ಕೊಬ್ಬಿದ ಹೋರಿ ಗುರಪ್ಪನಿಗೆ ತಲೆಬಾಗಿಸಿತು




ಶ್ರೀಸಿದ್ದಾರೂಢರ ಮಠದ ಹಿಂದಿರುವ ಗೌಳಿಗರ ಗುಡಿಯ ಹಿಂದಿನಭಾಗ (ಈಗಿನ ಆನಂದನಗರ) ಆಗಿನ ಕಾಲದಲ್ಲಿ ಅಲ್ಲಲ್ಲಿ ಗಿಡಮರಗಳಿಂದ ಬೆಳೆದ ಕಾಡಾಗಿತ್ತು. ಒಂದು ದಿನ ಸಾಯಂಕಾಲ ಶ್ರೀಗುರುನಾಥರನ್ನು ವಾಯುವಿಹಾರ ಮತ್ತು ಮಲವಿಸರ್ಜನೆಗಾಗಿ ಇಬ್ಬರು ಸಾಧುಗಳು ಅವರನ್ನು ಕರೆದುಕೊಂಡು ಹೋದರು. ಸ್ವಾಮಿಗಳನ್ನು ಮಲವಿಸರ್ಜನೆಗಾಗಿ ಕೂಡಿಸಿ ಸಾಧುಗಳು ದೂರದಲ್ಲಿ ನಿಂತರು.
ಸ್ವಲ್ಪ ಹೊತ್ತಿನಲ್ಲಿ ಒಂದು ಕೊಬ್ಬಿದ ಹೋರಿ ಓಡುತ್ತ ಮುಸ್ ಮುಸ್ ಎಂದು ಶಬ್ದ ಮಾಡುತ್ತ ಗುರುನಾಥರ ಕಡೆಗೆ ಓಡಿ ಬರುತ್ತಿತ್ತು. ಅದನ್ನು ನೋಡಿದ ಸಾಧುಗಳು ಗಾಬರಿಗೊಂಡು ಏನು ಮಾಡಬೇಕೆಂಬುದೇ ತಿಳಿಯದೆ ಎಲ್ಲಿ ಗುರುನಾಥರೂಢರಿಗೆ ತೊಂದರೆ ಮಾಡುತ್ತೆ ಅಂತ ಚಿಂತೆಯಲ್ಲಿ ಭಯ ಪಟ್ಟು ನಿಂತರು. ಅಷ್ಟರಲ್ಲಿ ಓಡಿಬರುತ್ತಿದ್ದ ಹೋರಿ ಗುರುನಾಥರ ಸಮೀಪ ಬಂದು ಒಮ್ಮೆಲೆ ಗಕ್ಕನೆ ನಿಂತು, ಗುರುನಾಥರನ್ನು ಒಂದೇ ದೃಷ್ಟಿಯಿಂದ ನೋಡುತ್ತ ಕೆಲವು ಸಮಯ ಹಾಗೆ ನಿಂತಿತು ಆಗ ಗುರುನಾಥರು ಹೋರಿಯನ್ನು ನೋಡುತ್ತ ನಸುನಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಆ ಹೋರಿ ಮಂಡಿಯೂರಿ ತಲೆಬಾಗಿ ನಿಂತು, ಮರಳಿ ಓಡಿ ಹೋಯಿತು. ಈ ಆಶ್ಚರ್ಯಕರವಾದ ಘಟನೆಯನ್ನು ನೋಡಿದ ಸಾಧುಗಳು ನಿಟ್ಟುಸಿರು ಬಿಟ್ಟು, ಶ್ರೀಗುರುನಾಥರನ್ನು ಮರಳಿ ಮಠಕ್ಕೆ ಕರೆದುಕೊಂಡು ಬಂದರು.(ಗುರುನಾಥರೂಢರು ಹತ್ತಿರ ಬಂದ ಕ್ರೋದದ ಹೋರಿಯೆ ಅವರ ದೃಷ್ಟಿ ಶಕ್ತಿ ಮುಂದೆ ತೆಲೆಬಾಗಿತು )


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ರಾಶಿ ಜೇನು ಕಡಿದರು ಶಾಂತನಿದ್ದ ಗುರುನಾಥಾ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ