ಗುರುನಾಥರ ಕೃಪೆಯಿಂದ ಪರಪ್ಪನ ತಲೆನೋವು ಸಹಿತ ಬಡತನ ಮಾಯವಾಯಿತು
ಹಳೇಹುಬ್ಬಳ್ಳಿಯ ಜಂಗ್ಲಿಪೇಟೆಯ ಪರಪ್ಪ ಶಿರೂರ ಅವನ ತಂದೆ ತಾಯಿಗಳು ಬಹಳ ಬಡವರಾಗಿದ್ದು ಒಕ್ಕಲುತನ ಕೂಲಿ ಕೆಲಸ ಮಾಡುತ್ತ ಉಪಜೀವನ ಸಾಗಿಸುತ್ತಿದ್ದರು. ಈ ಕಾರಣದಿಂದಾಗಿ ಅವನು ಐದನೆಯ ತರಗತಿಯವರೆಗೆ ಓದಿ ಶಾಲೆ ಬಿಟ್ಟು ತಂದೆ ತಾಯಿಗಳಿಗೆ ನೆರವಾಗುವುದಕ್ಕಾಗಿ ಅವನೂ ಕೂಲಿ ಕೆಲಸ ಮಾಡತೊಡಗಿದ. ದೊಡ್ಡವನಾದ ನಂತರ ಅವನ ಲಗ್ನವೂ ಆಯಿತು. ಮೂರು ಮಕ್ಕಳೂ ಆದವು ಮುಂದೆ ತಂದೆ ತಾಯಿಗಳು ದೈವಾಧೀನರಾದರು. ಆಗ ತನ್ನ ಸಂಸಾರದ ಭಾರ ಅವನ ಮೇಲೆ ಬಿತ್ತು.
ಮುಂದೆ ಯವುದೇ ಕಾರಣದಿಂದ ಅವನ ತಲೆಯಲ್ಲಿ ನೋವು ಪ್ರಾರಂಭವಾಯಿತು. ಯಾವ ವೈದ್ಯರಿಗೆ ತೋರಿಸಿದರೂ ಉಪಯೋಗವಾಗಲಿಲ್ಲ. ಯಾವ ಕೆಲಸಕ್ಕೆ ಹೋದರೂ ಸರಿಯಾಗಿ ಕೆಲಸವಾಗದ ಕೆಲವು ಸಲ ಮನೆಯಲ್ಲಿದೆ: ಉಳಿಯಬೇಕಾಯಿತು. ಆಗ ಉಪಜೀವನ ನಡೆಸುವುದು ಕಷ್ಟದಾಯಕವಾಗಿ ಒಂದೊಂದು ದಿವಸ ಉಪವಾಸವಿರುವ ಪರಿಸ್ಥಿತಿ ಬಂದಾಗ, ತಾನು ಗಳಿಸಿದ್ದರಲ್ಲಿ ಕೂಡಿಟ್ಟ ಹಣ ತೀರಿ ಕೈ ಬರಿದಾಯಿತು. ಏನು ಮಾಡಬೇಕೆಂಬ ಚಿಂತೆಗೊಳಗಾದನು. ಆಗ ಶ್ರೀ ಸಿದ್ಧಾರೂಢಮಠದ ಸಜ್ಜನ ಭಕ್ತರ ಸಲಹೆಯಂತ ಶ್ರೀ ಸಿದ್ದರ ಗದ್ದುಗೆ ಹಾಗೂ ಶ್ರೀ ಗುರುನಾಥರ ದರ್ಶನಕ್ಕೆ ಹೋಗತೊಡಗಿದ.
ಕೆಲವು ದಿವಸಗಳ ನಂತರ ಶ್ರೀಗಳ ದರ್ಶನ ಪಡೆದುಕೊಂಡು ಎರಡೂ ಕೈ ಜೋಡಿಸಿ ತಂದೆ ತಲೆನೋವಿನಿಂದ ಸಂಸಾರ ನಡೆಸುವುದು ಕಷ್ಟವಾಗಿದೆ. ನೀನಲ್ಲದೆ ಮತ್ತಾರೂ ಗತಿಯಿಲ್ಲ. ನನ್ನ ನೋವನ್ನು ನಿವಾರಿಸಿ ಉದ್ಧರಿಸು ದೇವಾ ಎಂದು ಅಳುತ್ತ ಸಾಷ್ಟಾಂಗ ನಮಸ್ಕಾರ ಮಾಡಿ ಗುರುನಾಥ ದರ್ಶನಕ್ಕೆ ಹೋದರು ಆಗ ಭಕ್ತವತ್ಸಲನಾದ ಶ್ರೀ ಗುರುನಾಥಾರೂಢರು ನಸುನಗುತ್ತ ತಮ್ಮ ಬಲಗಾಲನ್ನು ಎತ್ತಿ ಪರಪ್ಪನ ತಲೆಯ ಮೇಲೆ ಇಟ್ಟು ಸ್ವಲ್ಪ ಗಟ್ಟಿಯಾಗಿ ಒತ್ತಿದರು. ಆಗ ಪರಪ್ಪನ ತಲೆತುಂಬ ಪ್ರಕಾಶ ತುಂಬಿದಂತಾಗಿ ಎಚ್ಚರ ತಪ್ಪಿತು. ಸ್ವಲ್ಪ ಹೊತ್ತಿನಲ್ಲಿ ಶ್ರೀಗಳು ತಮ್ಮ ಕಾಲನ್ನು ತೆಗೆದು ನಿಂತರು. ಆಗ ಪರಪ್ಪನಿಗೆ ಎಚ್ಚರ ಬಂದು ಎದ್ದು ನಿಂತಾಗ ಅವನಿಗಿರುವ ತಲೆನೋವು ಇಲ್ಲವಾಯಿತು. ಆಗ ಪರಪ್ಪನು ಸಂತೋಷದಿಂದ ನಮಸ್ಕರಿಸಿದಾಗ ಶ್ರೀಗುರುನಾಥರು ಹೊರಟುಹೋದರು.
ಪರಪ್ಪನಿಗೆ ಆಶ್ಚರ್ಯವಾಗಿ ಅಲ್ಲಿದ್ದವರಿಗೆ ಈ ಮಹಿಮೆ ಹೇಳಿದಾಗ, ಶ್ರೀಗಳ ಯೋಗ್ಯತೆಯ ವಿಶೇಷ ಅರಿವಾಗಿ ಗುರುಗಳ ಮೇಲೆ ಭಕ್ತಿ ಹೆಚ್ಚಾಯಿತು. ಅಂದಿನಿಂದ ಪರಪ್ಪನು ದಿನಾಲು ಸಾಯಂಕಾಲ ಮಠಕ್ಕೆ ಹೋಗಿ ದರ್ಶನವನ್ನು ಪಡೆಯುವದನ್ನು ಒಂದು ದಿನವೂ ತಪ್ಪಿಸುತ್ತಿರಲಿಲ್ಲ. ತನ್ನ ಉದ್ಯೋಗದಲ್ಲಿ ತೊಡಗಿ ಸಂಪಾದನೆಯೂ ಹೆಚ್ಚಾಗಿ ಉಪಜೀವನ ಸರಿಯಾಗಿ ನಡೆಯಹತ್ತಿತು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥನ ಕೃಪೆಯಿಂದ ಸಿದ್ದಮ್ಮಳಿಗೆ ಸತ್ಸಂಗದ ಫಲ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
