ಆರೂಢರ ಒಂದು ಹಲ್ಲಿನ ಮಹಿಮೆ

 🌺 ಆರೂಢರ ಒಂದು ಹಲ್ಲಿನ ಮಹಿಮೆ 🌺



ಶ್ರೀ ಸಿದ್ಧಾರೂಢರ ಮಠದ ಹತ್ತಿರದ ಕುಂಬಾರ ಓಣಿಯಲ್ಲಿ ಓರ್ವ ಪ್ರೌಢ ವಯಸ್ಸಿನ ಹೆಣ್ಣುಮಗಳು ವಾಸಿಸುತ್ತಿದ್ದಳು. ನಾಲ್ಕಾರು ಎಮ್ಮೆ ಆಕಳುಗಳನ್ನು ಕಟ್ಟಿಕೊಂಡು ಸಾಕಿ ಅವುಗಳಿಂದ ಬಂದ ಹಾಲು ಮೊಸರು ಮಜ್ಜಿಗೆ ಮಾರಿ ಉಪಜೀವನ ಸಾಗಿಸುತ್ತಿದ್ದಳು. ಆ ತಾಯಿ ಆರೂಢರ ಪರಮ ಭಕ್ತಳಾಗಿದ್ದು, ದಿನಾಲು ಮಠಕ್ಕೆ ಹೋಗಿ ಗುರುಗಳ ದರ್ಶನ ಪಡೆದು ಹಾಲು, ಮೊಸರುಗಳನ್ನು ಸಮರ್ಪಿಸಿ ಬರುತ್ತಿದ್ದಳು. ಒಂದು ದಿನ ಗುರುಗಳ ದರ್ಶನ ಪಡೆದು `ಅಜ್ಜಾ, ನಮ್ಮಲ್ಲಿಯ ದನಗಳ ಕೆಚ್ಚಲಿಗೆ ಬಹಳಷ್ಟು ಉಣ್ಣೆಗಳು ಮೆತ್ತಿಕೊಂಡಿವೆ. ಅವುಗಳ ನಿವಾರಣೆಗೆ ಏನಾದರೊಂದು ಉಪಾಯ ಮಾಡಿರಿ' ಎಂದು ಬೇಡಿಕೊಂಡಳು. ಆಗ ಗುರುಗಳು ತಮ್ಮ ಮುಖದಲ್ಲಿ ಅಲುಗಾಡುತ್ತಿದ್ದ ಒಂದು ಹಲ್ಲನ್ನು ಕಿತ್ತುಕೊಂಡು ಆ ತಾಯಿಯ ಕೈಯ್ಯಲ್ಲಿಟ್ಟು 'ಇಕೊ ಈ ಹಲ್ಲನ್ನು ತೆಗೆದುಕೊಂಡು ಹೋಗಿ ನಿನ್ನ ದೇವರ ಜಗುಲಿಯ ಮೇಲಿಟ್ಟು ಪೂಜಿಸು ಉಣ್ಣೆಗಳು ಹೋಗುತ್ತವೆ' ಎಂದರು.
ಆ ತಾಯಿ ಶ್ರದ್ಧೆಯಿಂದ ಅಜ್ಜನ ಹಲ್ಲನ್ನು ತೆಗೆದುಕೊಂಡು ಹೋಗಿ ದೇವರ ಜಗುಲಿಯ ಮೇಲಿಟ್ಟು ಪೂಜಿಸಿದ ಕೆಲವು ದಿವಸಗಳಲ್ಲಿ ಉಣ್ಣೆಗಳು ಬಿಟ್ಟು ಹೋದವು. ಈ ಸುದ್ದಿಯನ್ನು ಕೇಳಿದ ಓಣಿಯ ರೈತರು ಹೂವು ಹಣ್ಣು ಕಾಯಿಗಳನ್ನು ಕರ್ಪೂರವನ್ನು ತೆಗೆದುಕೊಂಡು ಆ ತಾಯಿಯ ಮನೆಗೆ ಹೋಗಿ ಅಜ್ಜನ ಹಲ್ಲನ್ನು ಪೂಜಿಸಿ, ತೆಂಗಿನಕಾಯಿ ತೆಗೆದುಕೊಂಡು ಹೋಗಿ ತಮ್ಮ ಮನೆಗಳಲ್ಲಿ ಕಟ್ಟಿದಾಗ ಅವರ ಮನೆಗಳ ದನಗಳಿಗೆ ಅಂಟಿದ ಉಣ್ಣೆಗಳು ಬಿಟ್ಟು ಹೋಗುತ್ತಿದ್ದವು. ಈ ವಿಚಾರವನ್ನು ಆ ತಾಯಿ, ಮಠಕ್ಕೆ ಹೋಗಿ ಅಜ್ಜನಿಗೆ ತಿಳಿಸಿದಾಗ ಅಲ್ಲಿ ನೆರೆದ ಭಕ್ತರು ಅಚ್ಚರಿಗೊಂಡು ಜಯಜಯಕಾರ ಮಾಡಿದರು. ಈ ಬಗ್ಗೆ ವಿಚಾರ ಮಾಡಿದರೆ ಸಿದ್ಧನ ಒಂದು ಹಲ್ಲು ಇಷ್ಟು ಪ್ರಭಾವಿಯಾದರೆ ಅವರ ಇಡೀ ಶರೀರ 'ಎಷ್ಟೊಂದ ಪ್ರಭಾವಿಯಾಗಿರಬೇಕು ಎಂಬುದನ್ನು ಊಹಿಸಲೂ ಅಸಾಧ್ಯ.

ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇

ಮೇಲಿನ  ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇




👇




👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ