ಗುರುನಾಥರು ಕನಸಲ್ಲಿ ದರ್ಶನ ಕೊಟ್ಟು ಈಶ್ವರಪ್ಪನ ವೈರಾಗ್ಯಮೂರ್ತಿ ಮಾಡಿದರು




ಕುಂದಗೋಳ ತಾಲೂಕಿನ ಭೂಕೊಪ್ಪ ಗ್ರಾಮದಲ್ಲಿ ಈಶ್ವರಪ್ಪ ಗುರುವಿನವರ ಎಂಬ ಶ್ರೀಮಂತನಿದ್ದನು. ಆಸ್ತಿ ಪಾಸ್ತಿಯಿಂದ ಕೂಡಿದ ಸಂಸಾರ ಸುಖಮಯವಾಗಿತ್ತು. ಒಂದು ದಿವಸ ಶುಭ ಪ್ರಸಂಗದಲ್ಲಿ ಮೈಲಾರ ದೇವರ ಗುಡಿಯಲ್ಲಿ ಮಲಗಿದ್ದರು. ಆಗ ಅವರ ಕನಸಿನಲ್ಲಿ ಶ್ರೀ ಗುರುನಾಥರು ಪ್ರತ್ಯಕ್ಷರಾದರು. ಆಗ ಈಶ್ವರಪ್ಪ ಗುರುಗಳನ್ನು ಕಂಡು ಭಕ್ತಿಯಿಂದ ನಮಿಸಿ ಅವರ ಪಾದಪೂಜೆ ಮಾಡಿ ಸಾಷ್ಟಾಂಗ ನಮಸ್ಕರಿಸಿದಾಗ ಸದ್ಗುರುಗಳು ಅವರನ್ನು ಎಬ್ಬಿಸಿ, ತಮ್ಮ ಕೊರಳೊಳಗಿನ ರುದ್ರಾಕ್ಷ ಮಾಲೆಯನ್ನು ಈಶ್ವರಪ್ಪನವರ ಕೊರಳಿಗೆ ಹಾಕಿ ಆಶೀರ್ವದಿಸಿ ಅಂತರ್ಧಾನವಾದರು.
ಮುಂದೆ ಈಶ್ವರಪ್ಪನವರಿಗೆ ಎಚ್ಚರಾಗಿ ವಿಚಾರ ಮಾಡುತ್ತ ಕುಳಿತಿರುವಾಗ ಅವರಿಗೆ ತೀವ್ರ ವೈರಾಗ್ಯ ಪ್ರಾಪ್ತವಾಗಿ, ಇನ್ನು ಸಂಸಾರ, ಸಂಪತ್ತು ಯಾವುದೂ ಬೇಡವೆಂದು ಮನಸ್ಸಿನಲ್ಲಿ ನಿಶ್ಚಯ ಮಾಡಿ, ಶ್ರೀಗುರುನಾಥರ ಸೇವೆಯಲ್ಲಿಯೇ ಕಾಲ ಕಳೆಯಬೇಕೆಂದು ನಿರ್ಧರಿಸಿ, ಅಲ್ಲಿಂದ ಹೊರಟು ಶ್ರೀ ಸಿದ್ಧಾರೂಢರ ಮಠಕ್ಕೆ ಬಂದು ಶ್ರೀ ಸಿದ್ಧರ ಗದ್ದುಗೆಗೆ ನಮಸ್ಕರಿಸಿ, ಶ್ರೀ ಗುರುನಾಥಾರೂಢರ ದರ್ಶನ ಪಡೆದಾಗ ಅವರಿಗೆ ಆದ ಆನಂದ ಅಷ್ಟಿಷ್ಟಲ್ಲ. ಆಗ ಗುರುನಾಥಾರೂಢರು ನಸುನಗುತ್ತ ಏಕದೃಷ್ಟಿಯಲ್ಲಿ ಆಶೀರ್ವದಿಸಿ, ಒಂದು ಹೂವನ್ನು ಅವರತ್ತ ಎಸೆದರು. ಅದು ಅವರ ಎದೆಗೆ ಬಡಿದು ಕೈಯಲ್ಲಿ ಬಿದ್ದಿತು. ಆಗ ಅವರ ಅಂತಃಕರಣ ಪರಿಶುದ್ಧವಾಯಿತು. ಅಂದಿನಿಂದ ಶ್ರೀಗುರುನಾಥರ ಸೇವೆಯಲ್ಲಿ ಉಳಿದರು.
ಶ್ರೀಗಳಿಗೆ ಸ್ನಾನ ಮಾಡಿಸುವಾಗ ಅವರು ಉಗುಳಿದ ನೀರನ್ನು ಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಈ ಸೇವೆಯ ಫಲವಾಗಿ ಶ್ರೀ ಸಿದ್ಧಾರೂಢರ ಶಿಷ್ಯರಾದ ಶ್ರೀ ಶಿವಪುತ್ರಪ್ಪಸ್ವಾಮಿಗಳ ಮತ್ತು ಜಡಿಮಠದ ಶಂಕರನಂದರ ಶಾಸ್ತ್ರಕೇಳುವ ಅಭಿರುಚಿ ಹುಟ್ಟಿ ಶಾಸ್ತ್ರ ಕೇಳಹತ್ತಿದರು. ಬರಬರುತ್ತ ಶಾಸ್ತ್ರದ ಗುಟ್ಟು ತಿಳಿಯಹತ್ತಿತು. ಮುಂದೆ ಮಲ್ಲಿಕಾರ್ಜುನ ಸ್ವಾಮಿಗಳ ಸೇವೆ ಮಾಡುತ್ತ, ಅವರಿಂದ ಸನ್ಯಾಸದೀಕ್ಷಾ ಬದ್ದರಾಗಿ ಶ್ರೀಮುಕ್ತಾನಂದ ಸ್ವಾಮಿಗಳೆಂದು ಹೆಸರು ಪಡೆದು, ಈವರೆಗೂ ಅನೇಕ ಊರುಗಳಲ್ಲಿ ಸಂಚರಿಸುತ್ತ ಪುರಾಣ ಶಾಸ್ತ್ರ ಹೇಳುತ್ತ ತಮ್ಮ ಸಾಧಕ ಜೀವನ ನಡೆಸುತ್ತಿದ್ದಾರೆ.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಗುರಪ್ಪ ಕೃಪೆಯಿಂದ ಗೌರಮ್ಮ ಮಗುವನ್ನು ಪಡೆದಳು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ