ಶ್ರೀಮಂತ ಸೂರಪ್ಪಗೆ ದೀಕ್ಷೆ
🌺 ಶ್ರೀಮಂತ ಸೂರಪ್ಪಗೆ ದೀಕ್ಷೆ 🌺
ಗದ್ವಾಲದ ಶ್ರೀಮಂತ ಸೂರಪ್ಪನೆಂಬುವನು ಸಿದ್ದಾರೂಢರ ಕೀರ್ತಿಯನ್ನು ಕೇಳಿ, ಅವರಿಂದಲೇ ದೀಕ್ಷೆ ಪಡೆಯಬೇಕೆಂದು ಶಿವಾರಾತ್ರಿಯ ದಿವಸವೇ ಹುಬ್ಬಳ್ಳಿ, ಬಂದನು. ಸಿದ್ಧರು ಊರಲ್ಲಿ ಹೋಗುವವರಿದ್ದರು. ಪಲ್ಲಕ್ಕಿ ಸಿದ್ಧವಾಗಿತ್ತು. ಗಡಿಬಿಡಿಯಲ್ಲಿ ಸೂಗೀರಪ್ಪನು ಕೆರೆಯಲ್ಲಿ ಮುಳುಗಿ ಬಂದನು. ಪಲ್ಲಕ್ಕಿಯಲ್ಲಿ ಕುಳಿತ ಸಿದ್ದರ ಬಳಿಗೆ ಹೋದನು. ದೇವಾ, ನಾನು ತಮ್ಮಿಂದಲೇ ದೀಕ್ಷೆ ಪಡೆಯಬೇಕೆಂದು ಬಂದಿದ್ದೇನೆ ದಯವಿಟ್ಟು ನನ್ನ ಮೇಲೆ ಕರುಣೆದೋರಬೇಕು' ಎಂದು ಬೇಡಿಕೊಂಡನು. ಸಿದ್ದರು ಅವನನ್ನು ಹತ್ತಿರಕ್ಕೆ ಕರೆದರು, ಅವನ ಕಿವಿಯಲ್ಲಿ 'ದೀಕ್ಷೆ ಕೊಡುತ್ತೇನೆ ಪಲ್ಲಕ್ಕಿ ಊರೊಳಗಿಂದ ತಿರುಗಿ ಬರುವ ತನಕ ಕಾಳೀ ಊದಿ ಬಾ' ಎಂದು ಆ ಶ್ರೀಮಂತನಿಗೆ ಹೇಳಿದರು. ಸಿದ್ದರ ಆಜ್ಞೆ ಅದು ಶಿವನ ಆಜ್ಞೆ ಎಂಬ ನಂಬಿಕೆ ಇತ್ತು. ಆ ಶ್ರೀಮಂತನು ಒಳ್ಳೆ ಹುರುಪಿನಿಂದ ಬಂದಿದ್ದ. ಅವನ ಶ್ರೀಮಂತಿಕೆ ಅವನ ಮೈ ಮೇಲೆ ಮೆರೆಯುತ್ತಿತ್ತು, 'ಕಾಳಿ ಊದಿ ಬಾ' ಎಂದು ಹೇಳಿದ ಕೂಡಲೇ ಅವನಿಗೆ ದಿಕ್ಕೇ ತೋಚದಂತಾಯಿತು. ನಿರ್ವಾಹವಿಲ್ಲದೆ ಆ ಶ್ರೀಮಂತನು ಗುರುವಿನ ಆಜ್ಞೆಯಂತೆ, ಪಲ್ಲಕ್ಕಿಯ ಮುಂದೆ ಕಾಳಿಯನ್ನೂ ದುತ್ತಿದ್ದ ವೀರಾಪೂರ ದ್ಯಾಮಣ್ಣ ಎಂಬವನ ಬಳಿಗೆ ಹೋದ. ಆಗ ಆ ದ್ಯಾಮಣ್ಣನಿಗೆ ವಿಪರೀತ ಜ್ವರ, ಮೈ ಸುಡುತ್ತಿತ್ತು. ಆದರೂ ಗುರುಸೇವೆ ಮಿಗಿಲು, ಅದರ ಮುಂದೆ ಈ ಉರಿ ಚಳಿ ಇದ್ಯಾವ ಲೆಕ್ಕ ಎಂಬ ವಿಶ್ವಾಸದಿಂದ ಧೃಡ ಭಕ್ತಿಯಿಂದ ಅವನು ಕಾಳಿ ಊದುತ್ತಿದ್ದನು. ಸಿದ್ದರ ಸೇವೆ ಸಾಕ್ಷಾತ್ ಶಿವನ ಸೇವೆ ಎಂಬ ಶೃದ್ದೆ ಅವನದ್ದಾಗಿತ್ತು. ಈ ಜನ್ಮದಲ್ಲಿ ಅದು ಸಿಕ್ಕಿದ್ದು ತನ್ನ ಸೌಭಾಗ್ಯವೆಂದು ಅವನು ಗಟ್ಟಿಯಾಗಿ ನಂಬಿದ್ದನು.
ಸಾಹುಕಾರನು ದ್ಯಾಮಣ್ಣನ ಬಳಿ ಹೋಗಿ ಕಾಳಿಯನ್ನು ಕೊಡು, ನಾನು ಊದುತ್ತೇನೆ' ಎಂದು ಬೇಡಿದ. ದ್ಯಾಮಣ್ಣನು ಅವನ ಮಾತಿಗೆ ಸೊಪ್ಪು ಹಾಕಲಿಲ್ಲ. ಅಯ್ಯೋ ಪುಣ್ಯಾತ್ಮಾ ಈ ಜನ್ಮದಲ್ಲಿ ಊದಿ ಊದಿ ನನ್ನ ಪಾಪ ಕಳೆದುಕೊಂಡು ಪುನೀತನಾಗಬೇಕೆಂದು, ನನ್ನ ಎಲ್ಲ ಕೆಲಸ ಬೊಗಸೆ, ಆಸರಿಕೆ ಬೇಸರಿಕೆ ಬೇನೆ ಹಿಂದಿಟ್ಟು ಬಂದಿದ್ದೇನೆ. ನನ್ನ ಸೇವೆ ಬಿಡಲಾರೆ' ಎಂದನು. ಅವನು ಕೊಡಲಿಲ್ಲ. ಇವನು ಬಿಡಲಿಲ್ಲ. ಇಬ್ಬರಲ್ಲಿ ಮಾತಿನ ಕುಸ್ತಿಮುಸಿ ನಡೆಯಿತು. ಸಾಹುಕಾರ ತನ್ನ ಅಂತಸ್ತನ್ನು
ಮರೆತ, ದ್ಯಾಮಣ್ಣಾ ! ನಿನಗ ಕೈ ಮುಗಿದು ಕೇಳತೀನಿ ನನಗೆ ಕಾಳಿ ಊದಿ ಗುರು ಸೇವಾ ಮಾಡುವ ಸದವಕಾಶ ನೀಡು ಎಂದು ಪ್ರಾರ್ಥಿಸಿದನು. ಶ್ರೀಮಂತನ ದೈನ್ಯತೆಗೆ ದ್ಯಾಮಣ್ಣ ಮೃದುವಾದ ಕಾಳಿಯನ್ನು ಕೈಗೆ ಕೊಟ್ಟ ಎರಡು ನಿಮಿಷದಲ್ಲಿ ಸಾಹುಕಾರ ಕಾಳಿ ಊದುವದನ್ನು ಕಲಿತ. ಅವನು ಊದಿಯೇ ಊದಿದ ! ತಾನು ಶ್ರೀಮಂತ ಎನ್ನುವದು ಮರೆತು ಹೋಯಿತು. ತನ್ನವರು ತನ್ನನ್ನು ನೋಡುತ್ತಿದ್ದಾರೆನ್ನುವದು ಕಾಣದಾಯಿತು. ದೊಡ್ಡವ ಎಂಬ ಅಭಿಮಾನ ಸೋರಿ ಹೋಯಿತು. ಸಿದ್ದರ ನುಡಿಯೇ ಅವನಿಗೆ ಶಿವಮಂತ್ರವಾಯಿತು. ಪಾಲಕಿ ತಿರುಗಿ ಮಠಕ್ಕೆ ಬರುವ ವರೆಗೆ ಊದೇ ಊದಿದ ಮಠಕ್ಕೆ ಬಂದ ಮೇಲೆ ಸಿದ್ಧರು ಅವನನ್ನು ಕರೆದು ದೀಕ್ಷೆ ಕೊಡುತ್ತೇನೆ ಬಾ' ಎಂದರು. ಆಗ ಅವನು 'ತಂದೇ ! ನೀನೇ ಮನೆಯೊಳಗೆ ಬಂದ ಮ್ಯಾಲ, ಇನ್ಯಾವ ದೀಕ್ಷೆ? ಇನ್ನೆಲ್ಲಿಯ ದೀಕ್ಷೆ? ಎಂದು ಅವನು ನುಡಿದನು. ದೇಹದ ಮನೆಯೊಳಗೆ ದೇವನು ಆಗಲೇ ಬಂದಿದ್ದ. ಅವರ ಸನ್ನಿದಾನದಲ್ಲಿ ಇಂಥ ಹಲವಾರು ಲೀಲೆಗಳು ನಡೆದವು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಮೂಲ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಅನಿಷ್ಟವೇ?? ಸಿದ್ಧಾರೂಢ ಮಹಿಮೆ
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಮೂಲ ನಕ್ಷತ್ರದಲ್ಲಿ ಜನನವಾದರೆ ತಂದೆ ತಾಯಿಗೆ ಅನಿಷ್ಟವೇ?? ಸಿದ್ಧಾರೂಢ ಮಹಿಮೆ
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
