ಅಜ್ಜನ ಸಮಾಧಿ ಮಂದಿರ ಕಟ್ಟುವಾಗ ಆದ ಚಮತ್ಕಾರ 🌺
🌺 ಅಜ್ಜನ ಸಮಾಧಿ ಮಂದಿರ ಕಟ್ಟುವಾಗ ಆದ ಚಮತ್ಕಾರ 🌺
ಸಮಾಧಿ ಮಂದಿರದಲ್ಲಿ ಪಾತಾಳ ಅಂಕಣವನ್ನು ಕಟ್ಟಿಸಲು ಭಕ್ತರಾದ ತುಕ್ಕಪ್ಪ ಮತ್ತು ಖಂಡಪ್ಪನವರು ನಡುಕಟ್ಟಿ ನಿಂತರು. ತೊಲೆ, ಕಂಬ, ಬೋದಿಗೆ, ಗೋಡೆಯ ಎರಡು ದಿಂಡುಗಳಿಗೆ ಕಮಲಗಳನ್ನು ಮೇಲೆ ಸರ್ಪಗಳನ್ನು ಕೆತ್ತಿಸಿದ ದೊಡ್ಡ ಕಲ್ಲುಗಳನ್ನು ಮುಂದಿನ ಅಂಕಣದಲ್ಲಿ ಮೇಲಿನ ಛಾವಣಿಯಲ್ಲಿ ಜೋಡಿಸಲು ಕಾರ್ಯನಿರತರಾದರು.
ಯಾವ ಯಂತ್ರದ ಸಹಾಯವಿಲ್ಲದೆ ಕೇವಲ ಮಾನವ ಶಕ್ತಿಯಿಂದಲೇ ಏರಿಸಲು ವಡ್ಡರು ಗಟ್ಟಿಯಾದ ಸರಪಳಿಗಳನ್ನು ತಂದು ಭಾರವಾದ ಕಲ್ಲುಗಳಿಗೆ ಕಟ್ಟಿ ಓಂ ನಮಃ ಶಿವಾಯ ಮಂತ್ರ ಉಚ್ಚರಿಸುತ್ತ ಮೇಲೆ ಏರಿಸತೊಡಗಿದರು. ಆಗ ಕಲ್ಲುಗಳಿಗೆ ಕಟ್ಟಿದ ಕಬ್ಬಿಣ ಸರಪಳಿಗಳು ಚಟಚಟನ ಹರಿದು ಸಿಡಿದು ಬಿದ್ದವು. ಆ ದೊಡ್ಡ ಕಲ್ಲು ಬೀಳುವಾಗ ಅಲ್ಲಿಯೇ ಇದ್ದ ಸಿದ್ದಾರೂಢರು ಧಾವಿಸಿ ಬಂದು ಆ ಬಂಡೆಗಲ್ಲಿನ ಕೆಳಗೆ ನಿಂತು ತಮ್ಮ ಬಲಗೈಯನ್ನು ಮೇಲಕ್ಕೆತ್ತಿ ಹಸನ್ಮುಖರಾಗಿ ನಿಂತಾಗ ಆ ಬೀಳುವ ಕಲ್ಲು ಯಾವ ಆಸರೆಯಿಲ್ಲದೆ ಅಂತರದಲ್ಲಿಯೇ ನಿಂತುಕೊಂಡಿತು.
ಆಗ ಭಕ್ತರು ಭಯಭೀತರಾದಾಗ ಸದ್ಗುರುಗಳು ಹೇಳಿದರು `ಭಕ್ತರ, ಭಯಪಡಬೇಡಿರಿ ಸದ್ದುರುವು ಕಾಪಾಡುತ್ತಾನೆ' ಎಂದು ಆಶೀರ್ವದಿಸಿದಾಗ ಭಕ್ತರು ಸಿದ್ಧರ ಅಭಯವಚನ ಕೇಳಿ ಸಂತೋಷದಿಂದ ಬೇರೆ ಹಗ್ಗ ಮತ್ತು ಸರಪಳಿಗಳನ್ನು ತಂದು ಕಲ್ಲಿಗೆ ಕಟ್ಟಿ ಮೇಲ್ಗಡೆ ಜಗ್ಗತೊಡಗಿದಾಗ ಕಲ್ಲು ಅನಾಯಾಸದಿಂದ ಏರಿ ಬಂದಿತು. ಅದನ್ನು ಯಾವ ಸ್ಥಳಕ್ಕೆ ಜೋಡಿಸಬೇಕಾಗಿತ್ತೋ ಅಲ್ಲಿ ಜೋಡಿಸಿದರು. ಆಗ ಎಲ್ಲರೂ ಸಿದ್ಧರ ಜಯಜಯಕಾರ ಮಾಡಿದರು. ನಂತರ ಮುಂಬದಿಗೆ ಹಾಕಿಸುವ ಬಂಡೆಗಳಿಗೆ ಈಶೋಪನಿಷತ್ತಿನ ಮಂತ್ರಗಳನ್ನು ಕೆತ್ತಿಸಿ ಹಾಕಿದರು.
________________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
