ಯಢಳ್ಳಿಯಲ್ಲಿ ಗುರುನಾಥನ ಅದ್ಭುತ ಲೀಲೆ
ಹತ್ತೊಂಬತ್ತು ನೂರಾ ಐವತ್ತೇಳರಲ್ಲಿ ಯಡಳ್ಳಿಯೆಂಬ ಊರಿನಲ್ಲಿ ಶ್ರೀಸಿದ್ಧಾರೂಢರ ಶಿಷ್ಯರಾದ ಶ್ರೀಮಲ್ಲಿಕಾರ್ಜುನ ಶಿವಯೋಗಿಗಳ ಜಾತ್ರೆಯ ಸಮಯದಲ್ಲಿ ಪಲ್ಲಕ್ಕಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಶ್ರೀಗುರುನಾಥ ಸ್ವಾಮಿಗಳನ್ನು ಕರೆದುಕೊಂಡು ಹೋಗಿದ್ದರು, ಅವರ ವಾಸಕ್ಕಾಗಿ ಯಡಳ್ಳಿಯ ಸಿದ್ಧಪ್ಪ ದೇಸಾಯಿಯವರ ಮನೆಯಲ್ಲಿ ಅನುಕೂಲತೆಯನ್ನು ಒದಗಿಸಲಾಗಿತ್ತು. ಕಟಂಜನವಿರುವ ಮನೆಯಲ್ಲಿ ಅವರನ್ನು ಇರಿಸಲಾಗಿತ್ತು. ಅಂದು ರಾತ್ರಿ
ಭಕ್ತರು ಶ್ರೀಗುರುನಾಥ ಸ್ವಾಮಿಗಳ ಪಾದಪೂಜೆ ಮುಗಿಸಿ ಪ್ರಸಾದ ಸ್ವೀಕರಿಸಿ ಒಂದು ಕಡೆಗೆ ಮಂಚದ ಮೇಲೆ ಮಲಗಿಸಿ ಕಟಂಜನದ ಒಳಗಿನ ಚಿಲಕ ಕೆಲವು ಭಕ್ತರು ಮಲಗಿಕೊಂಡಿದ್ದರು.
ಬೆಳಗಿನಜಾವ ಸೇವಕರು ಎದ್ದು ನೋಡುತ್ತಾರೆ ಪಲ್ಲಂಗಿನ ಮೇಲೆ ಶ್ರೀಗಳು ಇರಲಿಲ್ಲ. ಭಕ್ತರು ಗಾಬರಿಗೊಂಡರು, ಕಟಂಜನದ ಬಾಗಿಲದ ಚಿಲಕ ಒಳಗಿನಿಂದ ಹಾಕಿದ್ದು ಹಾಕಿದಂತೆಯೇ ಇದೆ. ನಂತರ ಕಟಂಜನದ ಚಿಲಕ ತೆಗೆದು ಬಾಗಿಲು ತೆರೆದು ಹೊರಗೆ ನೋಡಿದಾಗ, ಶ್ರೀಗುರುನಾಥಾರೂಢರು ದೇಸಾಯಿಯವರ ವರಾಂಡದಲ್ಲಿ ತಿರುಗಾಡುತ್ತಿದ್ದರು. ಇದನ್ನು ನೋಡಿದ ಭಕ್ತರು ಆಶ್ಚರ್ಯ ಚಕಿತರಾಗಿ ಅವರ ಬಳಿಗೆ ಹೋಗಿ ನಮಸ್ಕರಿಸಿ ಕರೆದುಕೊಂಡು ಬಂದು ಪಲ್ಲಕ್ಕಿ ಉತ್ಸವವನ್ನು ಸಂಭ್ರಮದಿಂದ ಆಚರಿಸಿ ಕಾರಿನಲ್ಲಿ ಹುಬ್ಬಳ್ಳಿಯ ಶ್ರೀಮಠಕ್ಕೆ ಕರೆದುಕೊಂಡು ಬಂದುಬಿಟ್ಟರು.
ಇನ್ನೊಂದು ಸಲ ಹತ್ತೊಂಭತ್ತುನೂರಾ ಅರವತ್ತೊಂದನೆಯ ಇಸ್ವಿಯಲ್ಲಿ ಜನವರಿ ತಿಂಗಳಲ್ಲಿ ಒಂದು ಘಟನೆ ನಡೆಯಿತು. ಅದೆನೆಂದರೆ ಯಡಳ್ಳಿಯಲ್ಲಿ ಓಂ ನಮಃ ಶಿವಾಯ ಮಹಾಮಂತ್ರದ ಅಖಂಡ ನಾಮಸ್ಮರಣೆಯನ್ನು ಮೂರು ವರ್ಷಗಳ ಪರಿಯಂತ ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆ ಅವಧಿಯಲ್ಲಿ ಶ್ರೀಗುರುನಾಥರ ಆರೋಗ್ಯ ವಿಷಮಿಸಿತ್ತು ಆದರೂ ಶ್ರೀಗಳವರ ಆಶೀರ್ವಾದದಿಂದ ನಾಮಸ್ಮರಣೆ ಯನ್ನು ಪ್ರಾರಂಭಿಸಬೇಕೆಂಬ ಭಕ್ತರ ಪ್ರಬಲ ಇಚ್ಛೆಯಂತೆ ಶ್ರೀಗಳನ್ನು ಕರೆಸಲು ಬಳ್ಳಾರಿಯ ಆಲಕುಂದಿಯ ಜಡಿಯ ಸ್ವಾಮಿಯವರು ಮತ್ತು ಯಡಳ್ಳಿಯ ಭಕ್ತರು ಹುಬ್ಬಳ್ಳಿಯ ಮಠಕ್ಕೆ ಬಂದು, ಮಠದ ಟ್ರಸ್ಟ ಕಮಿಟಿಯ ಚೇರಮನ್ನರನ್ನು ಭೆಟ್ಟಿಯಾಗಿ ಶ್ರೀ ಗುರುನಾಥರನ್ನು ಕಳಿಸಿಕೊಡಲು ವಿನಂತಿಸಿಕೊಂಡರು. ಆಗ ಚೇರಮನ್ನರು ಒಪ್ಪದಿದ್ದಾಗ ಈ ಚರ್ಚೆಯನ್ನು ಆಲಿಸಿದ ಶ್ರೀಗುರುವಾರ ಸ್ವಾಮಿಗಳು ತಟ್ಟನೆ ಎದ್ದು ಯಡಳ್ಳಿಯ ಭಕ್ತರು ತಂದ ಕಾರಿನ ಬಾಗಿಲನ್ನು ಸ್ವತಃ ತೆರೆದ ಕಾರಿನಲ್ಲಿ ಕುಳಿತರು. ಆಗ ಭಕ್ತರು ಯಡಳ್ಳಿಗೆ ಕರೆದುಕೊಂಡು ಹೋದರು. ಯಡಳ್ಳಿ ಮಠದಲ್ಲಿ ಭಜನೆ ಪ್ರಾರಂಭಿಸಲು ಉಚಿತಾಸನದಲ್ಲಿ ಕುಳಿತು ಶ್ರೀಗಳು ಬಹುಸಂತೋಷದಿಂದ ಪುಟಿಪುಟಿದು ಚಪ್ಪಾಳೆ ತಟ್ಟುತ್ತೆ ಆಶೀರ್ವದಿಸಿದರು. ನಂತರ ಯಡಳ್ಳಿಯಲ್ಲಿ ಭಕ್ತರಿಂದ ನಾಲ್ಕು ವರ್ಷ ಪರ್ಯಂತ ಅಖಂಡ ನಾಮಸ್ಮರಣೆ ಜರುಗಿತು.
ಯಡಳ್ಳಿಯಲ್ಲಿ ಮಧ್ಯವರ್ತಿ ಸ್ಥಳದಲ್ಲಿ ಗರಡಿ ಮನೆಯ ಹತ್ತಿರ ಒಂದು ಕಟ್ಟೆಯಿದ್ದು ಅದಕ್ಕೆ ಸಿದ್ದಾರೂಢರ ಕಟ್ಟೆಯೆಂದು ಭಕ್ತರು ಕರೆಯುತ್ತಿದ್ದರು. ಯಡಳ್ಳಿಯ ಮಠದ ಉತ್ಸವಕ್ಕೆ ಶ್ರೀ ಗುರುನಾಥ ಸ್ವಾಮಿಗಳನ್ನು ಕರೆದುಕೊಂಡು ಹೋದಾಗಲೆಲ್ಲ ಮೊದಲು ಆ ಕಟ್ಟೆಯ ಮೇಲೆ ನಿರ್ಮಿಸಿದ ಚಿಕ್ಕ ಮಂಟಪದಲ್ಲಿ ಶ್ರೀ ಗುರುನಾಥರನ್ನು ಕೂಡಿಸಿ ಪೂಜೆಗೈದು ಮಂಗಲದ ನಂತರ ಅಲ್ಲಿಯ ಮಠಕ್ಕೆ ಕರೆದುಕೊಂಡು ಹೋಗುವುದನ್ನು ಭಕ್ತರು ಮಾಡುತ್ತಿದ್ದರು.
ಅಖಂಡ ಭಜನೆಯ ಪ್ರಾರಂಭದ ಸಲುವಾಗಿ ಶ್ರೀಗಳನ್ನು ಹತ್ತೊಂಭತ್ತು ನೂರಾ ಆರವತ್ತೊಂದರಲ್ಲಿ ಕರೆದುಕೊಂಡು ಹೋದಾಗ ಶ್ರೀಗಳ ಆರೋಗ್ಯ ಸರಿಯಾಗಿಲ್ಲದ ಕಾರಣ ಶ್ರೀಗಳ ಸೇವಕರು ಸಿದ್ದಾರೂಢರ ಕಟ್ಟೆಯ ಮೇಲೆ ಶ್ರೀಗಳ ಪೂಜೆಗೆ ಅನುಮತಿ ನೀಡಲಿಲ್ಲ ಶ್ರೀ ಗುರುನಾಥರನ್ನು ಮುಂದೆ ಕರೆದುಕೊಂಡು ಹೋಗುವಾಗ ಕಾರು ತುಸು ಅಂತರದಲ್ಲಿ ಕಾರಿನ ಗೇರು ಬೀಳದೆ ಮುಂದೆ ಸಾಗದೆ ಬಂದಾಗಿ ನಿಂತುಬಿಟ್ಟಿತು. ಆಗ ಶ್ರೀಗುರುನಾಥರು ಕಾರಿನ ಬಾಗಿಲು ತೆರೆದು ಪೂಜೆಯ ಕಟ್ಟೆಯ ಮೇಲೆ ಅಲಂಕೃತ ಮಂಟಪದಲ್ಲಿ ಇರಿಸಿದ ಆಸನದಲ್ಲಿ ಕುಳಿತರು. ನಂತರ ಸಂತೋಷದಿಂದ ಪೂಜೆಯನ್ನು ಸ್ವೀಕರಿಸಿ ಕಾರು ಏರಿದಾಗ ಕಾರು ಮೊದಲಿನಂತೆ ಸರಾಗವಾಗಿ ಸಾಗಿತು. ಇದನ್ನು ನೋಡಿ ಎಲ್ಲರು ಹರುಷ ವ್ಯಕ್ತ ಪಡಿಸಿದರು.
_______________________________
ಮುಂದಿನ ಕಥೆ👇
Facebook ಅಲ್ಲಿ share ಮಾಡಲು
ಕೆಳಗಿನ share ಲಿಂಕ್ use ಮಾಡಿ
👇
👇
👇
