ಶ್ರೀಗುರುನಾಥರ ಅವತಾರ ಸಮಾಪ್ತಿ
🌺 ಶ್ರೀಗುರುನಾಥರ ಅವತಾರ ಸಮಾಪ್ತಿ 🌺
ಸುಮಾರು ಹತ್ತೊಂಭತ್ತುನೂರಾ ಅರವತ್ತೆರಡನೆಯ ಇಸ್ವಿಯಲ್ಲಿ ಶ್ರೀಗುರುನಾಥರ ದೇಹದ ಆರೋಗ್ಯ ವಿಷಮಿಸಿತು. ಅನ್ನ ನೀರುಗಳನ್ನು ತೆಗೆದುಕೊಳ್ಳದೆ ನಿರಶನರಾದರು, ಆಶಕ್ತಿಯಿಂದಾಗಿ ಹಾಸಿಗೆಯಿಂದ ಮೇಲೇಳಲು ಬರುತ್ತಿರಲಿಲ್ಲ. ಚೇರಮನ್ನರು ಶ್ರೀಗಳವರನ್ನು ಔಷಧೋಪಚಾರಕ್ಕಾಗಿ ಹುಬ್ಬಳ್ಳಿಯ ಕೋ-ಆಪರೇಟಿವ್ ದವಾಖಾನೆಗೆ ಸೇರಿಸಿದರು. ಶ್ರೀಗಳವರಿಗೆ ದೇಹದ ಪ್ರಜ್ಞೆಯಿಲ್ಲದೆ ಮಾತು ಮನಗಳಿಗೆ ಮೀರಿದ ತಮ್ಮ ಸ್ವರೂಪವಾದ ಅರ್ಥಾತ್ ಬ್ರಹ್ಮಾನಂದದಲ್ಲಿಯೇ ಯಾವಾಗಲೂ ಇದ್ದರು. ಆಸ್ಪತ್ರೆಯಲ್ಲಿ ಡಾಕ್ಷರ ಸೋನಟಕ್ಕೆ ಹಾಗೂ ಆರ್. ಬಿ. ಪಾಟೀಲ ಇವರಿಂದ ಔಷಧೋಪಚಾರ ನಡೆಯಿತು. ಸ್ವಾಮಿಗಳು ಯಾವಾಗಲೂ ಅಂತರ್ಮುಖಿಗಳಾಗಿ ನಿರ್ವಿಕಲ್ಪ ಸಮಾಧಿಯಲ್ಲಿದ್ದರು. ಅವರ ದೇಹದ ತಾಪಮಾನ ಒಮ್ಮಿದೊಮ್ಮೆ ಅತಿ ಹೆಚ್ಚಾಗಿ ಅಪಾಯವಾಗುವುದನ್ನು ಕಂಡು, ಮೂರು ಥರ್ಮಾಮೀಟರ ಉಪಯೋಗಿಸಿ ಪರೀಕ್ಷಿಸಿದರು. ಚುಚ್ಚುಮದ್ದು ಕೊಡುತ್ತಿರುವಾಗಲೂ ತಮಗೂ ದೇಹಕ್ಕೂ ಯಾವ ಸಂಬಂಧವಿಲ್ಲದಂತೆ ಇದ್ದರು. ಇಂಥ ಸ್ಥಿತಿಯನ್ನು ಕಂಡ ಡಾಕ್ಟರರು ಆಶ್ಚರ್ಯಚಕಿತರಾದರು.
ಟ್ರಸ್ಟಕಮೀಟಿಯವರ ಕಟ್ಟಪ್ಪಣೆಯ ಮೇರೆಗೆ ಶ್ರೀಗಳ ಸ್ಥಿತಿಯನ್ನು ಕಂಡು, ಅವರನ್ನು ನೋಡುವುದಕ್ಕೆ ಯಾರಿಗೂ ಅವಕಾಶ ವಿರಲಿಲ್ಲವಾದ್ದರಿಂದ ವರ್ತಮಾನ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಭಕ್ತರು ನಂಬಬೇಕಾಯಿತು. (ಶ್ರೀಗುರುಸಿದ್ದಪ್ಪ ಧಾರವಾಡ ಇವರು ಬರೆದ ಶ್ರೀಗುರುನಾಥಾರೂಢರ ಚರಿತ್ರಾಧಾರಿತ ಮೌನ ವ್ಯಾಖ್ಯಾನದಂತೆ) ಟ್ರಸ್ಟ್ ಕಮೀಟಿಯ ಉಪಾಧ್ಯಕ್ಷರಾದ ಕಲ್ಲಪ್ಪ ತಲವಾಯಿಯವರು ಪ್ರತ್ಯಕ್ಷ ಕಂಡದ್ದನ್ನು ವಿವರಿಸುತ್ತ ಹೇಳಿದ್ದೇನೆಂದರೆ, ಶ್ರೀಗಳ ದೇಹಾಂತ ಸಮಯ ಸಮೀಪಿಸಿದಂತೆ ಅವರು ಮಲಗಿರುವಾಗ, ಅವರ ಶಿರದಿಂದ ಅಂಗುಷ್ಠದವರೆಗೆ, ಅಂಗುಷ್ಟದಿಂದ ಶಿರದವರೆಗೆ ಒಂದು ಪ್ರಕಾಶ ಪುಂಜವು ಚಲಿಸುತ್ತಿದ್ದಂತೆ ಶ್ರೀಗುರುನಾಥ ಸ್ವಾಮಿಯವರು ದಿನಾಂಕ ಹದಿಮೂರು ಐದನೆಯ ತಿಂಗಳು ಹತ್ತೊಂಭತ್ತುನೂರಾ ಅರವತ್ತೆರಡರಂದು ಮಧ್ಯಾಹ್ನ ಹನ್ನೊಂದು ಐವತ್ತು ನಿಮಿಷಕ್ಕೆ ಅಂತಿಮ ಉಸಿರೆಳೆಯುವ ಸಮಯದಲ್ಲಿ, ಅವರ ಹತ್ತಿರವಿದ್ದ ಹನುಮಂತಪ್ಪ ಸಾಧು, ಮಲ್ಲಮ್ಮ ಉಜ್ಜಣ್ಣವರ, ಕಲ್ಲಪ್ಪ ತಲವಾಯಿ ಸಿಸ್ಟರ್ ತಡಪಟ್ಟಿ ಎನ್ನುವ ನರ್ಸ ಇವರಿದ್ದರು. ಶ್ರೀಮತಿ ಮಲ್ಲಮ್ಮನವರು ತಿಳಿಸಿದ ಪ್ರಕಾರ, ಶ್ರೀಗಳು ಅಂತಿಮ ಸಮಯದಲ್ಲಿ ಓಂಕಾರನಾದ ಒಮ್ಮಿಂದೊಮ್ಮೆ ಕೇಳಿ ಬಂದಿತು. ಕೂಡಲೆ ಅವರೆಲ್ಲರೂ ಧಾವಿಸಿ ನೋಡಿದಾಗ ಮೈಯೆಲ್ಲ ತಣ್ಣಗಾಗಿತ್ತು. ನೆತ್ತಿಯ ಮೇಲೆ ಮಾತ್ರ ಬಿಸಿಯಾಗಿತ್ತು. ಹೀಗೆ ತಮ್ಮ ಐವತ್ತೂರನೇ ವಯಸ್ಸಿನಲ್ಲಿ ತಮ್ಮ ಅವತಾರ ಸಮಾಪ್ತಿಗೊಳಿಸಿದರು.
ಈ ಸುದ್ದಿಯನ್ನು ಆಕಾಶವಾಣಿ, ವರ್ತಮಾನ ಪತ್ರಿಕೆಗಳಲ್ಲಿ ಮತ್ತು ತಂತಿ ಮೂಲಕ ತಿಳಿದ ನಾಡಿನ ಮತ್ತು ಹೊರನಾಡಿನ ಅಪಾರ ಭಕ್ತರು, ಅನಿರೀಕ್ಷಿತ ಆಘಾತದಿಂದ ದುಃಖಿತರಾಗಿ, ಶ್ರೀಗಳ ಅಂತಿಮ ದರ್ಶನಕ್ಕಾಗಿ ಅಷ್ಟದಿಕ್ಕುಗಳಿಂದ ಬರತೊಡಗಿದರು ಶ್ರೀಗಳವರ ಪಾರ್ಥಿವ ಶರೀರವನ್ನು ಕೈಲಾಸ ಮಂಟಪದಲ್ಲಿಟ್ಟು, ಅಂತಿಮ ದರ್ಶನದ ವ್ಯವಸ್ಥೆ ಮಾಡಿದರು. ಶ್ರೀಗುರುಗಳ ಶರೀರವನ್ನು ಕಂಡು ಭಕ್ತರ ದುಃಖ ಉಮ್ಮಳಿಸಿ ಬಿಕ್ಕಿ ಬಿಕ್ಕಿ ಆಳುವ ತಾಯಂದಿರ ಮತ್ತು ಭಕ್ತರ ರೋಧನ ಮುಗಿಲು ಮುಟ್ಟಿತು. ಇಡೀ ಜನ ಸಮುದಾಯವ ದುಃಖಸಾಗರದಲ್ಲಿ ಮುಳುಗಿತು. ಹುಬ್ಬಳ್ಳಿ ನಗರಕ್ಕೆ ಕತ್ತಲೆ ಆವರಿಸಿದಂತಾಯಿತು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
👇
👇
