ಶ್ರೀಗುರುನಾಥರೂಢರಿಗೆ ಚೇಳು ಕಡಿದರು ಅದನ್ನು ಸಹಿಸಿಕೊಂಡು ಹಾಗೆ ಮಲಗಿದ್ದರು




ಬೇಸಿಗೆಯ ಕಾಲದಲ್ಲಿ ಶ್ರೀ ಗುರುನಾಥರ ಖೋಲಿಯಲ್ಲಿ ನಿದ್ದೆ ಬರುವದಿಲ್ಲವೆಂದು ತಿಳಿದು ಅವರ ಅಂಗಸೇವಕ ಸಾಧುಗಳು ಆ ಖೋಲಿಯ ಹೊರಗಡೆ ಒಂದು ಮಂಚವನ್ನು ಹಾಕಿ ಗಾದಿಹಾಸಿ ಮಚ್ಚರದಾನಿಯನ್ನು ಕಟ್ಟಿ ಮಲಗಿದರು. ತಾವು ಬೇರೆಡೆಗೆ ಮಲಗಿದರು. ಮಧ್ಯರಾತ್ರಿಯ ಸಮಯದಲ್ಲಿ ಒಂದು ಕರಿಯ ದೊಡ್ಡ ಚೇಳು ಹೇಗೋ ಅವರ ಮಚ್ಚರದಾನಿಯಲ್ಲಿ ಪ್ರವೇಶಿಸಿ ಗುರುನಾಥರನ್ನು ಬೆಳತನಕ ಕಡಿಯುವಾಗ ಸೇವಕರಿಗೆ ಎಬ್ಬಿಸಬೇಕು ಅಥವಾ ತಾವಾಗಿಯೇ ಏಳಬೇಕು ಅಥವಾ ಯಾರನ್ನಾದರೂ ಕೂಗಿ ಕರೆಯಬೇಕು ಎಂಬ ಭಾವನೆಯಿರಲಿಲ್ಲ ಅವರು ಆ  ಹೊತ್ತಿನಲ್ಲಿ ಬ್ರಹ್ಮಾನಂದದಲ್ಲಿರುವದರಿಂದ ಅದರ ಬಾಧೆ ಅವರಿಗೆ ಇರಲಿಲ್ಲ ಅರ್ಥಾತ್ ದೇಹಭಾವ ನಷ್ಟವಾಗಿ ತನ್ನ ಸ್ವರೂಪವಾದ ಆತ್ಮಾನಂದದಲ್ಲಿದ್ದರು.
ರಾತ್ರಿ ಕಳೆದು ಬೆಳಗಾಯಿತು, ಸಾಧುಗಳು ಬಂದು ಗುರುನಾಥರನ್ನು ಎಬ್ಬಿಸಲು ಮಚ್ಚರದಾನಿಯನ್ನು ತೆರೆದಾಗ ಆ ಚೇಳು ಅಲ್ಲಿಂದ ಹೊರಟು ಹೋಯಿತು. ಇದನ್ನು ನೋಡಿದ ಸಾಧುಗಳು ಗುರುನಾಥರಿಗೆ ಎಬ್ಬಿಸಿ ನೋಡಿದಾಗ, ಅನೇಕ ಕಡೆ ಚೇಳು ಕಡಿದಿರುವ ಸ್ಥಾನದಲ್ಲಿ ಗಂಟುಗಳಾಗಿದ್ದವು. ಎಲ್ಲರಿಗೂ ಅಚ್ಚರಿಯಾಯಿತು. ನಂತರ ಅವರನ್ನು ಎತ್ತಿಕೊಂಡು ಹೋಗಿ ಉಪಚಾರ ಮಾಡಿ ಖೋಲಿಗೆ  ಒಯ್ದು ಕೂಡಿಸಿದರು. ಯಾವಾಗಲೂ ಆತ್ಮಾನಂದದಲ್ಲಿದ್ದ ಅವರು ಉಣಬೇಕು, ಉಡಬೇಕು, ತೊಡಬೇಕು ಎಂಬ ಬೇಕು ಬೇಡಗಳನ್ನು ನೂಕಿ, ಏಕವಾದ ಸಚ್ಚಿದಾನಂದದಲ್ಲಿರುತ್ತಿದ್ದರು. ಅವರ ಸೇವೆ ಮಾಡಿದವರು ಪಾವನರಾದರು. ಲೌಕಿಕ ಬುದ್ಧಿಯವರು ಅವರನ್ನು ಮನೆಗೆ ಕರೆದೊಯ್ದು ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಿದ್ದರು. ಹೀಗೆ ಅವರ ಇರುವಿಕೆಯನ್ನು ವಿವರಿಸುವುದು ಯಾರಿಗೂ ಸಾಧ್ಯವಿಲ್ಲ.


 _______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಪೂರ್ಣ ವೈರಾಗ್ಯಮೂರ್ತಿ ಗುರುನಾಥಾರೂಢರು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ