ಲಲಿತಕಲಾದರ್ಶ ನಾಟ್ಯ ಸಂಘದ ಸ್ಥಾಪನೆ

 🌺 ಲಲಿತಕಲಾದರ್ಶ ನಾಟ್ಯ ಸಂಘದ ಸ್ಥಾಪನೆ 🌺


ಮಹಾರಾಷ್ಟ್ರದಲ್ಲಿ ಪ್ರಸಿದ್ಧ ನಾಟಕಕಾರರಾದ ಕೇಶವರಾವ ಭೋಳೆಯವರು ಸಿದ್ಧಾರೂಢರ ಪರಮ ಭಕ್ತರಾಗಿದ್ದರು. ಒಂದು ದಿನ ಗುರುಗಳಲ್ಲಿಗೆ ಬಂದು ಸಾಷ್ಟಾಂಗ ನಮಸ್ಕರಿಸಿ 'ಗುರೂಜಿ, ಈವರೆಗೆ ಬೇರೆ ನಾಟ್ಯ ಸಂಘಗಳಲ್ಲಿ ಕೆಲಸ ಮಾಡುತ್ತಿದ್ದೆ. ಈಗ ನಾನು ಸ್ವತಂತ್ರ ನಾಟಕ ಮಂಡಳಿಯನ್ನು ಪ್ರಾರಂಭಿಸಬೇಕೆಂದಿದ್ದೇನೆ. ದಯವಿಟ್ಟು ಆಶೀರ್ವದಿಸಿರಿ' ಎಂದು ವಿನಮ್ರಭಾವದಿಂದ ಬೇಡಿಕೊಂಡನು. ಆಗ ಸ್ವಾಮಿಗಳು 'ಕೇಶವರಾವ, ನಾಟ್ಯ ಸಂಘವನ್ನು ಪ್ರಾರಂಭಿಸಿರಿ. ಅದರಲ್ಲಿ ನೀವು ಯಶಸ್ವಿಯಾಗುತ್ತೀರಿ' ಎಂದು ಆಶೀರ್ವದಿಸಿದರು. ಕೇಶವರಾವ ಭೋಳೆಯವರು ಪುಣೆಗೆ ಹೋಗಿ ಸಂಗೀತ ಸೌಭದ್ರವೆಂಬ ಮರಾಠಿ ನಾಟಕ ರಚಿಸಿ ಮತ್ತೆ ಹುಬ್ಬಳ್ಳಿಗೆ ಬಂದು ಗುರುಗಳಿಗೆ ವಂದಿಸಿ ಆ ನಾಟಕವನ್ನು ಓದಿ ತೋರಿಸಿದರು. ಹಾಗೂ ಆ ನಾಟಕಕ್ಕೆ ಬೇಕಾದ ಪದ್ಯಗಳನ್ನು ರಚಿಸಿದರು. ಅವುಗಳನ್ನು ಭೋಳೆಯವರ ಸಹಕಾರಿ ಹೆಣ್ಣುಮಗಳು ಸಿದ್ದರ ಸನ್ನಿಧಿಯಲ್ಲಿ ಹಾಡಿದಳು. ಇದನ್ನು ಕೇಳಿದ ಗುರುಗಳು ಪ್ರಸನ್ನರಾಗಿ ಉತ್ತಮ ಕಲೆಗಳು ಬೆಳೆಯಲೆಂಬ ಉದ್ದೇಶದಿಂದ ಅದನ್ನು ತಮ್ಮ ಮಠದಲ್ಲಿಯೇ ಉದ್ಘಾಟಿಸಿ 'ಲಲಿತಕಲಾದರ್ಶ ನಾಟ್ಯ ಸಂಘ' ಎಂಬ ಹೆಸರಿಟ್ಟು (೨.೧.೧೯೦೮) ಈ ನಾಟ್ಯ ಸಂಘವು ನಿರ್ವಿಘ್ನವಾಗಿ ದೀರ್ಘಕಾಲ ಬಾಳಲಿ' ಎಂದು ಹರಸಿದರು.
ನಂತರ ಭೋಳೆಯವರು ಪುಣೆಯಲ್ಲಿ ನಾಟಕ ಪ್ರಾರಂಭಿಸಿದರು. ಕೇವಲ ಪೌರಾಣಿಕ ಹಾಗೂ ನೈತಿಕ ಮೌಲ್ಯಗಳನ್ನಾಧರಿಸಿದ ಈ ನಾಟ್ಯ ಸಂಘವು ಮಹಾರಾಷ್ಟ್ರದಲ್ಲಿ ಉತ್ತಮ ಹೆಸರು ಗಳಿಸಿತು. ಮುಂದೆ ಆ ಸಂಘದ ಪದಾಧಿಕಾರಿಗಳು ಮತ್ತು ಅನೇಕ ಕಲಾವಿದರು ಮೂರು ಬಸ್ಸುಗಳಲ್ಲಿ ಹುಬ್ಬಳ್ಳಿಯ ಸಿದ್ದಾರೂಢರ ಮಠಕ್ಕೆ ಬಂದು ಸಂಘದ ಎಪ್ಪತೈದನೆಯ ಹುಟ್ಟುಹಬ್ಬವನ್ನು ದಿನಾಂಕ ೨.೧೧೯೮೩ (ದಿನಾಂಕ ಎರಡು ಒಂದನೆಯ ತಿಂಗಳು ಹತ್ತೊಂಭತ್ತು ನೂರಾ ಎಂಭತ್ತೂರು)ರಂದು ಸಾಯಂಕಾಲ ಆಚರಿಸಿದರು.


_______________________________

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ