ಸಿದ್ಧಾರೂಢರು ಹಳಸಿದ ಅನ್ನವನ್ನು ಬಿಸಿ ಅನ್ನ ಮಾಡಿದ ಕಥೆ

         🌺    ಸಿದ್ಧರಿಂದ ಹಳಸಿದ ಅನ್ನ ಮಹಿಮೆ 🌺


ಜಂಗಮನ ಮುಖದಿಂದಲೇ ಪರಮಾತ್ಮ ತೃಪ್ತವೆನ್ನುವದನ್ನು ತಿಳಿಸುವದಕ್ಕಾಗಿ  ಅಲ್ಲದೆ ಆ ತಾಯಿ ಆ ಬದನಗುಡ್ಡದ ಬಸವಣ್ಣನ ಮೇಲೆ ಇರಿಸಿದ ಪ್ರೀತಿ ವಿಶ್ವಾಸ ನಿಷ್ಠೆಯ  ಫಲ ರೂಪವಾದ ಪರಮಾತ್ಮನು ಯಾರು ಎಂಬುದನ್ನು ತಿಳಿಸಲೆಂದೆ ಒಂದು ಲೀಲೆ ಮಾಡುತ್ತಾರೆ ಶ್ರೀ ಸಿದ್ದರು.(ಉಜ್ಜಣ್ಣನವರ ಭೀಮಪ್ಪ ಮತ್ತು ಲಕ್ಷ್ಮಮ್ಮ ನಿಗೆ ಸಿದ್ಧರು ದತ್ತು ಪುತ್ರರಾಗುದ್ದರು ಅವರು ನಿತ್ಯ ಉಜ್ಜಣ್ಣನವರ ಮನೆಗೆ ಹೋಗಿ ಬರುವ ರೂಡಿ ಇತ್ತು )


ಒಮ್ಮೆ ಶ್ರಾವಣ ಮಾಸದ ಮೊದಲನೇ ಸೋಮವಾರ ಲಕ್ಷಮ್ಮನ ಮನೆದೇವರ ಬೂದನಗುಡ್ಡದ ಬಸವಣ್ಣನಿಗೆ ಎಡೆ  ಒಯ್ಯಬೇಕೆಂದು ನಸುಕಿನಲ್ಲಿ ಎದ್ದು ಮಡಿಯಿಂದ ಅಡಿಗೆ ಮಾಡಿ ಹೆಡಿಗೆಯಲ್ಲಿ ತುಂಬಿಕೊಂಡು ತಯ್ಯಾರಾಗಿ ಹೊರಟಳು. ಇದು ಪ್ರತಿವರ್ಷ ವಾಡಿಕೆ. ಅದರಂತೆ ಸುಮಾರು 10-11 ಗಂಟೆಯ ಸಮಯ ಹೆಡಿಗೆ ತಲೆಯ ಮೇಲಿಟ್ಟ ಕೊಂಡು ಹೋಗಬೇಕೆಂದು ತಯಾರಾಗಿ ಅಡಿಗೆ ಮನೆ ಕೀಲಿಹಾಕುತ್ತಿದ್ದಳು, ಅಷ್ಟರಲ್ಲಿ ಗಂಡ ಭೀಮಪ್ಪ ಮಗನಾದ ಶ್ರೀ ಸಿದ್ದರು ಎದುರಿಗೆ ಬಂದು ನಿಂತರು. ನಮಗೆ ತುಂಬ ಹಸಿವಾಗಿದೆ ಊಟಕ್ಕೆ ಕೊಟ್ಟು ಹೋಗು ಎಂದರು. ಅದಕ್ಕೆ ಲಕ್ಷ್ಮಮ್ಮ ಸಿಡಿಮಿಡಿಯಿಂದ ಮನೆಯ ದೇವರು ಬೆಂಕಿಯಂಥವ ಆ ದೇವರಿಗೆ ನೈವೇದ್ಯ ಮಾಡದೆ ಉಣ್ಣುವಂತಿಲ್ಲ ಹೋಳಿಗೆ, ನಾನು ಬಂದ ಮೇಲೆ ಊಟ ಮಾಡುವಿರಂತೆ ಎಂದು ಹೇಳಿದವಳೆ, ತಲೆಯ ಮೇಲೆ  ಎಲ್ಲವನ್ನು ಅಡಿಗೆಯ ಹೆಡಿಗೆಯನ್ನು ಹೊತ್ತುಕೊಂಡು ನೆರಮನೆಯ ಗಂಗವ್ವನನ್ನು ಕರೆದುಕೊಂಡು ಬಸವಣ್ಣನಿಗೆ ಹೊರಟೆ ಬಿಟ್ಟಳು. ಅನಿವಾರ್ಯವಾಗಿ ಹಸಿದ ಹೊಟ್ಟೆಯಿಂದ ಭೀಮಪ್ಪನು ಮತ್ತು  ಶ್ರೀ ಸಿದ್ಧರು ಕಟ್ಟೆಯ ಮೇಲೆ ಕುಳಿತರು. ಇತ್ತ ಲಕ್ಷ್ಮಮ್ಮ ಗಂಗಮ್ಮ ಕೂಡಿ ಬೂದನಗುಡ್ಡಕ್ಕೆ ಹೋದಳು ಮಡಿಯಿಂದಲೇ ಹೋಗಿ ಗುಡ್ಡ ಸುತ್ತಿ ಬಸವಣ್ಣನ ಗುಡಿಗೆ ಬಂದರು. ತಲೆಯ ಮೇಲಿನ ಹೆಡಿಗೆ ಇಳಿಸಿದರು. ಮಂದಿರದ ಬಾಗಿಲಲ್ಲಿ ಪೂಜಾರಿಯಿದ್ದ, ಅವನ ಕೈಯಲ್ಲಿ ನೈವೇದ್ಯ ಕೊಟ್ಟು ಹೂ ಪತ್ರಿ ಕಾಯಿ ಕರ್ಪೂರವೆಲ್ಲ ಮುಂದಿಟ್ಟು ಭಕ್ತಿಯಿಂದ ಕೈಮುಗಿದು ನಿಂತಳು ಪೂಜಾರಿ ಹೂ ಪತ್ರಿ ಏರಿಸಿ ಕಾಯಿ ಕರ್ಪೂರ ಎಡೆ ಮಾಡಿ ಹಿಡಿಯಬೇಕೆಂದು ಮೇಲೆ ಹೇಳಿದರು. ಮುಚ್ಚಿದವನ್ನ ತೆಗೆದು ನೋಡಿದ ಕೂಡಲೇ ಅವನಿಗೆ ಆಶ್ಚರ್ಯ, ಅನ್ನ ಹಳಸಿ ನೀರಾಡತ್ತಿತ್ತು. ಹೋಳಿಗೆ ಜಿಗಿಜಿಗಿಯಾಗಿತ್ತು. ಎಲ್ಲ ಹಳಸಿಹೋಗಿತ್ತು. ಗುಡಿ ತುಂಬೆಲ್ಲ ಹಳಸಿದ ಗಬ್ಬು ವಾಸನೆ ತುಂಬಿತು. ಪೂಜಾರಿಗೆ ಆಶ್ಚರ್ಯ ಯಾಕವ್ವ ಯಕ್ಕ ಇಂಥ ನೈವೇದ್ಯ ತಂದೀಯಲ್ಲ ಬಸವಣ್ಣ ನಿಗೆ ಎಂದ, ಲಕ್ಷ್ಮವ್ವನಿಗೆ ಎದೆ ಧಸಕ್ಕೆಂದಿತು. ಅವಳಿಗೆ ದಿಕ್ಕೆ ತೋಚಲಿಲ್ಲ. ಯಾಕ ಹಳಿಸಿತು ನಾನೆಲ್ಲ ಮಡಿಯಿಂದಲೇ ಮಾಡಿ ತಂದೀನಿ ಎಂದು ಚಿಂತಿತಳಾದಳು. ಬಸವಣ್ಣ ಬೆಂಕಿಹಂತಾವ ದೇವಾ ನನ್ನಿಂದ ಏನಾದರು ತಪ್ಪಾದರ ಹೊಟ್ಟೆಯೊಳಗೆ ಹಾಕಿಕೋ ದೇವಾ ಎಂದು ಮತ್ತೆ ಮತ್ತೆ ನಮಸ್ಕಾರ ಮಾಡಿ ಪೂಜಾರೆಪ್ಪ ಈ ರೂಪಾಯಿ ತಗೋ ಬ್ಯಾಳಿಬೆಲ್ಲ ನೈವೇದ್ಯ ಮಾಡು, ಕಡಿಸೋಮವಾರ ಮತ್ತೆ ನೈವೇದ್ಯ ಮಾಡಿಕೊಂಡು ಬರ್ತಿನಿ ಎಂದು ಹೇಳಿ, ಆ ಹೆಡಿಗೆಯನ್ನು ಹೊತ್ತುಕೊಂಡು ಮನೆ ಕಡೆ ಹೊರಟಳು. ದಾರಿಯಲ್ಲಿ ವಿಚಾರ ಮಾಡುತ್ತ ನಡೆದಳು. ಬಹುಶಃ ನಾನು ಬರುವಾಗ ನನಗೆ ಊಟಕ್ಕೆ ಕೊಟ್ಟು ಹೋಗು ಎಂದು ಗಂಡ ಭೀಮಪ್ಪ ಮತ್ತು ಶ್ರೀ ಸಿದ್ಧರು ಎಂದಿದ್ದರು. ಅವರ ದೃಷ್ಟಿ ತಾಕಿ ಹೀಗಾಗಿರಬೇಕು ಎಂದು ವಿಚಾರ ಹೊಳೆಯಿತು. ಜೊತೆಗೆ ಸಿಟ್ಟು ಬಂತು. ಈ ಹಳಸಿದ್ದನ್ನು ಅವರಿಗೆ ಉಣಿಸಬೇಕೆಂದು ಮನಸ್ಸಿನಲ್ಲಿ ನಿರ್ಧಾರ ಮಾಡಿಕೊಂಡು ಬಿರಬಿರನೇ ಮನಗೆ ಬಂದಳು ಅವಳು ಬರುವದರಲ್ಲಿ ಇವರಿಬ್ಬರು ಹಸಿದು ಮಲಗಿದರು  ಮಲಗೇ ಇದ್ದರು. ಅವಳು ಬಂದೊಡನೆ ಎದ್ದು ಕುಳಿತರು. ಭೀಮಪ್ಪ ಅಂದ ನಮಗೆ ಬಹಳ ಹಸಿವಾಗಿದ ಬೇಗ ನೀಡು ಊಟಕ್ಕೆ ಎಂದೊಡನೆ ಅವಳಿಗೆ ಕೋಪ ಭುಗಿಲೆದ್ದಿತು. ಹುo ನಿಮಗ ಉಣಿಸಲೆಂದೆ ಬೇಗ ಬಂದಿನಿ ಬರ್ರಿ ಕುಡ್ರಿ ಎಂದು ಹೇಳಿದಳು. ಅವರು ಏನೊಂದು ಅರ್ಥವಾಗದೆ ಕುಳಿತರು. ಲಕ್ಷಮ್ಮಮ್ಮ ತಲೆಯ ಮೇಲಿನ ಹೆಡಗೆಯನ್ನು ಇಳಿಸಿ, ಅವರತ್ತ ಸರಿಸಿ ಅನ್ನದಲ್ಲಿ ಕೈಯಿಟ್ಟರೆ ಕೈ ಚುರಂದಿತು. ಅಯ್ಯೋ ಶಿವನೆ ಎಂದು ಕೈತೆಗೆದುಕೊಂಡಳು. ಅವಳಿಗೆ ಆಶ್ಚರ್ಯ ಜೊತೆಗಿದ್ದ ಗಂಗವ್ವನಿಗೂ ಆಶ್ವರ್ಯ, ಅನ್ನ, ಹೋಳಿಗೆ, ಪಲ್ಯ, ಎಲ್ಲವೂ ಬಿಸಿಬಿಸಿ ಅದೇ ಆಗ ಮಾಡಿದಂತೆ ಉಗಿಹಾಯುತ್ತಿತ್ತು ಎಲ್ಲವನ್ನು ಮುಟ್ಟಿ ಮುಟ್ಟಿ ನೋಡತೊಡಗಿದರು. ಹೀಗ್ಯಾಕೆ ಎಂದು ಭೀಮಪ್ಪ ಕೇಳಿದಾಗ ಬಸವಣ್ಣನಿಗೆ ಎಡೆ ಹಿಡಿಯುವಾಗ ಎಲ್ಲ ಹಳಸಿ ವಾಸನೆ ತುಂಬಿ ನೀರಾಡುತ್ತಿತ್ತು ಈಗ ನೋಡಿದರ ಉಗಿ ಬರುತ್ತಿದೆ ಎಂದು ಹೇಳಿದಳು. ಈಗ ಅವಳ ಒಳಗಣ್ಣಿಗೆ ಎಲ್ಲ ತಿಳಿಯಿತು. ಪರಮಾತ್ಮನೆ ಹಸಿದು ಮನೆಯಲ್ಲಿರುವಾಗ ಅವನಿಗೆ ಊಟಕೊಡದ ಗುಡ್ಡಕ್ಕೆ ಹೋಗಿ ನಾನು ತಪ್ಪು ಮಾಡಿದೆ. ಶ್ರೀ ಸಿದ್ಧರು ಸಾಕ್ಷಾತ್ ದೇವರನ್ನುವದನ್ನು ತಿಳಿಯದ ನಾನು ಬೈಯ್ದೆ ದೇವಾ ನನ್ನ ಕ್ಷಮಿಸು ಎಂದು ಪಾದಕ್ಕೆರಗಿದಳು. ಎಲ್ಲ ದೇವರರೂಪನೇ ನೀನಿರುವಿ ಎಂದು ಕೊಂಡಾಡಿದಳು. ಅದಕ್ಕೆಂದೆ ಮಹಾರಾಷ್ಟ್ರದ ಸಂತರಾದ ಏಕನಾಥರು ಹೇಳಿದರು. 'ಜಾ ಸದ್ಗುರುಚಿ ಅಂಗುಷ್ಟಿ ಕೋಟಿ ಕೋಟಿ ದೇವಾಚ ಸ್ಥಿತಿ'' ಎಂದು. ಶ್ರೀ ಗುರುವಿನ ಪಾದಾಂಗುಷ್ಟವು ಕೋಟಿ ಕೋಟಿ ದೇವತೆಗಳಿಗೆ ಆವಾಸಸ್ಥಾನವಾಗಿದೆ ಎನ್ನುವದನ್ನು, ಶ್ರೀ ಸಿದ್ಧರ ಚರಣದಲ್ಲಿ ಕಂಡು ಧನ್ಯರಾದರು. ಶ್ರೀ ಸಿದ್ಧರು ಬೇರೆಯಲ್ಲ. ಬಸವಣ್ಣ ಬೇರೆಯಲ್ಲ ಎಂಬುದು ಆ ಪುಣ್ಯಾತ್ಮರಿಗೆ ಮನವರಿಕೆಯಾಯಿತು.


👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಶ್ರೀಗುರುನಾಥರ ಅವತಾರ ಸಮಾಪ್ತಿ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

 
👇



👇




👇

Popular posts from this blog

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮದ ಲೀಲಾಕಥೆ,

ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ ಗುರುನಾಥರೂಢರು