ಸಿದ್ಧರ ಶಿಷ್ಯ ಅಹಮದನಗರದ ಆದಿನಾಥ ಮಹಾರಾಜರು
🌺 ಅಹಮದನಗರದ ಆದಿನಾಥ ಮಹಾರಾಜರು 🌺
ಕರ್ನಾಟಕ ಪ್ರದೇಶದ ಹುಬ್ಬಳ್ಳಿ ಶಹರದ ಹತ್ತಿರವಿರುವ ಒಂದು ಸಣ್ಣ ಗ್ರಾಮದಲ್ಲಿ ಶಿವಭಕ್ತರಾದ ದಂಪತಿಗಳಿ ದ್ದರು. ಧಾರ್ಮಿಕ ಸ್ವಭಾವದವರಾದ ಇವರಿಗೆ ಬಹಳ ವರ್ಷ ಮಕ್ಕಳಾಗಿರಲಿಲ್ಲ. ಅನೇಕ ವರ್ಷ ಕಳೆದ ನಂತರ ಒಂದು ಗಂಡುಕೂಸು ಜನಿಸಿತು. ಅವರೇ ಆದಿನಾಥ ಮಹಾರಾಜರು (ಅವರು ಎಂದ ಎಲ್ಲಿಯೂ ತಮ್ಮ ಹೆಸರು ಹೇಳಿಲ್ಲ). ಬಿದಿಗೆಯ ಚಂದಿರನಂತೆ ಬೆಳೆದ ಆದಿನಾಥನು ತನ್ನ ಏಳನೆಯ ವಯಸ್ಸಿನಲ್ಲಿ ಒಂದು ಕೆಟ್ಟ ರೋಗಪೀಡಿತನಾಗಿ ಮಲಗಿಕೊಂಡಾಗ ತಂದೆ ತಾಯಿಗಳಿಗೆ ಚಿಂತೆಯಾಯಿತು. ಅವರ ಸಂಬಂಧಿಕ ಹೆಣ್ಣು ಮಕ್ಕಳು ಮತ್ತು ಕೆಲವು ಪ್ರಮುಖರು `ಈ ಹುಡುಗ ಗುಣವಾದರೆ ಒಂದು ಕುರಿಯನ್ನು ತಂದು ಬಲಿಗೊಡುತ್ತೇವೆಂದು ದೇವರಲ್ಲಿ ಹರಕೆ ಹೊತ್ತಿದ್ದರು. ಆದರೆ ತಂದೆ ತಾಯಿಗಳು ಶಿವಭಕ್ತರಾದುದರಿಂದ ಕುರಿ ಬಲಿಗೊಟ್ಟು ಹರಕೆ ತೀರಿಸಲು ವಿರೋಧ ವ್ಯಕ್ತಪಡಿಸಿದರು. ಆದರೂ ಬಹುಜನರ ಆಗ್ರಹದ ಮೇರೆಗೆ ತಂದೆ ತಾಯಿಗಳು ಒಪ್ಪಿದರು.
ಆಗ ಒಂದು ಕುರಿಯನ್ನು ತಂದು ಮನೆಯ ಮುಂದೆ ಕಟ್ಟಿದರು. ಆ ಕುರಿಯು ವಿಚಿತ್ರವಾಗಿ ಒದರುತ್ತಿತ್ತು. ರೋಗಪೀಡಿತನಾಗಿ ಹಾಸಿಗೆಯ ಮೇಲೆ ಮಲಗಿದ ಆದಿನಾಥ ಮಗುವು ತನ್ನ ತಾಯಿಯನ್ನು ಕುರಿತು ಅಪ್ಪಾ ಈ ವಿಚಿತ್ರವಾಗಿ ಒದರುವ ಕುರಿಯನ್ನು ತಂದು ಮನೆಯ ಮುಂದೆ ಕಟ್ಟಿರುವುದೇಕೆ?' ಎಂದಾಗ ತಾಯಿ ಹೇಳಿದಳು 'ಮಗೂ, ನಿನ್ನ ರೋಗ ನಿವಾರಣೆಯಾದರೆ ದೇವರಿಗೆ ಈ ಕುರಿಯನ್ನು ಬಲಿಗೊಡುತ್ತೇವೆಂದು ಹರಕೆ ಹೊತ್ತು ತಂದು ಕಟ್ಟಿದ್ದಾರೆ' ಎಂದಾಗ ಆ ಮಗುವು ನೊಂದುಕೊಂಡು ತನ್ನ ಮನಸ್ಸಿನಲ್ಲಿ ನನ್ನ ಜೀವ ಉಳಿಸುವುದಕ್ಕಾಗಿ ದೇವರ ಹೆಸರಿನಿಂದ ಒಂದು ಜೀವವನ್ನು ಬಲಿಗೊಡಬೇಕೆ? ಇದು ಯೋಗ್ಯವಲ್ಲ ಎಂದು ಮನಸ್ಸಿನಲ್ಲಿ ನೊಂದುಕೊಂಡು ಒಂದು ದಿವಸ ರಾತ್ರಿ ಹೇಳದೇ ಕೇಳದ ಊರ ಹೊರಗೆ ಹೋಗಿ ದೂರದ ಅಡವಿಯಲ್ಲಿ ಕೆಲವು ದಿನ ಕಳೆದನು,
ಯೋಗಬ್ರಷ್ಟನಾದ ಅವನು ಶ್ರೀ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಕಾಲ್ನಡಿಗೆಯಿಂದಲೇ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರ ದರ್ಶನ ತೆಗೆದುಕೊಂಡಾಗ ಅವನ ಮನಸ್ಸು ಶಾಂತವಾಗಿ ಇವರೇ ನನ್ನ ಸದ್ಗುರುಗಳು ಎಂದು ಭಾವಿಸಿ ಸಾಷ್ಟಾಂಗ ನಮಿಸಿ 'ತಂದೆ, ನಾನು ಅನಾಥನಾಗಿದ್ದು ನನ್ನನ್ನು ರಕ್ಷಿಸಿರಿ' ಎಂದು ಬೇಡಿಕೊಂಡಾಗ ತ್ರಿಕಾಲ ಜ್ಞಾನಿಗಳಾದ ಶ್ರೀ ಸಿದ್ಧಾರೂಢರು ಇವನಿಂದ ಬಹಳ ಕೆಲಸವಾಗಬೇಕಾಗಿದೆ' ಎಂದು ವಿಚಾರಿಸಿ ತನ್ನ ಹತ್ತಿರ ಕರೆದು ಮಂತ್ರೋಪದೇಶ ಮಾಡಿ ಹೇಳಿದರು "ಮಗೂ, ಇನ್ನು ಮುಂದೆ ಈ ಮಠದಲ್ಲಿದ್ದು, ಮನಮುಟ್ಟಿ ಸದ್ಗುರು ಸೇವೆ ಮಾಡುತ್ತಿರು. ನಿನ್ನ ಕಲ್ಯಾಣವಾಗುತ್ತದೆ' ಎಂದು ಆಶೀರ್ವದಿಸಿದರು. ಆಗ ಆದಿನಾಥನಿಗಾದ ಆನಂದ ಅಪಾರ.
ಮುಂದೆ ಆದಿನಾಥನು ಮಠದಲ್ಲಿದ್ದು ಮಠದ ಸಣ್ಣ ದೂಡ್ಡ ಸೇವೆಗಳೆನ್ನದೆ ಎಲ್ಲವನ್ನೂ ನಿಷ್ಠೆಯಿಂದ ಮಾಡುತ್ತಿರುವಾಗಲೇ ಅವನಿಗಾದ ಕಾಯಿಲೆ ಗುಣವಾಯಿತು. ನಂತರ ಯೋಗಾಭ್ಯಾಸದಲ್ಲಿ ಪರಿಣತಿ ಪಡೆದು ಶ್ರೀ ಸಿದ್ಧರ ಮುಖದಿಂದ ಅದೈತ ಶಾಸ್ತ್ರ ಕೇಳುತ್ತ ಮನನ ನಿಧಿಧ್ಯಾಸಗಳನ್ನು ಮಾಡಿ ಅಪ್ಪಟ ಬ್ರಹ್ಮಜ್ಞಾನಿಯಾದನು. ಹೀಗೆ ನಾಲ್ಕು ವರ್ಷ ಕಳೆದ ನಂತರ ಸದ್ಗುರುಗಳು ಒಂದು ದಿವಸ ಕರೆದು `ಆದಿನಾಥಾ, ಇನ್ನು ಮುಂದೆ ನೀನು ಭಾರತದ ಉತ್ತರ ಭಾಗದಲ್ಲಿ ಸಂಚಾರ ಮಾಡುತ್ತ ಭಕ್ತಿಜ್ಞಾನಮಾರ್ಗದ ಪ್ರಚಾರ ಮಾಡುತ್ತ ಲೋಕೋದ್ಧಾರ ಕಾರ್ಯ ಮಾಡಲು ಹೋಗಬೇಕು' ಎಂದು ಆಶೀರ್ವದಿಸಿದರು. ಆಗ ಆದಿನಾಥ ಹೇಳಿದ ತಂದೆ , ಅನಾಥನಾದವನನ್ನು ಚಿಕ್ಕಂದಿನಿಂದಲೇ ಜೋಪಾನ ಮಾಡಿದ್ದೀರಿ. ನಿಮ್ಮನ್ನು ಬಿಟ್ಟು ನಾನಲ್ಲಿ ಹೋಗಲಿ' ಎಂದು ಅಳಹತ್ತಿದನು. ಆಗ ಸದ್ಗುರುಗಳು ಹೇಳಿದರು 'ಮಗೂ ಆದಿನಾಥಾ ಕೇಳು ನೀನು ನನ್ನಲ್ಲಿ ಬಂದು ಹೇಗೆ ನಿನ್ನ ಜನ್ಮ ಸಾರ್ಥಕ ಮಾಡಿಕೊಂಡಿರುವಿಯೋ ಅದರಂತೆ ಭವಸಾಗರದಲ್ಲಿ ಬಿದ್ದು ದುಃಖ ತರಾದವರನ್ನು ಉದ್ಧರಿಸುವುದು ನಿನ್ನ ಕರ್ತವ್ಯವಾಗಿದೆ. ಭಕ್ತಿ, ಜ್ಞಾನ ಪಂಥದ ಪ್ರಚಾರಕ್ಕಾಗಿ ನೀನು ಹೋಗುವುದೇ ನಿನಗೆ ಶ್ರೇಯಸ್ಕರ. ಆದ್ದರಿಂದ ನೀನು ಹೋಗು' ಎಂದು ಆಶೀರ್ವದಿಸಿದರು.
ಆಗ ಆದಿನಾಥನು ಸದ್ಗುರುಗಳ ಆಜ್ಞೆಯ ಪ್ರಕಾರ ಬೆಳಗಾವಿ, ಕೋಲಾಪುರ, ಸಾತಾರಾ, ಸೋಲಾಪುರ ಇನ್ನಿತರ ಗ್ರಾಮ ಶಹರಗಳಲ್ಲಿ ಸಂಚಾರ ಮಾಡುತ್ತ ಖರ್ಡಾ ಎಂಬಲ್ಲಿ ಅನೇಕ ವರ್ಷ ತಪಸ್ಸು ಮಾಡುವಾಗ ಭಾಮಟಿಯೆಂಬಲ್ಲಿ ಮಹಾದೇವ ಮಂದಿರದಲ್ಲಿ ತಪಶ್ಚರ್ಯದ ಕೊನೆಯಲ್ಲಿ ಸಾಕ್ಷಾತ್ಕಾರವಾಯಿತು. ಅದರಲ್ಲಿ ಮಹಾಯಜ್ಞ ನಡೆದಿತ್ತು. ಅದನ್ನು ಪ್ರತ್ಯಕ್ಷ ಪರಮೇಶ್ವರನು ಮಾಡುತ್ತಿದ್ದನು. ಆ ಯಜ್ಞಕುಂಡದಲ್ಲಿ ಒಂದು ರೂಪಾಯಿ ನಾಣ್ಯ ಕಂಡಿತು. ಆ ರೂಪಾಯಿ ಸತ್ಯವಾಗಿದೆಯೆಂಬುದನ್ನು ಅನುಭವಕ್ಕೆ ತಂದುಕೊಂಡನು. (ಆತ್ಮಾನುಭವ) ಮುಂದೆ ಹತ್ತೊಂಭತ್ತುನೂರಾ ನಾಲ್ಕನೇ ಸಾಲಿನಲ್ಲಿ ಅಹಮದನಗರಕ್ಕೆ ಬಂದನು.
ನಗರದ ಉತ್ತರದಲ್ಲಿರುವ ಸ್ಮಶಾನ ಭೂಮಿಯು ಅವನ ತಪೋಭೂಮಿಯಾಗಿತ್ತು. ಅವನು ನಗರಕ್ಕೆ ಬಂದ ಮೇಲೆ ತೊಗಲಿನ ಪಾದುಕೆಗಳನ್ನು ಮಾಡುತ್ತಿದ್ದು ಅದರ ಕೂಲಿ ಎರಡಾಣೆಯಾಗಿತ್ತು. ಅದರಲ್ಲಿ ಒಂದು ಆಣೆಯಲ್ಲಿ ರೊಟ್ಟಿ ಮೆಣಸಿನಕಾಯಿ ಉಪ್ಪು ಬೆರೆಸಿ ಊಟ ಮಾಡುತ್ತಿದ್ದನು. ಉಳಿದ ಒಂದು ಆಣೆಯಿಂದ ಸಾಬೂಣು ತೆಗೆದುಕೊಂಡು ತನ್ನ ಬಟ್ಟೆ ಒಗೆಯುವುದು ಇತ್ಯಾದಿ ಕಾರ್ಯಗಳಿಗೆ ಉಪಯೋಗಿಸುತ್ತಿದ್ದಲ್ಲದೆ ಯಾರಿಗೂ ಯಾವ ಕೆಲಸವನ್ನೂ ಹಚ್ಚುತ್ತಿರಲಿಲ್ಲ. ಅಲ್ಲಿ ಮಾಳಿವಾಡಾ ಎಂಬ ಹರಿಜನಕೇರಿಯಲ್ಲಿ ವಾಸಮಾಡಿದನು. ಅಲ್ಲಿಯ ಸ್ಮಶಾನ ಭೂಮಿಯಲ್ಲಿ ಧ್ಯಾನ ಧಾರಣ ಮಾಡುತ್ತಿದ್ದರೂ ಶಹರದಲ್ಲಿ ಮೋಚಿ (ಡೋಹರ) ಸಮಾಜದಲ್ಲಿ ಹೆಚ್ಚಿಗೆ ಸಹವಾಸ ಬಂದಿತು. ಆ ಸಮಾಜದಲ್ಲಿ ಆದಿನಾಥ ಮಹಾರಾಜ ಎಂಬ ಹೆಸರಿನಿಂದ ಅವರು ಸರ್ವ ಪ್ರಕಾರದ ಸುಧಾರಣೆ ಮಾಡಿದರು.
ನಂತರ ಆದಿನಾಥ ಮಹಾರಾಜರು ಹನ್ನೆರಡು ವರ್ಷಗಳ ನಂತರ ತಮ್ಮ ವಾಸಸ್ಥಾನ ಬದಲಿಸಿ ನಗರದಲ್ಲಿ ಹನ್ನೆರಡು ವರ್ಷವಿದ್ದು ನಂತರ ಸೋಲಾಪುರ ಆಮೇಲೆ ಹೃಷಿಕೇಶ, ಕಾಶಿ ವಗೈರೆ ಸರ್ವ ಭಾರತ ಪ್ರವಾಸ ಮಾಡಿ ಪುನಃ ಅಹಮದ ನಗರಕ್ಕೆ ಬಂದು ಹತ್ತೊಂಭತ್ತುನೂರಾ ಎಪ್ಪತ್ತು ಒಂಬತ್ತರಲ್ಲಿ ದತ್ತ ಜಯಂತಿ ಮಹೂರ್ತದಲ್ಲಿ ಶ್ರೀ ಕಾಕಡೆಯೆಂಬವರ ಪ್ಲಾಟಿನಲ್ಲಿದ್ದು ಧ್ಯಾನಧಾರಣ ಪ್ರಾರಂಭಿಸಿದರು. ಕಾಕಡೆಯವರು ಅವರಿಗಾಗಿ ಎಲ್ಲ ಸೌಕರ್ಯವುಳ್ಳ ಮನೆಯನ್ನು ಕಟ್ಟಿಕೊಟ್ಟರು. ಅಲ್ಲದೆ ಅದನ್ನು ಅವರಿಗೆ ಒಪ್ಪಿಸಿದರು. ಆ ಮನೆಗೆ ಕೇವಲ ಧಾಮ ಎಂದು ಹೆಸರಿಟ್ಟರು. ಅದರಲ್ಲಿ ಮುಂಜಾನೆ ಶ್ರೀ ಸಿದ್ಧಾರೂಢರ ಪೂಜೆ ಆರತಿಯಾಗುತ್ತಿತ್ತು. ಮಧ್ಯಾಹ್ನ ಮತ್ತು ರಾತ್ರಿ ಮಹಾರಾಜಸಹಿತ ಭಜನೆ ಮಾಡುತ್ತಿದ್ದರು. ಆದಿನಾಥ ಮಹಾರಾಜರು ಗುರುಪೌರ್ಣಿಮಾ, ಸಿದ್ದಾರೂಢ ಸ್ವಾಮಿಗಳ ಪುಣ್ಯತಿಥಿ, ದತ್ತ ಜಯಂತಿ, ಮಹಾಶಿವರಾತ್ರಿ, ಸಿದ್ದಾರೂಢರ ಜನೋತ್ಸವ ಆಚರಿಸಲು ಭಕ್ತರಿಗೆ ಅನುಕೂಲ ಮಾಡಿಕೊಟ್ಟರು. ಈ ಕಾರ್ಯಕ್ರಮಗಳಿಗೆ ಪುಣೆ, ಸೋಲಾಪುರ ಇತರ ಭಾಗಗಳಿಂದಲೂ ಭಕ್ತರು ಬರುತ್ತಿದ್ದರು.
ಕೆಲವು ದಿವಸಗಳ ನಂತರ ಮಹಾರಾಜರು ಊಟೋಪಚಾರ ಕಡಿಮೆ ಮಾಡಿದರು. ಆಗ ಪ್ರಕೃತಿ ಕ್ಷೀಣವಾಗುತ್ತ ನಡೆಯಿತು. ಕಾಕಡೆಯವರ ಪ್ಲಾಟಿನಲ್ಲಿ ಹತ್ತು ಹತ್ತು ಪೂಟಿನ ಒಂದು ಖೋಲಿಯಿದ್ದು ಅದರಲ್ಲಿ ಆದಿನಾಥರು ಮಧ್ಯಾಹ್ನ ಸತತ ಕೊಡುತ್ತಿದ್ದರು. ಇದನ್ನು ಕಂಡು ತನ್ನ ಅನನ್ಯ ಭಕ್ತಳಾದ ಭೀಮಾಬಾಯಿ ವಣವೆಯವರು ಗುರುಗಳನ್ನು ಕುರಿತು ಬಾಬಾ ಬೇರೆ ಕಡೆಗೆ ಒಳ್ಳೆಯ ಜಾಗವಿದ್ದು ಅದನ್ನು ಬಿಟ್ಟು ಇಲ್ಲಿಯೇಕೆ ಕೊಡುತ್ತೀರಿ' ಎಂದು ಕೇಳಿದಾಗ `ಭೀಮಾಬಾಯಿ, ಈ ಜಾಗೆಯೇ ಮಹತ್ತಾಗಿದೆ' ಎಂದು ಉತ್ತರಿಸಿದರು. ಆದಿನಾಥ ಮಹಾರಾಜರು ದಿನಾಲು ಮಧ್ಯಾಹ್ನ ನಾಲ್ಕು ಗಂಟೆಯವರೆಗೆ ಭಜನೆ ನಡೆಸಿ ಕಲ್ಲು ಸಕ್ಕರೆ ಪ್ರಸಾದ ಕೊಡುತ್ತಿದ್ದರು. ದಿನಾಂಕ ೨೧.೧.೧೯೮೬ನೇ ಇಸ್ವಿಯಲ್ಲಿ ರಾತ್ರಿ ಸುಮಾರು ಏಳು ಗಂಟೆಗೆ ಗುರುಕೃಪಾ ಕೇವಲ ಧಾಮದಲ್ಲಿ ಶ್ರೀಮತಿ ಚಿಂದಾಬಾಯಿ, ನರ್ಮದಾಬಾಯಿ ಶ್ರೀ ಸಿಂಧ ಭಕ್ತರಿದ್ದಾಗ ಮಹಾರಾಜರ ಪ್ರಕೃತಿ ಕೆಡಹತ್ತಿತು. ಆಗ ಡಾಕ್ಟರ ಮುಳೆಯವರು ಬಂದು ಅವರ ಪ್ರಕೃತಿ ತಪಾಸಣೆ ಮಾಡಿ ಇವರಿಗೆ ಯಾವ ರೋಗವೂ ಇಲ್ಲವೆಂದು ಹೇಳಿ ಹೋದರು. ನಂತರ ಆದಿನಾಥ ಮಹಾರಾಜರು ಯಾರೂ ಭಯಪಡಬೇಕಿಲ್ಲ ಎಂದು ಹೇಳಿ ಓಂ ನಮಃ ಶಿವಾಯ ಮಂತ್ರವನ್ನು ಗಟ್ಟಿಯಾಗಿ ನುಡಿದು ತಮ್ಮ ಶರೀರವನ್ನು ಪಂಚ ತತ್ವದಲ್ಲಿ ವಿಲೀನಗೊಳಿಸಿದರು. ಆಗ ಅದೇ ಸ್ಥಾನದಲ್ಲಿ ಸದ್ಭಕ್ತರು ಆಧಿನಾಥ ಮಹಾರಾಜರ ಸಮಾಧಿ ನಿರ್ಮಿಸಿದರು. ಸಮಾಧಿಯ ನಂತರ ಅದೇ ಸ್ಥಳದಲ್ಲಿ ಪರಮ ಪೂಜ್ಯ ಸಿದ್ಧಾರೂಢ ಮಹಾರಾಜರ ಜನೋತ್ಸವ ಎಂಟು ದಿವಸಗಳವರೆಗೆ ನಡೆಯಿತು.
ನಂತರ ಯಾವುದೋ ಕಾರಣಕ್ಕಾಗಿ ಶ್ರೀ ಕಾಕಡೆಯವರು ಅವರ ಖೋಲಿಯಲ್ಲಿದ್ದ ಶ್ರೀ ಆದಿನಾಥ ಮಹಾರಾಜರ ಭಕ್ತರಿಗೆ ಕಾರ್ಯಕ್ರಮ ಮತ್ತು ಸಮಾಧಿ ದರ್ಶನಕ್ಕೆ ಹೋಗಲು ಪ್ರತಿಬಂಧ ಮಾಡಿದರು. ಇದರಿಂದ ಚಿಂತಿತರಾದ ಭಕ್ತರು ಮುಂದೆ ಶ್ರೀ ಸಿದ್ದಾರೂಢರ ಜನ್ಮೋತ್ಸವ ನಡೆಸಿದರು.
ಸದರ ಜಾಗೆಯಲ್ಲಿ ಒಂದು ಮಂದಿರವನ್ನು ಕಟ್ಟಿ ಅದರಲ್ಲಿ ಆದಿನಾಥ ಮಹಾರಾಜರ ಸಾಂಗವರಿ ಕಲ್ಲಿನ ಮೂರ್ತಿ ಪ್ರಾಣ ಪ್ರತಿಷ್ಠಾಪಿಸಿ ಅಲ್ಲಿ ಈವರೆಗೆ ಕಾರ್ಯಕ್ರಮ ನಡೆಯುತ್ತಿದೆ. ಈ ಉತ್ಸವದಲ್ಲಿ ಮೊದಲು ಗುರುಗಳ ಪಾದಪೂಜಾ ಸಿದ್ದಾರೂಢರ ಆರತಿ ಇತರ ಆರತಿ ಅದರಂತೆ ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಮತ್ತು ಆದಿನಾಥರ ಭಾವಚಿತ್ರ ಸ್ಥಾಪಿಸಿ ಮಾಲೆ ಹಾಕಿ ಪೂಜಿಸುತ್ತಾರೆ. ಕಾರ್ಯಕ್ರಮದ ಮುಂಚೆ ಸದ್ಗುರು ಸಿದ್ದಾರೂಢರ ಚರಿತ್ರ ಪಾರಾಯಣ ಹನ್ನೊಂದು ಗಂಟೆಯಿಂದ ಹನ್ನೆರಡರ ವರೆಗೆ ಪ್ರವಚನ ತದನಂತರ ಮಹಾಪ್ರಸಾದ ಸಾಯಂಕಾಲ ಭಜನೆ ಕೀರ್ತನ ಮುಂತಾದ ಕಾರ್ಯಕ್ರಮ ನಡೆಯುತ್ತವೆ.
ಆದಿನಾಥ ಮಹಾರಾಜರು ಸದೇಹವಿದ್ದಾಗ ದಿವಸಕ್ಕೆ ಒಂದು ಸಲ ಊಟ ಮಾಡುತ್ತಿದ್ದರು. ಅವರು ಉಪವಾಸ ಪ್ರಾರಂಭಿಸಿದರೆ ಐವತ್ತೊಂದು ದಿವಸ ನಡೆಸುತ್ತಿದ್ದರು. ಅವರು ತಮ್ಮ ಸ್ವಂತದ ಕಾರ್ಯವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಯಾರಿಗೂ ಒಂದು ದುಡ್ಡು ಕೇಳುತ್ತಿರಲಿಲ್ಲ. ಅವರು ಸಿದ್ಧ ಮಹಾತ್ಮರಿದ್ದಾಗಲೂ ಬೇಕಾದಷ್ಟು ಪವಾಡಗಳನ್ನು ಮಾಡಬಹುದಿತ್ತು. ಅಂತಹ ಚಮತ್ಕಾರಗಳಿಗೆ ಲಕ್ಷ್ಮಗೊಡದ ಪರಮೇಶ್ವರನೇ ಶ್ರೇಷ್ಠನಿದ್ದಾನೆ. ಅವನಿಗೆ ಎಲ್ಲರ ಕಾಳಜಿಯಿರುತ್ತರ ಪರಮೇಶ್ವರನ ಚಿಂತನೆ ನಾಮಸ್ಮರಣೆ ಮಾಡಿರಿ ಎನ್ನುತ್ತಿದ್ದರು. ಭಕ್ತಿ ಮಾಡುವಾಗ ರಿದ್ದಿ ಸಿದ್ಧಿಗಳು ನಡುವೆ ಬಂದರೆ ಪರಮೇಶ್ವರನು ಪ್ರಾಪ್ತವಾಗುವುದಿಲ್ಲ. ಅವುಗಳನ್ನು ಬಿಟ್ಟು ಮುಂದೆ ಹೋಗಿರಿ, ಭಕ್ತಿಯ ಆನಂದ ಪಡೆಯಿರಿ ಎನ್ನುತ್ತಿದ್ದರು. ವೇದ ಋಷಿ ಸದ್ಗುರು ಮತ್ತು ಭಗವಂತನ ವಚನಗಳಲ್ಲಿ ಅವರ ಪೂರ್ಣ ವಿಶ್ವಾಸವಿತ್ತು. ಭಗವಂತನ ಬಗ್ಗೆ ನಿಸ್ಸಂಶಯಜ್ಞಾನವಿತ್ತು. ಪರಸ್ತ್ರೀ, ಪರದ್ರವ್ಯ, ಪ್ರತಿಷ್ಟಾ ಇವುಗಳ ಬಗ್ಗೆ ತೀವ್ರ ಉದಾಸೀನರಿದ್ದು ಯಾವುದೇ ಪಾಪದ ಕೆಲಸದಿಂದ ದೂರವಿದ್ದರು. ಯಾವುದೇ ವಿಪತ್ತು ಬಂದರೂ ಯಾವಾಗಲೂ ಭಗವಚ್ಚಿಂತನೆಯಲ್ಲಿದ್ದು ಸ್ಥಿತಪ್ರಜ್ಞರಾಗಿರುತ್ತಿದ್ದರು.
ಅವರನ್ನು ದ್ವೇಷದಿಂದ ನೋಡುವವರನ್ನು ಪ್ರೀತಿಯಿಂದ ಕಾಣುತ್ತಿದ್ದರಲ್ಲೆ ದುಃಖತ ಜನರ ಬಗ್ಗೆ ಅವರಲ್ಲಿ ತಳಮಳವಿತ್ತು. ಹುಬ್ಬಳ್ಳಿಗೆ ಹೋಗಬೇಕೆಂದು ಯಾರಾದರೂ ಹೇಳಿದರೆ ಆಗ ಮಹಾರಾಜರು ಹೇಳುತ್ತಿದ್ದರು. ಶ್ರೀ ಸಿದ್ಧಾರೂಢರು ನನಗೆ ಇಲ್ಲಿಯೇ ಹದಿನೈದು ದಿವಸಕ್ಕೊಮ್ಮೆ ದರ್ಶನ ನೀಡುತ್ತಾರೆ ಎನ್ನುತ್ತಿದ್ದರು. ಅವರು ಸಿದ್ಧ ಪುರುಷರಾದರೂ ಅವರ ಅಪೇಕ್ಷೆಯಿಲ್ಲದೆ ನಡೆದ ಮಹಿಮೆಗಳು ಅನಂತವಾಗಿವೆ. ಶ್ರೀಮತಿ ವಣವೆಬಾಯಿಯವರು ನಿರಕ್ಷರಿಯಾಗಿದ್ದು ಪುಸ್ತಕದಲ್ಲಿದ್ದ ಭಜನೆಗಳನ್ನು ಹೇಳಿ ಕೊಡುತ್ತಿದ್ದರು. ಅವರು ಹೇಳಿದರು 'ಭೀಮಾಬಾಯಿ, ನಿನಗೆ ಅಕ್ಷರಪಾಠ ಹೇಳಿಕೊಡುತ್ತೇನೆ. ಕಲಿಯುವಿಯಾ' ಎಂದಾಗ ನಾನು ಕಲಿಯುತ್ತೇನೆಂದು ಪಾಟಿ ಪುಸ್ತಕ ಅಂಕಲಿಪಿ ತಂದು ಕೊಟ್ಟಳು. ಅವುಗಳನ್ನು ಶ್ರೀ ಸಿದ್ಧಾರೂಢರ ಭಾವಚಿತ್ರದ ಮುಂದಿಟ್ಟು ಪೂಜಿಸಲು ಹೇಳಿದಾಗ ಅವಳು ಪೂಜಿಸಿದಳು. ನಂತರ ಕಲಿಸಹತ್ತಿದರು. ಮೊದಲ ಅಕ್ಷರವೆಂದರೆ ಓಂ ನಮಃ ಶಿವಾಯ ಮಂತ್ರವನ್ನು ಪಾಟಿಯ ಮೇಲೆ ತೀಡಿಸಿದರು. ನಂತರ ಮೂಲಾಕ್ಷರ ಕಲಿಸಿದರು. ಕೇವಲ ಹದಿನೈದು ದಿವಸಗಳಲ್ಲಿ ಅವಳಿಗೆ ಓದಲು ಬರೆಯಲು ಬರಹತ್ತಿತು. ಶ್ರೀ ಸಿದ್ಧಾರೂಢರ ವೈಭವ ಗ್ರಂಥವನ್ನು ಅವಳಿಂದ ಓದಿಸಿ ಪರಿಣತಳನ್ನಾಗಿ ಮಾಡಿದರು.
ಒಂದು ದಿವಸ ಆದಿನಾಥ ಮಹಾರಾಜರ ಮೊದಲ ಪುಣ್ಯತಿಥಿ ದಿವಸ ಮನೆಯಲ್ಲಿ ಅಡುಗೆ ಮಾಡುವಾಗ ಆದಿನಾಥರು ಅಂಗಿ ಮತ್ತು ಲುಂಗಿ ಧರಿಸಿಕೊಂಡು ಒಬ್ಬ ಸಾಧುವಿನಂತೆ ಬಂದು ಬಾದಲಿ ಇಸಗೊಂಡು ಸ್ನಾನ ಮಾಡಿದರು. ಅವಳು ಹೇಳಿದಳು ಇಲ್ಲಿಯೇ ಅಡುಗೆಯಾಗುತ್ತಿದೆ. ಊಟ ಮಾಡಿರಿ ಎಂದಾಗ ಅವರು ಪ್ರೇಮದಿಂದ ಪ್ರಸಾದ ತೆಗೆದುಕೊಂಡು ದಕ್ಷಿಣೆ ಬೇಡಿದರು. ಅವಳು ಒಳಗೆ ಹೋಗಿ ಹೊರಬರುವಾಗ ತಮ್ಮ ನಿಜಸ್ವರೂಪವನ್ನು ತೋರಿಸಿ ಅಂತರ್ಧಾನ ಹೊಂದಿದರು.
ಜೇಟಮಲ್ಲ , ಸೋನಾಗ್ರ ಎಂಬವರಿಗೆ ಲಗ್ನವಾಗಿ ಅನೇಕ ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ, ಆದಿನಾಥ ಮಹಾರಾಜರು ಅವರ ಅಂಗಡಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು. ಆಗ ಜೇಟಮಲಜಿಯವರು ನನಗೆ ಮಕ್ಕಳಾಗಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡರು. ಮಹಾರಾಜರು ಅವರ ವಿನಂತಿಯನ್ನು ಮಾನ್ಯ ಮಾಡಿ ಆಶೀರ್ವದಿಸಿದಾಗ ಅವರಿಗೆ ಮಕ್ಕಳಾದವು. ಅವರನ್ನು ಮಕ್ಕಳನ್ನು ಕರೆದುಕೊಂಡು ಡೋಂಗರಗಣದಲ್ಟಿದ ಗೋರಕ್ಷನಾಥನ ಮಂದಿರಕ್ಕೆ, ದರ್ಶನ, ಕರೆದುಕೊಂಡು ಹೋಗಿ ಬಂದ ನಂತರ ಅವರ ಭಕ್ತರಾದರು.
ಆದಿನಾಥ ಮಹಾರಾಜರು ಉಜೈನಿಯದ್ದಾಗ ಚಿಮಶೆಟಜಿ ಸೋನಾಕ್ರೆ ಅವರ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು ಆದಿನಾಥ ಮಹಾರಾಜರನ್ನು ಪ್ರಾರ್ಥಿಸಿದಾಗ ಅವರು ಪ್ರತ್ಯಕ್ಷ ಬಂದು ಅವಳ ಮುಖದಲ್ಲಿ ಸ್ವಲ್ಪ ವಿಭೂತಿ ಹಾಕಿ ಅದೃಶ್ಯರಾದರು. ನಂತರ ಸ್ವಲ್ಪ ಹೊತ್ತಿನಲ್ಲಿ ಅವನ ಮಗಳು ಆರೋಗ್ಯವಂತಳಾದಳು.
ಶಂಕರರಾವ ಸೋನಾಗ್ರ ಎಂಬವರು ಒಂದು ಸಂಸ್ಥೆಯಲ್ಲಿ ಲಿಪಿಕ (ಟೈಪಿಸ್ಟ್) ಪದದಲ್ಲಿ ಉದ್ಯೋಗಸ್ಥರಾಗಿದ್ದರು. ಅವರು ಚೆಮಶೇರಮಲ್ಲರ ಮನೆಗೆ ಆಗಾಗ ಹೋಗಿ ಬರುವಾಗ ಮಹಾರಾಜರ ಪರಿಚಯವಾಯಿತು. ನಂತರ ಶಂಕರರಾಯರ ಮನೆಗೆ ಅವರ ಎರಡು ಮಕ್ಕಳನ್ನು ನೋಡಿ ಆದಿನಾಥರು ಹೇಳಿದರು ಇವರು ಮುಂದೆ ಡಾಕ್ಟರರಾಗುತ್ತಾರೆ' ಎಂದು ಭವಿಷ್ಯ ನುಡಿದರು. ಮುಂದೆ ಮಹಾರಾಜರ ವಚನದಂತೆ ಅವರ ಮಕ್ಕಳು ಡಾಕ್ಟರರಾದರು.
ವಿಠ್ಠಲಶೇಠ ದಾಲವಾಲೆಯವರು ಹದಿನೈದು ವರ್ಷದವರಿರುವಾಗ ನಗರದ ಉತ್ತರದಲ್ಲಿರುವ ಬಾಬಾಜಿ ಬೂವಾ ಅವರ ಸಮಾಧಿ ಮಂದಿರದ ಹತ್ತಿರ ಭೇಟಿಯಾಯಿತು. ಒಂದು ದಿವಸ ಒಂದು ಚಿಮಣಿ (ಗಿಳಿ ಪಕ್ಷಿ) ಅದು ಸತ್ತು ಬಿದ್ದಿತ್ತು. ಅದನ್ನು ನೋಡಿದ ಆದಿನಾಥ ಮಹಾರಾಜರು ಅದಕ್ಕೆ ಜೀವ ತುಂಬಿ ಕೈಯಲ್ಲಿ ಹಿಡಿದು ಹಾರಿಸಿದಾಗ ಅದು ಹಾರಿ ಹೋಯಿತು.
ಒಂದು ದಿವಸ ವಿಠ್ಠಲ್ ಸೇಠ ಅವರ ಸಣ್ಣ ಮಗ ರವೀಂದ್ರನು ಅತಿಸಾರದಿಂದ ಬಳಲುತ್ತಿದ್ದ, ವಿಠ್ಠಲ್ ಶೇಠರು ದಾರಿಯಲ್ಲಿ ಹೋಗುವಾಗ ಆದಿನಾಥ ಮಹಾರಾಜರು ಭೇಟಿಯಾದಾಗ ಈ ವಿಷಯ ತಿಳಿಸಿದರು. ಅವರು ತಕ್ಷಣ ಮನೆಗೆ ಬಂದು ಮಗುವನ್ನು ನೋಡಿ ಚಿಂತೆಗೆ ಕಾರಣವಿಲ್ಲವೆಂದು ತಿಳಿಸಿ ಅಡುಗೆ ಮನೆಗೆ ಹೋಗಿ ಒಲೆಯಲ್ಲಿಯ ಬೂದಿಯನ್ನು ತೆಗೆದುಕೊಂಡು ಬಂದು ಮಂತ್ರಿಸಿ ಮಗುವಿನ ಮುಖದಲ್ಲಿ ಹಾಕಿ ಹಣೆಗೆ ಹಚ್ಚಿದಾಗ ರೋಗ ನಿವಾರಣೆಯಾಯಿತು.
ಗೋಪಾಳರಾವ ವಣವೇಕರ ಅವರ ಟೇಲರಿಂಗ ಫರ್ಮ ಮೋಚಿಗಲ್ಲಿಯಲ್ಲಿದ್ದು ಆದಿನಾಥ ಮಹಾರಾಜರು ಅಲ್ಲಿ ಕುಳಿತಾಗ ವಣವೇಕರ ಹಾಗೂ ಲಕ್ಷ್ಮಣರಾವರವರು ಕೂಡಿಕೊಂಡು ಪಾರಮಾರ್ಥಿಕ ವಿಚಾರ ಮಾಡುತ್ತ ಮಾಡುತ್ತ ಗೋಪಾಳರಾಯರು ಮನಮುಟ್ಟಿ ಅದನ್ನು ಕೇಳುತ್ತಿದ್ದರು. ಆದಿನಾಥರು ಅವರಿಗೆ ಒಂದು ಪ್ರಶ್ನೆ ಕೇಳಿದರು ಅದೆಂದರೆ `ನೀನು ದೇವರ ಪೂಜೆ ಚರ್ಚೆ ಮಾಡುತ್ತೀಯೇನು?' ಎಂದಾಗ ಗೋಪಾಳ ಹೇಳಿದ. ನಾನು ದೇವರ ಪೂಜೆ ಮಾಡುತ್ತೇನೆ. ಕೀರ್ತನೆ ಕೇಳುತ್ತೇನೆ' ಎಂದ. ಆಗ ಮಹಾರಾಜರು ಸುಮ್ಮನಾದರು. ಕೆಲವು ದಿವಸ ಕಳೆದ ನಂತರ ಆದಿನಾದ ಮಹಾರಾಜರು ಮತ್ತೆ ಅದೇ ಪ್ರಶ್ನೆ ಕೇಳಿ ಹೇಳಿದರು ನನ್ನ ಕಡೆಗೆ ಶ್ರೀ ಸಿದ್ಧಾರೂಢರ ಭಾವಚಿತ್ರವಿದೆ. ಅದನ್ನು ದೊಡ್ಡ ಗಾತ್ರದ ಮೂರು ಭಾವಚಿತ್ರ ಮಾಡಿಸಿ ತಂದುಕೊಡು ಎಂದರು. ಆಗ ಅವರು ದೊಡ್ಡ ಗಾತ್ರದ ಮೂರು ಭಾವಚಿತ್ರ ಗುರುಗಳಿಗೆ ಅರ್ಪಿಸಿದರು. ಆಗ ಗುರುಗಳು ಹೇಳಿದರು. ಈ ಭಾವಚಿತ್ರವನ್ನು ನಿಮ್ಮ ಮನೆಗಳಲ್ಲಿಟ್ಟು ಪೂಜಿಸಿರಿ. ನಿಮಗೆ ಒಳ್ಳೆಯದಾಗುತ್ತದೆ ಎಂದು ಆಶೀರ್ವದಿಸಿದರು. ಅಂದಿನಿಂದ ಅವರಿಗೆ ಒಳ್ಳೆಯದಾಯಿತು.
ಹೀಗೆ ಇನ್ನೂ ಅನೇಕರಿಗೆ ಮಹಿಮೆಗಳನ್ನು ತೋರಿಸಿ ಭಕ್ತರಿಗೆ ತತ್ವಜ್ಞಾನ ತಿಳಿಸುತ್ತ ಭಕ್ತಿಮಾರ್ಗಕ್ಕೆ ಹಚ್ಚುತ್ತ ಶ್ರೀ ಆದಿನಾಥ ಮಹಾರಾಜರು ಶ್ರೀ ಸಿದ್ದ ಚರಣಗಳಲ್ಲಿ ವಿಲೀನರಾದ ನಂತರ ಅವರ ಭಕ್ತರು ಅವರು ಹಾಕಿಕೊಟ್ಟ ಸಂಪ್ರದಾಯವನ್ನು ಇಂದಿಗೂ ನಡೆಸುತ್ತಿದ್ದಾರೆ.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
