ಗುರುನಾಥರೂಢರನ್ನು ನಿಂದಿಸಿದ ಪಂಡಿತ ವಂದಿಸಿಹೋದ




ಕೆಲವು ಯಾತ್ರಿಕರು ಗೋಕರ್ಣದಿಂದ ಹುಬ್ಬಳ್ಳಿಗೆ ಬಂದು, ಶ್ರೀ ಸಿದ್ಧಾರೂಢರ ಮಠದಲ್ಲಿ ಒಂದು ದಿವಸ ಉಳಿದು, ಮುಂದೆ ಯಾತ್ರೆಯನ್ನು ಮುಂದುವರಿಸುವವರಿದ್ದರು. ಆ ಸಮಯದಲ್ಲಿ ಕೈಲಾಸ ಮಂಟಪದಲ್ಲಿ ಶ್ರೀ ಗುರುನಾಥಾರೂಢರನ್ನು ಕರೆತಂದು ಕೂಡಿಸಿ, ಕುಣಿದಾಡುತ್ತ ಭಜನೆ ಮಾಡುತ್ತಿದ್ದರು. ಆಗ ಭಕ್ತಸಮೂಹ ಬಹಳ ನೆರೆದಿತ್ತು, ಭಜನೆ ಮುಗಿದ ನಂತರ ಅವರೊಳಗಿದ್ದ ಭಕ್ತನು ಎದ್ದುನಿಂತು, ಶ್ರೀಗುರುನಾಥಾರೂಢರಿಗೆ ನಾಲ್ಕು ಹಿತವಚನಗಳನ್ನು ಹೇಳಲು ವಿನಂತಿಸಿಕೊಂಡನು. ಆಗ ಗುರುಗಳ ಹತ್ತಿರವಿದ್ದ ಸೇವಕ ಸಾಧು ಹೇಳಿದ ಶ್ರೀಗುರುನಾಥಾರೂಢರು ಮೌನದಿಂದಿರುತ್ತಾರೆ. ಯಾವಾಗಲೂ  ಮಾತನಾಡುವುದಿಲ್ಲ ಎಂದಾಗ ಆ ಭಕ್ತರಲ್ಲಿದ್ದ ಓರ್ವ ಪಂಡಿತನು ಎಲ್ಲರನ್ನು ಕುರಿತು ಹೀಗೆ
ಹೇಳಿದ.
ಭಕ್ತರೇ ಕೇಳಿರಿ, ಇಂಥ ದೊಡ್ಡಮಠದಲ್ಲಿ ಈ ಸ್ವಾಮಿಗಳು ಮೌನದಿಂದಿದ್ದರೆ ಉಪಯೋಗವಿಲ್ಲ. ಅನೇಕ ಭಕ್ತರು ಬರುತ್ತಾರೆ. ಅವರ ಜೊತೆ ಒಂದಾಗಿ ಪ್ರೀತಿಯಿಂದ  ಮಾತಾಡಿಸಬೇಕು, ಅವರಿಗಾಗಿರುವ ದುಃಖ ದುಮ್ಮಾನಗಳನ್ನು ಕೇಳಬೇಕು. ತತ್ವ ಜ್ಞಾನಕ್ಕೆ  ಸಂಬಂಧಪಟ್ಟ ವಿಷಯಗಳನ್ನು ಪ್ರವಚನ ಮುಖಾಂತರ ತಿಳಿಸಿ, ಅವರನ್ನು ಧನ್ಯರನ್ನಾಗಿ  ಮಾಡಬೇಕು. ಇಷ್ಟು ದೊಡ್ಡದಾದ ಮಠದ ಆಗುಹೋಗುಗಳನ್ನು ನೋಡಿಕೊಳ್ಳಬೇಕು. ಹೀಗಿದ್ದೂ  ಈ ಸ್ವಾಮಿಗಳು ಮೌನಧರಿಸಿರುವುದು, ಇಷ್ಟು ಪ್ರಖ್ಯಾತ ಮಠದ ದುರ್ದೈವ. ಹಾಗೆ ಹೀಗೆ  ಏನೇನೋ ಮಾತಾಡುತ್ತಲೇ ಇದ್ದನು.
ಸ್ವಾಮಿಗಳು ಇದೆಲ್ಲವನ್ನು ಕೇಳುತ್ತ ನಸುನಗುತ್ತಿದ್ದರು. ಸುಮ್ಮನೇ ಕುಳಿತಿದ್ದರು. ಆ ಹೀಗೆಯೇ ಮಾತುಗಳನ್ನು ಮುಂದುವರಿಸುತ್ತಿರುವಾಗ ಅವನ ಕಂಠದಲ್ಲಿ ಏನೋ ಒಂದು ತೊಂದರೆಯಾಗಿ ಕೆಮ್ಮ  ಹತ್ತಿದನು. ಧ್ವನಿಯಲ್ಲಿ ಹೆಚ್ಚು ಕಡಿಮೆಯಾಗುತ್ತ ಕಂಠಕುಗ್ಗಿ ಸೀರಾಯಿತು ಮಾತು ಉಡುಗಿ ನಿಂತುಹೋಯಿತು. ಗಾಬರಿಯಿಂದ ಬೆವೆತುಹೋದನು. ಅದಕ್ಕೆ ಜೊತೆಗಿದ್ದವರು ಅವನನ್ನು ಕುರಿತು ಪಂಡಿತರೆ! ಏನಾಯಿತು? ಎಂದಾಗ ಅವನು ಕೈ ಸನ್ನೆಯಿಂದ ಗಂಟಲು ಹಿಡಿದುಕೊಂಡು ಮಾತನಾಡಲು ಬರುವುದಿಲ್ಲ ಎಂದು ಸೂಚಿಸಿದನು. ಅಷ್ಟರಲ್ಲಿ ಪಂಡಿತನಿಗೆ ತನ್ನ ತಪ್ಪಿನ ಅರಿವಾಗಿ, ಇವರು ಸಾಮಾನ್ಯರಲ್ಲ ನಾನು ಇವರನ್ನು ಕುರಿತು ಏನೇನೋ ತಪ್ಪು ಮಾತಾಡಿದೆ ಎಂದು ಮನಸ್ಸಿನಲ್ಲಿ ಪಶ್ಚಾತ್ತಾಪವಾಗಿ ಶ್ರೀಗುರುನಾಥರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಮನಸ್ಸಿನಲ್ಲಿ ಸದ್ಗುರುವೆ ನಾನು ನಿಮ್ಮನ್ನು ಪರಿಪರಿಯಿಂದ ಟೀಕಿಸಿ ಅಪರಾಧಗೈದಿರುವ. ನನ್ನನ್ನು ಕ್ಷಮಿಸಿ ಕಾಪಾಡು ತಂದೆ ಎಂದು ಕಣ್ಣೀರು ಸುರಿಸುತ್ತ ಎದ್ದುನಿಂತನು.
ಆಗ ಅವನಿಗೆ ಶ್ರೀಗಳು ಕರೆದು, ವಿಭೂತಿ ಹಚ್ಚಿ ಬಾಯಲ್ಲಿ ಅಂಗಾರ ಪಾದೋದಕ ಹಾಕಿದಾಗ ಸಾವಕಾಶವಾಗಿ ಮಾತನಾಡತೊಡಗಿದ. ಈ ಅದ್ಭುತ ಪವಾಡ ನೋಡಿದ ಎಲ್ಲ ಭಕ್ತರು, ಶ್ರೀಗಳ ಜಯಜಯಕಾರ ಮಾಡಿ, ಆ ದಿನ ರಾತ್ರಿ ಅಲ್ಲಿದ್ದ ಪ್ರಸಾದ ಸ್ವೀಕರಿಸಿ, ಮರುದಿನ ಸಿದ್ಧಾರೂಢರ ಗದ್ದುಗೆ ಹಾಗೂ ಶ್ರೀ ಗುರುನಾಥ ಸ್ವಾಮಿಗಳಿಗೆ ಅನನ್ಯ ಭಕ್ತಿಯಿಂದ ವಂದನೆಗಳನ್ನು ಸಲ್ಲಿಸಿ, ಮುಂದೆ ಪ್ರಯಾಣ ಬೆಳೆಸಿದರು.

 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಕೊಬ್ಬಿದ ಹೋರಿ ಗುರಪ್ಪನಿಗೆ ತಲೆಬಾಗಿಸಿತು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ