಿದ್ದು ಅಕಸ್ಮಾತ್ ಚನ್ನಬಸಪ್ಪನ ಮನೆಗೆ ಬಂದು ಅವನನ್ನು ಕಂಡು 'ಚನ್ನಬಸಪ್ಪಾ, ಹೀಗೆ ಎಷ್ಟು ದಿವಸ ಮಲಗಿಕೊಂಡಿರುತ್ತಿ? ನಡೆ ಸಿದ್ದಾರೂಢರಲ್ಲಿ ಕರೆದುಕೊಂಡು ಹೋಗುತ್ತೇನೆ. ಅವರ ಕೃಪೆಯಿಂದ ರೋಗ ನಿವಾರಣೆಯಾಗುತ್ತದೆ' ಎಂದವನೇ ಅವನನ್ನು ಎಬ್ಬಿಸಿ ಚಕ್ಕಡಿಯಲ್ಲಿ ಮಲಗಿಸಿ ಮಠಕ್ಕೆ ಕರೆದುಕೊಂಡು ಹೋದಾಗ ಚನ್ನಬಸಪ್ಪನು ಕಷ್ಟದಿಂದ ಸಿದ್ಧರಿಗೆ ನಮಸ್ಕರಿಸಿ ತನ್ನ ನೋವಿನ ಬಗ್ಗೆ ಹೇಳಿದನು.
ಆಗ ಸಿದ್ಧಾರೂಢರ ಮನಸ್ಸು ಕರಗಿ ಅವನಿಗೆ ಕ್ಷೌರ ಮಾಡಿಸಿ ಕೆರೆಯಲ್ಲಿ ತಣ್ಣೀರಿನ ಸ್ನಾನ ಮಾಡಿ ಬಂದ ನಂತರ ಸ್ವತಃ ಗುರುಗಳು ಅವನನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ ಒಂದು ಮಣ್ಣಿನ ಪರ್ಯಣದಲ್ಲಿ ಎರಡು ರೊಟ್ಟಿ ಮುರಿದು ಸಾರು ಸುರುವಿ ತಮ್ಮ ಕೈಯಿಂದ ಒಂದು ತುತ್ತು ಉಣಿಸಿದರು. ಅಮೃತಮಯ ಪ್ರಸಾದವು ನಾಲಗೆಗೆ ರುಚಿಯಾಗಿ ಹೊಟ್ಟೆ ತುಂಬ ಉಂಡನು. ನಂತರ ಸಿದ್ದರೇ ಅವನನ್ನು ಕರೆದುಕೊಂಡು ಹೋಗಿ ಕಂಬಳಿ ಹಾಸಿ ಅವನ ಮೈಮೇಲೆ ಕೈಯಾಡಿಸಿದಾಗ ನಿದ್ದೆ ಹತ್ತಿತು. ಮರುದಿವಸ ಎದ್ದಾಗ ಅವನ ಕಾಲುಶೂಲಿ ಮಾಯವಾಗಿತ್ತು. ನಂತರ ತಾನೇ ನಡೆಯುತ್ತ ಸಿದ್ಧರಲ್ಲಿ ಬಂದು ನಮಸ್ಕರಿಸಿ ಸದ್ಗುರುವೇ ನಿನ್ನ ಸ್ಪರ್ಶದಿಂದ ನನ್ನ ರೋಗ ನಾಶವಾಯಿತು' ಎಂದು ಕೊಂಡಾಡಿ ಚಕ್ಕಡಿಯಲ್ಲಿ ಬಂದವನು ನಡೆಯುತ್ತ ಮನೆಗೆ ಹೋದ ಅಂದಿನಿಂದ ತಾನು ಸಾಯುವವರೆಗೆ ಸಿದ್ಧರ ಸೇವ ಮಾಡಿ ಧನ್ಯನಾದ.

_______________________________

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ