ಗುರಪ್ಪ ಕೃಪೆಯಿಂದ ಗೌರಮ್ಮ ಮಗುವನ್ನು ಪಡೆದಳು




ಒಂದೂರಿನ ಲವಪ್ಪ ದೊಡ್ಡಮನಿ ಇವರು ಗೌರಮ್ಮ ಎಂಬವರೊಡನೆ ಸುಖಮಯ ಜೀವನ ಸಾಗಿಸುತ್ತಿದ್ದರು. ಲಗ್ನವಾಗಿ ಬಹಳ ವರ್ಷಗಳಾದರೂ ಮಕ್ಕಳಾಗಲಿಲ್ಲವಾದ್ದರಿಂದ ಅವರಿಗೆ ಚಿಂತೆಯಾಗಿ, ಕಂಡಕಂಡ ದೇವರಿಗೆ ಹರಕೆ ಹೊತ್ತು ಹಲವು ವರ್ಷ ಕಳೆದರೂ ಮಕ್ಕಳಾಗಲಿಲ್ಲ. ಒಬ್ಬರ ಹೇಳಿಕೆಯಂತೆ ಶ್ರೀ ಸಿದ್ಧಾರೂಢರ ಮಠಕ್ಕೆ ಬಂದು ಸಿದ್ದರ ಗದ್ದುಗೆಗೆ ನಮಸ್ಕರಿಸಿ ಶ್ರೀ ಗುರುನಾಥಾರೂಢರ ದರ್ಶನಕ್ಕೆ ಹೋಗಿ ಸಾಷ್ಟಾಂಗ ನಮಿಸಿ ಎದ್ದು ನಿಂತು, ಶ್ರೀಗುರುನಾಥಾರೂಢಾ ನನಗೆ ಹಲವಾರು ವರ್ಷಗಳಿಂದ ಮಕ್ಕಳಾಗಲಿಲ್ಲ. ಜನರು ನನಗೆ ಬಂಜೆತನದ ಹಣೆಪಟ್ಟಿ ಕಟ್ಟಿದ್ದಾರೆ. ಕರುಣಾಳುಗಳಾದ ತಾವ ಒಂದು ಮಗುವನ್ನು ದಯಪಾಲಿಸಿರಿ ದೇವಾ ಎಂದು ತನ್ನ ಸೆರಗೊಡ್ಡಿ ಬೇಡಿಕೊಂಡಳು.
ಆಗ ಗುರುನಾಥರು ಕರುಣೆ ದೋರಿ ನಸುನಗುತ್ತ ಒಂದು ರೂಪಾಯಿಯನ್ನು ತಮ್ಮ ಬಲಗೈಯಿಂದ ಅವಳೆಡೆಗೆ ಎಸೆದರು. ಆ ರೂಪಾಯಿ ಗೌರಮ್ಮನ ಉಡಿಯಲ್ಲಿ ಬಿತ್ತು. ಆಗ ಅಲ್ಲಿದ್ದ ಸಾಧುವೊಬ್ಬರು ಗೌರಮ್ಮ ನನ್ನು ಕುರಿತು ಮಗಳೇ ನಿನಗೆ ಗುರುಗಳ ಆಶೀರ್ವಾದವಾಗಿದೆ, ನಿನ್ನ ಇಚ್ಛೆ ಈಡೇರುತ್ತದೆ. ಚಿಂತಿಸಬೇಡ ಎಂದು ಹೇಳಿ ಕಳಿಸಿದರು. ಆಗ ದಂಪತಿಗಳು ಗುರುಗಳಿಗೆ ನಮಸ್ಕರಿಸಿ ಊರಿಗೆ ಹೋದ ಒಂದು ತಿಂಗಳಲ್ಲಿ ಗೌರಮ್ಮ ಗರ್ಭವತಿಯಾಗಿ ಗಂಡುಕೂಸಿಗೆ ಜನ್ಮಕೊಟ್ಟಳು ನಂತರ ದಂಪತಿಗಳು ಕೂಸನ್ನು ತೆಗೆದುಕೊಂಡು ಬಂದು ಶ್ರೀಗುರುನಾಥಾರೂಢರ ದರ್ಶನ ಪಡೆದು ಕಾಣಿಕೆ ಸಲ್ಲಿಸಿ ಸಂತೋಷದಿಂದ ಊರಿಗೆ ಹೋದರು.


 _______________________________

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ