ಮುದಕಿಯ ಅದ್ಬುತ ಭಕ್ತಿಗೆ ಸಿದ್ಧರಿಂದ ಮರಣವೇ ಸರಿಯಿತು

 🌺 ಮುದಕಿ ಅದ್ಬುತ ಭಕ್ತಿಗೆ ಮರಣವೇ ಸರಿಯಿತು 🌺



ಹುಬ್ಬಳ್ಳಿಯ ಭೋಮ್ಮಾಪುರ ಓಣಿಯೊಳಗಿರುವ ಮುರಗೋಡದವರ  ಮನೆತನದವರು ಸಿದ್ದರ ಪರಮ  ಭಕ್ತರು, ಅ ಮನೆಯ ದೇವಿಕಾಬಾಯಿಗೆ ನೂರು  ವರ್ಷವಾಗಿತ್ತು, ಅವಳಿಗಂತೂ ಸಿದ್ದರ ನಾಮಾಮೃತವೇ ಅನ್ನ ನೀರು ಹಾಸು ಹೊದಿಕೆಗಳಾಗಿದ್ದಳು. ಅವಳು ತನ್ನ ಬಾಳನ್ನು ಸಿದ್ದರ ಸೇವೆಯಲ್ಲಿ ಸವೆಸಿದ್ದಳು. ಸಿದ್ದರನ್ನು  ನೆನೆಯುತ್ತ ಕುಳಿತರೆ ಅವಳ ಹರ್ಷ ಉಕ್ಕುತ್ತಿತ್ತು, ಆಯುಷ್ಯ ವೃದ್ಧಿಯಾಗುತ್ತಿತ್ತು. ಅವಳು ಹಾಸಿಗೆ ಹಿಡಿದಳು. ಮೊದಲೇ ಹಣ್ಣೆಲೆಯಂತಿದ್ದಳು. ಯಾವಾಗಾದರೂ ಅದು ಉದುರಿಬೀಳುತ್ತದೆಂದು ಮನೆಯವರು ಎಣಿಸಿದ್ದರು, ಅವಳ ದೇಹದಲ್ಲಿಯ ಪ್ರಾಣದ  ಎಣ್ಣೆ ತೀರುತ್ತ ಬಂದಿತೇನೋ ಎನ್ನುವಂತೆ ಅವಳು ಮೆತ್ತಗಾದಳು. ಮಾತು ನಿಂತವು. ಜೀವ  ಟುಕುಟುಕು ಹೊಡೆದುಕೊಳ್ಳತೊಡಗಿತು. ದೇಹದ ಮೇಲೆ ಸಾವಿನ ಕರಾಳ ಛಾಯೆ  ಕ೦ಡ೦ತಾಯಿತು, ತಾಯಿ ಹೊರಟಳು ಎಂದು ಎಲ್ಲರಿಗೂ ಸಂಕಟವಾಯಿತು. ಅಳತೊಡಗಿದರು. ಅವಳ ಕಣ್ಣು ಒಳಸೇರಿದವು. ತುಟಿ ಮುಚ್ಚಿದರು. ಆ ತಾಯಿಯನ್ನು ಅಂಗಾತ ಮಲಗಿಸಿ ಎರಡೂ ಕೈಗಳನ್ನು ಎದೆಯ ಮೇಲೆ ಇಟ್ಟರು. ಜೀವದ ಗಾಳಿ  ನಿಂತಿತೆನಿಸಿತು. ಬಾಗಿಲಲ್ಲಿ ಸಿದಿಗೆ ಸಿದ್ಧವಾಯಿತು. ಬರುವವರೆಲ್ಲರೂಬರತೊಡಗಿದರು, ಅಳು ಮನೆಯನ್ನು ಆವರಿಸಿತು. ಹೆಣದ ಬಳಿಯಲ್ಲಿ ಎಷ್ಟೋ ಹೊತ್ತಿನಿಂದ ಅಳುತ್ತ ಕುಳಿತ ಹೆಣ್ಣು ಮಕ್ಕಳ ಅಳು ಒಮ್ಮೆಲೇ ನಿಂತಿತು. ಅವರು ಮಲಗಿದ ಮುದುಕಿಯ ಮುಚ್ಚಿದ ತುಟಿಗಳನ್ನು ಕಂಡರು, ಅವರು ತಮ್ಮ ಕಣ್ಣುಗಳನ್ನೇ ನಂಬಲಿಲ್ಲ. ಒಮ್ಮೆ ಕಣ್ಣನ್ನು ಚನ್ನಾಗಿ ಉಜ್ಜಿಕೊಂಡು ನೋಡಿದರು. ಆ ತುಟಿಗಳು ಮೆಲ್ಲನೆ ಅಲುಗತೊಡಗಿದ್ದವು. ಎದೆಯ ಮೇಲೆ ಮಡಚಿದ್ದ ಕೈಗಳು ಸಾವಕಾಶವಾಗಿ ತಾಳಹಾಕುತ್ತಿದ್ದವು. ಅವಳು ಏನೋ ಹೇಳಬೇಕೆಂದು ಆತುರಪಡುತಿದ್ದಾಳೆಂದು ನೋಡುವವರಿಗೆ ಅನಿಸಿತು. ಮಗ್ಗುಲಿಗೆ ಎವೆಯನ್ನೂ ಪಿಳುಹಿಸದೆ  ಕುಳಿತ ಅವಳ ಮೈದುನ ಪೀತಾಂಬರಪ್ಪನು ಬಗ್ಗಿದನು. ಅವಳ ಕಿವಿಯ ಹತ್ತಿರ ಬಾಯಿಯ ಇಟ್ಟು ಮೆಲ್ಲನೇ, 'ವೈನೀ, ನಿಮ್ಮ ಇಚ್ಚಾ ಏನು ಹೇಳಿರಿ, ನಾವು ನಡೆಸಿಕೊಡುತ್ತೇವೆ' ಎಂದು ಉಸುರಿದನು. ಅವಳು ಮೆಲ್ಲನೆ, 'ಸಿದ್ಧಾರೂಢಪ್ಪ ನನ್ನ ಮಗ್ಗುಲಲ್ಲಿ ಬಂದು ಕುಳಿತಿದ್ದಾರೆ. ಶಿವಾಯ ನಮಃ ನುಡಿಯಲು ಹೇಳುತ್ತಿದ್ದಾರೆ. ಎಬ್ಬಿಸಿ ಕೂಡ್ರಿಸಿರಿ. ಅಪ್ಪ ನವರ ಪಾದಕ್ಕೆ ನಮಸ್ಕರಿಸುತ್ತೇನೆ' ಎಂದಳು. ಅವಳು ಮಗ್ಗುಲ ಸ್ಥಳವನ್ನು ತೋರಿಸಿದಳು . 'ಇಲ್ಲಿ ಅಪ್ಪನವರು ನಿಂತಿದ್ದರು' ಎಂದು ಆ ಸ್ಥಳದಲ್ಲಿ ಹಣೆ ಹಚ್ಚಿ ಅವಳು ನಮಸ್ಕರಿಸಿದಳು. ತಾಯಿ ಮತ್ತೆ ಹತ್ತು ವರ್ಷ ಬದುಕಿದಳು, ತನ್ನ ಶರೀರವನ್ನು ಸಿದ್ಧರ ಸೇವೆಯಲ್ಲಿ  ಕಳೆದಳು.


_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಮಣ್ಣಿನ ಮೂರ್ತಿಯಲ್ಲಿ ನಿಜ ಸಿದ್ಧರು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ