ರಾಶಿ ಜೇನು ಕಡಿದರೆ ಶಾಂತ ಗುರುನಾಥಾ
ಒಂದು ದಿನ ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿಯ ಕೆಳಗಿರುವ ಒಂದು ಆಸನವನ್ನು ಶೃಂಗರಿಸಿ ಶ್ರೀ ಗುರುನಾಥರ ಪೂಜೆಗೈಯ್ಯುವ ಸಮಯದಲ್ಲಿ, ಕೈಲಾಸ ಮಂಟಪದ ಮುಂದಿನ ಕಮಾನಿನಲ್ಲಿ ಜೇನು ಹುಳುಗಳು ಅನೇಕ ಗೂಡುಗಳನ್ನು ಕಟ್ಟಿದ್ದವು. ಯಾವನೋ ಒಬ್ಬ ವ್ಯಕ್ತಿ ಜೇನುಗೂಡಿಗೆ ಸಣ್ಣಕಲ್ಲನ್ನು ಎಸೆದು ಧಕ್ಕೆ ಮಾಡಿದನು. ಆಗ ಅಲ್ಲಿದ್ದ ಜೇನು ಹುಳುಗಳು ರಾಶಿರಾಶಿಯಾಗಿ ಎದ್ದು ಅಲ್ಲಿದ್ದ ಭಕ್ತರಿಗೆ ಕಡಿಯಹತ್ತಿದವು. ಇದನ್ನು ನೋಡಿದ ಜನರು ಬೇರೆ ಬೇರೆ ಕಡೆಗೆ ಓಡಿ ಹೋದರು. ಜೇನು ಗೂಡಿಗೆ ಕಲ್ಲೆಸೆದವನನ್ನು ಹುಳುಗಳು ಕಡಿಯತೊಡಗಿದವು. ಅದನ್ನು ಸಹಿಸದೆ ಅವನು ಕೆರೆಯಲ್ಲಿ ಜಿಗಿದನು. ಇನ್ನಿತರರು ಕಡಿಸಿಕೊಂಡರಾದರೂ ದೂರ ಓಡಿ ತಪ್ಪಿಸಿಕೊಂಡರು. ಆದರೆ ಶ್ರೀ ಗುರುನಾಥರಿಗೂ ಜೇನು ಹುಳುಗಳು ಮುತ್ತಿ ಕಡಿಯುತ್ತಿದ್ದರೆ ಅವರು ಸ್ವಲ್ಪವೂ ಅಲುಗಾಡದೆ ಶಾಂತ ಚಿತ್ತದಿಂದ ಕುಳಿತಿದ್ದರು. ಒಂದು ತಗಣಿ, ಸೊಳ್ಳೆ ಅಥವಾ ಯಾವುದೇ ಕ್ರಿಮಿ ಕಚ್ಚಿದರೆ ಯಾವುದೇ ಮನುಷ್ಯ ಆ ಹುಳವನ್ನು ಹೊಡೆದು ತುರಿಸಿಕೊಳ್ಳುತ್ತಾನೆ. ಆದರೆ ಗುರುನಾಥನಿಗೆ ಕಚ್ಚುತ್ತಿದ್ದರೆ ಸ್ವಲ್ಪವೂ ಕೈಯ್ಯಾಗಲಿ, ಮೈಯ್ಯಾಗಲಿ ಮಿಸುಕಾಡಲಿಲ್ಲ. ಆಗ ಕೆಲವು ಭಕ್ತರು ಹುಳುಗಳನ್ನು ಓಡಿಸಿ ನಂತರ ಉಪಚಾರ ಮಾಡಿದರು. ತಾತ್ಪರ್ಯ ಇಷ್ಟೆ, ಶ್ರೀಗುರುನಾಥರ ದೇಹಭಾವ ನಷ್ಟವಾಗಿ ಆತ್ಮಭಾವದಲ್ಲಿದ್ದುದರಿಂದ ಅವರಿಗೆ ಏನೂ ಎನಿಸಲಿಲ್ಲ.(ಜೇನು ಗೂಡಿಗೆ ಕಲ್ಲು ಎಸೆದ ಮೂರ್ಖನಿಗೆ ಮುಂದೆ ಕೆಲವು ದಿನಗಳ ನಂತರ ತಕ್ಕ ಶಿಕ್ಷೆಯಾಯಿತು )
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
