ಅಪ್ಪಾಸಾಹೇಬರು ಮಗುವನ್ನು ಪಡೆದ ಕಥೆ
🌺 ಅಪ್ಪಾಸಾಹೇಬರು ಮಗುವನ್ನು ಪಡೆದ ಕಥೆ 🌺
ಜಮಖಂಡಿಯ ಸಂಸ್ಥಾನಿಕರಾದ ಶಂಕರರಾವ ಅಪ್ಪಾಸಾಹೇಬ ಪಟವರ್ಧನ ಅವರಿಗೆ ಗಂಡು ಸಂತಾನವಿರಲಿಲ್ಲ. ಆದ್ದರಿಂದ ಬಹಳ ಚಿಂತೆಗೊಳಗಾಗಿದ್ದರು. ಯಾರೋ ಒಬ್ಬರು ಪ್ರತಿದಿನ ಒಂದು ಸಲದಂತೆ ಒಂದುನೂರಾ ಎಂಟು ಸಲ ಸತ್ಯನಾರಾಯಣ ಪೂಜೆ ಮಾಡುವುದರಿಂದ ಮಕ್ಕಳಾಗುತ್ತವೆ ಎಂದು ಹೇಳಿದ್ದರು. ಅದರಂತೆ ಪೂಜೆ ಪ್ರಾರಂಭಿಸಿದರು. ಆಗ ಸಿದ್ದಾರೂಢರ ಶಿಷ್ಯರಾದ ಅಕ್ಕಲಕೋಟೆಯ ಶರಣಪ್ಪನವರು ಅದೇ ಊರಿನ ಹನುಮಂತದೇವರ ಗುಡಿಯಲ್ಲಿ ಸಿದ್ದರ ಚರಿತ್ರೆಯ ಕೀರ್ತನ ಮಾಡುತ್ತಿದ್ದರು, ಕೀರ್ತನೆಯನ್ನು ಕೇಳಲು ಅರಸರ ದಿವಾನರಾದ ರಾಮರಾವ ಅವರ ಮೂಲಕ ಶರಣಪ್ಪನವರು ಆಮಂತ್ರಣ ಕಳಿಸಿದರು. ಏಳು ದಿವಸ ಕಳೆದರೂ ಅರಸರು ಯಾವುದೋ ಕಾರಣಕ್ಕಾಗಿ ಬರಲಿಲ್ಲ.
ಆಗ ರಾಜವಾಡೆಯಲ್ಲಿ ಪೂಜೆಯ ಒಂದು ನೂರಾ ಎಂಟನೆಯ ಕೊನೆಯ ದಿವಸವಾಗಿದ್ದು, ಅಲ್ಲಿ ಓರ್ವ ಸಂತನು ಬಂದನು. ಅವನು ಪ್ರಸಾದ ಕೇಳಲು ಅದಕ್ಕೆ ಅಲ್ಲಿಯವರು ಅವನನ್ನು ಕುರಿತು ಪೂಜೆಯ ಮಂಗಲವಾಗಿ ಮೊದಲು ಬ್ರಾಹ್ಮಣರ ಭೋಜನವಾಗುವತನಕ ಪ್ರಸಾದ ಕೊಡುವುದಿಲ್ಲ' ಎಂದು ಬೆದರಿಸಿ ಕಳಿಸಿದರು. ಆಗ ಸಂತನು ಅರಮನೆಯ ಹೊರಗೆ ಬರುವಾಗ ಶರಣಪ್ಪನವರ ಕೀರ್ತನ ಕೇಳಿದ. ದ್ವಾರಪಾಲಕನು ಸಂತನಿಗೆ ಎರಡು ಆಣೆ ಬೆಳ್ಳಿಯ ನಾಣ್ಯ ಕೊಟ್ಟು ನಮಸ್ಕರಿಸಿದಾಗ ಸಂತ ಹೇಳಿದ 'ಹೇ ಭಕ್ತನೇ, ನಿಮ್ಮ ಮಹಾರಾಜ ಮಾಡಿದ ಪೂಜೆಯ ಫಲ ನಿನಗೆ ತಟ್ಟಲಿ' ಎಂದು ಹೇಳಿ ಹೊರಟುಹೋದನು.
ಮುಂದೆ ಸತ್ಯನಾರಾಯಣ ಪೂಜೆ ಮುಗಿದು ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕೆಂದು ಪ್ರಸಾದ ತಯಾರಿಸಿ ಎಲ್ಲ ಭಾಂಡಿಗಳ ಮುಚ್ಚಳ ತೆರೆದು ನೋಡಿದಾಗ ಅವುಗಳಲ್ಲಿರಬೇಕಾದ ಪ್ರಸಾದ ಮಾಯವಾಗಿತ್ತು. ಎಲ್ಲರೂ ಗಾಬರಿಯಾಗಿ ವಿಚಾರ ಮಾಡುತ್ತ ಆಗ ಒಬ್ಬ ಸಂತನು ಬಂದಿದ್ದು ಅವನಿಗೆ ಪ್ರಸಾದ ಕೊಡುವುದಿಲ್ಲವೆಂದು ಬೆದರಿಸಿ ಕಳಿಸಿದ್ದವು. ಅವನೆಲ್ಲಿರಬಹುದೆಂದು ದ್ವಾರಪಾಲಕನಿಗೆ ಕೇಳಿದಾಗ ಅವನು ಹೇಳಿದ ಹನುಮಂತ ದೇವರ ಗುಡಿಯಲ್ಲಿ ಶರಣಪ್ಪನವರು ಒಂದು ಭಾವಚಿತ್ರವಿಟ್ಟು ಕೀರ್ತನ ಮಾಡುತ್ತಿದ್ದಾರೆ. ಆ ಭಾವಚಿತ್ರದಲ್ಲಿರುವ ವ್ಯಕ್ತಿಯಂತೆ ಅವನಿದ್ದನು' ಎಂದು ಹೇಳಿದ. ಈ ಮಾತನ್ನು ಕೇಳಿದ ಅರಸರು ಹನುಮಂತ ದೇವರ ಗುಡಿಗೆ ಹೋಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಶರಣಪ್ಪನವರನ್ನು ಪ್ರಸಾದಕ್ಕಾಗಿ ಆಮಂತ್ರಣ ಕೊಟ್ಟು ಬಂದರು.
ಆಗ ಶರಣಪ್ಪನವರು ಭಕ್ತರನ್ನು ಕರೆದುಕೊಂಡು ಆರೂಢರ ಭಾವಚಿತ್ರ ಸಹಿ ಅರಮನೆಗೆ ಬಂದು ಸತ್ಯನಾರಾಯಣನ ಮುಂದೆ ಸಿದ್ದರ ಭಾವಚಿತ್ರವನ್ನಿಟ್ಟು ಓಂ ನಮಃ ಶಿವಾಯ ಮಂತ್ರ ಮತ್ತು ಸಿದ್ಧರ ಭಜನೆ ಪ್ರಾರಂಭಿಸಿದರು. ಅಷ್ಟರಲ್ಲಿ ಯಾರೂ ಒಬ್ಬರು ಪ್ರಸಾದದ ಭಾಂಡಿಗಳ ಮುಚ್ಚಳ ತೆರೆದು ನೋಡಿದಾಗ ಎಲ್ಲ ಬಾಂಡಿಗಳಲ್ಲಿ ಪ್ರಸಾದ ತುಂಬಿಕೊಂಡಿತ್ತು. ಅವನು ಅರಸರಿಗೆ ತಿಳಿಸಿದಾಗ ಆಶ್ಚರ್ಯಗೊಂಡರು. ನಂತರ ಶ್ರೀ ಸಿದ್ಧಾರೂಢರ ಮಂಗಳಗೀತ ಪಾಡಿ ಪೂಜೆ ಮುಗಿಸಿ ಅವರಿವರನ್ನದೆ ಒಂದೇ ಪಂಗ್ತಿಯಲ್ಲಿ ಕುಳಿತು ಪ್ರಸಾದ ತೆಗೆದುಕೊಂಡರು. ನಂತರ ಮಹಾರಾಜರು ಶರಣಪ್ಪನವರಲ್ಲಿ ಕ್ಷಮೆ ಕೇಳಿದಾಗ ಶರಣಪ್ಪನವರು ಅರಸರೇ, ಈ ಲೀಲೆ ನನ್ನದಾಗಿಲ್ಲ. ಇದೆಲ್ಲ ಸದ್ಗುರು ಕರುಣೆಯಿಂದ ನಡೆದಿದೆ. ಅವರ ದರ್ಶನ ಒಂದು ಸಲ ಮಾಡಿಕೊಂಡರೆ ನಿಮಗೇ ತಿಳಿಯುತ್ತದೆ ಬನ್ನಿರಿ' ಎಂದು ಅವರನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಸಿದ್ಧರ ದರ್ಶನ ಮಾಡಿಸಿದರು. ಆಗ ಸಿದ್ಧ ಹೇಳಿದರು ಅರಸರೇ ನೀವು ಇಲ್ಲಿದ್ದು ಒಂಭತ್ತು ತಿಂಗಳು ಸೇವೆ ಮಾಡಿದರೆ ಮಕ್ಕಳಾಗುತ್ತವೆ' ಎಂದು ಆಶೀರ್ವದಿಸಿದರು. ಅದರಂತೆ ಅರಸರು ಸೇವೆ ಸಲ್ಲಿಸಿದಾಗ ಅವರಿಗೆ ಗಂಡು ಮಗು ಜನಿಸಿತು. ಗುರುವಿನ ಆಶೀರ್ವಾದವೆಂಬ ಪ್ರಸಾದದಿಂದ ಹುಟ್ಟಿದ ಮಗುವಿಗೆ ಗುರುಪ್ರಸಾದನೆಂದು ಹೆಸರಿಟ್ಟರು.
_____________________________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
