ಶ್ರೀ ಗುರುನಾಥರ ಸನ್ನಿಧಿಯಲ್ಲಿ ವೇದಾಂತ ಪರಿಷತ್ತು
ದಿನಾಂಕ 9-5-1957 ರಿಂದ ದಿನಾಂಕ 15-5-1957ರವರೆಗೆ ಶ್ರೀ ಸಿದ್ಧಾರೂಢ ಮಠದಲ್ಲಿ ವೇದಾಂತ ಪರಿಷತ್ತು ನಡೆದಿತ್ತು ಈ ಸಮಾರಂಭದಲ್ಲಿ ಅದ್ವೈತ ಸಂಪ್ರದಾಯದ ಮತ್ತು ಸಿದ್ಧಾರೂಢ ಸಂಪ್ರದಾಯದ ಅನೇಕ ಸಾಧುಗಳು ಮಹಾ ಮಹನೀಯರು ಭಾಗವಹಿಸಿದ್ದರು. ಆಗಿನ ಕರ್ನಾಟಕದಲ್ಲಿಯೇ ಇದು ದೊಡ್ಡ ಪ್ರಮಾಣದ ವೇದಾಂತ ಪರಿಷತ್ತಾಗಿತ್ತು. ಮೌನ ಮುನಿ ಶ್ರೀಗುರುನಾಥಾರೂಢರ ಸನ್ನಿಧಿಯಲ್ಲಿ ಹೃಷಿಕೇಶದ ಮಹಾಮಂಡಲೇಶ್ವರ ಶ್ರೀಗುರು ಮಹೇಶ್ವರಾನಂದರ ಅಧ್ಯಕ್ಷತೆಯಲ್ಲಿ ಜರುಗಿತು. ಮೊದಲನೆಯ ದಿನ ಮಹಾ ಮಂಡಲೇಶ್ವರರು ಮಠಕ್ಕೆ ಬಂದು ಮೊದಲು ಶ್ರೀಗುರುನಾಥರನ್ನು ಸಂದರ್ಶಿಸಿದರು. ಅವರ ಅಲೌಕಿಕ
ಸ್ಥಿತಿಯನ್ನು ಕಂಡು ವಿಸ್ಮಯಗೊಂಡರು. ಅವರು ಪಡೆದಿರುವ ಈ ಸ್ಥಿತಿಯನ್ನು ಕಂಡು ಅವರ ಅಂತರಂಗವನ್ನು ವೀಕ್ಷಿಸಿದಾಗ ಅವರ್ಣನೀಯ ಪರಿಣಾಮವಾಯಿತು. ಶ್ರೀಗುರುನಾಥಾರೂಢರ ತೋರ್ಯಾ ಶೀತ ಬ್ರಾಹೀ ಸ್ಥಿತಿಗೆ ಅವರ ಮನವು ಮಣಿಯಿತು.
ವೇದಾಂತ ಪರಿಷತ್ತು ಪ್ರಾರಂಭವಾಗುವ ದಿನ ವಿಶೇಷವಾಗಿ ನಿರ್ಮಾಣ ಮಾಡಿದ ಸುಂದರ ಅಲಂಕೃತ ಬೃಹತ್ ಸಭಾ ಮಂಟಪದಲ್ಲಿ ಸಭಾಧ್ಯಕ್ಷರಾದ ಮಹಾಮಂಡಳೇಶ್ವರ ಸ್ವಾಮಿಯವರ ಸ್ಥಾನಮಾನಗಳಿಗೆ ಚ್ಯುತಿಯಾದೀತೆಂದು ಶ್ರೀಗುರುನಾಥ ಸ್ವಾಮಿಯವರಿಗೆ ಪ್ರತ್ಯೇಕ ಪೀಠ ಹಾಕಿದ್ದರು. ಇದನ್ನು ನೋಡಿದ ಮಹಾಮಂಡಲೇಶ್ವರರು, ಶ್ರೀಗುರುನಾಥಾರೂಢರಿಗೆ ಹಾಕಿದ ಪ್ರತ್ಯೇಕ ಪೀಠ ತೆಗೆಯಿಸಿ ಒಂದೇ ವೇದಿಕೆಯ ಮೇಲೆ ಇಬ್ಬರೂ ಆಸೀನರಾಗುವಂತೆ ವ್ಯವಸ್ಥೆ ಮಾಡಿಸಿದರು. ಏಳು ದಿವಸಗಳವರೆಗೆ ಮುಂಜಾನೆ ಮತ್ತು ಸಾಯಂಕಾಲ ನಡೆದ ಸಭೆಯಲ್ಲಿ ಅನೇಕ ಮಹಾತ್ಮರು ಪ್ರವಚನ ನೀಡಿದರು. ಮೊದಲ ದಿನ ಮಹಾಮಂಡಲೇಶ್ವರರು ಅಧ್ಯಕ್ಷೀಯ ಭಾಷಣ ಮಾಡುತ್ತ ಶ್ರುತಿ, ಸ್ಮೃತಿ, ಶಾಸ್ತ್ರಗಳಲ್ಲಿ ಬರೆದಿಟ್ಟಿರುವುದನ್ನು ಶ್ರೀ ಗುರುನಾಥಾರೂಢರು ಶ್ರೀ ಸಿದ್ಧಾರೂಢರ ಕೃಪೆಯಿಂದ ಆಧ್ಯಾತ್ಮದ ಕೊನೆಯ ಮಜಲಾದ ತೂರ್ಯಾತೀತ ಸ್ಥಿತಿಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಪರಾತ್ಪರ ತತ್ವವನ್ನು ಅನುಷ್ಠಾನದಲ್ಲಿ ತಂದಿರುವುದಲ್ಲದೆ, ಕಳೆದ ಇಪ್ಪತ್ತೆಂಟು ವರ್ಷಗಳ ಸುಧೀರ್ಘ ಅವಧಿಯವರೆಗೆ ಈ ದಿವ್ಯ ಸ್ಥಿತಿ ಅವರಿಗೆ ಪ್ರಾಪ್ತವಾಗಿದೆ. ತಮ್ಮ ಸ್ವರೂಪದಲ್ಲಿಯ ಕಾಯಾ, ವಾಚಾ, ಮನಸಾ ಶಬ್ದಾತೀತ ಬ್ರಹ್ಮರಾಗಿದ್ದಾರೆ. ಹೀಗೆ ಪರಿಪೂರ್ಣ ಸ್ವರೂಪರಾದ ಶ್ರೀಗುರು ಸಿದ್ದಾರೂಢರಿದ್ದ ಈ ಮಠವು ಸುಕ್ಷೇತ್ರವಾಗಿದೆ. ಭಕ್ತಿಜ್ಞಾನ ವೈರಾಗ್ಯಗಳ ತ್ರಿವೇಣಿ
ಸಂಗಮವಾಗಿದೆ. ಈ ಸಂಗಮ ಕ್ಷೇತ್ರದಲ್ಲಿ ಮಿಂದವರು ಧನ್ಯರಾಗುತ್ತಾರೆ ಎಂದು ಸಮಾರೋಪ ಭಾಷಣ ಮುಗಿಸಿದರು. ಶ್ರೀ ಗುರುನಾಥ ಸ್ವಾಮಿಗಳು, ಶರಣಾಗತರಾದವರನ್ನು ತಮ್ಮ ದೃಷ್ಟಿಯಿಂದಲೇ ಉದ್ದರಿಸಿದರು, ಅವರ ಕಷ್ಟಗಳನ್ನು ದೂರ ಮಾಡಿದರು. ಯಾವುದಾದರೂ ಅನಾಹುತ ಸಂಭವಿಸುತ್ತಿದ್ದರೆ, ಅವರ ವಿಚಿತ್ರ ವರ್ತನೆಯಿಂದ ಅವರ ನಿಕಟವರ್ತಿಗಳಿಂದ ತಿಳಿಯುತ್ತಿತ್ತು. ಅಂಥ ಘಟನೆಗಳು ಅವರ ಸನ್ನಿಧಿಯಲ್ಲಿ ಜರುಗಿವೆ.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥರ ಕೃಪಾದೃಷ್ಟಿಯಿಂದ ಶಿವಮೂರ್ತೆಯ್ಯ ಮಠದಧಿಕಾರಿಯಾದನು
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಗುರುನಾಥರ ಕೃಪಾದೃಷ್ಟಿಯಿಂದ ಶಿವಮೂರ್ತೆಯ್ಯ ಮಠದಧಿಕಾರಿಯಾದನು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
