ಶ್ರೀಗಳ ಬೆರಳ ಸ್ಪರ್ಶದಿಂದ ಬೆನ್ನಿನ ಗಂಟುಮಾಯ

 


ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಒಬ್ಬ ಹೆಣ್ಣುಮಗಳು ಶ್ರೀಸಿದ್ದಾರೂಢರ ಅನನ್ಯ ಭಕ್ತಿ ಮಾಡಿದವಳಾಗಿದ್ದು, ಮೇಲಿಂದ ಮೇಲೆ ಮಠಕ್ಕೆ ಹೋಗಿ ಶ್ರೀಸಿದ್ದಾರೂಢರಿಗೆ ಭಕ್ತಿ ಸಲ್ಲಿಸುತ್ತಿದ್ದಳು. ಅದರಂತೆ ಪ್ರತಿ ಅಮಾವಾಸ್ಯೆಗೆ ತಪ್ಪದೆ ಹೋಗುತ್ತಿದ್ದಳು. ಮುಂದೆ ಮದುವೆಯಾಗಿ ಮಕ್ಕಳಾಗಿ ಮೊಮ್ಮಕ್ಕಳಾದವು. ಒಂದು ದಿನ ತನ್ನ ಮೊಮ್ಮಗನಾದ ಫಕೀರಗೌಡನ ಬೆನ್ನಹಿಂದೆ ಒಂದು ಮಾಂಸದ ಗಂಟು ಕಾಣಿಸಿಕೊಂಡಿತು. ಅದು ಬೆಳೆಯುತ್ತ ಬೆಳೆಯುತ್ತ ಒಂದು ಸಣ್ಣ ಬಿಂದಿಗೆಯ ಆಕಾರ ಪಡೆಯಿತು. ಮತ್ತು ವಿಪರೀತ ನೋವಾಗುತ್ತಿತ್ತು.

ಇದರಿಂದ ಮನೆಯವರಿಗೆ ಚಿಂತೆಯಾಯಿತು. ವೈದ್ಯರಿಂದ ಉಪಚಾರವೂ ನಡೆಯಿತು . ಆದರೆ ಯಾವುದೂ ಉಪಯೋಗವಾಗಲಿಲ್ಲ, ಅವರ ಅಮ್ಮ  ವಿಚಾರ ಮಾಡುತ್ತ, ಈ ಗಂಟು ನಿವಾರಣೆಯಾಗಬೇಕಾದರೆ ಶ್ರೀಗುರುನಾಥರಿಂದ ಸಾಧ್ಯ ಎಂಬ ತೀರ್ಮಾನಕ್ಕೆ ಬಂದಳು.


ಪ್ರತಿ ಅಮವಾಸ್ಯೆಗೆ ಶ್ರೀ ಸಿದ್ಧಾರೂಢರ ಮಠಕ್ಕೆ ಹೋಗುವ ಸಂಪ್ರದಾಯದಂತೆ ಒಂದು ಅಮಾವಾಸ್ಯೆಯ ದಿವಸ ಮೊಮ್ಮಗನೊಂದಿಗೆ ಸಿದ್ದಾರೂಢರ ಮಠಕ್ಕೆ ಬಂದು, ಶ್ರೀಗಳ ಗದ್ದುಗೆಯ ದರ್ಶನ ಪಡೆದು ನಂತರ ಶ್ರೀಗುರುನಾಥಾರೂಢರ ದರ್ಶನಕ್ಕೆ ಬಂದು, ತಾನು ತಂದಿರುವ ಹೂವು ಹಣ್ಣುಗಳನ್ನು ಸಮರ್ಪಿಸಿ, ಗುರುನಾಥಾ | ನನ್ನ ಮೊಮ್ಮಗ ಫಕೀರಗೌಡನಿಗೆ ಬೆನ್ನ ಹಿಂದೆ ಒಂದು ಗಂಟು ಆಗಿ, ಅವನಿಗೆ ಬಹಳ ಕಷ್ಟವಾಗಿದೆ. ಅದನ್ನು ನಿವಾರಿಸು ಗುರುವೇ ಎಂದು ಅನನ್ಯ ಭಕ್ತಿಯಿಂದ ಬೇಡಿಕೊಂಡು, ಫಕೀರಗೌಡನ ಬೆನ್ನ ಹಿಂದಿನ ಗಂಟನ್ನು ತೋರಿಸಿದಳು.


ಆಗ ಸದ್ಗುರುನಾಥರು ಬಾಲಕನಂತೆ ತನ್ನ ಬಾಯಿಯಲ್ಲಿ ಬೆರಳನ್ನಿಟ್ಟುಕೊಂಡು ಚೀಪುತ್ರ ನಸುನಗುತ್ತ ನಿಂತಿದ್ದರು. ಸ್ವಲ್ಪ ಸಮಯದಲ್ಲಿ ತಾವೇ ಸ್ವತಃ ಫಕೀರಗೌಡರ ಹತ್ತಿರ ಬಂದು, ಅವನ ಹಿಂದೆ ಬೆಳೆದ ಗಂಟಿನ ಮೇಲೆ ಕಿರಿಬೆರಳನ್ನು ಸ್ಪರ್ಶಮಾಡಿ ನಕ್ಕರು. ಆನಂತರ ಆ ಮಹಿಳೆ ಮತ್ತು ಮೊಮ್ಮಗ ಸೇರಿ ಸದ್ಗುರುಗಳಿಗೆ ವಂದಿಸಿ, ತಮ್ಮ ನೂಲ್ವಿ ಗ್ರಾಮಕ್ಕೆ ಹೋದರು. ಫಕೀರಗೌಡನಿಗಾದ ಬೆನ್ನ ಗಂಟು ದಿನಗಳೆದಂತೆ ಕರಗುತ್ತ ಕರಗುತ್ತ ಮುಂದಿನ ಅಮವಾಸ್ಯೆ ಅಂದರೆ ಒಂದು ತಿಂಗಳಲ್ಲಿ ಮಾಯವಾಯಿತು. ಇದನ್ನು ಕಂಡ ಮನೆಯವರೆಲ್ಲರಿಗೂ ಆನಂದಾಶ್ಚರ್ಯವಾಯಿತು. ರೂಢಿಯಂತೆ ಅಜ್ಜಿ ತನ್ನ ಮೊಮ್ಮಗನನ್ನು ಕರೆದುಕೊಂಡು ಶ್ರೀಗುರುನಾಥರ ದರ್ಶನಕ್ಕೆ ಬಂದು ನಮಸ್ಕರಿಸಿ, ಫಕೀರಗೌಡನ ಗಂಟು ಮಾಯವಾದುದನ್ನು ತೋರಿಸಿ, ತಾವು ತಂದ ಫಲ ಪುಷ್ಪಗಳನ್ನು ಸಮರ್ಪಿಸಿ, ಗುರುಗಳ ಆಶೀರ್ವಾದ ಪಡೆದು ತಮ್ಮ ಗ್ರಾಮಕ್ಕೆ ಹೋದರು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ವಿದೇಶಿ ಸಾಧಕನಿಗೆ ದೇವರ ಅಸ್ತಿತ್ವದ ಅನುಭವ ಮಾಡಿದ ಗುರುನಾಥ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ