ಶ್ರೀ ಸಿದ್ಧಾರೂಢರ ಭಕ್ತ ಶ್ರೀ ಶಾಹೂಮಹಾರಾಜ
🌺 ಶ್ರೀ ಸಿದ್ಧಾರೂಢರ ಭಕ್ತ ಶ್ರೀ ಶಾಹೂಮಹಾರಾಜ 🌺
ಪರಮ ಕರುಣೆಸಾಕಾರ ಮೂರ್ತಿಯಾದ ಶ್ರೀ ಸಿದ್ಧಾರೂಢರು ತಮ್ಮನ್ನು ನಂಬಿದ ಸಾವಿರಾರು ಭಕ್ತರಿಗೆ ಬಂದ ಅನೇಕ ದುಃಖಗಳನ್ನು ನಿವಾರಿಸಿ ತನ್ನೆಡೆಗೆ ಅವರನ್ನು ಸೆಳೆದುಕೊಂಡು ಭಕ್ತಿ ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದಲ್ಲದೆ ಮೋಕ್ಷಾಪೇಕ್ಷಿಗಳಾದ ಆನೇಕ ಶಿಷ್ಯರಿಗೆ ಆತ್ಮಜ್ಞಾನ ಭೋಧಿಸಿ ಮುಕ್ತರನ್ನಾಗಿ ಮಾಡಿದ ಅನೇಕ ಉದಾಹರಣೆಗಳುಂಟು. ಅದರಂತೆ ಅನೇಕ ರಾಜ ಮಹಾರಾಜರೂ ಶ್ರೀಗಳ ಭಕ್ತರಾಗಿದ್ದು ಅವರ ದರ್ಶನದಿಂದ ತಮಗೆ ಬಂದ ಸಮಸ್ಯೆಗಳನ್ನು ಪರಿಹರಿಸಿಕೊಂಡು ಹೋಗುತ್ತಿದ್ದರು. ಅಂಥ ಮಹಾರಾಜರಲ್ಲಿ ಕೊಲ್ಲಾಪುರದ ರಾಜ ಶ್ರೀ ಶಾಹೂಮಹಾರಾಜರೂ ಒಬ್ಬರು.
ಬೆಳಗಾಂವಿಯ ಸಾಮಾಜಿಕ ಪುಢಾರಿ(ಪ್ರಮುಖ ಪೂಜಾರಿ ) ಯಾದ ಶ್ರೀ ಪಂಡಿತಪ್ಪ ರಾಯಪ್ಪ ಚಿಕ್ಕೋಡಿಯವರು ದಿನಾಂಕ ಇಪ್ಪತ್ತೇಳು ಜುಲೈ ಹತ್ತೊಂಬತೂನೂರಾ ಇಪ್ಪತ್ತನೇ ಇಸ್ವಿಯಲ್ಲಿ ಬ್ರಾಹ್ಮಣೇತರ ಸಾಮಾಜಿಕ ಪರಿಪತ್ತನ್ನು ಕರೆದಿದ್ದರು. ಆ ಕಾರ್ಯಕ್ರಮಕ್ಕೆ ಕರ್ನಾಟಕ ಹಾಗೂ ಮುದ್ರಾಸ ಮುಂತಾದ ಪ್ರಾಂತಗಳಿಂದ ಅನೇಕ ನೇತಾರರು ಭಾಗವಹಿಸಿದ್ದು ಕೋಲ್ಲಾಪುರದ ರಾಜ ಶ್ರೀ ಶಾಹೂ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ಆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಮಹಾರಾಜರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠಕ್ಕೆ ಬಂದು ಸಿದ್ಧರ ದರ್ಶನಾಶೀರ್ವಾದಗಳನ್ನು ಪಡೆದರು. ಆಗ ಶ್ರೀ ಸಿದ್ಧಾರೂಢರು ಮತ್ತು ಶಾಹೂ ಮಹಾರಾಜರು ಕುಳಿತಾಗ ತೇಗದ ಅಪರೂಪದ ಭಾವ ಚಿತ್ರ ಇದಾಗಿದೆ.
ಈ ಮಹತ್ವದ ಮಾಹಿತಿ ಮತ್ತು ಭಾವಚಿತ್ರವನ್ನು ಕೊಲ್ಲಾಪುರದ ಶ್ರೀಶಹಾಜಿ ಛತ್ರಪತಿ ಮಹಾವಿದ್ಯಾಲಯದ ಮಾಜಿ ಇತಿಹಾಸ ವಿಭಾಗದ ಪ್ರಮುಖ ಶ್ರೀ ಜಯಸಿಂಗರಾವ ಪವಾರ ಎಮ್.ಎ., ಪಿಎಚ್‌ಡಿ, ಇವರು ಕಳಿಸಿಕೊಟ್ಟ ಪ್ರಕಾರ ಇಲ್ಲಿ ಪ್ರಕಟಿಸಲಾಗಿದೆ.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
