ಹೊಟ್ಟೆ ನೋವಿನಿಂದ ಬಳಲಿದ ಬಸವಣ್ಣೆಪ್ಪ ಮುಕ್ತನಾದ
ಹೆಬ್ಬಳ್ಳಿಯ ಶ್ರೀಬಸವಣ್ಣೆಪ್ಪ ಕೊ೦ಗಿಯವರಿಗೆ ಅನೇಕ ವರ್ಷಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತು. ಅದು ದಿನಗಳೆದಂತೆ ಹೆಚ್ಚಾಗುತ್ತ ಹೋಯಿತು. ಕೊನೆ ಕೊನೆಗೆ ರಾತ್ರಿ ನಿದ್ರೆಯಿರಲಿಲ್ಲ. ಅನೇಕ ವೈದ್ಯರಿಗೆ ತೋರಿಸಿದರೂ ಹಾಗೆ ದುಡ್ಡು ಖರ್ಚುಯಾತು ಹೊರತು
ಉಪಯೋಗವಾಗಲಿಲ್ಲ. ಊಟ ಮಾಡಿದರೆ ಇನ್ನೂ ಹೆಚ್ಚಾಗುತ್ತಿತ್ತು. ಒಂದು ದಿನ ನೋವು ವಿಪರೀತವಾಗಿ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ ಎಂದು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡುವಾಗ, ಅವನ ಮನಸ್ಸಿನಲ್ಲಿ ಆತ್ಮಹತ್ಯೆ ಮಹಾಪಾಪ, ದೋಷ ಉಂಟಾಗುತ್ತದೆ ಎಂದು ತಿಳಿದು ಅದರ ಗೋಜಿಗೆ ಹೋಗಲಿಲ್ಲ.
ಇನ್ನೇನು ಮಾಡಬೇಕೆಂದು ಬಹಳ ವಿಚಾರಮಾಡುತ್ತಾ ಹಾಗೆ ಮಲಗಿರುವಾಗ ಕನಸಲ್ಲಿ ಅಜ್ಜನ ಮಠ ಬಂದಂತಾಗಿ ಶ್ರೀಸಿದ್ದಾರೂಢರ ಮಠಕ್ಕೆ ಬಂದು, ಶ್ರೀಗುರುನಾಥರ ದರ್ಶನ ಪಡೆದಾಗ ಮಹಾನಂದವಾಯಿತು. ಆಗ ಗುರುಗಳು ಕುಲುಕುಲು ನಗುತ್ತ ಬಸವಣ್ಣೆಪ್ಪನನ್ನು ಕರುಣೆಯ ಕಣ್ಣುಗಳಿಂದ ಏಕದೃಷ್ಟಿಯಿಂದ ನೋಡಿದ ಕೂಡಲೆ, ಈ ಸದ್ಗುರು ಸೇವೆಯಲ್ಲಿದ್ದರೆ ಹೊಟ್ಟೆನೋವು ಶಮನವಾದೀತೆಂದು ಬಸವಣ್ಣೆಪ್ಪ ತಿಳಿದು, ಅಂದಿನಿಂದ ಮಠದಲ್ಲಿದ್ದು ಅವರ ಸೇವೆ ಮಾಡುತ್ತ, ಪಾದೋದಕ ಪ್ರಸಾದ ಸೇವಿಸುತ್ತ ಇರಹತ್ತಿದರು. ಅಲ್ಲದೆ ಮಠದ ಸಣ್ಣದೊಡ್ಡ ಸೇವೆಗಳೆನ್ನದೆ ಅವುಗಳನ್ನು ಮಾಡುತ್ತ ಶ್ರೀಶಿವಪುತ್ರಸ್ವಾಮಿಗಳ ಶಾಸ್ತ್ರ ಕೇಳುತ್ತಿದ್ದರು. ಹೀಗೆ ಕೆಲವು ದಿವಸ ಕಳೆದನಂತರ ಬಸವಣ್ಣೆಪ್ಪನವರ ಹೊಟ್ಟೆನೋವು ಕಡಿಮೆಯಾಗುತ್ತ ಹೋಗಿ ಸಂಪೂರ್ಣ ಗುಣ ಹೊಂದಿದರು.
ಮೊದಮೊದಲು ಶ್ರೀ ಶಿವಪುತ್ರಸ್ವಾಮಿಗಳ ಶಾಸ್ತ್ರ ತಿಳಿಯುತ್ತಿರಲಿಲ್ಲ. ಆದರೆ ಶ್ರೀ ಗುರುನಾಥಾರೂಢರ ಸನ್ನಿಧಿಯಲ್ಲಿ ಸೇವೆ ಮಾಡುತ್ತ ದಿನಗಳೆದಂತೆ ಅವರಿಗೆ ಅದ್ವೈತಪರ ಶಾಸ್ತ್ರ ತಿಳಿಯತೊಡಗಿತೆಂದು. ಆತ್ಮ ಹತ್ಯೆ ಮಾಡಿಕೊಂಡರೆ ದೇಹ ಆಗಲೇ ನಷ್ಟವಾಗುತ್ತಿತ್ತು . ಶ್ರೀಗುರುನಾಥರ ಸೇವೆಯಿಂದಲೇ ಈ ದೇಹ ಉಳಿದಿದೆ. ಅದನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಸನ್ಯಾಸ ದೀಕ್ಷೆ ಪಡೆದು ಸೇವೆ ಸಲ್ಲಿಸುತ್ತ, ಕೊನೆಗೆ ಮಠದಲ್ಲಿಯೇ ದೇಹತ್ಯಾಗ ಮಾಡಿ ವಿದೇಹ ಮುಕ್ತರಾದರು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
