ಗೋಕುಳಾಬಾಯಿಯ ಮರಣ ತಪ್ಪಿತು
🌺 ಗೋಕುಳಾಬಾಯಿಯ ಮರಣ ತಪ್ಪಿತು 🌺
ಗೋಕುಳಾಬಾಯಿಯು ಮಠದ ಶಿವರಾತ್ರಿಯ ಉತ್ಸವ ತೀರಿಸಿಕೊಂಡು ಗೋವೆಯ ಪಂಚವಾಡಿಗೆ ಹೋಗುವ ಮಾರ್ಗದಲ್ಲಿ ಒಬ್ಬ ಸ್ನೇಹಿತಳ ಮನೆಯಲ್ಲಿ ಉಳಿಯುವ ಪ್ರಸಂಗ ಬಂದಿತು. ಆಗ ಅವಳಿಗೆ ವಿಷಮಜ್ವರ ಬಂದು ಅನ್ನ ನೀರು ಹೋಗುತ್ತಿರಲಿಲ್ಲ. ದೇಹದ ಮೇಲೆ ಸ್ಮತಿಯಿರಲಿಲ್ಲ. ಏಳು ದಿವಸ ಹೀಗೆಯ ಮಲಗಿದ್ದಳು, ಏಳನೆಯ ದಿವಸ ಸ್ವಲ್ಪ ಸ್ಮೃತಿ ಬಂದು ಸದ್ಗುರುಗಳ ನೆನಪಾಯಿತು. ನೇತ್ರದಿಂದ ನೀರು ಸುರಿದವು. ಅಂತ್ಯ ಕಾಲದಲ್ಲಿ ಈ ದೇಹವು ಸದ್ಗುರುಗಳ ಪಾದಗಳಲ್ಲಿಯ ಹೋಗಬೇಕೆಂಬುದೇ ಅವಳ ಪ್ರಬಲ ಇಚ್ಛೆಯಾಗಿತ್ತು. ಹುಬ್ಬಳ್ಳಿ ಬಹಳ ದೂರವಿದೆ. ಜನ್ಮಭೂಮಿಯೂ ಬಹಳ ದೂರವಿದೆ. ಮಧ್ಯದಲ್ಲಿ ಈ ದೇಹ ಬಿದ್ದಿದೆ. ಗುರುವೇ ನೀನೇ ಕಾಪಾಡು ಎಂದು ಮಸ್ತಕದ ಪರ್ಯಂತ ವಸ್ತ್ರ ಹೊದ್ದುಕೊಂಡು ಅಳಹತ್ತಿದಳು. ಅಷ್ಟರಲ್ಲಿ ಸದ್ಗುರುಗಳು ವೃದ್ಧ ಬ್ರಾಹ್ಮಣನಂತೆ ವೇಷ ಧರಿಸಿ ಬಾಗಿಲ ಮುಂದೆ ನಿಂತು ಭಿಕ್ಷಾಂದೇಹಿ ಎಂದು ಒಂದು ಶ್ಲೋಕ ಉಚ್ಚರಿಸಿದರು. ಏಕೆಂದರೆ ಗೋಕುಳಾಬಾಯಿ ಎಚ್ಚರಾಗಲೆಂದು
ಭವಾಚಾಭಯ ಕಾಯ ಭೀತೋಸಿ ಲ೦ಡಿ |
ಧರೀರೇಮನಾ ಧೀರ ಧಾಕಾಸಿ ಸಾಂಡಿ ||
ರಘುನಾಯಕಾ ಸಾರಿಕಾ ಸ್ವಾಮಿ ಶೀರಿ |
ನುಪೇಕ್ಷಿ ಕದಾಕೋ ಪಲ್ಯಾ ದಂಡಧಾರಿ ||
ಈ ಶ್ಲೋಕ ಕೇಳಿದ ತಕ್ಷಣ ಏಳು ದಿವಸಗಳ ಜ್ವರ ನಿವಾರಣೆಯಾಗಿದ್ದವು. ಆಗ ಬ್ರಾಹ್ಮಣನು ಒಳಗೆ ಬಂದು ಅವಳ ಹತ್ತಿರ ಕುಳಿತು `ಗೋಕುಳಾಬಾಯಿ, ನಿನ್ನ ಸಲುವಾಗಿ ಬಂದಿದ್ದೇನೆ' ಎಂದು ಜೋಳಿಗೆ ತೆಗೆದು ಮಾತ್ರೆಯನ್ನು ಅವಳ ಮುಖದಲ್ಲಿ ಹಾಕಿದ ನಂತರ ನಿನಗೆ ಸದ್ಗುರು ರಕ್ಷಣೆ ಮಾಡುತ್ತಾನೆ' ಎಂದು ಹೇಳಿ ಹೊರಟು ಹೋದನು. ಆಗ ಗೋಕುಳಾಬಾಯಿ ಪೂರ್ಣ ಎಚ್ಚರಾದಳು. ಅವಳಿಗೆ ಶಕ್ತಿ ಬಂದು ತನ್ನೊಳಗೆ ತಾನೇ ಸದ್ಗುರುನಾಥಾ, ಮರಣಾಂತಿಕ ಜ್ವರದ ತಾಪವನ್ನು ಕಳೆದು ರಕ್ಷಿಸಲು ನಾನಿದ್ದೆಡೆಗೆ ನೀನು ಬಂದೆ ತಂದೆ' ಎಂದು ಕೊಂಡಾಡಿದಳು. ಮುಂದೆ ಶ್ರೀ ಸಿದ್ಧಾರೂಢರ ಚರಿತ್ರೆ ಮತ್ತು ಶ್ರೀ ಸಿದ್ಧಾರೂಢ ಪ್ರತಾಪ' ಎಂಬ ಚರಿತ್ರ ಗ್ರಂಥಗಳನ್ನು ಮರಾಠಿ ಭಾಷೆಯಲ್ಲಿ ಪದ್ಯರೂಪದಲ್ಲಿ ಬರೆದಿದ್ದಾಳೆ.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
