ದೃಷ್ಟಿ ಕಳೆದುಕೊಂಡವನಿಗೆ ದೃಷ್ಟಿ ನೀಡಿದ ಗುರುನಾಥ
ಶ್ರೀ ಸಿದ್ಧಾರೂಢರ ಸಂತವಾಣಿ ಹೀಗಿದೆ. ಸದ್ಗುರು ಕಾಲಿಲ್ಲದವರಿಗೆ ನಡೆಯಲು ಚಾಲನೆ ಕೊಟ್ಟ, ಅಂಧನಾದವನಿಗೆ ಕಣ್ಣು ಕಾಣುವಂತೆ ಮಾಡಿದ, ಇಂಥ ಚಮತ್ಕಾರ ಬ್ರಹ್ಮಾದಿಗಳಿಗೆ ತಿಳಿಯುವುದಿಲ್ಲ ಎಂದಾಗುತ್ತದೆ. ಈ ಹಿಂದಿನ ಮೂರನೆಯ ಪ್ರಕರಣದಲ್ಲಿ ಶ್ರೀಗುರುನಾಥರು ನಡೆಯಬಾರದವನಿಗೆ ಕಾಲನ್ನು ಕೊಟ್ಟ ಈ ಪ್ರಕರಣದಲ್ಲಿ ಕಣ್ಣು ಕಾಣದವನಿಗೆ ಕಾಣಿಸುವಂತೆ ಮಾಡಿದ ಇದರಂತೆ.
ಸುಳ್ಳ ಗ್ರಾಮದ ಬಿಚಗತ್ತಿಯವರಿಗೆ ಅರವತ್ತು ವರ್ಷ ವಯಸ್ಸು ಆಗಿತ್ತು. ವಯಸ್ಸಾದವರ ದೃಷ್ಟಿ ಮಂದವಾಗುವುದು ಸಹಜ, ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದ ಕಣ್ಣಿನ ಡಾಕ್ಟರ ಶ್ರೀ ಮೋದಿಯವರ ಕಣ್ಣಿನ ಆಪರೇಶನ್ ಕ್ಯಾಂಪು ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿರುವುದನ್ನು ತಿಳಿದು ಬಿಚಗತ್ತಿಯವರು ಮಠಕ್ಕೆ ಬಂದರು. ಹನುಮಂತನ ಬಾಲದಂತೆ ಉದ್ದವಾದ ಸಾಲಿನಲ್ಲಿ ನಿಂತರು ಬಹಳ ಹೊತ್ತಿನ ಮೇಲೆ ಸರತಿ ಬಂದಿತು ಡಾಕ್ಟರ ಮೋದಿಯವರು ಬಿಚಗತ್ತಿಯವರ ಕಣ್ಣುಗಳನ್ನು ಪರೀಕ್ಷೆ ಮಾಡಿ ನಿನ್ನ ಕಣ್ಣುಗಳಿಗೆ ಗುಣವಾಗುವುದಿಲ್ಲವೆಂದು ಹೇಳಿದರು. ನಿರಾಶನಾಗಿ ಶ್ರೀಗುರುನಾಥರು ಇದ್ದ ಶಾಂತಿಯ ಧಾಮಕ್ಕೆ ಬಂದು ಹೊಸ್ತಿಲದ ಹೊರಗೆ ಕುಳಿತು ನಮಸ್ಕರಿಸಿ ಶ್ರೀಗಳವರನ್ನು ಹತಾಶ ದೃಷ್ಟಿಯಿಂದ ನೋಡತೊಡಗಿದರು. ಶ್ರೀಗುರುಗಳು ಕರುಣೆಯಿಂದ ಕೃಪಾದೃಷ್ಟಿಯಿಂದ ನಸುನಗುತ್ತ ನೋಡಿದರು.
ಇದರ ಪರಿಣಾಮದಿಂದ ಅವರ ಮನಸ್ಸು ಹಗುರಾಯಿತು, ಕಣ್ಣು ತಂಪಾದವು. ಆನಂದವೂ ಆಯಿತು. ಆಗ ಶ್ರೀಗಳವರ ಪಾದಗಳಲ್ಲಿ ವಂದಿಸಿ ತಮ್ಮ ಊರಿಗೆ ಹೋದರು ಮುಂದೆ ಕ್ರಮೇಣ ದೃಷ್ಟಿ ಸುಧಾರಿಸಿ ಎಲ್ಲವೂ ಸ್ಪಷ್ಟವಾಗಿ ಕಾಣತೊಡಗಿತು. ಹೀಗೆ ಶ್ರೀಗಳು ದೃಷ್ಟಿಕೊಟ್ಟ ದೇವರೆಂದು ತಿಳಿದು ಗುರುಗಳಲ್ಲಿ ಇನ್ನೂ ಹೆಚ್ಚಿನ ಭಕ್ತಿಯುಂಟಾಯಿತು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
