ಮುಂಬೈಯಿಯ ಸುಮಿತ್ರಾಬಾಯಿಯ ಅನುಭವ
🌺 ಮುಂಬೈಯಿಯ ಸುಮಿತ್ರಾಬಾಯಿಯ ಅನುಭವ 🌺
ಮುಂಬೈಯಿಯ ಸುಮಿತ್ರಾ ಬಾಯಿ ಕಮಲಾಕರ ಮೊರೆಯೆಂಬವರು ತಾವು ಚಿಕ್ಕ ವಯಸ್ಸಿನವರಿರು ವಾಗ ಸತ್ಯಭಾಮಾಬಾಯಿ ಚೌಧರಿ ಮತ್ತು ಲಕ್ಷ್ಮೀಬಾಯಿ ಚೌಧರಿ ಜೊತೆಗೆ ಸಿದ್ಧಾರೂಢರ ದರ್ಶನಕ್ಕಾಗಿ ಹುಬ್ಬಳ್ಳಿಗೆ ಹೋದಾಗ ಸ್ವಾಭಾವಿಕ ವಾಗಿ ಅವರಲ್ಲಿ ಭಕ್ತಿಯುಂಟಾ ಯಿತು. ಅದರಿಂದಾಗಿ ಸ್ವಾಮೀಜಿ ಯವರ ಬಗ್ಗೆ ಅವಳಿಗಾದ ಅನುಭವ ಅಪಾರವಾಗಿದೆ.
ಒಂದು ಸಲ ಮುಂಬೈಯಿಯ ಸಪ್ತಾಹಕ್ಕೆ ಹೋಗುವ ಪೂರ್ವದಲ್ಲಿ ಎಷ್ಟೋ ದಿವಸ ಅವಳ ಹೊಟ್ಟೆಯಲ್ಲಿ ನೀರು ತುಂಬತೊಡಗಿತು. ಅದರಿಂದ ಹೊಟ್ಟೆಯು ಸಹಜವಾಗಿ ಎಷ್ಟು ಇರಬೇಕೋ ಅದಕ್ಕಿಂತ ಹೆಚ್ಚಾಗಿ ಬೆಳೆದು ನಿಂತು ವಿಪರೀತ ತೊಂದರೆಯಾಯಿತು. ಇಂಥ ಪ್ರಸಂಗದಲ್ಲಿ ಸಪ್ತಾಹಕ್ಕೆ ಹೇಗೆ ಹೋಗಬೇಕು ಎಂಬ ಚಿಂತೆಯಾಯಿತು. ಆದರೂ ಸಹಿತ ಗಟ್ಟಿ ಮನಸ್ಸು ಮಾಡಿ ಧೈರ್ಯದಿಂದ ಚೌಧರಿಯವರ ಮನೆಯಲ್ಲಿ ವಾಸ ಮಾಡಲು ಹೋದಳು. ಆಗ ಅವರ ಮನೆಯ ಮಧ್ಯದಲ್ಲಿಯ ಒಂದು ಖೋಲಿಯಲ್ಲಿ ಮಲಗಿದಾಗ ರಾತ್ರಿ ಶ್ರೀ ಸಿದ್ಧಾರೂಢರು ಅವಳ ಕನಸಿನಲ್ಲಿ ಬಂದು ನೀರಿನಲ್ಲಿ ಭಸ್ಮವನ್ನು ಬೆರೆಸಿ ಕುಡಿಯಲು ಹೇಳಿದರು. ಅಷ್ಟರಲ್ಲಿ ಎಚ್ಚರಾಯಿತು.
ಮರುದಿವಸ ಮುಂಜಾನೆ ಸುಮಿತ್ರಾಬಾಯಿಯವರು ಈ ಸ್ವಪ್ನದ ವಿಚಾರವನ್ನು ಲಕ್ಷ್ಮೀಬಾಯಿಯವರಿಗೆ ತಿಳಿಸಿದಾಗ ಸ್ವಪ್ನದ ಮರ್ಮವನ್ನು ತಿಳಿದು ಶ್ರೀ ಸಿದ್ಧಾರೂಢರ ಆದೇಶವಾಗಿದೆಯೆಂದು ತಿಳಿದು ಸಿದ್ದರ ಭಸ್ಮವನ್ನು ನೀರಿನಲ್ಲಿ ಬೆರೆಸಿ ಕುಡಿಯಲು ಕೊಟ್ಟರು. ಸುಮಿತ್ರಾಬಾಯಿಯು ಭಸ್ಮಪೂರಿತ ನೀರನ್ನು ಕುಡಿದಾಗ, ಏನಾಶ್ಚರ್ಯವಾಯಿತೆಂದರೆ ಈ ಪೂರ್ವದಲ್ಲಿ ತನಗೆ ಏನೂ ಆಗಿರಲಿಲ್ಲವೇನೋ ಎಂಬಂತೆ ಭಾಸವಾಗಿ ರೋಗ ನಿವೃತ್ತಿಯಾಯಿತು.
ಇನ್ನೊಂದು ಸಲ ಅವರ ಇಬ್ಬರು ಹೆಣ್ಣುಮಕ್ಕಳು ರೀತಾ ಮತ್ತು ಸೀಮಾ ಇವರಿಗೆ ಡಿಪ್ಪೇರಿಯಾ ತರಹದ ರೋಗ ಬಂದಿತು. ಆಗಲೂ ಮೇಲಿನಂತೆಯೇ ಪ್ರಯೋಗ ಮಾಡಿದರು. ಆಗಲೂ ಸಹ ಶ್ರೀ ಸಿದ್ಧಾರೂಢರು ಒಬ್ಬ ಮಹಾತ್ಮರ ವೇಷದಿಂದ ಶ್ರೀ ಕಮಳಾಕರ ಮೋರೆಯವರ ಬೆನ್ನು ಚಪ್ಪರಿಸಿ ಹೇಳಿದರು ನೀವು ಸ್ವಲ್ಪವೂ ಚಿಂತೆ ಮಾಡಬೇಡಿರಿ, ನಾನು ನಿಮ್ಮ ಬೆನ್ನ ಹಿಂದೆಯಿದ್ದು ನಿಮ್ಮನ್ನು ಸದಾ ರಕ್ಷಿಸುತ್ತೇನೆ ಎಂದು ಹೇಳಿದರು. ಈ ವಿಚಾರವನ್ನು ತನ್ನ ಪತ್ನಿ ಸುಮಿತ್ರಾಬಾಯಿಗೆ ತಿಳಿಸಿದಾಗ ಅವಳು ಔಷಧಿಯ ಜೊತೆಗೆ ಸಿದ್ದರ ಭಸ್ಮ ಬೆರಸಿ ಕುಡಿಸುತ್ತಾ ಹೋದಂತೆ ಮೂರು ನಾಲ್ಕು ದಿವಸಗಳಲ್ಲಿ ಆ ಹೆಣ್ಣು ಮಕ್ಕಳು ರೋಗ ಮುಕ್ತರಾಗಿ ಮುಂದೆ ತಮ್ಮ ಸಂಸಾರದಲ್ಲಿ ಆನಂದದಿಂದ ಇರಹತ್ತಿದರು.
ಶ್ರೀಮತಿ ಸುಮಿತ್ರಾಬಾಯಿ ಮೋರೆಯವರು ಪ್ರತಿ ವರ್ಷ ಸಪ್ತಾಹದ ಮೊದಲನೆಯ ದಿನ ಶ್ರೀ ಸಿದ್ಧರ ಮೂರ್ತಿಯ ಹತ್ತಿರ ತೆಂಗಿನಕಾಯಿಯಿಟ್ಟು ಪೂಜಿಸುತ್ತಿದ್ದಳು. ಒಂದು ವರ್ಷ ಮನೆಯಲ್ಲಿಯ ಮತಭೇದದಿಂದಾಗಿ ಆ ವರ್ಷ ಸಪ್ತಾಹಕ್ಕೆ ಕಳಿಸಿಕೊಡಲು ಪತಿಯು ನಿರಾಕರಿಸಿದನು. ಅದೇ ದಿವಸ ಪತಿಯಾದ ಕಮಲಾಕರನ ಕಾಲುಗಳು ಏಕಾಏಕೀ ಸ್ವಾಧೀನತಪ್ಪಿ ಬಳಬಳ ಜೋತಾಡಹತ್ತಿದವು. ಶರೀರವು ಬೆವರಿನಿಂದ ತೊಯ್ದು ಹೋದವು. ಆಗ ತನ್ನಷ್ಟಕ್ಕೆ ತಾನೇ ತನ್ನ ಮನಸ್ಸಿನಲ್ಲಿ ಸ್ವಾಮಿಯ ಭಕ್ತೆ ಪತ್ನಿಗೆ ಉತ್ಸವಕ್ಕೆ ಹೋಗಬಾರದೆಂದು ಕಟ್ಟಪ್ಪಣೆ ಮಾಡಿ ಅನ್ಯಾಯ ಮಾಡಿದೆನಲ್ಲ ಎಂಬುದು ಅವನ ಲಕ್ಷ್ಯಕ್ಕೆ ಬಂದಿತು. ಆಗ ತನ್ನ ಪತ್ನಿಯ ಜೊತೆಗೆ ಸ್ವಾಮಿಯ ಭಾವಚಿತ್ರದ ಮುಂದೆ ನಿಂತು ಪ್ರಾರ್ಥಿಸಿಕೊಂಡು ಕ್ಷಮೆ ಬೇಡಿದನು. ಎರಡನೆಯ ದಿವಸ ಅವನು ಮೊದಲಿನಂತೆ ನೆಟ್ಟಗಾಗಿ ಪತ್ನಿಯನ್ನು ಕರೆದುಕೊಂಡು ಸಪ್ತಾಹಕ್ಕೆ ಉಪಸ್ಥಿತನಾದನು.
೧೯೯೩ನೇ ಇಸ್ವಿ ಬರುವ ಪೂರ್ವದಲ್ಲಿ ಒಂದು ಅಸಂತೋಷದ ಘಟನೆ ನಡೆಯಿತು. ಅದೆಂದರೆ ಸಣ್ಣಮಗ ವಿರಾಜ ಮತ್ತು ಉಷಾರಾಜಶ್ರೀ ಉಭಯತರು ಮುಂಬೈಯಿಯ ಹೊರಗೆ ಯಾವುದೋ ಒಂದು ಕೆಲಸಕ್ಕಾಗಿ ಹೋಗಿದ್ದರು. ಮರಳಿ ಬರುವ ಸಮಯದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಅಪಘಾತವಾಯಿತು. ಅದು ಎಷ್ಟು ದೊಡ್ಡದಿತ್ತೆಂದರೆ ಉಭಯತರ ಶರೀರಗಳು ಅಲ್ಲಲ್ಲಿ ಕತ್ತರಿಸಿ ಹೋಗಿದ್ದವು. ಇಂಥ ನಿಕಟ ನಿರ್ಜನ ಸ್ಥಳದಲ್ಲಿ ಸ್ವಂತ ಶ್ರೀ ಸಿದ್ಧಾರೂಢ ಸ್ವಾಮಿಗಳು ಟೆಂಪೊ ಹೊಡಯುವವನ ವೇಷದಲ್ಲಿ ಟೆಂಪೊ ತೆಗೆದುಕೊಂಡು ಬಂದು ಇಬ್ಬರನ್ನು ಅತಿ ಅವಸರದಿಂದ ಟೆಂಪೋದಲ್ಲಿ ಮಲಗಿಸಿ ಅವಶ್ಯಕವಾಗಿರುವ ಆಸ್ಪತ್ರೆಯಲ್ಲಿ ದಾಖಲು ಮಾಡಿದನು. ಮತ್ತೆ ಅವರ ಸಂಬಂಧಿಕರನ್ನು ಕರೆಸಿದನು. ಆ ಸಮಯ ಇಬ್ಬರ ಮೈಮೇಲೆ ನಾಲ್ಕು ತೊಲಿ ಬಂಗಾರದ ಸಾಮಾನುಗಳಿದ್ದವು. ಪರಂತು ಯಾವ ರೀತಿಯ ನಷ್ಟವಾಗಿರಲಿಲ್ಲ. ಶರೀರಕ್ಕೆ ಯಾವುದೇ ತೊಂದರೆಯಾಗದೆ ಗುಣ ಹೊಂದಿ ಸ್ವಸ್ಥರಾಗಿ ಮನೆಗೆ ಬಂದರು. ಇದರಂತೆ ಶ್ರೀಮತಿ ಸುಮಿತ್ರಾರವರಿಗೆ ಅನೇಕ ಅನುಭವಗಳಾಗಿವ. ಅದರಂತೆ ಮುಂಬೈಯಿಯ ಎಲ್ಲ ಭಕ್ತರಿಗೂ ಸಿದ್ಧನು ರಕ್ಷಿಸಿದ ಅನೇಕ ಉದಾಹರಣೆಗಳಿವೆ.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
