ಟಾಂಗದಿಂದ ಸತ್ತ ಮಗುವಿನ ರಕ್ಷಣೆ ಮಾಡಿದ ಸಿದ್ಧರು
🌺 ಟಾಂಗದಿಂದ ಸತ್ತ ಮಗುವಿನ ರಕ್ಷಣೆ 🌺
ಭಕ್ತರು, ಸಿದ್ದರನ್ನು ಅವರವರ ಮನೆಗಳಿಗೆ ಕರೆದುಕೊಂಡು ಹೋಗಿ ಪಾದಪೂಜಿಸಿ ಉಣಿಸಿ ಕಳಿಸುತ್ತಿದ್ದರು. ಒಂದು ದಿನ ಓರ್ವ ಭಕ್ತನು ಸಿದ್ದರನ್ನು ಟಾಂಗಾದಲ್ಲಿ ಕೂಡಿಸಿಕೊಂಡು ತನ್ನ ಮನೆಗೆ ಹೊರಟಾಗ ಅರ್ಧದಾರಿ ಟಾಂಗಾ ಸಾಗಿರಬೇಕು. ಅಷ್ಟರಲ್ಲಿ ಟಾಂಗಾದ ಮುಂದೆ ಒಬ್ಬ ಹೆಣ್ಣು ಮಗಳು ತನ್ನ ಎರಡು
ವರ್ಷದ ಮಗುವಿನ ಕೈ ಹಿಡಿದು ಹೋಗುತ್ತಿದ್ದಳು. ಅವಳು ಅಕಸ್ಮಾತ್ ಹಿಂದೆ ನೋಡಿ ಟಾಂಗಾ ಬರುತ್ತಿದ್ದು, ಯಾವ ಕಡೆಗೆ ಹೋಗಬೇಕೋ ತಿಳಿಯದೆ ಗಾಬರಿಯಾಗಿ ಮಗುವಿನ ಕೈಬಿಟ್ಟು ಒಂದು ಕಡೆಗೆ ಓಡಿ ಹೋದಳು. ಆಗ ಟಾಂಗಾಗಾಡಿ ಓಡುತ್ತ ಬಂದು ಮಗುವಿನ ಮೇಲೆ ಹಾಯ್ದು ಮಗು ಪ್ರಾಣ ಬಿಟ್ಟಿತು. ಇದನ್ನು ಕಂಡು ತಾಯಿ ಓಡಿ ಬಂದು ಮಗುವನ್ನು ತೊಡೆಯ ಮೇಲೆ ತೆಗೆದುಕೊಂಡು ಅಳಹತ್ತಿದಳು.
ಅವರ ಸಂಬಂಧಿಕರು ಸಾರ್ವಜನಿಕರು ಸೇರಿದರು. ಆಗ ತಾಯಿ ಅಳುತ್ತ `ಸಿದ್ಧಾರೂಢಾ ಅನಾಥ ರಕ್ಷಕನೆಂದು ಕರೆಯುತ್ತಾರೆ. ಅವನ ಮುಖ ಸಹಿತ ನೋಡಿಲ್ಲ. ನಿಷ್ಕರ್ಮಿ, ಸನ್ನೆಸಿ, ಬಾವಾ, ಬೈರಾಗಿ, ಈಗ ನನ್ನ ಮಗುವನ್ನು ಕೊಂದಿದ್ದಾನೆ' ಹಾಗೆ ಹೀಗೆಂದು ಬೈಯ್ಯತೊಡಗಿದಳು. ಅಲ್ಲಿ ನಿಂತ ಸಾರ್ವಜನಿಕರು ಬಂದು ಪೊಲೀಸ್ ಸ್ಟೇಶನ್ನಿಗೆ ಒಯ್ಯಬೇಕು' ಎಂದು ಏನೇನೋ ಮಾತಾಡುತ್ತಿದ್ದರು. ಅಷ್ಟರಲ್ಲಿ ಸಿದ್ದಭಾರತಿಯು ಟಾಂಗಾ ತಿರುಗಿಸಿಕೊಂಡು ಬಂದು ನಿಂತನು. ಆಗ ಪಂಚರು ತಮ್ಮ ವಿಚಾರ ತಿಳಿಸಿದರು. ಅದಕ್ಕೆ ಸಿದ್ಧ ಹೇಳಿದ `ನಾನು ಸುಳ್ಳು ಮಾತಾಡುವುದಿಲ್ಲ. ಅಕಸ್ಮಾತ್ ಪ್ರಾರಬ್ಬಕ್ಕನುಸಾರ ಈ ಘಟನೆ ನಡೆದಿದೆ. ಏನೇನೋ ಮಾತಾಡಬೇಡಿರಿ. ಸ್ವಲ್ಪ ತಡೆಯಿರಿ' ಎಂದು ಆ ಬಾಲಕನನ್ನು ಎತ್ತಿಕೊಂಡು ಟಾಂಗಾದಲ್ಲಿ ಹಾಕಿ ತಾನೂ ಟಾಂಗಾದಲ್ಲಿ ಕುಳಿತು ಬಾಲಕನ ಮಸ್ತಕದಲ್ಲಿ ತನ್ನ ಪಾದಗಳನ್ನಿಟ್ಟು ಕೈಗಳನ್ನು ಮಗುವಿನ ಎದೆಯ ಮೇಲಿರಿಸಿ ಕುಳಿತಾಗ ಯಮದೂತರೊಯ್ದ ಜೀವವನ್ನು ಪುನಃ ತಂದು ಮಗುವಿನಲ್ಲಿಟ್ಟರು. ಸಿದ್ದರ ಚರಣ ಸ್ಪರ್ಶದಿಂದ ಸರ್ವೆಂದ್ರಿಯಗಳಲ್ಲಿ ಪ್ರಾಣ ಸಂಚರಿಸಿ ಬಾಲಕನು ಕಣ್ಣೆರೆದು ನೋಡಿದನು.
ಆಗ ಸಿದ್ದನು ಆ ತಾಯಿಯನ್ನು ಕರೆದು ಮಗುವನ್ನು ಅವಳ ಕೈಗೆ ಕೊಟ್ಟಾಗ ತಾಯಿ ನೋಡುತ್ತಾಳೆ, ಸತ್ತ ಮಗು ಬದುಕಿತ್ತು. ಅದನ್ನು ಕಂಡು ಗುರುಗಳ ಪಾದಗಳಿಗೆರಗಿ ತಾನು ಮಾಡಿದ ಅಪರಾಧಗಳನ್ನು ಕ್ಷಮಿಸಿರೆಂದು ಬೇಡಿಕೊಂಡಳು. ಆಗ ಸಿದ್ಧನು ಕರುಣೆಯಿಂದ ಕ್ಷಮಿಸಿದನು. ನಂತರ ನೆರದ ಜನರು ಈ ಚಮತ್ಮತಿಯನ್ನು ಕಂಡು ಸಿದ್ಧನು ಪರಮೇಶ್ವರ ಪ್ರತಿರೂಪನೆಂದು ಜಯಜಯಯಕಾರ ಮಾಡಿದರು. ನಂತರ ಗುರುಗಳು ಟಾಂಗಾ ಹತ್ತಿ ಭಕ್ತನ ಮನೆಗೆ ಹೋದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
