ಸಿದ್ಧರ ಮಹಿಮೆಯಿಂದ ಮುಾರು ಸೇರು ಅಕ್ಕಿಯ ಅನ್ನವನ್ನು ನೂರಾಐವತ್ತು ಜನರುಂಡರು
🍚 ಮುಾರು ಸೇರು ಅಕ್ಕಿಯ ಅನ್ನವನ್ನು ನೂರಾಐವತ್ತು
ಜನರುಂಡರು 💐
ಜನರುಂಡರು 💐
ಒಂದು ದಿನ ಶಿವರಾತ್ರಿಯ ಉತ್ಸವ ಪೂರ್ಣವಾದ ನಂತರ ಗುರುಗಳು ಶಾಸ್ತ್ರಿಗಳನ್ನು ಕರೆದು ಶಾಸ್ತ್ರಿಗಳೇ, ಮುಂಬೈಕರ ಎನ್ನುವ ವ್ಯಕ್ತಿಗಳು ಗಾಡಿಯಿಂದ ಮುಂಬೈಗೆ ಹೋಗುವವರಿದ್ದಾರೆ. ಊಟ ಮಾಡಿಸಿ ಕಳಿಸಬೇಕು. ಅನ್ನ, ಸಾರು, ಪಲ್ಯ ತಯಾರಿಸಿರಿ ಎಂದರು. ಅವರ ಆಜ್ಞೆಯಂತೆ ಮೂರು ಸೇರು ಅನ್ನ ಸ್ವಯಂಪಾಕ ಮಾಡಿ ಗುರುಗಳಿಗೆ ತಿಳಿಸಿದರು. ಆಗ ಸುಮಾರು ಒಂದು ನೂರಾ ಐವತ್ತು ಜನರೂಂದಿಗೆ ಗುರುಗಳು ಅಡುಗೆ ಮನೆಗೆ ಬಂದರು. ಇದನ್ನು ನೋಡಿದ ಶಂಕರ ಶಾಸ್ತ್ರಿಗಳು ಭಯಭೀತರಾಗಿ ಸಾಂಬಪ್ಪನವರಿಗೆ ಹೇಳಿದರು. ಸಾಂಬಪ್ಪ, ಇಷ್ಟು ಜನರು ಬಂದಿದ್ದಾರೆ. ನಾವು ಮಾಡಿದ ಅಡುಗೆ ಸಾಕಾಗಬಹುದೆ ನಮ್ಮ ಗತಿಯೇನು? ಎಂದರು. ಆಗ ಸಾಂಬಪ್ಪನವರು ಶಾಸ್ತ್ರಿಗಳೇ, ಮೊದಲು ಗುರುಪಾದ ಪೂಜೆ ಮಾಡಿ ನೈವೇದ್ಯ ಆರ್ಪಿಸಬೇಕು. ಆಗ ಗುರುಗಳು ರಕ್ಷಣೆ ಮಾಡುತ್ತಾರೆ ಚಿಂತಿಸಬೇಡ' ಎಂದು ಮೊದಲು ಗುರುಗಳನ್ನು ಕೂಡಿಸಿ ಪೂಜೆಗೈದು ನೈವೇದ್ಯ ಮಾಡಿ ಎಲ್ಲರಿಗೂ ಊಟಕ್ಕೆ ಬಡಿಸಿದರು.
ಗುರುಗಳು ನಾಲ್ಕು ತುತ್ತು ತಿಂದು ಶಾಸ್ತ್ರಿಗಳಿಗೆ ಹೇಳಿದರು `ಭಕ್ತರೇ, ಸ್ವಯಂಪಾಕ ಬಹಳ ಮಾಡಿದ್ದೀರಿ. ನನ್ನ ಕಣ್ಣಿಗೆ ಕಾಣಿಸುತ್ತಿದೆ. ಎಲ್ಲ ಮಂಡಳಿ ಊಟ ಮಾಡಿ ಇನ್ನೂ ಉಳಿಯುತ್ತದೆ. ಚಿಂತೆಯನ್ನು ಬಿಡಿರಿ' ಎಂದರು. ಆಗ ಊಟದ ಎಲೆಗಳು ಹೆಚ್ಚಿದವು. ಎಲ್ಲರೂ ಊಟ ಮಾಡಿ ಹೋದರು. ತಾವೂ ಉಂಡರೂ ಭಾಂಡಿಯಲ್ಲಿ ಇನ್ನೂ ಇಬ್ಬರು ಊಟ ಮಾಡುವಷ್ಟು ಅನ್ನ ಉಳಿದಿತ್ತು. ಅದನ್ನು ನೋಡಿ ಶಾಸ್ತ್ರಿಗಳು, ಸಾಂಬಪ್ಪ, ಭೀಮಾಬಾಯಿ ಎಲ್ಲರೂ ಆಶ್ಚರ್ಯಗೊಂಡು ಸಿದ್ಧರ ಮಹಿಮೆ ಅಗಾಧವಾದುದೆಂದು ಎಲ್ಲರೂ ಕೊಂಡಾಡಿದರು.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
