ಬಾಳೆಕುಂದ್ರಿ ಮಹಾರಾಜರು ಸಿದ್ಧರ ಸತ್ಸಂಗಕ್ಕೆ ಬಂದರು
🌺 ಬಾಳೆಕುಂದ್ರಿ ಮಹಾರಾಜರು ಸಿದ್ಧರ ಸತ್ಸಂಗಕ್ಕೆ ಬಂದರು 🌺
ಶ್ರೀ ಬಾಲಾವಧೂತರ ಶಿಷ್ಯರಾದ ಪಂತ ಮಹಾರಾಜ ಬಾಳೇಕುಂದ್ರಿಯವರು ಹುಬ್ಬಳ್ಳಿಯ ಶ್ರೀ ಸಿದ್ದಾರೂಢರ ಸತ್ಸಂಗದಲ್ಲಿ ಕಾಲ ಕಳೆಯಬೇಕೆಂಬ ತೀವ್ರ ಇಚ್ಛೆಯಿಂದ ಬೇಸಿಗೆಯ ಬಿಡುವಿನ ಕಾಲದಲ್ಲಿ ತಮ್ಮ ಭಕ್ತರಾದ ಕಾಕಾ ಘಾಣೇಕರ, ರಾವಜಿ ದಡ್ಡಿ, ವೆಂಕೋಬಾ ಗೊಂಬಿ, ಅಮೃತರಾವ ಕುಲಕರ್ಣಿ ಮುಂತಾದವರನ್ನು ಕರೆದುಕೊಂಡು ಆಶ್ರಮಕ್ಕೆ ಒಂದು ಸಿದ್ಧಾರೂಢರನ್ನು ಬಹಳ ಅದರದಿಂದ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿದರು. ಸ್ವಾಮಿಯವರು ಪಂತರ ಯೋಗ್ಯತೆಯನ್ನು ಕಂಡು ಆಲಿಂಗಿಸಿದರು. ಪಂತರಿಗೆ ಚಿಕ್ಕ ವಯಸ್ಸಿನಲ್ಲಿ ಉಚ್ಚಕೋಟಿಯ ಆಧ್ಯಾತ್ಮಾನುಭವವಾದುದನ್ನು ಕಂಡು ಆರೂಢರಿಗೆ ಕೌತುಕವೆನಿಸಿತು. ಸ್ವಾಮಿಗಳ ಆಗ್ರಹದಿಂದ ಪಂತರು ಹದಿನೈದು ಇಪ್ಪತ್ತು ದಿವಸ ಮಠದಲ್ಲಿದ್ದು, ಭಜನೆ, ಪೂಜೆ ಮತ್ತು ಅಧ್ಯಾತ್ಮ ವಿಚಾರಗಳ ಬಗ್ಗೆ ಸಂಭಾಷಣೆ ನಡೆಸುತ್ತಿದ್ದರು. ಈ ರೀತಿಯಾಗಿ ಪರಸ್ಪರ ಪ್ರೇಮ ಸನ್ನಿಧಿಯಲ್ಲಿ ಕಾಲ ಕಳೆದು ಸಿದ್ಧರ ಅನುಮತಿ ಪಡೆದು ಸ್ವಸ್ಥಾನಕ್ಕೆ ನಡೆದರು.
ಆಮೇಲೆ ತನ್ನ ಭಕ್ತ ಕಲ್ಯಾಣನಿಗೆ ಪತ್ರ ಬರೆದರು. ಅದರಲ್ಲಿ ಬೇಸಿಗೆಯ ಬಿಡುವಿನಲ್ಲಿ ಹುಬ್ಬಳ್ಳಿಯ ಸಿದ್ದಾರೂಢರ ದರ್ಶನಕ್ಕಾಗಿ ಅವರ ಮಠಕ್ಕೆ ಹೋಗಿ ಹದಿನೈದು ಇಪ್ಪತ್ತು ದಿವಸ ಇದ್ದೆನು. ಅಲ್ಲಿ ಬಾಲ ಮುಕುಂದರ ಅಖಂಡ ನಿರ್ವಿಕಲ್ಪ ವೃತ್ತಿಯು ಮತ್ತು ಕಲ್ಲಪ್ಪನವರ ಖಂಡಿತ ವಾಕ್ಯಗಳು ಸರಿಯಾಗಿ ದೃಷ್ಟಿಗೆ ಬಿದ್ದವು. ಸಂಪೂರ್ಣ ಸಮರಸಭಾವವಾಯಿತು. ಸಂಶಯಗಳು ನಿವಾರಣೆಯಾಗಿ ಮೋಹ ದೂರಾಯಿತು. ಸಮಾಧಿಗೆ ಸ್ಥಿರರೂಪ ಬಂದಿತು' ಎಂದು ಬರೆದಿದ್ದಾರೆ.
ಮತ್ತೊಂದು ಸಲ ಗೋವಿಂದರಾವ, ಅಪ್ಪಾಸಾಹೇಬ ಸೂಳೆಬಾವಿ, ಬಳವಂತರಾವ, ಕಾಕಾ ಮೊದಲಾದವರನ್ನು ಕರೆದುಕೊಂಡು ಶ್ರೀ ಸಿದ್ಧಾರೂಢರ ಭೇಟಿಗೆ ಹೋದರು. ಪಂತರು ಬರುವ ವಿಚಾರ ತಿಳಿದು ಸಿದ್ದರು ಅವರನ್ನು ಎದುರುಗೊಂಡರು. ಅವರಿಗಾಗಿ ಎಲ್ಲ ವ್ಯವಸ್ಥೆ ಮಾಡಿದರು. ತಾವು ಕುಳಿತುಕೊಳ್ಳುವ ಸ್ಥಳದ ಸಮೀಪ ವ್ಯವಸ್ಥೆ ಮಾಡಿದರು. ಆಗಾಗ ಅಧ್ಯಾತ್ಮಿಕ ಸಂಭಾಷಣೆ ನಡೆಯುತ್ತಿತ್ತು. ಸ್ವಾಮಿಗಳ ಪುರಾಣದ ಕಾರ್ಯಕ್ರಮವಿದ್ದಾಗ ಪಂತರು, ಭಕ್ತರು ಬಾವಿಯ ನೀರು ಸೇದಿ ತೋಟಕ್ಕೆ ಹಾಕುತ್ತಿದ್ದರು. ತಮ್ಮ ಕಾರ್ಯಕ್ರಮ ಮುಗಿದ ನಂತರ ಸ್ವಾಮಿಗಳು ತೋಟಕ್ಕೆ ಹೋದಾಗ ಅಲ್ಲಿ ಬಯಲಿನಲ್ಲಿ ಪಂತರು ಮತ್ತು ಭಕ್ತರು ಭಜನೆ ಮಾಡುತ್ತ ಕೋಲಾಟ ಆಡುತ್ತಿದ್ದರು ಹೀಗೆ ಐದಾರು ದಿವಸವಿದ್ದು ಸಿದ್ಧರ ಅಪ್ಪಣೆ ಪಡೆದು ಸ್ವಸ್ಥಾನಕ್ಕೆ ನಡೆದರು. ಪಂತರು ಬರೆದ ಓಂ ನಮಃ ಶಿವಾಯ ತರಣೋಪಾಯ ಸುಲಭೂಪಾಯ ತಾರಕ ಮಂತ್ರ ಗುರುಚಾ ಈ ಮರಾಠಿ ಗೀತವನ್ನು ಇಂದಿಗೂ ಆರೂಢರ ಮಠದಲ್ಲಿ ಹಾಡುತ್ತಾರೆ ಕೇಳಬಹುದು,
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
