ಗುರುನಾಥರ ಕೃಪಾದೃಷ್ಟಿಯಿಂದ ಶಿವಮೂರ್ತೆಯ್ಯ ಮಠದಧಿಕಾರಿಯಾದನು




ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದ ಅಡಿವೆಯ್ಯ ಹಿರೇಮಠ ಹಾಗೂ ಸಾದ್ವಿ  ನಾಗಮ್ಮ ದಂಪತಿಗಳಿಗೆ ಮೂರನೆಯ ಮಗನಾದ ಶಿವಮೂರ್ತೆಯ್ಯನ ಜನವು ತಾಯಿಯ ತವರು ಮನೆ ಅದರಗುಂಚಿಯಲ್ಲಾಯಿತು. ಮಗುವು ಅಲ್ಲಿಯೇ ಆರು ವರುಷದವನಾದನು  ಅಲ್ಲಿಯ ಬಸವಣ್ಣಮ್ಮ ಬಾಳೀಕಾಯಿಯೆಂಬವಳು ಪ್ರತಿವರ್ಷ ಯುಗಾದಿಗೆ ಶಿವನಾಮ ಸಪ್ತಾಹ ಮಾಡುತ್ತಿದ್ದಳು. ಒಂದು ವರ್ಷ ಶ್ರೀಸಿದ್ಧಾರೂಢರನ್ನು ಗುರುಗಳೆಂದೇ ಭಾವಿಸಿದ ಅಣ್ಣಿಗೇರಿಯ ರುದ್ರಸ್ವಾಮಿಗಳನ್ನು ಮತ್ತು ಶ್ರೀಗುರುನಾಥರನ್ನು ಸಪ್ತಾಹಕ್ಕೆ ಕರೆಸಿದಾಗ, ಬಾಲಕ ಶಿವಮೂರ್ತಿಯು ಗುಂಡಾ ಆಡುತ್ತಿದ್ದನು. ಆಗ ಶ್ರೀ ಗುರುನಾಥರು ಬಾಲಕನ ಕಡೆಗೆ ತಮ್ಮ ಕಡೆಗಣ್ಣುಗಳಿಂದ ನೋಡಿದರು. ಗುರುನಾಥರ ಕಣ್ಣುಗಳಿಂದ ಬಂದ ಒಂದು ಅವರ್ಣನೀಯ ತೇಜೋರಾಶಿ ಬೆಳಕು  ಶಿವಮೂರ್ತೆಯ್ಯನ ಕಣ್ಣುಗಳಲ್ಲಿ ಪ್ರವೇಶಿಸಿದಾಗ, ಆ ಬಾಲಕನಿಗೆ ಏನೂ ಕಾಣದೆ ಕೇವಲ ಪ್ರಕಾಶಮಯವಾಗಿ ನಿಂತನು. ಎಷ್ಟೋ ಹೊತ್ತಿನ ಬಳಿಕ  ಪುನಃ  ಆ ಬಾಲಕ ಮೊದಲಿನ ಸ್ಥಿತಿಗೆ ಬಂದನು. ಅಷ್ಟರಲ್ಲಿ ಶ್ರೀಗುರುನಾಥರು ಅಲ್ಲಿಂದ  ಹೋಗಿದ್ದರು.
ಮತ್ತೊಂದು ವರ್ಷ ರುದ್ರಮುನಿಸ್ವಾಮಿಗಳು ಅದರಗುಂಚಿ ಸಪ್ತಾಹಕ್ಕೆ ಬಂದಾಗ ಅವರ ಶಿಷ್ಯ ಅಡಿವೆಯ್ಯನವರೂ ಬಂದಿದ್ದರು. ಆಗ ರುದ್ರಮುನಿಗಳು ಅವರನ್ನು ಕುರಿತು ಅಡಿವೆಯ್ಯ ನಿನ್ನ ಮೂರನೆಯ ಮಗ ಶಿವಮೂರ್ತಿಯನ್ನು ನನಗೆ ಕೊಡು ಎಂದಾಗ, ಅಡಿವೆಯ್ಯ ಸಂತೋಷದಿಂದ ಒಪ್ಪಿಕೊಂಡರು ನಂತರ ಬಾಲಕನನ್ನು ತಂದು ಸ್ವಾಮಿಗಳ ಪಾದದಲ್ಲಿ ಹಾಕಿದಾಗ ಸ್ವಾಮಿಗಳು ಅವನನ್ನು ಎಬ್ಬಿಸಿ, ಅವನ ಮುಖದಲ್ಲಿ ಕಲ್ಲುಸಕ್ಕರೆ ಹಾಕಿ ಆಶೀರ್ವದಿಸಿದರು. ಆಗ ಮಗುವು ಗುರುಗಳನ್ನು ಬಿಟ್ಟು ಕದಲಲಿಲ್ಲ. ಮುಂದೆ ಮಗುವಿಗೆ ಕರೆದುಕೊಂಡು ಹೋಗಿ ಸಿದ್ದರ ಗದ್ದುಗೆಗೆ ಮತ್ತು ಶ್ರೀ ಗುರುನಾಥರಿಗೆ ದರ್ಶನ ಮಾಡಿಸಿದಾಗ ಶ್ರೀಗುರುನಾಥರು ಎರಡೂ ಕೈಗಳನ್ನೆತ್ತಿ ನಸುನಗುತ್ತ ಹರುಷದಿಂದ, ಮಠಕ್ಕೆ ಯೋಗ್ಯ ಅಧಿಕಾರಿಯೆಂದು ಮೌನ ಸಮ್ಮತಿ ನೀಡಿದರು. ಆಮೇಲೆ ಶ್ರೀ ರುದ್ರಮುನಿಗಳು ಮಗುವನ್ನು ತಮ್ಮ ಅಣ್ಣಿಗೆರಿಯ ದಾಸೋಹ ಮಠಕ್ಕೆ ಕರೆ ತಂದು, ಅವರಿಗೆ ಮಂತ್ರೋಪದೇಶ ಮಾಡಿ ಶಂಕರೇಂದ್ರ ಸ್ವಾಮಿಗಳೆಂದು ನಾಮಕರಣ ಮಾಡಿ, ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿದರು. ರುದ್ರಮುನಿ ಮಹಾಸ್ವಾಮಿಗಳು ಮಹಾಸಮಾಧಿ ಹೊಂದಿದ ನಂತರ ಶ್ರೀಶಂಕರೇಂದ್ರ ಸ್ವಾಮಿಗಳು ತಮ್ಮ ಗುರುಪರಂಪರೆಯನ್ನು ತಪ್ಪದೇ ತಮ್ಮ ದಾಸೋಹಮಠದಲ್ಲಿ ನಡೆಸುತ್ತಿರುವದನ್ನು
 ನೋಡಬಹುದು. (ಗುರುನಾಥರೂಢರು ಮಾತು ಆಡದೆ ಹೋದರು ದೃಷ್ಟಿ ಶಕ್ತಿಯಿಂದ ನೋಡಿ ಆಶೀರ್ವಾದ ಮಾಡುತ್ತ ಇದ್ದರು )

 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರುನಾಥರೂಢರನ್ನು ನಿಂದಿಸಿದ ಪಂಡಿತ ವಂದಿಸಿಹೋದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ