ಶ್ರೀಗುರುನಾಥರಿಂದ ಮನೆಯ ಭೂತ ಓಡಿತು
ಹಳೇಹುಬ್ಬಳ್ಳಿ ಚನ್ನಪೇಟೆಯ ಹಣಗಿ ಓಣಿಯಲ್ಲಿ ಒಂದು ಮನೆಯಿತ್ತು. ಅದರಲ್ಲಿ ಒಂದು ಭೂತ ಪ್ರವೇಶ ಮಾಡಿ, ರಾತ್ರಿ ಹೊತ್ತಿನಲ್ಲಿ ಎಲ್ಲರೂ ಮಲಗಿಕೊಂಡ ಸಮಯದಲ್ಲಿ ಚೀರುವದು ಒದರುವುದು ಒಂದು ತರಹದ ಭಯಬರಿಸುವ ಧ್ವನಿ ಮಾಡುತ್ತಿದ್ದಿತು, ಇದು ಅನೇಕ ದಿವಸ ನಡೆದು ಇದರಿಂದ ಮನೆಯವರು ಭೀತಿಗೊಳಗಾಗಿದ್ದರು. ಮಂತ್ರಗಾರರನ್ನು ಕರೆಸಿ ಪ್ರಯೋಗಿಸಿದರೂ ಉಪಯೋಗವಾಲಿಲ್ಲ. ಏನು ಮಾಡಬೇಕೆಂದು ವಿಚಾರಮಾಡಿ, ಆ ಮನೆಯನ್ನು ಖಾಲಿ ಮಾಡಿ ಬೇರೆ ಮನೆಗೆ ಹೋದರು. ಭೂತದ ಮನೆಯನ್ನು ಕಡಿಮೆ ಬೆಲೆ ಬಂದರೂ ಮಾರಬೇಕೆಂದು ಮಾರಲು ಹಚ್ಚಿದರು. ಆದರೆ ಅದನ್ನು ಭೂತದ ಮನೆಯೆಂದು ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಬರಿಮನೆ ಉಳಿಯಿತು. ಡೀಕಣ್ಣ ಬಗಾಡೆ ಇವರು, ಆ ಮನೆಯಲ್ಲಿ ಭೂತವಿದೆಯೆಂದು ಗೊತ್ತಿದ್ದರೂ, ಏನಾದರೂ ಆಗಲಿ ಕಡಿಮೆ ಬೆಲೆಗೆ ಸಿಗುತ್ತದೆಂದು ಹಿಂದೆ ಮುಂದೆ ನೋಡದೆ ಧೈರ್ಯದಿಂದ ಖರೀದಿ ಮಾಡಲು ಮುಂದೆ ಬಂದಾಗ, ಅನೇಕರು ತಿಳಿಸಿ ಹೇಳಿದರೂ ಕೇಳದೆ ಅತಿ ಕಡಿಮೆ ಬೆಲೆಗೆ ಖರೀದಿ ಮಾಡಿ ಗೃಹಪ್ರವೇಶ ಮಾಡಿದರು. ಒಂದು ದಿನ ಹೋಯ್ತು ಮರುದಿನ ರಾತ್ರಿ ಭೂತದ ಚೀರಾಟ ಒಂದು ತರಹದ ಭಯ ಹುಟ್ಟಿಸುವ ಧ್ವನಿ ದಿನಾಲು ಕೇಳಹತ್ತಿತು. ಆಗ ಮನೆಯವರಿಗೆ ಮನೆ ಖರೀದಿಸಿದ್ದಕ್ಕೆ ಪಶ್ಚಾತಾಪವಾಯಿತು. ಇದನ್ನು ಮಾರಿದರೆ ಯಾರೂ ತೆಗೆದುಕೊಳ್ಳುವುದಿಲ್ಲ. ಏನು ಮಾಡಬೇಕೆಂದು ವಿಚಾರ ಮಾಡಿ ಅವರು ಶ್ರೀ ಸಿದ್ಧಾರೂಢರ ಭಕ್ತರಾಗಿದ್ದರಿಂದ ಶ್ರೀ ಗುರುನಾಥರನ್ನು ಕರೆಸಿ ಪಾದಪೂಜೆ ಮಾಡಿದರೆ ಅವರ ಕೃಪೆಯಿಂದ ನಮಗಾದ ಚಿಂತೆ ನಿವಾರಣೆಯಾಗಬಹುದೆಂದು ಒಂದು ನಿಶ್ಚಯಕ್ಕೆ ಬಂದರು.
ಒಂದು ದಿವಸ ಮಠಕ್ಕೆ ಹೋಗಿ ಶ್ರೀಗುರುನಾಥರನ್ನು ಕರೆದುಕೊಂಡು ಬಂದು ಉಚಿತಾಸನದಲ್ಲಿ ಕೂಡಿಸಿ, ಪಾದಪೂಜೆ ಮಾಡಿ ಪ್ರಸಾದವನ್ನು ಒಂದು ತಾಟಿನಲ್ಲಿಟ್ಟು ಅವರ ಮುಂದೆ ಹಿಡಿದು ಉಣ್ಣಲು ಹೇಳಿದರು. ಆಗ ಶ್ರೀಗಳು ಆ ತಾಟನ್ನು ತೆಗೆದುಕೊಂಡು ನಸುನಗುತ್ತ ತಾಟಿನಲ್ಲಿದ್ದ ಆಹಾರವನ್ನು ತಾಟು ಸಹಿತ ಎಲ್ಲೆಡೆ ಸಿಡಿಯುವಂತೆ ಬಿಸಾಡಿ ಅಲ್ಲಿಂದ ಎದ್ದು ಮನೆಯ ಹೊರಗೆ ಬಂದು, ಟಾಂಗಾದಲ್ಲಿ ಕುಳಿತು ಮಠಕ್ಕೆ ಹೋದರು ಆಗಲೇ ಭೂತವು ಓಡಿಹೋಗಿತ್ತು. ಇತ್ತ ಡೀಕಣ್ಣ ಬಗಾಡೆ ಇವರಿಗೆ ಚಿಂತೆಯಾಯಿತು ಏಕೆಂದರೆ ಸ್ವಾಮಿಗಳು ಪ್ರಸಾದ ಉಣ್ಣದೆ ಮನೆಯಲ್ಲಿ ಬೀಸಾಡಿದ್ದರಿಂದ, ನಮ್ಮಿಂದೇ ನಾದರೂ ಅವರಿಗೆ ಅಪಚಾರವಾಯಿತೆ ಎಂದು ಮನಸ್ಸಿನಲ್ಲಿಯೇ ಕ್ಷಮೆ ಕೇಳಿದರು. ಬಂದವರಿಗೆ ಪ್ರಸಾದಕೊಟ್ಟು ಆ ದಿನ ರಾತ್ರಿ ಮಲಗಿದಾಗ, ಆ ಭೂತದ ಚೀರಾಟ ಮತ್ತು ಅದರಿಂದ ಯಾವ ಧ್ವನಿಯೂ ಬರದೆ, ಅಂದಿನಿಂದ ಇಂದಿನವರೆಗೂ ಆ ಭೂತದ ಕಾಟವಿಲ್ಲದೆ ನಿಶ್ಚಿಂತರಾಗಿದ್ದಾರೆ.(ಗುರುನಾಥರೂಢರು ಕೆಲವು ಸಲ ವಿಚಿತ್ರ ವರ್ತನೆಯಿಂದ ಲೀಲೆ ಮಾಡಿದ್ದಾರೆ, ಅವರು ದೃಷ್ಟಿ ಮಾತ್ರದಿಂದ ಅನೇಕ ಪವಾಡ ಮಾಡಿದ್ದಾರೆ )
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಶ್ರೀಗುರುನಾಥರೂಢರಿಗೆ ಚೇಳು ಕಡಿದರು ಅದನ್ನು ಸಹಿಸಿಕೊಂಡು ಹಾಗೆ ಮಲಗಿದ್ದರು
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಶ್ರೀಗುರುನಾಥರೂಢರಿಗೆ ಚೇಳು ಕಡಿದರು ಅದನ್ನು ಸಹಿಸಿಕೊಂಡು ಹಾಗೆ ಮಲಗಿದ್ದರು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
