ಶಾಂತವ್ವಳ ಮರಣವನ್ನು ಮೊದಲೇ ತಿಳಿದುಕೊಂಡಿದ ಗುರಪ್ಪ




ಕಲ್ಲಪ್ಪ ತಲವಾಯಿ ಅವರ ಅಣ್ಣ ಬಸವರಾಜ ಅವರ ಹೆಂಡತಿ ಶಾಂತವ್ವ, ತೀವ್ರ ಕಾಯಿಲೆಯಿಂದ ಬಳಲುತ್ತಿದ್ದುದರಿಂದ, ತನ್ನ ತವರುಮನೆ ಕುಂದಗೋಳ ತಾಲೂಕಿನ ಭರದ್ವಾಡದಲ್ಲಿ ಉಳಿದುಕೊಂಡಿದ್ದರು. ಕಲ್ಲಪ್ಪನವರು ಒಂದು ದಿವಸ ಭರದ್ವಾಡಕ್ಕೆ ಹೋಗಿ ಅವರ ಕಾಯಿಲೆಯನ್ನು ನೋಡಿ ಮಾತಾಡಿಸಿ ಬಂದಿದ್ದರು. ಕಲ್ಲಪ್ಪನವರು ತಮ್ಮ ಮನಸ್ಸಿನಲ್ಲಿ ಶ್ರೀಗುರುನಾಥರ ತೀರ್ಥ ಪ್ರಸಾದದಿಂದ ಶಾಂತವ್ವನ ಕಾಯಿಲೆ ಗುಣವಾಗಬಹುದೆಂದು ತಿಳಿದು ಶ್ರೀಗಳ ಕಡೆಗೆ ಹೋದಾಗ, ಶ್ರೀಗಳು ಮಧ್ಯಾಹ್ನ ಪ್ರಸಾದ ಸ್ವೀಕರಿಸಿ ಆಡುಗೆಯ ಮನೆಯ ಪಟಾಂಗಣದಲ್ಲಿ ಸುತ್ತು ಹಾಕುತ್ತಿದ್ದರು. ಆಗ ಕಲ್ಲಪ್ಪನವರು ಹೂವು ಹಣ್ಣುಗಳನ್ನು ತೆಗೆದುಕೊಂಡು ಶ್ರೀಗಳ ಪಾದಕ್ಕಿಟ್ಟು ನಮಸ್ಕರಿಸಲು ಹೋದಾಗ ಶ್ರೀಗಳು ತಮ್ಮ ಪಾದಗಳನ್ನು ಹಿಂದಕ್ಕೆ ಸರಿಸಿ, ನಮಸ್ಕರಿಸಲು ಅವಕಾಶ ಕೊಡಲಿಲ್ಲ. ಹೀಗೆ ಆರೇಳುಸಲ ಮಾಡಿದರೂ ಶ್ರೀಗಳು ಹಿಂದಕ್ಕೆ ಸರಿದರು.
ಆದರೂ ಪ್ರಸಾದಮಾತ್ರ ತೆಗೆದುಕೊಂಡು ತನ್ನ ಅಣ್ಣ ಬಸವರಾಜನ ಜೊತೆಗೆ ಕಲ್ಲಪ್ಪನವರು ಕೂಡಿಕೊಂಡು ಭರದ್ವಾಡಕ್ಕೆ ಹೋದಾಗ ಶಾಂತವ್ವ ಅಸುನೀಗಿದ್ದರು. ಈ ಬಗ್ಗೆ ಕಲ್ಲಪ್ಪ ತನ್ನ ಮನಸ್ಸಿನಲ್ಲಿ ವಿಚಾರಮಾಡಿದಾಗ, ಈ ಹಿಂದೆ ಶ್ರೀಗುರುನಾಥಾರೂಢರಿಗೆ ನಮಸ್ಕರಿಸಲು ಹೋದಾಗ ತಮ್ಮ ಕಾಲುಗಳನ್ನು ಹಿಂದಕ್ಕೆ ಸರಿಸಿದ ಆ ಸಮಯದಲ್ಲಿಯೇ ಭರದ್ವಾಡದಲ್ಲಿ ಪ್ರಾಣ ತ್ಯಜಿಸಿದ್ದರು. ಆಗ ಕಲ್ಲಪ್ಪನವರಿಗೆ ಶ್ರೀಗುರುನಾಥರ ಗುಟ್ಟಿನ ವಿಚಾರ ತಿಳಿದು ಅಚ್ಚರಿಯಾಯಿತು. ನಂತರ ಶಾಂತವ್ವಳ ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದರು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶಾಂತಪ್ಪಗೆ ಲಗ್ನವಾಗಲು ಗುರುನಾಥರ ಆದೇಶ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ