ಕಬೀರದಾಸರು ಸ್ತ್ರೀವೇಷ ಧರಿಸಿ ನೃತ್ಯ ಮಾಡಿದರು
🌺 ಕಬೀರದಾಸರು ಸ್ತ್ರೀವೇಷ ಧರಿಸಿ ನೃತ್ಯ ಮಾಡಿದರು 🌺
ಮಠದ ಪಾಠಶಾಲೆಯಲ್ಲಿ ಪ್ರತಿದಿನ
ಮೂರು ಸಲ ವೇದಾಂತಶಾಸ್ತ್ರ ಶ್ರವಣ ನಡೆಯುತ್ತಿತ್ತು. ದೇಶದ ನಾನಾ ಭಾಗಗಳಿಂದ ಬಂದ ಮುಮುಕ್ಷುಗಳು ಅದರಲ್ಲಿ ಭಾಗ ತೆಗೆದುಕೊಳ್ಳುತ್ತಿದ್ದರು. ಅದರಂತೆ ಅನೇಕ ಸಂಗೀತಕಾರರು ನೃತ್ಯ ಮತ್ತು ವಾದ್ಯಕಾರರೂ ಬರುತ್ತಿದ್ದರು. ಅವರಿಗಾಗಿ ಶಾಸ್ತ್ರ ಪ್ರವಚನ ಮಧ್ಯದಲ್ಲಿ ಅರ್ಧ ಗಂಟೆ ಸೇವೆ ಸಲ್ಲಿಸಲು ಗುರುಗಳು ಅವಕಾಶ ಕೊಡುತ್ತಿದ್ದರು.
ಒಂದು ದಿವಸ ಮಹಾರಾಷ್ಟ್ರದಿಂದ ಒಬ್ಬ ನೃತ್ಯ ಕಲಾವಿದೆಯಾದ ಹೆಣ್ಣು ಮಗಳು ಬಂದು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಬೇಡಿಕೊಂಡಳು. ಶ್ರೀಗಳು ಆ ದಿನ ಸಂಜೆ ಸೇವೆ ಸಲ್ಲಿಸಲು ಅಪ್ಪಣೆ ಕೊಟ್ಟರು. ಆ ಕಲಾವಿದೆ ನೃತ್ಯ ಮಾಡುತ್ತಿದ್ದಾಗ ಸಿದ್ಧರ ನೆಚ್ಚಿನ ಶಿಷ್ಯ ಕಬೀರದಾಸರು ಅವಳ ನೃತ್ಯದ ಹಾವಭಾವಗಳನ್ನು ಕಂಡು ಅವಳ ಮುಖದಲ್ಲಿ ನನ್ನಂಥ ನೃತ್ಯಕಾರರು ಯಾರೂ ಇಲ್ಲವೆಂಬ ಅಹಂಕಾರವನ್ನು ಕಂಡರು. ಅಂತೂ ಆ ದಿನದ ನೃತ್ಯ ಕಾರ್ಯಕ್ರಮ ಉತ್ತಮವಾಗಿ ನಡೆಯಿತು.
ಮರುದಿನ ಕಬೀರದಾಸರು ಆ ನೃತ್ಯ ಕಲಾವಿದೆಯು ಉಳಿದುಕೊಂಡ ಕೊಠಡಿಗೆ ಹೋಗಿ `ಇಂದು ಇನ್ನೊಬ್ಬ ನೃತ್ಯ ಕಲಾವಿದೆಯು ಬಂದಿದ್ದಾಳೆ. ತನ್ನ ವೇಷ ಭೂಷಣಗಳನ್ನು ತಂದಿಲ್ಲ. ನಿಮ್ಮಲ್ಲಿರುವ ತಲೆಗೂದಲಿನ ಟೋಪಣ, ಪಿತಾಂಬರ ಮತ್ತು ಕಾಲಿನ ಗೆಜ್ಜೆಗಳನ್ನು ಕೊಡಿರಿ. ಅವಳೂ ಇಂದು ಸೇವೆ ಸಲ್ಲಿಸುತ್ತಾಳ' ಎಂದು ಹೇಳಿ ಆ ಸಾಧನಗಳನ್ನು ತೆಗೆದುಕೊಂಡು ಬಂದರು.
ಅಂದು ಸಂಜೆ ಪಾಠಶಾಲೆಯಲ್ಲಿ ಸಿದ್ಧಾರೂಢರ ಸನ್ನಿಧಿಯಲ್ಲಿ ಅಸಂಖ್ಯಾತ ಭಕ್ತರು ಕುಳಿತಿದ್ದರು. ಆಗ ಕಬೀರದಾಸರು ಅಲ್ಲಿರಲಿಲ್ಲ. ಪಾಠಶಾಲೆಯ ಹೆಬ್ಬಾಗಿಲಿನಿಂದ ಇನ್ನೊಬ್ಬ ಹೆಣ್ಣು ಮಗಳು ನೃತ್ಯ ಮಾಡುತ್ತ ಬಂದಳು. ತಬಲಾಭೋಲ್ ಮತ್ತು ಆಕೆಯ ಗೆಜ್ಜೆಯ ಕಾಲುಗಳ ಕುಣಿತದ ಚಮತ್ಕಾರವನ್ನು ಕಂಡವರು ಆಗಾಗ ವಾಹವಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಕೊನೆಗೆ ತಬಲಾದಲ್ಲಿ ಒಂದು ತಿಹಾಯಿಯನ್ನು ತೆಗೆದುಕೊಂಡು ಆ ಬೋಲಿನ ಜೊತೆಗೆ ಕುಣಿದು ಮುಕ್ತಾಯಗೊಳಿಸಿ ತನ್ನ ತಲೆಯ ಮೇಲಿನ ಟೋಪನ ಬಿಸಾಕಿ ಸೀರೆ ಕಳಚಿ ನಿಂತಾಗ ಈವರೆಗೆ ಹೆಣ್ಣು ವೇಷ ಧರಿಸಿ ನೃತ್ಯ ಮಾಡಿದವರು ಬೇರ ಯಾರೂ ಆಗಿರಲಿಲ್ಲ. ಅವರು ಕಬೀರದಾಸರೇ ಆಗಿದ್ದರು. ಆಗ ಯಾರೂ ಇವರು ಕಬೀರದಾಸರೆಂದು ಗುರುತಿಸಲಿಲ್ಲ. ಎಲ್ಲರ ಆಶ್ಚರ್ಯದಿಂದ ಗೊಳ್ಳೆಂದು ನಕ್ಕು ಕರತಾಡನ ಮಾಡಿದರು. ಈ ಹಿಂದಿನ ದಿನ ನೃತ್ಯ ಮಾಡಿದ ಕಲಾವಿದೆ ಇವರ ನೃತ್ಯ ನೋಡಿದಾಗ ಅವಳ ಅಹಂಕಾರ ನಾಶವಾಗಿತ್ತು. ಆಕೆ ಬಂದು ಗುರುಗಳಿಗೆ ವಂದಿಸಿ ಕ್ಷಮೆಯಾಚಿಸಿದಳು.
ಮತ್ತೊಂದು ದಿವಸ ಉತ್ತರ ಭಾರತದ ಓರ್ವ ಉತ್ತಮ ತಬಲಾವಾದಕ ಬಂದು ತಬಲಾ ಸೇವೆಗೈಯ್ಯಲು ಕೇಳಿಕೊಂಡ. ಅವನಿಗೂ ಅವಕಾಶ ಮಾಡಿಕೊಟ್ಟರು. ಅಂದು ಸಂಜೆ ಅರ್ಧ ಗಂಟೆಯ ತಬಲಾ ವಾದವನ್ನು ಎಲ್ಲರೂ ಮಚ್ಚುವಂತೆ ನುಡಿಸಿದ. ಅವನಲ್ಲಿಯೂ ಅಹಂಕಾರವಿರುವುದನ್ನು ಕಂಡ ಕಬೀರದಾಸರು ತಮ್ಮ ಕೈಯಲ್ಲಿರುವ ಡಮರು ತೆಗೆದುಕೊಂಡು ಬಂದು ಸಿದ್ಧರಿಗೆ ನಮಸ್ಕರಿಸಿ ಆ ಕಲಾವಿದ ನುಡಿಸಿದ ಎಲ್ಲ ಸಂಗತಿಗಳನ್ನು ತನ್ನ ಡಮರುವಿನಲ್ಲಿ ನುಡಿಸಿದ್ದಲ್ಲದೆ ಇನ್ನೂ ಹೆಚ್ಚಿನ ಸಂಗತಿಗಳನ್ನು ನುಡಿಸಿದನು. ಆಗ ಆ ತಬಲಾ ವಾದಕ ನತಮಸ್ತಕನಾದ.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
