4 ಚಕ್ಕಡಿ ಕಟ್ಟಿಗೆ ಕಳವು ಆದರೂ ಸಿದ್ದಾರೂಢ ಆಶೀರ್ವಾದದಿಂದ 4 ವಾಗಿನ ಕಟ್ಟಿಗೆ ಮಠಕ್ಕೆ ಬಂದ ಕಥೆ

 🌺  ಸರ್ವಾಂತರಯಾಮಿ ಸಿದ್ಧರು 🌺




ಕೈಲಾದ ಮಂಟಪದ ಮಗ್ಗುಲಲ್ಲಿ ಕೊರೆದು ಹಾಕಿದ್ದ ಸಾಗವಾಗಿ ಕಟ್ಟಿಗೆಯನ್ನು ಯಾರೋ ಕಳ್ಳರು ಚಕ್ಕಡಿಯಲ್ಲಿ ಹೇರಿಕೊಂಡು ಹೋಗುತ್ತಿದ್ದರು. ಆ ಚಕ್ಕುಡಿಗಳನ್ನು ಬಿಕ್ಕೂಸಿಂಗನು ಭಾರತ ಮಿಲ್ಲಿನ ಸಮೀಪದಲ್ಲಿ ಕಂಡನು. ಅವನು ತನ್ನ ಆಯುಷ್ಯವನ್ನು ರೇಲ್ವೆ ಪೋಲಿಸ ಇಲಾಖೆಯಲ್ಲಿ ಸವೆಸಿದ್ದನು. ಸ್ವಶ್ರಮದಿಂದ ಜಮೇದಾರ ಸ್ಥಾನಕ್ಕೇರಿ ನಿವೃತ್ತನಾಗಿದ್ದನು. ಅವನಿಗೆ ಸಿದ್ದಾರೂಢರು ಸಾಕ್ಷಾತ್ ಶಿವನೇ ಆಗಿದ್ದರು. ಅವನು ಮನಕ್ಕೆ ತಿಳಿದೊಡನೆ ಹಗಲು ರಾತ್ರಿ, ಮಳೆಗಾಳಿ ಎನ್ನುವದನ್ನು ಲೆಕ್ಕಿಸದೆ, ಸಿದ್ದಾರೂಢರ ದರ್ಶನಕ್ಕೆ ಎದ್ದು ಬರುತ್ತಿದ್ದನು. ಅಂದು ಬೆಳಗಿನ ಮೂರು ಗಂಟೆಯ ಸಮಯಕ್ಕೆ ಅವನಿಗೆ ತಟ್ಟನೆ ಎಚ್ಚರವಾಯಿತು. ಅವನು ಸಿದ್ಧರಲ್ಲಿಗೆ ಹೊರಟನು. ರಾತ್ರಿ ಸಮಯ ಅವನಿಗೆ ಆಡ್ಡ ಬರಲಿಲ್ಲ. ಬೀಸುಗಾಲು ಹಾಕುತ್ತ ಅವನು ಮಠಕ್ಕೆ ಬರುವಾಗ ಅವನಿಗೆ ನಾಲ್ಕು ಚಕ್ಕಡಿಗಳು ರಾತ್ರಿ ಹೊತ್ತು ಎದುರಾದವು. ಇಂಥ ರಾತ್ರಿ ಹೊತ್ತಿನಲ್ಲಿ ಈ ಚಕ್ಕಡಿಗಳು ಎಲ್ಲಿಂದ ಬಂದವು? ಇವುಗಳಲ್ಲಿ ಏನಿದೆ? ಎಂದು ಬಿಕ್ಕೂಸಿಂಗನು ಪೋಲಿಸರಿಗಿರುವ ಸಹಜ ಚಿಕಿತ್ಸಕ ಬುದ್ಧಿಯಿಂದ ಇಣಕಿ ನೋಡಿದನು. ಕೊರೆದ ಕಟ್ಟಿಗೆಗಳು ಕಣ್ಣಿಗೆ ಬಿದ್ದವು. ಕೈಲಾಸಮಂಟಪದ ಬಳಿಯಲ್ಲಿ ಬಹಳಷ್ಟು ಕಟ್ಟಿಗೆಯನ್ನು ಕೊರೆದು ಹಾಕಲಾಗಿತ್ತು. ಈ ಚಕ್ಕಡಿಯವರು ಅವುಗಳನ್ನೇನಾದರೂ ಹೊತ್ತು ಕೊಂಡು ತಂದಿರಬಹುದೇ? ಎಂದು ಅವರ ಮನಸ್ಸಿಗೆ ಎನಿಸಿತು. 'ಛೇ, ಸಿದ್ಧಾರೂಢರ ದರ್ಶನಕ್ಕೆ ಹೊರಟಿದ್ದೇನೆ. ಮನದಲ್ಲಿ ಇಂಥ ಕೆಟ್ಟ ವಿಚಾರಗಳು ಈಗ ಬರಬಾರದು' ಎಂದು ಅವನು ಆ ವಿಚಾರವನ್ನು ಮನದಿಂದ ತಳ್ಳಿ ಹಾಕಿದನು. ಬೇಗ ಬೇಗ ಮಠಕ್ಕೆ ಬಂದನು. ಅಂಥ ರಾತ್ರಿಯಲ್ಲಿ ಅದೂ ಚಳಿಯಲ್ಲಿ ಸಿದ್ದರು ಸಮಾಧಿ ಮಂದಿರದ ಮುಂದುಗಡೆಯಲ್ಲಿ ಬಂದು ಕುಳಿತಿದ್ದರು. ಮೈಯಲ್ಲಿದ್ದುದು ಕೇವಲ ಒಂದು ಲಂಗೋಟಿ, ಬೆಳಗಿನ ಚಳಿಯ ಪರಿವೆ ಅವರಿಗಿರಲಿಲ್ಲ. ಬಿಕ್ಕೂಸಿಂಗನು ಹೋದವನೇ ಸಿದ್ಧರ ಪಾದಕ್ಕೆರಗಿ ಕೆಳಗೆ ಕುಳಿತುಕೊಂಡನು. 'ಅಪ್ಪಾ, ಇದೇನು ? ರಾತ್ರಿಯ ಹೊತ್ತು ಇಲ್ಲಿ ಬಂದು ಕುಳಿತಿರುವಿಯಲ್ಲ'? ಎಂದು ಅವನು ಪ್ರಶ್ನಿಸಿದನು. 'ಬಿಕ್ಕೂ ನೀನು ಅಷ್ಟು ದೂರದಿಂದ ನಿನ್ನನ್ನೇ ನೀನು ಲೆಕ್ಕಿಸದೇ ಮಠಕ್ಕೆ ನಡೆದು ಬರುತ್ತಿದ್ದರೆ, ನಾನು ಶಯನ ಮಂದಿರದಿಂದ ಎರಡು ಹೆಜ್ಜೆ ಬಂದು ಇಲ್ಲಿ ನಿನಗಾಗಿ ಕಾಯುತ್ತ ಕೂಡ್ರುವದು ಭಾರವೇ?” ಎಂದು ಸಿದ್ದರು ನುಡಿದರು. ತಾತ್ವಿಕ ವಿಷಯ ನಡೆಯಿತು. ಅಷ್ಟರಲ್ಲಿ ಬೆಳೆಗಾಯಿತು. ಬಿಕ್ಕೂ ಸಿಂಗನು  ಕೈಲಾಸ ಮಂಟಪದ ಕಡೆಗೆ ಹೋದನು. ಅವನ ಎದೆ ಧಸಕ್ಕೆಂದಿತು. ಅಲ್ಲಿ ಕೊರೆದಿಟ್ಟ ಎಲ್ಲ ಕಟ್ಟಿಗೆಗಳೂ ಮಾಯವಾಗಿದ್ದವು. ಅವನಿಗೆ ಬಹಳ ವ್ಯಥೆಯಾಗಿ ಅಯ್ಯೋ ; ಕಳ್ಳರು ಕೈಯೊಳಗೇ ಸಿಕ್ಕಿದ್ದರು. ನಾನಾಗಿಯೇ ಅವರನ್ನು ಕಂಡೂ ಕಂಡೂ : ಕೈಬಿಟ್ಟಂತಾಯಿತಲ್ಲ' ಎಂದು ಅವನು ಮರುಗಿದನು. ಸಿದ್ದರೆ ಬಳಿಯಲ್ಲಿ ತಲೆ ತಗ್ಗಿಸಿ ನಿಂತನು, ದೇವಾ ನನ್ನ ತಪ್ಪಾಯಿತು. ಯಾರೋ ಕಳ್ಳರು ಕೊರೆದ ಕಟ್ಟಿಗೆಯನ್ನು ಒಯ್ದಿದ್ದಾರೆ. ನಾನು ಬರುವಾಗ ನಾಲ್ಕು ಚಕ್ಕಡಿಗಳು ಎದುರಾಗಿದ್ದವು. ಸಂಶಯ ಬರ ಆದರೂ ಅವುಗಳನ್ನು ತಡೆಯಲಿಲ್ಲ ಬಿಟ್ಟು ಬಿಟ್ಟೆ ತಪ್ಪಾಯಿತು' ಎಂದು ಅವನು  ಬೇಡಿಕೊಂಡನು. ಸಿದ್ಧರ ಬಳಿಯಲ್ಲಿಯೇ ಅವನು ಕುಳತನು. ಹೊತ್ತೇರಿತು. ಅಂಚೆಯವನು  ಒಂದು ಲಕೋಟೆ ತಂದುಕೊಟ್ಟನು. ಸಿದ್ದರು ಅದನ್ನು ಬಿಕ್ಕೂಸಿಂಗನ ಕೈಯಲ್ಲಿ ಕೊಡುತ್ತ  “ಬಿಕ್ಕೂ, ನಾಲ್ಕು ಚಕ್ಕಡಿ ಕಟ್ಟಿಗೆ ಹೋಗ್ಯಾವೆಂದು ಚಿಂತೆ ಮಾಡಬೇಡ. ನಾಲ್ಕು ಚಕ್ಕಡಿ ಹೋದರೇನಾಯಿತು. ಶಿವನು ನಾಲ್ಕು ವಾಗಿನ ಕಟಿಗಿ ಕಳಿಸಿಕೊಟ್ಟಿದ್ದಾನೆ ನೋಡು. “ಸಮುದ್ರದಲ್ಲಿಯ ಒಂದು ಚರಿಗೆ ನೀರು ತಕ್ಕೊಂಡು ಹೋದರೆ, ಸಮುದ್ರ ರಾಜನು  ದುಃಖಪಡುತಾನೇನು?' ಎಂದು ನುಡಿದರು. ಬಿಕ್ಕೂಸಿಂಗನು ಲಕೋಟೆ ಒಡೆದನು. ಹಳ್ಳಾಳ ದೇಶಪಾಂಡೆಯವರು ಬರೆದ ಕಾಗದ ಮತ್ತು ರೈಲ್ವೆ ರಶೀದಿಗಳು ಅದರಲ್ಲಿದ್ದವು ಸಿದ್ಧಾರೂಢರು ಕೈಲಾಸಮಂಟಪ ಕಟ್ಟಿಸುವ ವಿಚಾರ ಆ ದೇಶಪಾಂಡೆಯವರಿಗೆ ಗೊತ್ತಾಗಿ ಅವರು ನಾಲ್ಕು ವಾಗೀನ ಕಟ್ಟಿಗಿ ಕಳಿಸಿದ್ದರು. ಅದರ ರಸೀದಿಗಳು ಆ ಲಕೋಟೆಯಲ್ಲಿದ್ದವು ಆಗ ಬಿಕ್ಕೂಸಿಂಗನು ಆ ಪತ್ರ ಓದಿ ಮೂಕವಿಸ್ಮಿತನಾದನು. 'ದೇವಾ, ಹರನ ಲೀಲೆ ನರರಿಗೆ ಹೇಗೆ ತಿಳಿದೀತು' ಎಂದು ಅವನು ಸಿದ್ದರ ಶ್ರೀಪಾದದಲ್ಲಿ ಮಣಿದನು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶ್ರೀ ಸಿದ್ಧಾರೂಢರ ಅವತಾರ ಸಮಾಪ್ತಿ ಶ್ರೀಗುರುನಾಥರ ಮೌನ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ