ಎಲ್ಲರಲ್ಲಿ ಸಿದ್ಧರ ಸಮಾನ ದೃಷ್ಟಿ

🌺 ಎಲ್ಲರಲ್ಲಿ ಸಿದ್ಧರ ಸಮಾನ ದೃಷ್ಟಿ 🌺



ಒಂದು ದಿವಸ ಶ್ರಾವಣ ಸೋಮವಾರದ ಉತ್ಸವದಲ್ಲಿ ಭಜನ ಕೀರ್ತನ ನಡೆಯುತ್ತಿತ್ತು. ಭಕ್ತರು ಬಹುಸಂಖ್ಯೆಯಲ್ಲಿ ನೆರೆದಿದ್ದರು. ಶೆಟ್ಟರು, ಸಾವುಕಾರರು, ರಾಜರು, ಭಕ್ತರಿಂದ ಮಂಟಪ ತುಂಬಿತ್ತು. ಆಗ ಒಬ್ಬ ಬಡ ಹೆಣ್ಣುಮಗಳು ಗುರುದರ್ಶನಕ್ಕಾಗಿ ಬಂದಳು. ಅವಳು ಹರಿದ ಸೀರೆ ಹರಿದ ಕುಪ್ಪಸ ತೊಟ್ಟಿದ್ದು ಮಸ್ತಕವು ಭಣಭಣವಾಗಿತ್ತು. ಅವಳ ಅಂತಃಕರಣಲ್ಲಿ ಗುರುದರ್ಶನದ ವಿಶೇಷ ಆಸಕ್ತಿಯಿತ್ತು. ಜನರು ಗುರುಗಳೆಡೆಗೆ ಹೋಗಲು ಬಿಡಲಿಲ್ಲ. ಅವಳ ಮನಸ್ಸು ಖಿನ್ನವಾಗಿದ್ದರಿಂದ ಮಹಾದ್ವಾರ ಕಂಬಕ್ಕೆ ಅಂಟಿಕೊಂಡು ನಿಂತಿದ್ದಳು. ಹೀಗೆ ಎರಡು ತಾಸು ನಿಂತ ಆ ಸ್ತ್ರೀಯ ಕಡೆಗೆ ಅಕಸ್ಮಾತ್ ಶ್ರೀಗಳ ದೃಷ್ಟಿ ಬಿದ್ದಿತು. ಅವರ ಹೃದಯ ಕರಗಿ ಒಬ್ಬ ಭಕ್ತರಿಂದ ಅವಳನ್ನು ಕರೆಸಿಕೊಂಡು ಗುರುಗಳು ಅವಳ ಮಸ್ತಕದ ಮೇಲೆ, ಹಸ್ತವನ್ನಿಟ್ಟು ಆಶೀರ್ವದಿಸಿದಾಗ ಅವಳಿಗೆ ಮಹದಾನ೦ದವಾಯಿತು. ಅವಳು ಸಿದ್ಧರ ಚರಣಗಳಿಗೆರಗಿ ಆಶೀರ್ವಾದ ಪಡೆ ಹೋದಳು.
ಒಂದು ದಿನ ಸದ್ಗುರುಗಳು ಪೂಜೆಗಾಗಿ ಖರ್ಚಿಯ ಮೇಲೆ ಕುಳಿತಾಗ ನರನಾರಿಯರು ಬಹಳಷ್ಟು ನಿಂತಿದ್ದರು. ಆಗ ದೂರದೇಶದಿಂದ ದರ್ಶನಕ್ಕಾಗಿ ಓರ್ವ ವ್ಯಕ್ತಿ ಬಂದನು. ಅವನೇಕೆ ಬಂದಿದ್ದನೆಂದರೆ ಅವನ ಮೇಲೆ ಸರಕಾರದ ಅನೇಕ ಖಟ್ಲೆಗಳಿದ್ದವು. ಅವುಗಳ ನಿವಾರಣೆಗಾಗಿ ಬಂದು ಗುರುಚರಣಗಳನ್ನು ಗಟ್ಟಿಯಾಗಿ ಹಿಡಿದು ಅಳಹತ್ತಿದನು. ಇದನ್ನು ನೋಡಿದ ಭಕ್ತರು ಸಿಟ್ಟಿನಿಂದ ಅವನನ್ನು ಹಿಡಿದು ದಬ್ಬಿ ಅಪಶಬ್ದಗಳಿಂದ ಬೈಯ್ಯಹತ್ತಿದರು. ಆಗ ಭಕ್ತರಿಗೆ ಶ್ರೀಗಳು ಹೇಳಿದರು.
“ನೀವು ಅವನಿಗೆ ಚುಚ್ಚುಮಾತು ಮತ್ತು ಅವಾಚ್ಯ ಶಬ್ದಗಳನ್ನಾಡಬಾರದಿತ್ತು. ಅವನು ನನ್ನ ಚರಣಗಳನ್ನು ಹಿಡಿದಾಗ ನನಗೆ ನೋವಾಗಲಿಲ್ಲ, ಸಂಕಟ ಸಮಯದಲ್ಲಿ ರಕ್ಷಣೆ ಮಾಡುತ್ತಾನೆಂದು ನನ್ನ ಕಡೆಗೆ ಬರುತ್ತಾರೆ. ಮಗುವು ತಾಯಿಯನ್ನು ಪ್ರೀತಿಸುವಂತೆ ದೇವ ಮತ್ತು ಭಕ್ತರ ಪ್ರೀತಿಯಿರುತ್ತದೆ. ಅದು ನಿಮಗೆ ತಿಳಿಯುವುದಿಲ್ಲ. ಹಾಗೆ ಮಾಡಬಾರದು' ಎಂದು ಆಶೀರ್ವದಿಸಿ ಕಳಿಸಿದರು. ಹೀಗೆ ಗುರುಗಳಿಗೆ ಎಲ್ಲರಲ್ಲಿ ಸಮಾನ ದೃಷ್ಟಿಯಿತ್ತು. ಬಡವ ಬಲ್ಲಿದರೆಂಬ ಭೇದಭಾವವಿರಲಿಲ್ಲ. ಧನಿಕರು ರಾಜರಿಗೆ ದರ್ಶನ ಕೊಟ್ಟು ಬಡವರಿಗೆ ಹೊರಗೆ ಹಾಕುವ ಮನೋಭಾವ ಅವರಲ್ಲಿರಲಿಲ್ಲ. ಸಮಾನತೆ ಅವರಲ್ಲಿ ಸಹಜ ಸ್ವಭಾವವಾಗಿತ್ತು. ಏಕೆಂದರೆ ಭಕ್ತರಿಗೆ ಇದೊಂದು ಪಾಠವಾಗಬೇಕೆಂದು ಬಯಸಿದ್ದರು.
_______________________________

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ