ಪಂಕ್ತಿಯಲ್ಲಿ ಪರಪಂಗ್ತಿ ಮಾಡಬಾರದು
🌺 ಪಂಕ್ತಿಯಲ್ಲಿ ಪರಪಂಗ್ತಿ ಮಾಡಬಾರದು 🌺
ಹತ್ತೊಂಭತ್ತುನೂರಾ ಇಪ್ಪತ್ತೊಂಭತ್ತನೆಯ ಇಸ್ವಿಯಲ್ಲಿ ನಡೆದ ಘಟನೆ. ಮುಂಬೈಯಲ್ಲಿರುವ ಭಕ್ತರೋರ್ವರು ಕುಟುಂಬ ಸಹಿತ ಹುಬ್ಬಳ್ಳಿಗೆ ಬಂದು ಸಿದ್ದರ ದರ್ಶನ ತೆಗೆದುಕೊಂಡರು. ಮಠದಲ್ಲಿ ಸಾಧು ಸಂತರು ಅತಿಥಿ ಅಭ್ಯಾಗತರು ನಿತ್ಯ ಬಹಳ ಸಂಖ್ಯೆಯಲ್ಲಿರುತ್ತಿದ್ದರು. ಬಡಬಗ್ಗರು ಅಥವಾ ಯಾವುದೇ ಭಕ್ತರು ಬಂದರೆ ಅನ್ನಪ್ರಸಾದಕ್ಕೆ ಕೊರತೆಯೇನಿರಲಿಲ್ಲ. ಸರ್ವರಿಗೂ ಸಮಾನ ದೃಷ್ಟಿಯಿಂದ ನೀಡುತ್ತಿದ್ದರು. ಆ ಮುಂಬೈಯಿಂದ ಬಂದ ಭಕ್ತರು ಸಿದ್ದರಲ್ಲಿಗೆ ಹೋಗಿ ವಿನಂತಿಸಿಕೊಂಡರು `ಸದ್ಗುರೂಜೀ, ನಾನು ಇಲ್ಲಿಯ ಸಾಧು ಸಂತರು ಇತರರಿಗೆ ಅನ್ನಸಂತರ್ಪಣೆ ಮಾಡಲು ಬಯಸಿದ್ದೇನೆ. ತಾವು ದಯಮಾಡಿ ಅಪ್ಪಣೆ ಕೊಡಬೇಕು' ಎಂದು ವಿನಮ್ರವಾಗಿ ಬೇಡಿಕೊಂಡನು. ಆಗ ಗುರುಗಳ ಅಪ್ಪಣೆಯೂ ದೊರೆಯಿತು.
ಮರುದಿನ ಅಡುಗೆ ಸಿದ್ಧವಾದ ಮೇಲೆ ಸಿದ್ದರನ್ನು ಅವರ ನಿಕಟವರ್ತಿ ಹನ್ನೆರಡು ಜನ ಶಿಷ್ಯರನ್ನೂ ಕರೆದು ಪೂಜಿಸಿ ಅವರಿಗಾಗಿಯೇ ವಿಶೇಷವಾಗಿ ಮಾಡಿದ ಮೃಷ್ಟಾನ್ನ ನೀಡಿದ ತಾಟುಗಳನ್ನು ತಂದು ಅವರ ಮುಂದೆ ಇಟ್ಟು ಇತರ ಜನರು ಬೇರೆಡೆಗೆ ಒಂದು ತಟ್ಟಿನ ಹಾಸಿಗೆಯ ಮೇಲೆ ಕುಳಿತುಕೊಂಡಾಗ ಅವರಿಗೆ ಕೇವಲ ಅನ್ನ ಸಾರು ನೀಡಿದರು. ಆಗ ಸಿದ್ದಾರೂಢರು ಎಲ್ಲ ಕಡೆಗೆ ತಮ್ಮ ದೃಷ್ಟಿ ಬೀರಿ ನೋಡಿದಾಗ ಪಂಕ್ತಿಯಲ್ಲಿ ಪರಪಂಗ್ತಿಯನ್ನು ಕಂಡು ಅವರ ಮುಖದಲ್ಲಿ ಮೃಷ್ಟಾನ್ನ ಇಳಿದೀತೆ? ಇಲ್ಲ. ಈ ಕೃತ್ಯ ಅವರಿಗೆ ಸಹನೆಯಾಗಲಿಲ್ಲ. ತಕ್ಷಣ ಅವರು `ಎದ್ದೇಳಿರಿ' ಎಂದು ಒಂದೇ ಶಬ್ದವನ್ನು ನುಡಿದು ಎದ್ದು ನಿಂತಾಗ ಅವರ ಜೊತೆಗಿದ್ದ ಎಲ್ಲರೂ ಎದ್ದು ನಿಂತರು. ಇದನ್ನು ನೋಡಿದ ಆ ಭಕ್ತನು ಖಿನ್ನ ಮನಸ್ಕನಾಗಿ ತನ್ನ ತಪ್ಪನ್ನು ತಿಳಿದು ಅಳುತ್ತ ಸಿದ್ಧರ ಪಾದಗಳನ್ನು ಹಿಡಿದು ಕ್ಷಮೆಯಾಚಿಸಿದ.
ಆಗ ಸಿದ್ಧರು ಅವನನ್ನು ಕ್ಷಮಿಸಿ ಅಭಯ ವಚನ ಹೇಳುತ್ತ `ಭಕ್ತನೇ ಕೇಳು, ಹೀಗೆ ಪಂಗ್ತಿಯಲ್ಲಿ ಪರಪಂಗ್ತಿ ಮಾಡಬಾರದು. ಏಕೆಂದರೆ ಸರ್ವರ ಅಂತಃಕ್ಕರಣದಲ್ಲಿ ಒಬ್ಬನೇ ಒಬ್ಬ ಪರಮಾತ್ಮನಿದ್ದಾನೆ. ಅವನು ಸಂತುಷ್ಟನಾಗುವಂತೆ ವರ್ತಿಸಬೇಕು' ಎಂದು ಬುದ್ದಿ ಹೇಳಿದ ನಂತರ ಎಲ್ಲರೂ ಒಂದೇ ಪಂಗ್ತಿಯಲ್ಲಿ ಕುಳಿತು ಒಂದೇ ತರಹದ ಪ್ರಸಾದವನ್ನುಂಡು ತೃಪ್ತಿಗೊಂಡು ಹೋದರು. ಹೀಗೆ ಸಿದ್ಧರು ತನ್ನ ಭಕ್ತರ ಪ್ರತಿಯೊಂದು ತಪ್ಪುಗಳನ್ನು ತಿದ್ದುತ್ತಿದ್ದರು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
