ಭಿಡವಾಡದ ಶ್ರೀಧರನ ಉದ್ಧಾರ

🌺 ಭಿಡವಾಡದ ಶ್ರೀಧರನ ಉದ್ಧಾರ 🌺



ಭಿಡವಾಡದಲ್ಲಿ ಶ್ರೀಧರನೆಂಬ ವ್ಯಕ್ತಿಯಿದ್ದನು. ಅವನ ಪತ್ನಿ ಸುಂದರಾಬಾಯಿ. ಇವರಿಬ್ಬರೂ ಶ್ರೀ ದತ್ತನ ಉಪಾಸಕರು. ಇವರಿಗೆ ಅನಸೂಯಾಯೆಂಬ ಪುತ್ರಿ ಮತ್ತು ಬಾಬೂರಾವ ಎಂಬ ಪುತ್ರನಿದ್ದನು. ವ್ಯವಹಾರದಲ್ಲಿ ಸಾಕಷ್ಟು ಉತ್ಪನ್ನವಿದ್ದರೂ ಭಿಕ್ಷೆ ಬೇಡಿ ಉದರ ಪೋಷಣೆ ಮಾಡುತ್ತ ಕೀರ್ತನೆ, ಭಜನೆ, ಪುರಾಣಗಳನ್ನು ಹೇಳುತ್ತಿದ್ದನು. ಭಿಡವಾಡದಲ್ಲಿ ಸಿದ್ಧನ ಕೀರ್ತಿಯನ್ನು ಕೇಳಿ ಶ್ರೀಧರನಿಗೆ ಆನಂದವಾಯಿತು. ತಕ್ಷಣ ಹುಬ್ಬಳ್ಳಿಗೆ ಬಂದು ಸಿದ್ಧರ ದರ್ಶನ ಪಡೆದುಕೊಂಡು ಹೇಳಿದ 'ಗುರುವೇ, ನಿಮ್ಮ ಕೀರ್ತಿಯನ್ನು ಕೇಳಿ ಬಂದಿದ್ದೇನೆ. ಬಿಡವಾಡದಲ್ಲಿ ತಮ್ಮ ಹೆಸರಿನ ಆಶ್ರಮ ಸ್ಥಾಪಿಸಿ ಭಜನ ಪೂಜನ ಕೀರ್ತನ ಕಾರ್ಯಕ್ರಮ ನಡೆಸಬೇಕೆಂದಿದ್ದೇನೆ ಆಶೀರ್ವಾದ ಮಾಡಿರಿ' ಎಂದು ಬೇಡಿಕೊಂಡನು.
ಅವನ ಸ್ವಭಾವ ತಿಳಿದುಕೊಂಡು ಸಿದ್ಧ ಹೇಳಿದ `ನಿಮ್ಮಲ್ಲಿ ಆಶ್ರಮ ಸ್ಥಾಪಿಸಿ ಭಜನ ಪ್ರಚಾರ ಮಾಡು, ಆಚಾರ ವಿಚಾರಗಳಲ್ಲಿ ಸಮತ್ವವಿರಬೇಕು. ಯಾರಿಂದಲೂ ನೀನಾಗಿ ಹಣ ಕೇಳಬೇಡ, ನಿನಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ. ಹೋಗು ಪ್ರಚಾರ ಮಾಡು' ಎಂದು ಶ್ರೀಧರನಿಗೆ ಆಶೀರ್ವದಿಸಿ ಕಳಿಸಿದರು. ಶ್ರೀಧರನು ಭಿಡವಾಡದಲ್ಲಿ ಆಶ್ರಮ ಸ್ಥಾಪಿಸಿ ಧರ್ಮ, ಅರ್ಥ, ಕಾಮ, ಮೋಕ್ಷ ತತ್ವಗಳನ್ನು ತಿಳಿಸಿ ಹೇಳುತ್ತಿದ್ದಂತೆಯೇ ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಹಗಲು ರಾತ್ರಿ ನಾಮಸ್ಮರಣೆ ಪ್ರಾರಂಭವಾಯಿತು. ಮುಂದೆ ರತ್ನಾಗಿರಿ ಜಿಲ್ಲೆಯಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದನು. ಜನರು ಏನೇನೋ ಬೇಡಲು ಬರುತ್ತಿದ್ದರು. ಅವರಿಗೆ ಸಮಾಧಾನಪಡಿಸಿ ಕಳಿಸುತ್ತಿದ್ದನು. ಶ್ರೀಧರನನ್ನು ಕಂಡವರು ಪ್ರೇಮಾನಂದಭರಿತರಾಗುತ್ತಿದ್ದರು.
ದೇವಗಡದ ಭಕ್ತರು ಬಂದು ನಮ್ಮಲ್ಲಿ ಆಶ್ರಮ ಸ್ಥಾಪಿಸಿರಿ' ಎಂದು ಕೇಳಿದಾಗ ಅಲ್ಲಿಯೂ ಆಶ್ರಮ ಸ್ಥಾಪಿಸಿ ಲೋಕಕಲ್ಯಾಣ ಮಾಡುತ್ತಿದ್ದನು. ಭಿಡವಾಡದಲ್ಲಿ ಯಾವ ರೀತಿ ನಡೆಯುತ್ತಿತ್ತೋ ಅದೇ ಪ್ರಕಾರ ದೇವಗಡದಲ್ಲಿಯೂ ನಡೆಯುತ್ತಿತ್ತು. ಇದನ್ನು ನೋಡಿ ಶ್ರೀಧರನಿಗೆ ಆನಂದವಾಯಿತು. ಆಮೇಲೆ ಕಾಸಡೆ ಗ್ರಾಮದವರು ತಮ್ಮಲ್ಲಿಯೂ ಆಶ್ರಮ ಸ್ಥಾಪಿಸಬೇಕೆಂದು ಕೇಳಿಕೊಂಡಾಗ ಅಲ್ಲಿಯೂ ಒಂದು ಆಶ್ರಮ ಸ್ಥಾಪಿಸಿ ಭಜನ ಪ್ರಚಾರ ಮಾಡಿ ಅಲ್ಲಿಯ ಜನರನ್ನೂ ಉದ್ಧರಿಸಿದರು.
ನಂತರ ಶ್ರೀಧರ ಸ್ವಾಮಿಗಳು ಮುಂಬೈಗೆ ಹೋಗಿ ಅಲ್ಲಿಯೂ ಬಹಳ ಪ್ರಚಾರ ಮಾಡಿದರು. ಜನರಿಗೆ ಭಜನ ಮಾರ್ಗಕ್ಕೆ ಹಚ್ಚಿದರು. ಆಮೇಲೆ ಸಿದ್ಧಾರೂಢರ ಆಜ್ಞೆಯಂತೆ ಶ್ರೀಧರರು ಗೋವೆಯಲ್ಲಿಯ ಪಂಚವಾಡಿಗೆ ಬಂದರು. ಮುಂದೆ ಕುರ್ಪಿ, ಕುರ್ಡಿ ಗ್ರಾಮಗಳಲ್ಲಿಯೂ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾಡಿದರು. ಹೀಗೆ ಗೋವೆಯಲ್ಲಿ ಎಂಟು ಆಶ್ರಮಗಳಲ್ಲಿ ಸಿದ್ಧಾರೂಢರ ಭಜನೆ ಪ್ರಾರಂಭವಾದವು. ಹೀಗೆ ಶ್ರೀಧರ ಸ್ವಾಮಿಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ.

_______________________________

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ