ಶಾಂತಪ್ಪಗೆ ಲಗ್ನವಾಗಲು ಗುರುನಾಥರ ಆದೇಶ
ಶ್ರೀ ಸಿದ್ಧಾರೂಢರಿದ್ದ ಕಾಲದಲ್ಲಿ ಶಾಂತಪ್ಪ ಹೊಸೂರ ಎಂಬ ವ್ಯಕ್ತಿ ಪರಮ ವೈರಾಗ್ಯ ತಾಳಿ, ಸಿದ್ದಾರೂಢರ ನಿರಂತರ ಸೇವೆ ಮತ್ತು ಶಾಸ್ತ್ರ ಕೇಳುತ್ತಿದ್ದನು. ಬರಬರುತ್ತ ಗಡ್ಡವೂ ಬೆಳೆಯಿತು. ಶಾಸ್ತ್ರ ತಿಳಿಯಹತ್ತಿತು. ಒಂದು ದಿವಸ ಸಿದ್ಧಾರೂಢರ ಮಠಕ್ಕೆ ಬರುವಾಗ ದಾರಿಯಲ್ಲಿ ಗಂಗಮ್ಮನೆಂಬ ಓರ್ವ ತರುಣಿ ಸುಂದರವಾಗಿರುವುದನ್ನು ಕಂಡು ಮೋಹಿಸಿದನು. ಅವಳೂ ಸಿದ್ದರ ಭಕ್ತಳಾಗಿದ್ದು, ಅವಳೂ ಶಾಂತಪ್ಪನನ್ನು ಪ್ರೀತಿಯಿಂದ ಕಂಡಳು. ಅವರ ಪ್ರೀತಿ ದಿನದಿನಕ್ಕೆ ಹೆಚ್ಚಾಯಿತಾದರೂ ಮುಂದೆ ಅವಳ ಮೇಲಿನ ಪ್ರೀತಿ ಶಾಂತಪ್ಪನಲ್ಲಿ ಉಳಿಯದೆ ಮತ್ತೆ ವೈರಾಗ್ಯ ತಾಳಿದನು. ಆದರೆ ಗಂಗಮ್ಮನ ಪ್ರೀತಿ ಅಚಲವಾಗಿತ್ತು. ಮುಂದೆ ಸಿದ್ದಾರೂಢರು ಮಹಾಸಮಾಧಿ ಹೊಂದಿದ ನಂತರ ಮೌನಮುನಿ ಗುರುನಾಥರ ಸೇವೆ ಮಾಡಹತ್ತಿದನು ಆದರೆ ಗಂಗಮ್ಮನ ಪ್ರೀತಿ ಶಾಂತಪ್ಪನ ಮೇಲೆ ಅಚಲವಾಗಿತ್ತು. ಒಂದು ದಿನ ಶಾಂತಪ್ಪ ಶ್ರೀಗುರುನಾಥರ ದರ್ಶನಕ್ಕೆ ಬಂದಾಗ, ಗಂಗಮ್ಮನೂ ಗುರುಗಳ ದರ್ಶನ ಪಡೆದುಕೊಂಡು ಶ್ರೀಗಳ ಮುಂದೆ ಕೈಜೋಡಿಸಿ, ಗುರುಗಳೇ ನಾನು ಶಾಂತಪ್ಪನನ್ನು ಪ್ರೀತಿಸುತ್ತೇನೆ. ಅವನೂ ಈ ಮೊದಲು ಪ್ರೀತಿಸಿ ಈಗ ವೈರಾಗ್ಯ ತಾಳಿ ನನ್ನ ಪ್ರೀತಿಗೆ ಬಂಗ ತಂದಿದ್ದಾನೆ. ದಯವಿಟ್ಟು ನನ್ನ ಜೊತೆಗೆ ಲಗ್ನವಾಗುವಂತೆ ಆಶಿರ್ವದಿಸಿರಿ ಎಂದು ವಿನಮ್ರ ಭಾವದಿಂದ ಬೇಡಿಕೊಂಡಳು.
ಆಗ ಅಲ್ಲಿಯೇ ಇದ್ದ ಶಾಂತಪ್ಪನನ್ನು ಗುರುನಾಥರು ಮೌನದಿಂದ ಸನ್ನೆ ಮಾಡಿ ಕರೆದು, ಅವರೀರ್ವರ ಮೇಲೆ ತಮ್ಮ ಕೈಗಳಿಂದ ಹೂಗಳನ್ನು ತೂರಿ ಮೌನ ಸಮ್ಮತಿ ಸೂಚಿಸಿದರು. ಆಗ ಅಲ್ಲಿದ್ದ ಸಾಧುವೊಬ್ಬರು, ಶಾಂತಪ್ಪ ಗುರುಗಳು ಲಗ್ನ ಮಾಡಿಕೊಳ್ಳಲು ಸೂಚಿಸಿದ್ದಾರೆ. ನಿಮ್ಮ ಭಾಗ್ಯದಲ್ಲಿಯೇ ಹಾಗಿದೆ. ಸಂಸಾರದಲ್ಲಿದ್ದು ಪರಮಾರ್ಥ ಸಾಧಿಸಲು ಬರುತ್ತದೆ ಎಂದು ಹೇಳಿ ಕಳಿಸಿದರು. ಆಗ ಇಬ್ಬರೂ ಗುರುಗಳಿಗೆ ವಂದಿಸಿ ಮನೆಗೆ ಹೋಗಿ ಲಗ್ನ ಮಾಡಿಕೊಂಡರು. ಎರಡು ಗಂಡು ಮಕ್ಕಳಾದವು. ಆದರೆ ಶ್ರೀಸಿದ್ದಾರೂಢರ ಮತ್ತು ಗುರುನಾಥಾರೂಢರ ಭಕ್ತಿಗೆ ಕೊರತೆಯಿರಲಿಲ್ಲ, ಮೇಲಿಂದ ಮೇಲೆ ಮಠಕ್ಕೆ ಬಂದು ದರ್ಶನ ತೆಗೆದುಕೊಂಡು ಹೋಗುತ್ತಿದ್ದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
