ಗುರುನಾಥನ ಕೃಪೆಯಿಂದ ಸಿದ್ದಮ್ಮಳಿಗೆ ಸತ್ಸಂಗದ ಫಲ





ಸತ್ಸಂಗ ನಿಸ್ಸ೦ಗತ್ವಂ
ನಿಸ್ಸಂಗತ್ತ್ವೇ ನೀರ್ಮೋಹತ್ತ್ವ o 
ನಿರ್ಮೋಹತ್ತ್ವೇ ನಿಶ್ಚಯ ತತ್ತ್ವಂ
ನಿಶ್ಚಯ ತತ್ವೇ ಜೀವನ್ಮುಕ್ತಿತ್ವೇ ||

ಎಂಬ ಉಕ್ತಿಯಲ್ಲಿ ಇಡೀ ವೇದಾಂತದ ಸಾರವೇ ಆಗಿದೆ. ಇರಲಿ, ಹಳೇಹುಬ್ಬಳ್ಳಿ ಸಪಾರೆಯವರ ಮನೆತನವೆಂದರೆ ನೇಕಾರಿಕೆಯ ಮತ್ತು ಜವಳಿ ವ್ಯಾಪಾರದಿಂದ ದೊಡ್ಡ ಶ್ರೀಮಂತರಾಗಿದ್ದರು. ಧರ್ಮಣ್ಣ ಕೃಷ್ಣಪ್ಪ ಮತ್ತು ಬೊಬ್ಬಣ್ಣ ಹಾಗೂ ಅವರ ಮನೆತನದವರೆಲ್ಲರೂ ಶ್ರೀಗುರು ಸಿದ್ದಾರೂಢರ ಮತ್ತು ಶ್ರೀಗುರುನಾಥಾರೂಢರ. ಭಕ್ತರಾಗಿದ್ದರು. ಮನೆಗೆ ಸಾಧು ಸಂತರು ಬಂದರೆ ಅವರನ್ನು ಗೌರವದಿಂದ ಕಂಡು ಪೂಜಿಸಿ ಅನ್ನಪ್ರಸಾದ ನೀಡಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅವರಲ್ಲಿ ಕೃಷ್ಣಪ್ಪ ಸಪಾರೆಯವರ ದೊಡ್ಡ ಮಗಳು ಸಿದ್ಧಮ್ಮನವರು ದೊಡ್ಡವಳಾಗಿ ಶ್ರೀಗುರುನಾಥಪ್ಪ ಸವ್ವಾಸೇರ ಅವರ ಜೊತೆಗೆ ಲಗ್ನವಾಗಿ ಒಂದು ಮಗಳನ್ನು ಪಡೆದಿದ್ದಳು.
ಹಳೇಹುಬ್ಬಳ್ಳಿ ಅಕ್ಕಸಾಲಿಗರ ಓಣಿಯಲ್ಲಿರುವ ಮೊದಲಿನ ಮನೆಯಲ್ಲಿ ಗಂಗಪ್ಪ ಕ್ಷೀರಸಾಗರ ಇವರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಶಿಷ್ಯರು. ವೃತ್ತಿಯಲ್ಲಿ ನೇಕಾರರಾದರೂ ಪ್ರವೃತ್ತಿಯಲ್ಲಿ ನಾಟಕಕಾರು, ಕೀರ್ತನೆ ಭಜನೆಗಳಲ್ಲಿ ಎತ್ತಿದ ಕೈ. ಅವರು ಶ್ರೀ ಸಿದ್ಧಾರೂಢರ ಮತ್ತು ಗುರುನಾಥಾರೂಢರ ಭಕ್ತರೂ ಆಗಿದ್ದರು. ಪ್ರತಿವರ್ಷ ತಮ್ಮ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳ ಜಯಂತಿ ಉತ್ಸವ ಆಚರಿಸುತ್ತಿದ್ದರು. ಒಂದು ವರ್ಷ ಜಯಂತಿಯ ಪುಣ್ಯದಿನ ಶ್ರೀ ಗುರುನಾಥಾರೂಢರನ್ನು ಕರೆದುಕೊಂಡು ಬಂದು ಉಚಿತಾಸನದಲ್ಲಿ ಕೂಡಿಸಿ ಪೂಜಿಸಿ ಭಜನೆ ಕೀರ್ತನೆಗಳನ್ನು ಗೈದು, ಪ್ರಸಾದ ವಿತರಿಸುವ ಮುನ್ನ ಶ್ರೀಮತಿ ಸಿದ್ದಮ್ಮನವರು ಆ ಉತ್ಸವಕ್ಕೆ ಬಂದು ಸುಮಾರು ಇಪ್ಪತ್ತು ಅಡಿಗಳಷ್ಟು ದೂರವಿದ್ದ ಅವಳು ಅಲ್ಲಿಯೇ ಕೈಮುಗಿದು ನಿಂತಳು. ಆಗ ಮೌನಯೋಗಿ ಶ್ರೀ ಗುರುನಾಥರು ತಮ್ಮ ಕೃಪಾದೃಷ್ಟಿಯಿಂದ ನೋಡಿ ತಮ್ಮ ಕೈಯಲ್ಲಿದ್ದ ಸೂರ್ಯಪಾನದ ಹೂವನ್ನು ಅವಳ ಕಡೆಗೆ ಎಸೆದರು. ಆಗ ಆ ಹೂವು ಶ್ರೀಮತಿ ಸಿದ್ದಮ್ಮನವರ ಎದೆಗೆ ಬಡಿಯಿತು. ಸಿದ್ದಮ್ಮ ಆ ಹೂವನ್ನು ತಗೆದುಕೊಂಡು ಉಡಿಯಲ್ಲಿ ಇಟ್ಟುಕೊಂಡಾಗ ಆವಳ ಅಂತರಣದಲ್ಲಿ ಒಂದು ವಿಲಕ್ಷಣ ಆನಂದ ಉಕ್ಕೇರಿತು. ಅದನ್ನು ವಿವರಿಸುವುದ ಅಸಾದ್ಧ, ಆಗ ಸಿದ್ದಮಳಿಗೆ ಈ ವಿಲಕ್ಷಣ ಘಟನೆಯ ಬಗ್ಗೆ ಅಚ್ಚರಿಯಾಯಿತ್ತು ಭಕ್ತಿಯಿಂದ ಕಣ್ಣಲ್ಲಿ ನೀರು ಸುರಿಯಿತು. ಮುಂದೆ ಅನ್ನಪ್ರಸಾದದ ನಂತರ ಸದ್ಗುರುಗಳು ಮನಕ್ಕೆ ಹೋದರು. ಆಗ ಗಂಗಪ್ಪನವರು ಸಿದ್ದಮ್ಮಳನ್ನು ಕುರಿತು, ಸಿದ್ದಮ್ಮಾ ನಿನಗೆ ಸದ್ಗುರುಗಳ ಆಶೀರ್ವಾದವಾಗಿದೆ. ಮುಂದೆ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಕಳಿಸಿದರು ಅಂದಿನಿಂದ ಸಿದ್ದಮ್ಮಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿ ಬೆಳೆಯಿತು.
ಶ್ರೀಸಿದ್ದಾರೂಢರ ಶಿಷ್ಯ ಮುಪ್ಪಿನಾರ್ಯರ ಸತ್ಸಂಗ ಅದೂ ಅಲ್ಲದೆ ಶ್ರೀಸಿದ್ಧರ  ಶಿಷ್ಯ ಶ್ರೀಸಿದ್ದವೀರಪ್ಪನವರ ಸತ್ಸಂಗ ವಿಶೇಷವಾಗಿ ಪ್ರಾಪ್ತಿಯಾಗಿ ಅವರ ಪ್ರವಚನ ಕೇಳುತ್ತ ಧನ್ಯತೆಯನ್ನು ಪಡೆದಳು ಮತ್ತು ಸಿದ್ಧವೀರಪ್ಪನವರ ಶಿಷ್ಯರಾದ ಶಿವಪ್ಪನವರು, ಶ್ರೀ ಬಾಳೇಶ ಸತ್ತಿಗೇರಿ, ಯಡ್ರಾವಿ ಬಸವಾನಂದರು, ಶಂಕರಭಟ್ಟರಂಥವರ ಪ್ರವಚನ ಕೇಳುತ್ತಿರುವಂತೆ ನಿಜಗುಣ ಶಿವಯೋಗಿಗಳ ಅದ್ವೈತ  ಶಾಸ್ತ್ರವು ಬಹಳ ಕಠಿಣವಾಗಿದ್ದರೂ ಸಿದ್ದಮ್ಮನಿಗೆ ಶ್ರೀ ಗುರುನಾಥರ ಕೃಪೆಯಿಂದ ಬಹುಬೇಗ ತಿಳಿಯತೊಡಗಿತು. ಆವ ಪುಣ್ಯದ ಫಲವಿದೆಂದು ಕುರುಹಿಡಿಯಲಹುದು ಜೀವಭಾವವನುಳಿದು ನಿಜನಿಷ್ಟೆಯ ಎಂಬ ನಿಜಗುಣರ ವಾಕ್ಯದಂತೆ ಸಿದ್ದಮ್ಮ ಮನೆಯಲ್ಲಿಯೂ ಅಭ್ಯಾಸ ಮಾಡಿ ನಿಜಗುಣರ ಶಾಸ್ತ್ರಹೇಳುವ ಯೋಗ್ಯತೆ ಪಡೆದಳು. ಆದರೆ ತನ್ನ ಸಂಸಾರದ ಯಾವುದೇ ಕೆಲಸ ಬಿಡದೆ ಚೊಕ್ಕಟವಾಗಿ ಮಾಡುತ್ತಿದ್ದಳು.
ಪತಿರಾಯ ಗುರುನಾಥಪ್ಪನವರು ತನ್ನ ಸತಿಯ ಪಾರಮಾರ್ಥಿಕ ಕಾರ್ಯಕ್ಕೆ ಎಂದೂ ಅಡ್ಡಿ ಬರಲಿಲ್ಲ. ಅದಕ್ಕೆ ಪ್ರೋತ್ಸಾಹ ನೀಡಿದರು. ಮುಂದ ಮಲ್ಲಿಕಾರ್ಜುನ ಗುಡಿ, ಗುಡಿಓಣಿಯ ತುಳಜಾಭವಾನಿಯ ಗುಡಿ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರವಚನ ನೀಡುತ್ತ ಜನರನ್ನು ಧಾರ್ಮಿಕ ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯುವಂತೆ ಸೇವೆ ಸಲ್ಲಿಸುತ್ತಿದ್ದಾರೆ. ಸ್ವತಃ ನಾನಿದ್ದು ಅವರ ಮಾತಿನಲ್ಲಿಯೇ ಹೇಳುವುದಾದರೆ ಈ ಯೋಗ್ಯತೆ ಬಂದದ್ದು ಶ್ರೀಗುರುನಾಥರ ಕರುಣೆಯಿಂದಲೇ ಎಂದು ಇಂದಿಗೂ ಸ್ಮರಿಸುತ್ತಾರೆ.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಭೀಮಣ್ಣನಿಗಾದ ಆರ್ಥಿಕ ಪರಸ್ಥಿತಿಯನ್ನು ಪರಿಹಾರ ಮಾಡಿದ ಗುರುನಾಥ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ