ಬಡವಿಯ ಒಂದು ದುಡ್ಡಿನ ಕಾಣಿಕೆ

 🌺 ಬಡವಿಯ ಒಂದು ದುಡ್ಡಿನ ಕಾಣಿಕೆ 🌺



ಶಿವರಾತ್ರಿಯ ಜಾತ್ರೆಯ ಮುನ್ನ ಒಂದು ಸಭೆ ನಡೆಯಿತು. ಸಿದ್ದರ ಸನ್ನಿಧಿಯಲ್ಲಿ ನಡದ ಆ ಸಭೆಯಲ್ಲಿ ಅನೇಕ ಮಹಾರಾಜರು, ರಾಜಾಧಿಕಾರಿಗಳು ದೊಡ್ಡ ಶ್ರೀಮಂತರು, ಕುಳಿತಿದ್ದರು. ಜಾತ್ರೆಗಾಗಿ ಅನೇಕರು ತಮ್ಮ ಶಕ್ತಾನುಸಾರ ಕಾಣಿಕೆಗಳನ್ನು ಸಲ್ಲಿಸಿದರು. ಆದರೆ ಸಿದ್ಧರ ಲಕ್ಷ್ಯವಲ್ಲವೂ ಓರ್ವ ಬಡ ಹೆಣ್ಣುಮಗಳ ಬರುವಿಕೆಯ ಕಡೆಗಿತ್ತು. ಸ್ವಲ್ಪ ಹೊತ್ತಿನಲ್ಲಿ ಆ ಹೆಣ್ಣು ಮಗಳು ಬಂದು ಸಿದ್ದರ ಚರಣಗಳಿಗೆ ನಮಿಸಿ ಎದ್ದು ನಿಂತು ಮಾಸಿದಂಥ ಹರಿದ ಸೀರೆಯ ಚುಂಗಿನಲ್ಲಿ ಕಟ್ಟಿದ್ದ ಒಂದು ಗಟ್ಟಿ ದುಡ್ಡನ್ನು ತೆಗೆದಳು. ನಂತರ ಅದನ್ನು ಸ್ವಾಮಿಗಳಿಗೆ ಕೊಡಲು ಹೋದಾಗ ಸದ್ಗುರುಗಳು ತಾವೇ ತಮ್ಮ ಕೈಯಿಂದ ತೆಗೆದುಕೊಂಡರು. ಆಗ ಬಡವಿ ಹೇಳಿದಳು `ತಂದೆ  ನಾನು ಬಡವಳು. ಕೂಲಿ ಮಾಡಿ ಜೀವಿಸುವಂಥವಳು. ನನ್ನ ಭಕ್ತಿಯೂ ಸಣ್ಣದು. ನೀನು ಪರಮಾತ್ಮ ಸ್ವರೂಪನು. ಅಪಾ, ನೀನು ದೊಡ್ಡ ಮನಸ್ಸು ಮಾಡಿ ಈ ಕಾಣಿಕೆಯಿಂದ ಇಡೀ ಜಾತ್ರೆಯ ಭಕ್ತರು ಪ್ರಸಾದ ಉಣಬೇಕೆಂದು ನನ್ನ ಇಚ್ಛೆಯಾಗಿದೆ ತಂದೆ' ಎಂದು ನಮಸ್ಕರಿಸಿದಳು.
ಆಗ ಅಲ್ಲಿ ನೆರೆದ ಜನರು ದೊಡ್ಡ ದೊಡ್ಡವರು ಈ ಒಂದು ದುಡ್ಡಿನಿಂದ ಏನು ಬಂದೀತು? ಬುದ್ಧಿಗೇಡಿ ಹೆಣ್ಣುಮಗಳು ಏನೋ ಹೇಳುತ್ತಿದ್ದಾಳೆ. ಆರೂಢರು ಒಂದು ದುಡ್ಡಿನಿಂದ ಇಡೀ ಜಾತ್ರೆಯ ಜನರಿಗೆ ಹೇಗೆ ಉಣಿಸುತ್ತಾರೆ? ನೋಡಬೇಕು' ಎಂದು ಗಂಭೀರವಾಗಿ ಆಲೋಚಿಸುತ್ತ ಕುಳಿತರು. ಆಗ ಸ್ವಾಮಿಗಳು ಅಡುಗೆಯ ಮನೆಯ ಪ್ರಮುಖ ರಾಚಪ್ಪನನ್ನು ಕರೆದು 'ಏ ರಾಚಾ ಈ ನಮ್ಮವ್ವ ಒಂದು ದುಡ್ಡನ್ನು ಬಹುಭಕ್ತಿಯಿಂದ ತಂದು ಕಾಣಿಕೆಯಾಗಿ ಕೊಟ್ಟಿದ್ದಾಳೆ. ಇವಳ ಭಕ್ತಿ ಮೆಚ್ಚುವಂತಾದ್ದು. ಆದ್ದರಿಂದ ಈ ದುಡ್ಡಿನಿಂದ ಎಷ್ಟು ಕೋತಂಬರಿ ಸಿವುಡುಗಳು ಬರುವವೋ ಅವನ್ನು ತಂದು ಎಲ್ಲ ಸಾರಿನ ಕೊಳಗಗಳಲ್ಲಿ ಹಾಕಿ ಸಾರು ಮಾಡಿ ನೀಡು. ಎಲ್ಲ ಭಕ್ತರಿಗೆ ಇವಳ ಭಕ್ತಿ ಮುಟ್ಟುವಂತಾಗಲಿ' ಎಂದು ಆ ದುಡ್ಡನ್ನು ಅವನ ಕೈಗೆ ಕೊಟ್ಟಾಗ ಅವನು ಕೋತಂಬರಿಯನ್ನು ತಂದು ಸಾರು ಮಾಡಿದನು. ನಂತರ ಇಡೀ ಜಾತ್ರೆಯ ಸಮುದಾಯವೇ ಊಟ ಮಾಡಿತು. ಇದನ್ನು ಕಂಡು ಅಲ್ಲಿದ್ದ ದೊಡ್ಡ ಹಾಗೂ ಸಣ್ಣವರು ಸಿದ್ದರ ಸಮಾನ ದೃಷ್ಟಿಯನ್ನು ಮೆಚ್ಚಿಕೊಂಡರು.


_______________________________

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ