ಶ್ರೀ ಗುರುನಾಥರಿಂದ ರಾಯಪ್ಪನ ಮನೆಯವರ ರಕ್ಷಣೆ




ಹಳೇಹುಬ್ಬಳ್ಳಿ, ಹಿರೇಪೇಟೆಯ ರಾಯಪ್ಪ ಡಂಬಳ ಎಂಬ ಸಜ್ಜನರು  ಶ್ರೀಸಿದ್ದಾರೂಢಮಠದ ಭಕ್ತರಲ್ಲಿ ಒಬ್ಬರು. ಶ್ರೀ ಗುರುನಾಥಾರೂಢ ಸ್ವಾಮಿಗಳನ್ನು ಆಗಾಗ ತಮ್ಮ ಮನೆಗೆ ಕರೆದು ಪಾದಪೂಜೆಗೈದು, ಅವರು ಪ್ರಸಾದ ಸ್ವೀಕರಿಸಿದಷ್ಟು ಉಣಿಸಿ, ಅವರ ಜೊತೆಗೆ ಬಂದ ಸಾಧುಗಳಿಗೆ ಉಣಿಸಿ, ಕಾಣಿಕೆ ಸಲ್ಲಿಸಿ ಶ್ರೀಗಳನ್ನು ಮಠಕ್ಕೆ ಕಳಿಸು  ಪುಣ್ಯಜೀವಿಗಳಾಗಿದ್ದರು.
ಒಂದು ದಿವಸ ಮನೆಯಲ್ಲಿ ವಿಶೇಷ ಪ್ರಸಾದ ಸಿದ್ಧಗೊಳಿಸಿ, ಮಠಕ್ಕೆ ಹೋಗಿ ಶ್ರೀಗುರುನಾಥ ಸ್ವಾಮಿಗಳನ್ನು ಟಾಂಗಾದಲ್ಲಿ ಕರೆದುಕೊಂಡು ಬಂದು ಮನೆಯಲ್ಲಿ ಉಚಿತಾಸನದಲ್ಲಿ ಸ್ವಾಮಿಗಳನ್ನು ಕುಳ್ಳಿರಿಸಿ, ಪಾದಪೂಜೆ, ಭಜನೆ, ಕೀರ್ತನೆ, ಮಂಗಳಾರತಿ ಮಾಡಿದರು. ಆ ಸಮಯದಲ್ಲಿ ಸ್ವಾಮಿಗಳು ಸುಮ್ಮನೆ ನಸುನಗುತ್ತ ಮೇಲೇಳುವುದು ಕೂಡುವದು ಮಾಡುತ್ತಿದ್ದರು. ಒಂದು ಸಲ ದಿಗ್ಗನೆ ಎದ್ದು ಮನೆಯ ಮೇಲಿನ ಜಂತಿಯನ್ನು ನೋಡುವುದು, ಮತ್ತೊಂದು ಸಲ ನೆಲ ನೋಡುವುದು, ಹೀಗೆ ಎಷ್ಟೋ ಸಲ ಮಾಡಿದರು. ಸ್ವಾಮಿಗಳನ್ನು ಹಿಂದೆ ಎಷ್ಟೋ ಸಲ ಕರೆಸಿ ಪೂಜೆ ಮಾಡಿದಾಗ ಕುಲುಕುಲು ನಗುತ್ತಿದ್ದ ಗುರುಗಳು ಇಂದಿನ ಪೂಜೆಯಲ್ಲಿ ಹೀಗೇಕೆ ಮಾಡುತ್ತಿದ್ದಾರೆ ಎಂಬುದು ಮನೆಯ ಯಜಮಾನ ಶಿವರಾಯಪ್ಪನಿಗೆ ತಿಳಿಯದಾಗಿ ಬಹಳ ಚಿಂತೆಗೊಳಗಾದರು. ಕೈತುತ್ತು ಮಾಡಿ ಪ್ರಸಾದ ಉಣಿಸಿದರೆ, ಬಾಯಿಯಿಂದ ಫುರ್ ಎಂದು ಉಗುಳಿದವರೇ ಹೊರಗೆ ಹೋಗಿ, ಟಾಂಗಾ ಹತ್ತಿ ಮಠಕ್ಕೆ ಹೋದರು.
ಇತ್ತ ಮನೆಯವರು ಚಿಂತೆಗೊಳಗಾಗಿ, ಗುರುಗಳು ಮಾಡಿದ ಆ ನಡುವಳಿಕೆಗಳಿಂದ ಈ ಮನೆಗೆ ಯಾವುದೋ ಒಂದು ಧಕ್ಕೆ ಸಂಭವಿಸಬಹುದೆಂದು ಸಂಶಯಪಟ್ಟು ಮಲಗಿದರು, ರಾತ್ರಿ ಕನಸಲ್ಲಿ ಆ ಮನೆ ಬಿದಂತೆ ಆಯಿತು, ಆ ಮನೆಯನ್ನು ಮರು ದಿವಸವೆ ಖಾಲಿ ಮಾಡಿ ಬೇರೆ ಮನೆಯಲ್ಲಿರ ತೊಡಗಿದರು. ಯಾವ ದಿವಸ ಮನೆಯನ್ನು ಬಿಟ್ಟರೋ ಅದರ ಮರುದಿನ ಆ ಮನೆಯ ತೊಲೆ ಜಂತಿಗಳು ಚಟಚಟನೆ ಮುರಿದು ಮನೆ ಬಿದ್ದುಹೋಯಿತು. ಆ ಮನೆಯನ್ನು ಖಾಲಿ ಮಾಡದಿದ್ದರೆ ಮನೆಯವರ ಪ್ರಾಣ ಉಳಿಯುತ್ತಿರಲಿಲ್ಲ ಎಂದು ಶ್ರೀಗುರುನಾಥರನ್ನು ಕೊಂಡಾಡಿದರು.

 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರುನಾಥರೂಢರಿಂದ ಬಸವಲಿಂಗಪ್ಪ ಉದ್ದಾರನಾದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ