ಯೋಗ ಬ್ರಷ್ಟ ಬಾಲಯೇಾಗಿ ಸಿದ್ಧರಿಂದ ಮುಕ್ತನಾದ
🕉️ ಯೋಗ ಬ್ರಷ್ಟ ಬಾಲಯೇಾಗಿ ಮುಕ್ತನಾದ 🕉️
ಶ್ರೀ ಸಿದ್ದರ ಪರಮಶಿಷ್ಠ ಪರಶುರಾಮಪಂತ ಕರಮರಕರ (ಪಾಂಡುರಂಗ ಮಹಾರಾಜ) ಇವರ ತಂದೆ ಸದಾಶಿವ ತಾಯಿ ಸೀತಾಬಾಯಿ ಪತ್ನಿ ಜಾನಕಿಯು ಸಿದ್ದರ ಪರಮ ಭಕ್ತಳಾಗಿದ್ದಳು. ಪರಶುರಾಮರು ಸಾತಾರಾ ಜಿಲ್ಲೆಯ ಸಾತಗಾಂವ ಪೈಕಿ ಭುರುಂಗವಾಡಿಯಲ್ಲಿ ಜನಿಸಿದರು. ಇವರು ಭಲವಟ ಕ್ಷೇತ್ರದಲ್ಲಿದ್ದಾಗ ಶ್ರಾವಣಮಾಸ ವದ್ಯ ಪಕ್ಷದಲ್ಲಿ ಇವರ ಕನಸಿನಲ್ಲಿ ಶ್ರೀ ಸಿದ್ಧಾರೂಢರು ಬಂದು ದಾಸ ಉಪದೇಶ ಮಾಡಿದರು. ನಂತರ ಜಾಗ್ರತ್ತಿನಲ್ಲಿ ಅವರು ಸಿದ್ಧರಿಗೆ `ಗುರುಗಳೇ, ನೀವು ನನಗೆ ಆಗ್ರಹಪೂರ್ವಕ ಏಕೆ ಉಪದೇಶ ಮಾಡಿದಿರಿ' ಎಂದಾಗ ಗುರುಗಳು ಹೇಳಿದರು `ನಾನು ಪೂರ್ವಸಿದ್ದತೆಯಿಂದಲೇ ಉಪದೇಶ ಮಾಡಿದ್ದೇನೆ' ಎಂದರು. ನಂತರ ಗುರುಗಳು ತಮ್ಮ ಕೈಯಿಂದಲೇ ಪಂತರಿಗೆ ಪ್ರೇಮದ ತುತ್ತನ್ನು ಉಣಿಸಿ ಮಂತ್ರೋಪದೇಶ ಮಾಡಿದಾಗ, ಪರಶುರಾಮರು ಬಹಳ ಸಂತೋಷಪಟ್ಟರು. ಇವರ ದೊಡ್ಡ ಮಗಳು ಕಾಶೀಬಾಯಿ ಸಣ್ಣ ಮಗಳು ಸೀತಾ, ದೊಡ್ಡ ಮಗ ದತ್ತಾತ್ರೆಯ (ಮುಂದೆ ಕೇಂದ್ರ ಸರಕಾರದ ಮಂತ್ರಿಗಳು) ಮಧ್ಯದ ಮಗ ಅನಂತ. ಮೂರನೆಯ ಮಗ ಗೋವಿಂದ, ಇವನಿಗೆ ಆರೂಢರು ಪ್ರೀತಿಯಿಂದ ಗೋಪಾಲ ಎಂದು ಹೆಸರಿಟ್ಟಿದ್ದರು. ಇವರು ಮಂಟೂರಿನವರು. ಶುಕದೇವ ತನ್ನ ತಾಯಿಯ ಗರ್ಭದಲ್ಲಿ ಹನ್ನೆರಡು ವರ್ಷವಿದ್ದಂತೆ ಗೋವಿಂದನೂ ತನ್ನ ತಾಯಿಯ ಗರ್ಭದಲ್ಲಿ ಬಹಳ ಕಾಲವಿದ್ದು ಶಾಲಿವಾಹನಶಕೆ ಹದಿನೆಂಟು ನೂರಾ ಮೂವತ್ತೆರಡರಲ್ಲಿ ಕಾಲು ಕೆಳಗೆ ಮಾಡಿ ಜನಿಸಿದಾಗಳೇ ಮಾತನಾಡತೊಡಗಿದನು. ಓಂ ನಮಃ ಶಿವಾಯ ಮಂತ್ರ ಉಚ್ಚರಿಸತೊಡಗಿದನು. ಮುಂದೆ ಮಂಟೂರು ಗ್ರಾಮದಲ್ಲಿದ್ದ ಸಾಧು ಬೂವಾಜಿ ಮಹಂತರ ಜೊತೆಗೆ ಹಗಲಿರುಳೂ ದೇಹಭಾವ ಮರೆತು ಭಜನೆ ಮಾಡುತ್ತಿದ್ದನು. ಶಾಲೆಗೆ ಕಳಿಸಿದರೆ ಶಾಲೆಯ ಹುಡುಗರಿಗೆ ಶಿವನಾಮ ಉಚ್ಚರಿಸಿರೆಂದು ಕಲಿಸುತ್ತಿದ್ದ. ಆಗ ಎಲ್ಲ ಮಕ್ಕಳ ಭಜನೆ ಮಾಡುವುದನ್ನು ಕಂಡ ಶಾಲಾ ಶಿಕ್ಷಕರು ಸಂತೋಷಪಡುತ್ತಿದ್ದರು.
ಶಾಲೆಯಲ್ಲಿ ಇವನ ಲಕ್ಷ್ಯವೇ ಇರುತ್ತಿರಲಿಲ್ಲ. ಶಾಲೆಯೆಂದರೆ ಬೇಸರ ಬರುತ್ತಿತ್ತು. ಅವನ ತಾಯಿ ಶಾಲೆಗೆ ಹೋಗೆಂದರೆ ಹೋಗುತ್ತಿರಲಿಲ್ಲ. ತಾಯಿ ಜಾನಕಿಯು ಮಠಕ್ಕೆ ಹೋಗಿ ಸಿದ್ದರಿಗೆ ಹೇಳಿದಳು `ಸದ್ಗುರುವೇ, ಗೋಪಾಲನಿಗೆ ಶಾಲೆಗೆ ಹೋಗಲು ಹೇಳಿರಿ' ಎಂದಾಗ ಸಿದ್ದ ಹೇಳಿದ ಜಾನಕೀ, ಅವನಿಗೆ ಶಾಲೆಗೆ ಹೋಗಲು ಒತ್ತಾಯ ಮಾಡಬೇಡ. ಶಾಲೆಗೆ ಹೋಗದೇ ಪಾಸಾಗುತ್ತಾನೆ' ಎಂದರು. ಅವರು ಹೇಳಿದಂತೆ ಅವನು ಒಂದನೆಯ ತರಗತಿಯಲ್ಲಿ ಉತ್ತೀರ್ಣನಾದನು. ಹಿಂದೆಯೇ ಯೋಗಭ್ರಷ್ಟ ಶರೀರವಿರುವುದರಿಂದ ಗುರುಮುಖದಿಂದ ಕೇಳಿದ
ಪಾರಮಾರ್ಥದಲ್ಲಿಯೂ ಪಾಸಾಗಿದ್ದನು. ಯಾವಾಗಲೂ ಸದ್ಗುರುವಿನ ಧ್ಯಾನ ಮಾಡುತ್ತಿದ್ದನು. ಎಲ್ಲರೆದುರು `ನಾನು ಸಿದ್ಧಾರೂಢನಾಗುತ್ತೇನೆ' ಎನ್ನುತ್ತಿದ್ದನು. ಹಣೆಯಲ್ಲಿ ವಿಭೂತಿ ಧರಿಸಿ ಓಂ ನಮಃ ಶಿವಾಯ ಮಂತ್ರ ಪಠಿಸುತ್ತಿದ್ದನು. ಅವನ ದೇಹ ವಿಸರ್ಜನೆ ಮಾಡುವ ಸಮಯ ಬಂದಿತು. ಆಗ ನಾನು ಹೇಳಿದಂತೆ ಭಜನ
ಮಾಡಬೇಕೆಂದು ಹೇಳಿದ್ದು, ಅದರಂತೆ ಎಲ್ಲರೂ ಭಜನೆ ಮಾಡಹತ್ತಿದರು.
ರಾಮನಾಮ ಭಟೋರೆಮನಾ। ಅಸಕಾಯ ನರದೇಹಯೇಸೀಲ ಪುನಃ (ಮನವೇ ರಾಮನಾಮ ಜಪಿಸು, ಪುನಃ ನರಜನ್ಮ ಬರುವುದಿಲ್ಲ) ಎಂದು ತನ್ನ ತಾಯಿಗೆ ಕಲಿಸುತ್ತಿದ್ದನು. ಸಿದ್ಧನ ದರ್ಶನ ತಪ್ಪಿಸಿಕೊಳ್ಳಬೇಡಿರೆಂದು ಆ ಆರು ವರ್ಷದ ಬಾಲಕ ಹೇಳುತ್ತಿದ್ದನು. ಶಾಲಿವಾಹನ ಶಕೆ ಹದಿನೆಂಟು ನೂರಾ ಮೂವತ್ತೆಂಟು ಅನಲ ಸಂವತ್ಸರ ಕಾರ್ತಿಕ ಅಮಾವಾಸ್ಯೆ ಶನಿವಾರ ರಾತ್ರಿ ಸಂತ ಸಮೂಹ ಕೂಡಿತು. ಆಗ ತನ್ನ ದೇಹವನ್ನು ಸಿದ್ಧರ ಚರಣಗಳಲ್ಲಿ ಅರ್ಪಿಸಿ ಅಮರನಾದನು. ಆಗ ಸಿದ್ದನು ಅವನ ತಾಯಿ ಜಾನಕಿಗೆ ಹೇಳಿದನು 'ತಾಯಿ, ನೀನು ಶೋಕ ಮಾಡಬೇಡ, ಹಿಂದಿನ ಜನ್ಮದಲ್ಲಿ ನಿನ್ನ ಮಗ ಯೋಗಭ್ರಷ್ಟನಿರುವುದರಿಂದ ಈ ಜನ್ಮದಲ್ಲಿ ನಿನ್ನ ಉದರದಲ್ಲಿ ಜನಿಸಿದ್ದಾನೆ. ನೀನು ಧನ್ಯಳು. ಅವನ ಜನ್ಮ ಸಫಲವಾಯಿತು.
ಇದೇ ರೀತಿ ಜನ್ಮ ಸಫಲತೆಗಾಗಿ ಸಾಧನೆ ಮಾಡಬೇಕು. ಜಗತ್ತಿನಲ್ಲಿರುವ ಎಲ್ಲ ಮಕ್ಕಳು ನಿನ್ನವೆಂದೇ ತಿಳಿ ನಾನೂ ನಿನ್ನ ಮಗನಿದ್ದೇನೆಂಬುದನ್ನು ಮರೆತೆಯಾ?' ಎಂದು ಹೇಳಿ ಸಮಾಧಾನಪಡಿಸಿದರು. ಆ ಮೇಲೆ ಸಿದ್ಧರು ಮಗುವಿನ ದೇಹ ಸ್ಪರ್ಶ ಮಾಡಿ ಮಠದಲ್ಲಿ ಹೊಸದಾಗಿ ಕಟ್ಟಿಸಿದ ಧರ್ಮಶಾಲೆಯ ಹಿಂದೆ ಸಮಾಧಿ ಮಾಡಿದರು. ಮರುದಿನ ಮುಂಜಾನ ರವಿವಾರ ಎಲ್ಲ ಭಕ್ತರು ಸೇರಿದಾಗ ಈ ಬಾಲ ಶಿಷ್ಕನ ಬಗ್ಗೆ ಅಕ್ಕಲಕೋಟೆಯ ಶರಣಪ್ಪನು ಕೀರ್ತನ ಮಾಡಿದನು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
