ಹನುಮಂತಗೌಡರ ಮಗನ ಪ್ರಾಣ ಉಳಿಸಿದ ಗುರಪ್ಪ
ಮೊರಬ ಗ್ರಾಮದ ಹನುಮಂತಗೌಡಾ ಪಾಟೀಲ ಇವರು ಆ ಗ್ರಾಮದಲ್ಲಿ ದೊಡ್ಡ ಜಮೀನುದಾರರು. ದೈವೀ ಭಕ್ತರು, ದಾನಶೀಲರು ಹಾಗೂ ಶ್ರೀಸಿದ್ದಾರೂಢರ ಪರಮ ಭಕ್ತರಾಗಿದ್ದರು. ದೇವರ ಹುಬ್ಬಳ್ಳಿಯ ನಾಗಾನಂದರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿಸಲು ಶ್ರೀ ಗುರುನಾಥಾರೂಢರನ್ನು ಮೊರಬ ಗ್ರಾಮಕ್ಕೆ ಕರೆಸಿದ್ದರು. ಶ್ರೀಗಳು ಗ್ರಾಮ ಪ್ರವೇಶಿಸುವ ಪೂರ್ವದಲ್ಲಿ ಮೂತ್ರವಿಸರ್ಜನೆಯ ಸಲುವಾಗಿ ಊರ ಹೊರಗಡೆ ಅವರನ್ನು ಒಂದು ಹೊಲದ ಬದಿಯಲ್ಲಿ ಕೂಡಿಸಿದರು. ನಂತರ ಶ್ರೀಗುರುನಾಥರು ಗ್ರಾಮ ಪ್ರವೇಶ ಮಾಡಿದರು.
ಆ ಸಮಯದಲ್ಲಿ ಉರನಾಗರಿಕರು ಅವರ ದರ್ಶನಕ್ಕೆ ಬಂದು ಗುರುಗಳ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು. ಶ್ರೀ ಹನುಮಂತಗೌಡರ ಮದುವೆ ಶ್ರೀಮತಿ ಶಂಕ್ರವ್ವ ಇವರ ಜೊತೆಗಾಗಿದ್ದರೂ ಪ್ರಪಂಚಕ್ಕೆ ಅಣಿಯಾಗಿರಲಿಲ್ಲ. ಆಗ ಎಲ್ಲ ಭಕ್ತರು ಶ್ರೀಗಳ ದರ್ಶನ ಪಡೆಯುವಂತ, ಶಂಕ್ರವ್ವನವರು ಶ್ರೀಗುರುನಾಥ ಸ್ವಾಮಿಗಳ ದರ್ಶನ ಪಡೆಯಲು ಹೋದಾಗ, ಸ್ವಾಮಿಗಳು ತಮ್ಮ ಕೊರಳಲ್ಲಿಯ ಮಾಲೆಯಿಂದ ಎರಡು ಹೂವುಗಳನ್ನು, ನಸುನಗುತ್ತ ಪ್ರಸಾದ ರೂಪದಿಂದ ಶಂಕ್ರಮ್ಮನಿಗೆ ಕೊಟ್ಟರು. ಮುಂದೆ ಶಂಕ್ರಮ್ಮನವರು ಪ್ರಪಂಚಕ್ಕೆ ಅಣಿಯಾಗಿ ಒಂದೇ ತಿಂಗಳಲ್ಲಿ ಗರ್ಭ ನಿಂತಿತು. ನಂತರ ಒಂದು ಮಗುವಿನ ತಾಯಿಯಾದಳು. ಆ ಮಗುವಿಗೆ ಗುರುನಾಥ ಎಂದು ಹೆಸರಿಟ್ಟರು.
ಆ ಮಗು ಬೆಳೆಯುತ್ತ ಆರು ವರುಷದವನಾದಾಗ ಮಗು ಗುರುನಾಥನಿಗೆ ಕಾಮಣಿ ಬೇನೆ ಪ್ರಾರಂಭವಾಯಿತು. ಆದ್ದರಿಂದ ಮಗುವನ್ನು ಹುಬ್ಬಳ್ಳಿಯ ಕೆ.ಎಂ.ಸಿ. ದವಾಖಾನೆಯಲ್ಲಿ ಸೇರಿಸಿದರು. ಅಲ್ಲಿಯ ಪ್ರಸಿದ್ಧ ವೈದ್ಯರಾದ ಎಸ್ .ಡಿ. ದೇಸಾಯಿ ಅವರು ಒಂದು ತಿಂಗಳ ಪರಿಯಂತ ಚಿಕಿತ್ಸೆ ಮಾಡಿದರೂ, ಸ್ವಲ್ಪವೂ ಗುಣವಾಗಲಿಲ್ಲ. ಆದ್ದರಿಂದ ಈ ಮಗು ಬದುಕುವುದಿಲ್ಲ, ಕರೆದುಕೊಂಡು ಹೋಗಿರಿ ಎಂದರು. ಆಗ ಗೌಡರ ಮನಸ್ಸಿನಲ್ಲಿ ಗುರುನಾಥಾರೂಢರ ಆಶಿರ್ವಾದದಿಂದ ಹುಟ್ಟಿದ ಮಗುವಿಗೆ ಅವನ ಹೆಸರಿಟ್ಟರೂ, ಹೀಗೇಕೆ ಆಯಿತು ಎಂದು ವ್ಯಥೆ ಪಟ್ಟು ಶ್ರೀಸಿದ್ದಾರೂಢರ ಮಠಕ್ಕೆ ಬಂದು, ಮಗುವಿನ ದುಃಖದಲ್ಲಿ ಅವರಿಗೆ ಬಹಿರಂಗದ ಯಾವ ಪ್ರಜ್ಞೆಯೂ ಇರಲಿಲ್ಲ. ಕೇವಲ ಗುರುನಾಥರ ಭಕ್ತಿಯೇ ಬುದ್ಧಿಯಲ್ಲಿ ನೆಲೆಸಿತ್ತು.
ನಂತರ ಗುರುನಾಥರ ಮೂರ್ತಿಯ ಪಾದಕ್ಕೆ ನಮಿಸಿ, ಕೈಜೋಡಿಸಿ ತನ್ನ ಅಳಲನ್ನು ತೋಡಿಕೊಂಡ ತಕ್ಷಣ, ಅತಿ ಎತ್ತರದ ಅಜಾನುಬಾಹು ಮನುಷ್ಯ ಬಂದು ಗೌಡರನ್ನು ಸಿದ್ಧಾರೂಢರ ಗದ್ದುಗೆಗೆ ಕರೆದುಕೊಂಡು ಹೋದನು. ಆಗ ಆ ಮನುಷ್ಯನು ಶ್ರೀ ಸಿದ್ಧಾರೂಢರ ಮೂರ್ತಿಗೆ ಹಾಕಿದ ಮಾಲೆಯಲ್ಲಿ ಕೈ ಹಾಕಿ ಎರಡು ಫೇಡೆಗಳನ್ನು ತೆಗೆದುಕೊಟ್ಟ ವಿಚಿತ್ರವೆಂದರೆ ಎಲ್ಲರೂ ಹೂಮಾಲೆಗಳನ್ನು ಹಾಕುತ್ತಾರೆ. ಆದರೆ ಫೇಡೆಗಳ ಮಾಲೆಯನ್ನು ಯಾರೂ ಹಾಕುವುದಿಲ್ಲ ಆದರೂ ಆ ಹೂಮಾಲೆಯಲ್ಲಿ ಎರಡು ಫೇಡೆಗಳಿದ್ದವು. ಅವನ್ನೇ ಆ ಮನುಷ್ಯ ಹನುಮಂತಗೌಡರ ಕೈಯ್ಯಲ್ಲಿ ಕೊಟ್ಟು, ಅಲ್ಲಿಂದ ಅದೃಶ್ಯನಾದನು. ಗೌಡರು ಆ ಫೇಡೆಗಳನ್ನು ಸಿದ್ಧರ ಪ್ರಸಾದವೆಂದು ತಿಳಿದು ಸ್ವೀಕರಿಸಿ, ಫೇಡೆಗಳನ್ನು ಕೊಟ್ಟ ಮನುಷ್ಯನನ್ನು ಹುಡುಕಿದರೆ ಎಲ್ಲಿಯೂ ಸಿಗಲಿಲ್ಲ.
ಮುಂದೆ ಗೌಡರು ಗುರುಪ್ರಸಾದ ದೊರೆಯಿತೆಂದು ಶಾಂತಚಿತ್ತರಾಗಿ ಕೆ.ಎಂ.ಸಿ.ಗೆ ಬಂದು, ಶ್ರೀ ಗುರುನಾಥ ಮತ್ತು ಶ್ರೀ ಸಿದ್ಧಾರೂಢರನ್ನು ನೆನೆದು ಫೇಡೆಗಳನ್ನು ತನ್ನ ಮಗು ಗುರುನಾಥನಿಗೆ ತಿನ್ನಿಸಿದಾಗ, ಆ ಮಗು ಸಂತೋಷದಿಂದ ತಿಂದನು. ನಂತರ ಗೌಡರು ಪ್ರಮುಖ ವೈದ್ಯರಿಗೆ ಹೀಗೆ ಹೇಳಿದರು. ವೈದ್ಯರೇ ನನ್ನ ಮಗ ಆರಾಮ ಆಗುತ್ತಾನೆ. ಅವನಿಗೆ ಏನೂ ಕೇಡಾಗುವುದಿಲ್ಲ. ಯಾವ ಭಯವೂ ನನಗಿಲ್ಲ. ಔಷದೋಪಚಾರದ ಅವಶ್ಯಕತೆಯಿಲ್ಲ. ಇನ್ನು ಹದಿನೈದು ದಿವಸಗಳಲ್ಲಿ ನನ್ನ ಮಗು ಗುಣಹೊಂದಿ ನಮ್ಮೂರಿಗೆ ಹೋಗುತ್ತೇವೆ. ಎಂದು ಹೇಳಿದರು. ಮುಂದೆ ಹದಿನೈದು ದಿವಸಗಳಲ್ಲಿ ಮಗು ಗುರುನಾಥ ಪೂರ್ಣ ಗುಣಹೊಂದಿ ಕೆ.ಎಂ.ಸಿ.ಯಲ್ಲಿ ಓಡಾಡತೊಡಗಿದ. ಆಮೇಲೆ ಆರೋಗ್ಯ ಸುಧಾರಿಸಿತು. ಮೊದಲು ಕೆಂಪು ಬಣ್ಣದ ಮಗು ಗೋಧಿ ಬಣ್ಣಕ್ಕೆ ತಿರುಗಿ, ಶ್ರೀಗುರುನಾಥರಂತೆ ಕಾಣಹತ್ತಿದನು. ಆಗ ಮನೆಯವರಿಗೆಲ್ಲ ಸಂತೋಷವಾಯಿತು. ಈ ಮೊದಲು ಮೊರಬ ಗ್ರಾಮದಲ್ಲಿ ಶ್ರೀಗುರುನಾಥಾರೂಢರು ಪ್ರವೇಶ ಮಾಡುವ ಮೊದಲು, ಮೂತ್ರ ವಿಸರ್ಜನೆಗೆ ಕುಳಿತ ನಿವೇಶನ, ಕುಮಾರಪ್ಪ ಕೊಟಬಾಗಿ ಅವರ ಮಾಲಿಕತ್ವದಲ್ಲಿದ್ದು, ಶ್ರೀನಾಗಾನಂದಸ್ವಾಮಿಗಳ ಸಂಕಲ್ಪದಂತೆ ಕುಮಾರಪ್ಪನವರನ್ನು ಕುರಿತು ಕುಮಾರಪ್ಪ, ನಿನ್ನ ನಿವೇಶನದಲ್ಲಿ ಗುರುನಾಥಾರೂಢರು ಕುಳಿತುಹೋದ ಜಾಗಾ ಪವಿತ್ರವಾಗಿದ್ದು, ಅಲ್ಲಿ ಶ್ರೀಸಿದ್ದಾರೂಢರ ಮಠ ಕಟ್ಟಬೇಕೆಂದು ಸಂಕಲ್ಪ ಮಾಡಿದ್ದೇನೆ. ದಯಮಾಡಿ ಆ ಜಾಗೆಯನ್ನು ದಾನಮಾಡು ಎಂದು ಕೇಳಿಕೊಂಡಾಗ ಕೊಟಬಾಗಿಯವರು ಸಂತೋಷದಿಂದ ಒಪ್ಪಿಕೊಂಡು, ಆ ಜಾಗೆಯನ್ನು ದಾನ ಮಾಡಿದ್ದಲ್ಲದೆ ಒಂದು ಗರ್ಭಗುಡಿಯನ್ನು ಕಟ್ಟಿಕೊಡಲು ಒಪ್ಪಿ, ಧನ ಸಹಾಯವನ್ನು ಮಾಡಲು ಮುಂದಾದರು. ಆಗ ನಾಗಾನಂದರು ಶ್ರೀಹನುಮಂತಪ್ಪನವರನ್ನು ಕರೆಸಿ, ಶ್ರೀಕುಮಾರಪ್ಪನವರು ದಾನಮಾಡಿದ ನಿವೇಶನದಲ್ಲಿ ಶ್ರೀ ಸಿದ್ಧಾರೂಢರ ಮಂದಿರ ಕಟ್ಟುವ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದರು.
🌺 ಗೌಡರು ಸಾಲದಿಂದ ಮುಕ್ತರಾದರು 🌺
ಸಾಮಾಜಿಕ, ಧಾರ್ಮಿಕ ಕಳಕಳಿಯ ಮೊರಬ ಗ್ರಾಮದ ಶ್ರೀ ಹನುಮಂತಗೌಡ ಪಾಟೀಲ ಅವರು ಒಂದು ಶಿವಯೋಗೀಶ್ವರ ಉಚಿತ ಪ್ರಸಾದ ನಿಲಯವನ್ನು ಪ್ರಾರಂಭಿಸಿದ್ದರು. ಎಲ್ಲರ ಅನುಮತಿಯ ಮೇರೆಗೆ ಆ ಸಂಸ್ಥೆಯ ಚೇರಮನ್ನರಾಗಿದ್ದರು. ಊರ ಜನರಲ್ಲಿ ಧವಸ ಧಾನ್ಯಗಳನ್ನು ಸಂಗ್ರಹಿಸಿ, ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನೀಡುತ್ತಿದ್ದರು. ಈ ಪ್ರಕಾರ ನಾಲ್ಕು ವರ್ಷ ಕಳೆದವು. ಒಂದು ದಿವಸ ದಾನಿಗಳಿಂದ ಧಾನ್ಯ ಸಂಗ್ರಹಿಸಲು ಹೋದಾಗ, ಆ ಸಮಯದಲ್ಲಿ ಗೌಡರು ಧಾನ್ಯ ಸಂಗ್ರಹಿಸಿ ತಮ್ಮ ಮನೆ ತುಂಬಿಕೊಳ್ಳುತ್ತಿದ್ದಾರೆ. ಹಾಗೆ ಹೀಗೆ ಎಂದು ಹೀಯಾಳಿಸಿ ಮಾತನಾಡಿದರು.
ಹನುಮಂತಗೌಡರು ಎಷ್ಟು ನಿಸ್ವಾರ್ಥಿಯಾಗಿ ಕೆಲಸ ಮಾಡಿದರೂ, ಈ ರೀತಿಯ ಆಪಾದನೆಗಳಿಂದ ಮನನೊಂದು, ಯಾರಿಗೂ ಏನನ್ನೂ ಬೇಡದೆ, ತಮ್ಮ ಸ್ವಂತ ಖರ್ಚಿನಿಂದ ಪ್ರಸಾದ ನಿಲಯ ಮುಂದುವರೆಸಿಕೊಂಡು ಹೋಗಬೇಕೆಂದು ನಿರ್ಧರಿಸಿ, ತಾವೇ ತಮ್ಮ ಸ್ವಂತ ಹಣದಿಂದ ಪ್ರಸಾದ ನಿಲಯ ಮುಂದುವರಿಸಿಕೊಂಡು ಹೋದರು. ಅದರಿಂದಾಗಿ ಮನೆಯಲ್ಲಿ ಆರ್ಥಿಕ ತೊಂದರೆಯಾಗಿ, ಆಗಿನ ಕಾಲದಲ್ಲಿ ನಾಲ್ವತ್ತುಸಾವಿರ ರೂಪಾಯಿ ಸಾಲವಾಯಿತು. ಅದಕ್ಕಾಗಿ ಪ್ರಸಾದ ನಿಲಯವನ್ನು ಬಂದು ಮಾಡುವ ಪ್ರಸಂಗ ಬಂದಿತು.
ಒಂದು ಸಲ ಏಕಾಂತದಲ್ಲಿ ಶ್ರೀಗುರುನಾಥಾರೂಢರನ್ನು ನೆನಸುತ್ತ, ಈ ಸಂಕಟದಿಂದ ಪಾರು ಮಾಡು ತಂದೆ ಎಂದು ಬೇಡಿಕೊಂಡು ಮಲಗಿದಾಗ ಗೌಡರ ಕನಸಿನಲ್ಲಿ ಶ್ರೀಗುರುನಾಥಾರೂಢರು ಬಂದು. ಗೌಡರೇ ನೀವೇನೂ ಹೆದರುವ ಕಾರಣವಿಲ್ಲ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ, ಶ್ರೀನಿಜಗುಣ ಶಿವಯೋಗಿ ವಿರಚಿತ ನೋಡಲಾಗದೇ ದೇವ ನೋಡಲಾಗದೆ ಈ ಪದ್ಯವನ್ನು ಸುಂದರವಾಗಿ ಮೂರೂ ನುಡಿಗಳನ್ನು ಹಾಡಿ, ಅಭಯ ವಚನನೀಡಿ ಅದೃಶ್ಯರಾದರು.
ಆಗ ಗೌಡರಿಗೆ ಎಚ್ಚರಿಕೆಯಾಗಿ, ಶ್ರೀಗುರುನಾಥಾರೂಢರು ಬಂದು ರಕ್ಷಣೆ ಮಾಡುತ್ತೇನೆಂದು ಹೇಳಿದ ಮಾತನ್ನು ನೆನಪಿಸಿಕೊಂಡಾಗ ಚಿಂತೆ ದೂರಾಯಿತು. ಮುಂದೆ ಅದೇ ವರ್ಷ ತಮ್ಮ ಹಲವಾರು ಜಮೀನುಗಳಲ್ಲಿ, ಉತ್ತಮ ಮಳೆಯಾಗಿ ಪ್ರತಿ ವರ್ಷಕ್ಕಿಂತ ಹೆಚ್ಚಿಗೆ ಬೆಳೆ ಬಂದು, ತಾನು ಮಾಡಿದ ನಾಲ್ವತ್ತು ಸಾವಿರ ರೂಪಾಯಿಗಳ ಸಾಲವನ್ನು ತೀರಿಸಿ ಋಣಮುಕ್ತರಾದರು. ಅಲ್ಲಿಂದ ಮುಂದೆ ಯಾವ ಕಷ್ಟಗಳೂ ಸಂಭವಿಸಲಿಲ್ಲ. ನಂತರ ಪ್ರಸಾದ ನಿಲಯವನ್ನು ನಡೆಸಲು ಯಾರೂ ಮುಂದೆ ಬಾರದ್ದರಿಂದ ಆ ಸಂಸ್ಥೆಯನ್ನು ಸ್ಥಗಿತ ಗೊಳಿಸಲಾಯಿತು.
👇👇👇👇👇👇👇👇👇👇👇👇👇👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
