ಮಣ್ಣಿನ ಮೂರ್ತಿಯಲ್ಲಿ ನಿಜ ಸಿದ್ಧಾರೂಢರು ಇದ್ದ ಅದ್ಭುತ ಕಥೆ
🌺ಮಣ್ಣಿನ ಮೂರ್ತಿಯಲ್ಲಿ ನಿಜ ಸಿದ್ಧರು 🌺
ದಿವಟೆ ಓಣಯೊಳಗಿದ್ದ ಢಗೆ ಬೆನಕಪ್ಪನ ಹೆಂಡತಿ ಧರ್ಮವ್ವ ನಿಜವಾಗಿಯೂ ಧರ್ಮದೇವತೆಯೇ ಆಗಿದ್ದಳು. ತುಂಬ ಮುಗ್ಧ ಸ್ವಭಾವದ ಅವಳು ಮಿತಭಾಷಿ, ಮೃದು ಭಾಷಿಣಿಯಾಗಿದ್ದಳು. ಅವಳ ಗಂಡ ಮಿಗಿಲಾದ ಚಿತ್ರಕಾರ. ಅವಳಿಗೆ ಮಠಕ್ಕೆ ಹೋಗುವದು, ಸಿದ್ದರ ಸೇವೆ ಮಾಡುವದು, ಸುಮ್ಮನೇ ಅವರನ್ನು ನೋಡುತ್ತ ಕುಡ್ರುವುದೇ ಬಲು ಪ್ರೀತಿಯ ಕಾರ್ಯವಾಗಿತ್ತು. ಸಿದ್ದರನ್ನೇ ಅವಳು ನೋಡುತ್ತಿದ್ದರಿಂದಲೋ ಏನೋ ಅವಳ ಮನವೆಲ್ಲ, ಭಾವವೆಲ್ಲ, ಸಿದ್ದಮಯವಾಯಿತು. ಅವಳಿಗೆ ಸಿದ್ದರ ಚಿತ್ರ ಬರೆಯಬೇಕೆನಿಸಿತು. ಅವರ ಮುಂದೆ ತನ್ನ ಮನವನ್ನು ಬಿಚ್ಚಿಯಿಟ್ಟಳು, 'ಆಗಲಿ ತಾಯಿ, ಬರೆಯುತ್ತಿರು. ನಿನಗೆ ಗುರು ಕಲ್ಯಾಣ ಮಾಡುತ್ತಾನೆಂದು' ಹರಸಿದರು. ಅವಳು ಯಾವ ಶಾಲೆಯ ಗೋಡೆಯನ್ನು ಕಂಡವಳಲ್ಲ. ಬಣ್ಣಬೆಡಗುಗಳ ವಿನ್ಯಾಸ ಅವಳಿಗೆ ತಿಳಿದಿರಲಿಲ್ಲ. ಅವಳು ಮನೆಗೆ ಬಂದಳು. ಮಣೆಯೊಂದನ್ನು ತಕ್ಕೊಂಡಳು. ಇದ್ದಲಿಯಿಂದ ಚಿತ್ರ ಬರೆಯಲು ಪ್ರಾರಂಭಿಸಿದಳು. ಸಿದ್ದರು ಅವಳ ಹಸ್ತಗತಿಯನ್ನು ಗುರುತಿಸಿದರು. ಅವಳಿಗೆ ಗುರುವಿನ ಅನುಗ್ರಹದಿಂದ ಕಲೆ ಕರಗತವಾಯಿತು. ಧರ್ಮವ್ವ ಸಿದ್ಧರ ಒಂದು ಮಣ್ಣಿನ ಮೂರ್ತಿಯನ್ನು ಮಾಡಿದಳು. ಮೂರ್ತಿಯ ಬಲಗಣ್ಣಿನ ಮೇಲೆ ಒಂದು ಗಂಟು ಬಂದಿತು. ಒಳಗೆ ಹರಳು ಸಿಕ್ಕಿರಬೇಕು ಎಂದು ಅವಳು ಚೂಪಾದ ಆಯುಧದಿಂದ ಆ ಬುಗುಟಿಯನ್ನು ಮೆಲ್ಲನೆ ಕೆತ್ತಲು ಪ್ರಾರಂಭಿಸಿದಳು. ಮೂರ್ತಿ ಸ್ವಲ್ಪ ಒಣಗಿದ್ದು ದರಿಂದ ಬಿರುಸಾಗಿತ್ತು. ಕೆತ್ತುವ ಕೆಲಸ ಕೆಲ ಹೊತ್ತಿನವರಿಗೆ ನಡೆಯಿತು. ಒಂದು ಕೈಯಿಂದ ಮೂರ್ತಿಯನ್ನು ಅವಳು ಹಿಡಿದಿದ್ದಳು. ಅವಳ ಕೈಗೆ ಮೂರ್ತಿಯ ಮೈ ಬಿಸಿಬಿಸಿ ಎನಿಸತೊಡಗಿತು. ಅವಳಿಗೆ ನಂಬಿಕೆಯಾಗಲಿಲ್ಲ. ಇತರ ಮೂರ್ತಿಗಳನ್ನು ಮುಟ್ಟಿ ನೋಡಿದಳು. ಅವು ತಣ್ಣಗಿದ್ದವು. ತನ್ನ ಕೈಯೊಳಗಿನ ಮೂರ್ತಿ ಕಾವೇರತೊಡಗಿತು. ಏನೋ ಪ್ರಮಾದಾಯಿತೆಂದು ಅವಳು ಎಣಿಸಿದಳು. ಜ್ವರ ಬಂದವರ ಮೈ ಸುಡುವಂತೆ ಮೂರ್ತಿಯ ಮೈ ಸುಡುತ್ತಿತ್ತು. ಅವಳು ಅಂಜಿನಡುಗಿದಳು. ಗಂಡನಿಗೆ ಹೋಗಿ ಕರೆದಳು. ಓಣಿಯ ಜನಗಳೂ ಬಂದರು. ಸಿದ್ಧರ ಲೀಲೆ ತಿಳಿಯದು ಎಂದರು. ಗುರುವಿನ ಸೇವೆಯಲ್ಲಿ ಎಲ್ಲಿಯಾದರರೂ ಅಪಚಾರವಾಯಿತೇ? ಎಂದು ಅವಳು ಭಯಪಟ್ಟಳು. ಇದಕ್ಕೆ ಪರಿಹಾರವೇನು? ಸಿದ್ಧರನ್ನೇ ಕಾಣಬೇಕೆಂದು ದಂಪತಿಗಳಿಬ್ಬರೂ ಮಕ್ಕೆ ಧಾವಿಸಿ ಬಂದರು. ನೋಡುತ್ತಾರೆ, ಅವರಿಗೆ ಆಶ್ಚರ್ಯ ಕಾದಿತ್ತು. ಶಿಷ್ಯರು ಸಿದ್ಧರ ಆರೈಕೆಯಲ್ಲಿ ತೊಡಗಿದ್ದರು. ಸಿದ್ಧರಿಗೆ ವಿಪರೀತ ಜ್ವರ ಬಂದಿದ್ದವು. ಧರ್ಮವ್ವ ಓಡಿ ಹೋದವಳೇ ಸಿದ್ದರ ಕಾಲಮೇಲೆ ಉರುಳಿದಳು. ಅವಳು ಸಿದ್ಧರ ಮುಖ ನೋಡಿದಳು. ಅವಳ ಲಕ್ಷ್ಯ ಬಲ ಹುಬ್ಬಿನ ಮೇಲೆ ಹೋಯಿತು. ಅವಳ ಕರುಳಿಗೆ ಕುಡಗೋಲ ಹಾಕಿ ಎಳೆದಂತಾಯಿತು. ಸಿದ್ದರ ಹುಬ್ಬಿನ ಮೇಲೆ ಆರೆಂಟು ಕಡೆ ಆಯುಧದಿಂದ ಗೀರಿದಂತಾಗಿತ್ತು. ರಕ್ತ ಹರಿದು ಅಲ್ಲಿಯೇ ಅದು ಹೆಪ್ಪುಗಟ್ಟಿತ್ತು. ಚಿಮಣಿಯ ಬೆಳಕಿನಲ್ಲಿ ಶಿಷ್ಯರಿಗೆ ಸಿದ್ಧರ ಹಣೆಯ ಮೇಲಿನ ಘಾಯಗಳು ಕಂಡಿರಲಿಲ್ಲ. 'ದೇವಾ ತಪ್ಪಾಯಿತು, ಕ್ಷಮಿಸು ನನ್ನಪ್ಪ' ಎಂದು ಅವಳು ಬೇಡಿದಳು. ಸಿದ್ಧರು ನಂಬಿಕೊಂಡ ಭಕ್ತರ ಸೇವೆಯಲ್ಲಿ ಸದಾ ಪಾಲುಗೊಂಡಿದ್ದರು. ಸಿದ್ಧರು ಶಿಷ್ಯರು ಮಾಡಿದ್ದ ಮೂರ್ತಿಯಲ್ಲಿಯೂ ಇದ್ದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
