ತಮ್ಮಣ್ಣ ದಿವಟೆ ಹಾವಿನಿಂದ ಪಾರಾದ

 🌺 ತಮ್ಮಣ್ಣ ದಿವಟೆ ಹಾವಿನಿಂದ ಪಾರಾದ 🌺



ಸಿದ್ದರ ಭಕ್ತ ತಮ್ಮಣ್ಣ ದಿವಟೆಯವರು ಹಗಲು ರಾತ್ರಿ ಮಠದಲ್ಲಿ ಸೇವೆ ಮಾಡುತ್ತಿದ್ದರು. ಮಠದ ಕೆರೆ ಕಡಿಸುವ ಕೆಲಸ ನಡೆದಾಗ ತಮ್ಮಣ್ಣನಿಗೆ ಸಿದ್ದರು ಹೇಳಿದರು 'ತಮ್ಮಣ್ಣಾ, ಕೆರೆ ಕಡಿಸುವ ಸೇವೆಯಲ್ಲಿ ನಿಷ್ಠೆಯಿಂದ ಭಾಗವಹಿಸಿ ಕಾರ್ಯ ಮಾಡು' ಎಂದು ಆಜ್ಞೆ ಮಾಡಿದರು. ಗುರುಗಳ ಮಾತನ್ನು ಶಿರಸಾವಹಿಸಿ ಆ ಕಾರ್ಯಕ್ಕಾಗಿ ತಮ್ಮಣ್ಣನು ಮನೆಯಿಂದ ಮಠಕ್ಕೆ ಬರುವಾಗ ದಾರಿಯಲ್ಲಿ ಒಂದು ದೊಡ್ಡ ಸರ್ಪವು ಅವನ ಮೇಲೆ ಬಂದು ಸುತ್ತಿಕೊಂಡಿತು. ಅವನು ಗಾಬರಿಯಿಂದ ಗಟ್ಟಿಯಾಗಿ ಸಿದ್ಧರ ನಾಮೋಚ್ಚಾರ ಮಾಡಿದ ಕೂಡಲೇ ಅದು ಬಿಟ್ಟು ಹೋಯಿತು. ಯಾವ ಅಪಾಯ ಮಾಡಲಿಲ್ಲ. ಅವನು ಮಠಕ್ಕೆ ಹೋಗಿ ಗುರುಗಳಿಗೆ ವಂದಿಸಿ ನಡೆದ ಘಟನೆಯನ್ನು ತಿಳಿಸಿದಾಗ ಗುರುಗಳು ಹೇಳಿದರು 'ತಮ್ಮಣ್ಣಾ, ಆ ಸಮಯದಲ್ಲಿ ನಿನಗೆ ಮರಣ ಬಂದಿತ್ತು. ನೀನು ಗುರುಕಾರ್ಯಕ್ಕಾಗಿ ಬರುತ್ತಿರುವುರಿಂದ ಆ ಗುರುವೇ ನಿನ್ನನ್ನು ಉಳಿಸಿದನು' ಎಂದಾಗ ಅವನ ಭಕ್ತಿ ಹೆಚ್ಚಾಯಿತು.


ಹುಬ್ಬಳ್ಳಿಯ ಕಮರೀಪೇಟೆಯ ನಿವಾಸಿಗಳಾದ ತಮ್ಮಣ್ಣ ದಿವಟೆಯವರು (ಗಾಯಕವಾಡ) ಆರೂಢರ ಭಕ್ತರಾಗಿರುವಂತೆ ಇವರ ತಮ್ಮಂದಿರಾದ ರಾಮಚಂದ್ರ ದೇವೇಂದ್ರ, ಮಹಾದೇವ ಮತ್ತು ಶ್ರೀ ಗುರುನಾಥ ದಿವಟೆಯವರು ಕೂಡ ಆರೂಢದ ಭಕ್ತರಾಗಿದ್ದರು. ನೇಕಾರಿಕೆಯ ಉದ್ಯೋಗ ವ್ಯಾಪಾರ ಮಾಡುತ್ತಿದ್ದ ಇವರು ದೊಡ್ಡ ಶ್ರೀಮಂತರಾದರೂ ನಿರಭಿಮಾನದಿಂದ ಸೇವೆ ಸಲ್ಲಿಸುತ್ತಿದ್ದರು. ತಮ್ಮಣ್ಣನವರ ತಮ್ಮ ಶ್ರೀ ಗುರುನಾಥರು ಆಜೀವ ಬ್ರಹ್ಮಚಾರಿಗಳಾಗಿದ್ದು ಭಾವಚಿತ್ರ ಕಲೆಯಲ್ಲಿ ಬಹಳ ನಿಪುಣರು. (ಫೋಟೋಗ್ರಫಿ) ತಮ್ಮ ಕಲೆಯ ಸೇವೆ ಸಲ್ಲಿಸುವುದಲ್ಲದೆ ಶ್ರೀ ಸಿದ್ದರೆ ಮುಖದಿಂದ ಅಧ್ಯಾತ್ಮ ವಿಷಯ ಶ್ರವಣ ಮಾಡುತ್ತಿದ್ದರು.


ಒಂದು ದಿವಸ ತಮ್ಮಣ್ಣನವರು ಶ್ರೀ ಸಿದ್ಧಾರೂಡರನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಪಾದ ಪೂಜಿಸಿ ಹೀಗೆ ಬೇಡಿಕೊಂಡರು 'ಅಪ್ಪನವರೇ, ನಮ್ಮ ಮನತನವು ಬಹಳ ದೊಡ್ಡದಾಗಿದ್ದು, ಉದ್ಯೋಗಕ್ಕೆ ಮತ್ತು ಮನೆಯ ಬಳಕೆಗೆ ಬಹಳ ನೀರು ಬೇಕಾಗುತ್ತದೆ. ಅದಕ್ಕಾಗಿ ಒಂದು ಬಾವಿ ತೆಗೆಸಬೇಕಾಗಿದೆ. ಎಲ್ಲಿ ತೆಗೆಯಿಸಲಿ?' ಎಂದಾಗ ಸದ್ಗುರುಗಳು ಮನೆಯ ಪಶ್ಚಿಮ ದಿಕ್ಕಿನಲ್ಲಿ ಜಾಗೆಯನ್ನು ಗುರುತಿಸಿ ಪೂಜೆ ಮಾಡಿಸಿ ಸ್ವತಃ ಗುದ್ದಲಿ ಹಿಡಿದು ಐದು ಕಚ್ಚು ಹಾಕಿ ಹೇಳಿದರು 'ತಮ್ಮಣ್ಣ, ಇಲ್ಲಿಯೇ ಭೂಮಿ ಅಗಿಯಿರಿ. ಸಾಕಷ್ಟು ನೀರು ಬರುತ್ತದೆ. ನಿಮಗೆ ನೀರಿನ ಕೊರತೆಯಾಗುವುದಿಲ್ಲ' ಎಂದು ಹೇಳಿ ಆಶೀರ್ವದಿಸಿ ಮಠಕ್ಕೆ ಹೋದರು.


ನಂತರ ಆ ಜಾಗೆಯಲ್ಲಿ ಕೆಲವು ಅಡಿ ಭೂಮಿ ಅಗೆದಾಗ ಅನೇಕ ಸಲೆಗಳಿಂದ ನೀರು ಪುಟಿ ಪುಟಿದು ಬಂದು ಬಾವಿ ತುಂಬಿತು. ಮುಂದೆ ಅದನ್ನು ವ್ಯವಸ್ಥಿತವಾಗಿ ಕಟ್ಟಿಸಿದರು. ಇಂದಿಗೂ ಆ ಬಾವಿಯಲ್ಲಿ ಯಾವಾಗಲೂ ನೀರು ತುಂಬಿರುತ್ತಿದ್ದು, ಬೇಸಿಗೆಯಲ್ಲಿ ಒಂದು ಅಳು ಅಳತೆಯಲ್ಲಿ ನೀರು ಸಿಗುತ್ತದೆ. ಮಳೆಗಾಲದಲ್ಲಿ ಕೈಯಿಂದ ನೀರು ತುಂಬಿಕೊಳ್ಳಬಹುದು. ಇವರ ನೇಕಾರಿಕೆಯ ಉದ್ಯೋಗ ಬಹಳ ದೊಡ್ಡದಿದ್ದು ಬಣ್ಣ ಹಾಕಲು ಕುಡಿಯಲು ಪಂಜೆ ಭಟ್ಟಿಗೆ ಎಷ್ಟು ನೀರು ಬಳಸಿದರೂ ಕಡಿಮೆಯಾಗುವುದಿಲ್ಲ. ದಿವಂಗತ ತಮ್ಮಣ್ಣ ದಿವಟೆಯವರ ಸುಪುತ್ರ ಸದಾಶಿವ ದಿವಟೆ (ವಕೀಲರು)ಯವರ ಮನೆಯ ಒಳಾಂಗಣದಲ್ಲಿ ಆ ಬಾವಿಯನ್ನು ಇಂದಿಗೂ ಕಾಣಬಹುದು. ಶ್ರೀ ಸದಾಶಿವರ ಧರ್ಮಪತ್ನಿ ಶಾಂತಾಬಾಯಿ ಮತ್ತು ಅವರ ಮಕ್ಕಳಾದ ಸಂಜೀವ, ಇನ್ನೊಬ್ಬ ಮಗ ಸುಧಾಕರ ಮತ್ತು ಬಂಧು ಬಳಗದವರು ಈಗಲೂ ಸಿದ್ದರ ಸ್ಮರಣೆ ಮಾಡಿಯೇ ಕಾಯಕ ಮಾಡುತ್ತ ಸಿದ್ಧರ ಭಕ್ತರಾಗಿದ್ದಾರೆ. ಜೀವನ್ಮುಕ್ತ ತಮ್ಮಣ್ಣನವರ ಇನ್ನೊಬ್ಬ ಸುಪುತ್ರ ದಿವಂಗತ ಮಲ್ಲಪ್ಪ ದಿವಟೆಯವರು ಸಹ ಸಿದ್ದರ ಪರಮ ಭಕ್ತರಾಗಿದ್ದರು. ಇವರೂ ನೇಕಾರಿಕೆಯ ಉದ್ಯೋಗಸ್ಥರಾಗಿದ್ದು ಅವರ ಸುಪುತ್ರರಾದ ಬಾಳಕೃಷ್ಟ, ಪ್ರಕಾಶ ಮತ್ತು ದೇವೇಂದ್ರ (ಬಾಬು) ಅವರ ಮನೆಯವರೆಲ್ಲರೂ ಸಿದ್ಧರ ಪರಮ ಭಕ್ತರಾಗಿ ಇಂದಿಗೂ ಮಠದ ಸೇವೆ ಸಲ್ಲಿಸುತ್ತಿದ್ದಾರೆ.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಪತ್ತಾರನಿಗೆ ಬಂಗಾರದ ಕೆಲಸ ಕಲಿಸಿದ ಆರೂಢರು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇


Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ