ಆರೂಢರು ತನ್ನ ಪ್ರಿಯ ಶಿಷ್ಯರಿಗೆ ಗ್ರಂಥ ರಚಿಸಲು ಹೇಳಿದರು

 🕉️ ಆರೂಢರು ತನ್ನ ಪ್ರಿಯ ಶಿಷ್ಯರಿಗೆ ಗ್ರಂಥ ರಚಿಸಲು ಹೇಳಿದರು 🌺



ಒಂದು ದಿನ ತಿರುಕಪ್ಪನೆಂಬ ಬ್ರಾಹ್ಮಣನು ಹುಬ್ಬಳ್ಳಿಯಲ್ಲಿ ವಾಸವಾಗಿದ್ದನು. ಅವನು ಉತ್ತಮ ಅಧಿಕಾರಿಯಾಗಿದ್ದು ಶ್ರೀ ಸಿದ್ಧಾರೂಢರ ಕಡೆಗೆ ಬಂದು ಸಾಷ್ಟಾಂಗ ನಮಿಸಿ, ಪರಮ ಗುರುವೇ ಈ ಜನ್ಮ ಸಫಲವಾಗುವ ಉಪಾಯ ಸೂಚಿಸಿರಿ' ಎಂದು ಬೇಡಿಕೊಂಡನು. ಆಗ ಸಿದ್ದಾರೂಢರು ಅವನನ್ನು ಹತ್ತಿರ ಕೂಡಿಸಿಕೊಂಡು ವಿಚಾರ ಮಾಡಿ ಬಗೆ ಬಗೆಯ ಸಾಧನಗಳನ್ನು ಸಾಧಿಸುತ್ತಿದ್ದರೂ ಮನದೊಳಗಿನ ಚಂಚಲತೆ ದೂರವಾಗಿಲ್ಲ. ಆದ್ದರಿಂದ ಮನಸ್ಸು ಶುದ್ಧವಾಗಲಿಕ್ಕೆ ಅಮನಸ್ಕ ಚಿಂತನದ ಪ್ರಣವೋಪಾಸನೆ ಹೇಳಬೇಕೆನ್ನುತ್ತ ಗುರುಗಳು ಮಾಂಡೂಕೊಪನಿಷತ್ತನ್ನು ಬೋಧಿಸಿದರು.


ನಂತರ ತಿರುಕಪ್ಪನು 'ಶ್ರೀ ಗುರುವೇ, ನನ್ನ ಹೃದಯವು ತ್ರೈತಾಪದಿಂದ ಸುಡುತ್ತಿತ್ತು. ನಿಮ್ಮ ವಾಕ್ಯಾಮೃತವು ಆ ತಾಪಗಳನ್ನು ಪರಿಹರಿಸಿ ಆನಂದವನ್ನು ನೀಡಿತು. ಈಗ ನಾನು ಧನ್ಯನಾದೆನು' ಎಂದು ಕೊಂಡಾಡಿ ಅವರ ಪಾದಗಳಿಗೆ ವಂದಿಸಿದಾಗ ಗುರುಗಳು, ಪರಮ ಶಿಷ್ಯನ, ಈಗ ಪ್ರಾಪ್ತವಾದ ಆನಂದದ ಅನುಭವವು ದೃಢವಾಗಬೇಕಾದರೆ ನೀನು ಈಶಾವಾಸ್ಯ ಶ್ರುತಿಯನ್ನು ಕನ್ನಡ ಬಾಷೆಯಲ್ಲಿ ರಚಿಸಿ, ಯಾವಾಗಲೂ ಪಠಿಸುತ್ತಿದ್ದರೆ ಅದು ದೃಢವಾಗುತ್ತದೆ' ಎಂದಾಗ ಶಿಷ್ಯನು ಒಪ್ಪಿದನು.


ಆಮೇಲೆ ನಿರ್ವಾಣಯ್ಯಗೆ ಹೇಳಿದರು ನವಲಿಂಗ ಕೀಲಕಗಳನ್ನು ಕಡೆಯಲ್ಲಿಟ್ಟುಕೊಂಡು ಪಂಚೀಕರಣವೆಂಬ ಗ್ರಂಥವನ್ನು ರಚನೆ ಮಾಡಿದರೆ ಜ್ಞಾನವರ್ಧನವಾಗುತ್ತದೆ. ಆ ಗ್ರಂಥ ರಚಿಸು' ಎಂದಾಗ ನಿರ್ವಾಣಯ್ಯ ಒಪ್ಪಿದನು. ಆ ಮೇಲೆ ಕಬೀರದಾಸರನ್ನು ಕರೆದು 'ನೀನು ದಶೋಪನಿಷತ್ತಿನ ಸಾರ ತಿಳಿದು ಕನ್ನಡ ಭಾಷೆಯಲ್ಲಿ ಬರೆಯಬೇಕು' ಎಂದಾಗ ಕಬೀರದಾಸರು ಒಪ್ಪಿದರು.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

👉ಯೋಗ ಬ್ರಷ್ಟ ಬಾಲಯೇಾಗಿ ಮುಕ್ತನಾದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

👉ಸಿದ್ಧಾರೂಢ ಭಾಗವತ ಎಲ್ಲಾ ಲೀಲಾಕಥೆ ಸಂಗ್ರಹ 📲

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

👉WhatsApp share 📲

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 

👇





👇





👇


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ