ಶ್ರೀಗುರುನಾಥರ ಆಶೀರ್ವಾದದ ಫಲ




ಶ್ರೀಗುರು ಸಿದ್ದಾರೂಢರ ಪರಮ ಶಿಷ್ಯರಲ್ಲಿ ಒಬ್ಬರಾದ ಹುಲಿಗೆಪ್ಪ ಮತ್ತು ಯಮನವ್ವ ಗಾರವಾಡ ದಂಪತಿಗಳ ಹಿರಿಯ ಮಗನಾದ ರಾಮಪ್ಪನ ಪತ್ನಿ ಭೀಮವ್ವ ದಂಪತಿಗಳಿಗೆ ಮೂವರು ಗಂಡು ಹಾಗೂ ಒಬ್ಬಳು ಹೆಣ್ಣುಮಕ್ಕಳಿದ್ದರು. ತುಂಬಿದ ಕುಟುಂಬ ಸಂತೋಷದಿಂದ ವಾಸಿಸುತ್ತಿದ್ದರು. ಅಕಸ್ಮಾತ್ ಅವರಿಗೆ ಭರಸಿಡಿಲಿನಂತೆ ಒಂದು ದುಃಖ ಬಂದೊದಗಿತು. ಅವರ ಮೂರನೆಯ ಮಗನಾದ ಕೃಷ್ಣನು ಹುಟ್ಟಿದ ಮೇಲೆ ಅವರಿಗೆ ಯಾವುದೇ ಕೊರತೆಯಿರಲಿಲ್ಲ, ಆದರೆ ಆಟವಾಡಿಕೊಂಡಿದ್ದ ಮಗ ಒಮ್ಮಿಂದೊಮ್ಮೆಲೇ ಅಳಲು ರಂಭಿಸಿ ಸಾಯಂಕಾಲದೊಳಗೆ ಕೊನೆಯುಸಿರೆಳೆದನು. ಇದೇನು ವಿಧಿಯ ಆಟವೋ ಅಥವಾ ಮಾಟ ಮಂತ್ರದ ಪ್ರಭಾವವೋ ತಿಳಿಯದೆ ದಂಪತಿಗಳು ಕಂಗಾಲಾದರು.
ತನ್ನ ಮಗನ ಅಕಾಲ ಮರಣದಿಂದ ಭೀಮವ್ವಳಿಗೆ ಬುದ್ಧಿ ಭ್ರಮಣೆಯಾಯಿತು. ತನ್ನ ಮಗ ಸತ್ತಿಲ್ಲ, ಜೀವದಿಂದ ಇದ್ದಾನೆ, ನನ್ನ ಮಗನಿಗೆ ಹಸಿವೆಯಾಗಿದೆ ಹಾಲು ಕೊಟ್ಟು ಬನ್ನಿರಿ ಎಂದು ನೆರೆ ಹೊರೆಯವರಿಗೆ ಹೇಳುತ್ತಿದ್ದಳು ಅವರು ಅವಳನ್ನು ಸಮಾಧಾನಪಡಿಸುವದಕ್ಕಾಗಿ ಕೈಯಲ್ಲಿ ಹಾಲು ತೆಗೆದುಕೊಂಡು ನಿನ್ನ ಮಗ ಸ್ಮಶಾನದಲ್ಲಿ ಇದ್ದಾನೆ ಹಾಲು ಕುಡಿದು ಆಟವಾಡುತ್ತಿದ್ದಾನೆ ಎಂದು ಅವಳಿಗೆ ನಂಬಿಸುತ್ತಿದ್ದರು. ಹೀಗೆಯೇ ಎರಡು ಮೂರು ತಿಂಗಳು ನಡೆಯಿತು. ಆಗ ರಾಮಪ್ಪ ಬೇಸತ್ತು ಗುರುನಾಥಾರೂಢರ ಸನ್ನಿಧಿಯಲ್ಲಾದರೂ ಸರಿ ಹೋಗುವಳೋ ಏನೋ ಎಂದು ಶ್ರೀಸಿದ್ಧಾರೂಢರ ಮಠಕ್ಕೆ ಕರೆದುಕೊಂಡು ಹೋಗಿ ಶ್ರೀ ಗುರುನಾಥಾರೂಢರು ಇರುವ ಖೋಲಿಯ ಪಕ್ಕದ ಅಡುಗೆ ಮನೆಯಲ್ಲಿ ಬಿಟ್ಟರು.
ಒಂದು ದಿನ ಶ್ರೀ ಗುರುನಾಥಸ್ವಾಮಿಗಳು ಅವರ ಹತ್ತಿರ ಬಂದು ಭೀಮವ್ವ ಮತ್ತು ರಾಮಪ್ಪನವರ ತಲೆಯ ಮೇಲೆ ನಸುನಗುತ್ತ ಹಸ್ತವನ್ನಿಟ್ಟರು. ಆಗ ದಂಪತಿಗಳ ಮನಸ್ಸು ಶಾಂತವಾಯಿತು. ನಡೆದ ಘಟನೆಯ ಬಗ್ಗೆ ರಾಮಪ್ಪ ಅರ್ಚಕರ ಮುಂದೆ ಹೇಳಿದಾಗ ಭೀಮವ್ವಳನ್ನು ಎಂಟು ದಿವಸಗಳ ಮಟ್ಟಿಗೆ ಅಡುಗೆಯ ಮನೆಯಲ್ಲಿಯೇ ಇಟ್ಟುಕೊಂಡು ಅಜ್ಜನವರು ಊಟ ಮಾಡಿ ಉಳಿದ ಪ್ರಸಾದವನ್ನು ಭೀಮವ್ವಳಿಗೆ ತಿನ್ನಲು ಕೊಡುತ್ತಿದ್ದರು.
ಆಗ ಅವಳ ಬುದ್ದಿ ಸ್ಥಿಮಿತಕ್ಕೆ ಬಂದು ಮೊದಲಿನಂತಾದಳು, ಆಗ ಆ ದಂಪತಿಗಳು ಸಂತೋಷದಿಂದ ಅಜ್ಜನವರಿಗೆ ಚಿನ್ನದ ಸರವನ್ನು ಕಾಣಿಕೆಯಾಗಿ ನೀಡಿ ದಂಪತಿಗಳು  ಬಂದರು. ತದನಂತರ ಭೀಮವ್ವ ಪುನಃ ಗರ್ಭಧರಿಸಿ ಅವಳಿ ಜವಳಿ ಮಕ್ಕಳಿಗೆ ಜನ್ಮವಿತ್ತಳು, ಆ ಮಕ್ಕಳಲ್ಲಿ ಒಂದು ಗಂಡು ಒಂದು ಹೆಣ್ಣು ಇದ್ದವು. ಆಗ ಆ ದಂಪತಿಗಳಿಬ್ಬರೂ ಸಂತೋಷ ಚಿತ್ತರಾಗಿ ಮಕ್ಕಳಿಗೆ ಮಂಜುಳಾ ಮತ್ತು ಮಂಜಪ್ಪ ಎಂದು ಹೆಸರಿಟ್ಟು ಶ್ರೀಗಳಲ್ಲಿ ಬಂದು ಒಂದು ಮಗುವನ್ನು ಕಸಿದುಕೊಂಡೆ, ಆದರೆ ಎರಡು ಮಕ್ಕಳನ್ನು ಕರುಣಿಸಿದೆ ದೇವಾ ಎಂದು ಮನದಲ್ಲಿಯೇ ಅಂದುಕೊಂಡು ನಮಸ್ಕರಿಸಿದರು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಯಢಳ್ಳಿಯಲ್ಲಿ ಗುರುನಾಥನ ಅದ್ಭುತ ಲೀಲೆ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ